ಬೆಂಗಳೂರು : ನಗರದ ಹೆಚ್.ಎಸ್.ಆರ್ ಲೇಔಟ್ ಸರಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಚಂದ್ರಕಲಾ.ಎಂ. ಅವರಿಗೆ ದಾವಣಗೆರೆ ವಿಶ್ವದ್ಯಾಲಯದ ಸಮಕುಲಾಧಿಪತಿ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಪಿಹೆಚ್‌ಡಿ ಪದವಿ ಪ್ರಮಾಣಪತ್ರ ಪ್ರಧಾನ ಮಾಡಿದರು.
ದಾವಣಗೆರೆ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರೊಪೇಸರ್ ಜಯರಾಮಯ್ಯ.ವಿ. ಅವರ ಮಾರ್ಗದರ್ಶನದಲ್ಲಿ ಡಾ.ಎಂ.ಚಂದ್ರಕಲಾ ಅವರು ಮಂಡಿಸಿದ್ದ " ಮಧ್ಯಕಾಲೀನ ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ(ಕ್ರಿ.ಶ.1341-1540) ಎಂಬ ಮಹಾಪ್ರಬಂಧಕ್ಕೆ ದಾವಣಗೆರೆ ವಿಶ್ವವಿದ್ಯಾಯವು ಶುಕ್ರವಾರ ನಡೆದ 13ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪಿಹೆಚ್‌ಡಿ ಪದವಿ ಪ್ರದಾನ ಮಾಡಲಾಯಿತು.
ಇದನ್ನೂ ಓದಿ: Bangalore News: ಜ.29ರಿಂದ ಫೆಬ್ರವರಿ 1ವರೆಗೆ ವೀರಶೈವ ಲಿಂಗಾಯಿತ ಗ್ಲೋಬಲ್ ಬಿಸಿನಸ್ ಬೃಹತ್ ಸಮಾವೇಶ
ಚಂದ್ರಕಲಾ ಅವರ ಮಹಾಪ್ರಬಂಧವು ಪದವಿಗೆ ಅರ್ಹವಾಗಿದೆ ಎಂದು ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆ, ವಿದ್ಯಾವಿಷಯಕ ಪರಿಷತ್ತು,ಪರೀಕ್ಷಾ ಮೌಲ್ಯಮಾಪನ ಮಂಡಳಿ ತೀರ್ಮಾನಿಸಿ ದಿನಾಂಕ 20/1/2026ರಂದು ಅಧಿಸೂಚನೆ ಹೊರಡಿಸಿತ್ತು.
ಚಂದ್ರಕಲಾ.ಎಂ. ಅವರು ಪಿಹೆಚ್‌ಡಿ ರಾಜ್ಯಪಾಲರಿಂದ ಪಿಹೆಚ್‌ಡಿ ಪದವಿ ಪ್ರಮಾಣ ಪತ್ರ ಪಡೆಯು ತ್ತಿರುವುದನ್ನು ಕಂಡು ಕಾಲೇಜಿನ ಪ್ರಾಂಶುಪಾಲರು, ಬೋಧಕ ಬೋಧಕೇತರ ಸಿಬ್ಬಂದಿ ಅಪಾರ ಪ್ರಮಾಣದ ವಿದ್ಯಾರ್ಥಿಗಳು ಮತ್ತು ಕುಟುಂಬವರ್ಗ ಅಭಿನಂದಿಸಿದ್ದಾರೆ.