ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bangaluru Weather: ಬೆಂಗಳೂರಿನ ವೆದರ್‌ ಫುಲ್‌ ಕೂಲ್‌, ಕೂಲ್‌; ರೋಗಕ್ಕೆ ತುತ್ತಾಗುತ್ತಿರುವ ಜನ

ಕಳೆದೊಂದು ವಾರದಿಂದ ಬೆಂಗಳೂರಿನ ವಾತಾವರಣದಲ್ಲಿ ಬದಲಾವಣೆಯಾಗಿದೆ. ಸಂಪೂರ್ಣ ಕೂಲ್‌ ವೆದರ್‌ ಆಗಿದ್ದು, ಸಂಜೆಯಾದರೆ ಮಳೆ, ಚಳಿ ಹೀಗೆ ಹವಾಮಾನ ವೈಪರಿತ್ಯದಿಂದ ಜನರು ರೋಗಗಳಿಗೆ ತುತ್ತಾಗುತ್ತಿದ್ದಾರೆ. ವಾರದಲ್ಲಿ 173 ಜನರು ಉಸಿರಾಟದ ಸೋಂಕಿಗೆ, 53 ಜನರು ಮಲೇರಿಯಾ ಹಾಗೂ 32 ಜನರು ಚಿಕನ್ ಗುನ್ಯಾ ರೋಗದಿಂದ ಬಳಲುತ್ತಿದ್ದಾರೆ.

ಕಳೆದೊಂದು ವಾರದಿಂದ ಬೆಂಗಳೂರಿನ ವಾತಾವರಣದಲ್ಲಿ ಬದಲಾವಣೆಯಾಗಿದೆ. ಸಂಪೂರ್ಣ ಕೂಲ್‌ ವೆದರ್‌ ಆಗಿದ್ದು, ಸಂಜೆಯಾದರೆ ಮಳೆ, ಚಳಿ ಹೀಗೆ ಹವಾಮಾನ ವೈಪರಿತ್ಯದಿಂದ ಜನರು ರೋಗಗಳಿಗೆ ತುತ್ತಾಗುತ್ತಿದ್ದಾರೆ. ವಾರದಲ್ಲಿ 173 ಜನರು ಉಸಿರಾಟದ ಸೋಂಕಿಗೆ, 53 ಜನರು ಮಲೇರಿಯಾ ಹಾಗೂ 32 ಜನರು ಚಿಕನ್ ಗುನ್ಯಾ ರೋಗದಿಂದ ಬಳಲುತ್ತಿದ್ದಾರೆ. ಮಕ್ಕಳು ಜ್ವರ, ಕೆಮ್ಮು, ಗಂಟಲು ನೋವು, ಕೆಮ್ಮು, ಶೀತ, ನೆಗಡಿ, ವಾಂತಿಯಿಂದ ಬಳುತ್ತಿದ್ದಾರೆ. ಬದಲಾದ ಹವಾಮಾನ ಹಿನ್ನೆಲೆಯಲ್ಲಿ ಡೆಂಗಿ, ಟೈಫಾಯ್ಡ್​, ವೈರಲ್ ಜ್ವರ ಕೂಡ ಕಾಣಿಸಿಕೊಳ್ಳುತ್ತಿದೆ. ಆರೋಗ್ಯ ಇಲಾಖೆ ಕೂಡ ಕ್ರಮವಹಿಸಲು ಮುಂದಾಗಿದೆ.

ಕಳೆದವಾರದಿಂದೀಚೆಗೆ ಹಲವರಲ್ಲಿ ಜ್ವರ ಕಾಣಿಸಿಕೊಂಡಿದೆ. ಜ್ವರ, ಕೆಮ್ಮು, ನೆಗಡಿ, ಅತಿಸಾರ, ವಾಂತಿ, ಬೇಧಿ ಪ್ರಕರಣಗಳು ಹೆಚ್ಚಿವೆ. ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗದಲ್ಲಿ ಶೇ. 15 ರಷ್ಟು ಜ್ವರದ ಪ್ರಕರಣ ಏರಿಕೆ ಕಂಡ ಬರುತ್ತಿದೆ. ಇದಕ್ಕೆಲ್ಲ ಬೆಂಗಳೂರಿನಲ್ಲಿ ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ ಹವಮಾನದ ಎಫೆಕ್ಟ್ ಕಾರಣ. ಜ್ವರದ ಜೊತೆ ILI ಸಾರಿ ಪ್ರಕರಣಗಳ ಏರಿಕೆಯೂ ಕಂಡು ಬರುತ್ತಿದ್ದು. ಮಲೇರಿಯಾ, ಡೆಂಗಿ ಕೇಸ್ ಕೂಡ ದಾಖಲಾಗುತ್ತಿವೆ ಎಂದು ವೈದ್ಯರು ತಿಳಿಸಿದ್ದಾರೆ.

ಆಸ್ಪತ್ರೆಗೆ ದಾಖಲಾಗುವ ಹೆಚ್ಚಿವರಲ್ಲಿ ತೀವ್ರವಾದ ತಲೆ ನೋವು, ಸುಸ್ತು, ಜ್ವರ, ಮೈ ಕೈ ನೋವು, ಅತಿಸಾರ, ಉಸಿರಾಟ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಕೆ ಸಿ ಜನರಲ್ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆ, ಸಿವಿ ರಾಮನ್ ನಗರ ಆಸ್ಪತ್ರೆ, ವಾಣಿವಿಲಾಸ್ ಆಸ್ಪತ್ರೆ ಸೇರಿದ್ದಂತೆ ಬಹುತೇಕ ಆಸ್ಪತ್ರೆಗಳಲ್ಲಿ ದಾಖಲಾಗುವ ಅರ್ಧದಷ್ಟು ರೋಗಿಗಳು ಈ ಎಲ್ಲಾ ರೋಗದಿಂದ ಬಳಲುತ್ತಿದ್ದಾರೆ. ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: Karnataka weather: ಇಂದಿನ ಹವಾಮಾನ; ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಅಬ್ಬರಿಸಲಿದೆ ಮಳೆ!

ರಾಜ್ಯದಲ್ಲಿ ಮಳೆ ಇನ್ನೂ ನಾಲ್ಕು ದಿನ ಮುಂದುವರಿಯಲಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ಕರಾವಳಿ ಕರ್ನಾಟಕ, ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಬಳ್ಳಾರಿ, ಬೆಂಗಳೂರು (ನಗರ ಮತ್ತು ಗ್ರಾಮಾಂತರ), ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ವಿಜಯನಗರ, ಶಿವಮೊಗ್ಗ ಜಿಲ್ಲೆಗಳಲ್ಲಿ ಬಿರುಸಾಗಿ ವರ್ಷಧಾರೆಯಾಗಲಿದೆ.