ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವಾಯುಯಾನ ತರಬೇತಿ: ಮಲೇಷ್ಯಾದ ಯೂನಿವರ್ಸಿಟಿ ಕಾಲೇಜ್ ಆಫ್ ಏವಿಯೇಷನ್ -ಚೆನ್ನೈ ಅಮೃತ ಇಂಟರ್ನ್ಯಾಷನಲ್ ಏವಿಯೇಷನ್ ಕಾಲೇಜ್ ಒಪ್ಪಂದ

ವಾಯುಯಾನ ತರಬೇತಿ ಸಂಬಂಧದ ಒಪ್ಪಂದಕ್ಕೆ ಚೆನ್ನೈ ಅಮೃತ ಸಮೂಹ ಸಂಸ್ಥೆಗಳ ಅಧ್ಯಕ್ಷ ರಾದ ಭೂಮಿ ನಾಥನ್ ಮತ್ತು ಮಲೇಷ್ಯಾದ ಯುನಿಕ್ಯಾಮ್ ಡೀನ್ ಉಮರ್ ಅಬ್ದಿಲ್ಲಾ ಅನ್ವರ್ ಅವರು ಸಹಿ ಹಾಕಿದ್ದಾರೆ. ಮಲೇಷ್ಯಾದ ಫ್ಯೂಚರ್ ಡ್ರೀಮ್ ಅಕಾಡೆಮಿಯ ಅಧ್ಯಕ್ಷರಾದ ಕಲೈ ಅರಸನ್ ಮತ್ತು ಸಿಇಒ ಜೈನಾನಕ್ ಸಿಂಗ್ ಅವರ ಸಮ್ಮುಖದಲ್ಲಿ ಈ ಒಪ್ಪಂದ ನಡೆದಿದೆ.

ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿದಂತೆ ದಕ್ಷಿಣ ಭಾರತದಾದ್ಯಂತ ವಿದ್ಯಾರ್ಥಿಗಳಿಗೆ ವಿಶ್ವದರ್ಜೆಯ ತರಬೇತಿಗೆ ನೀಡುವತ್ತ ದಿಟ್ಟ ಹೆಜ್ಜೆ

ಕಾಲೇಜಿನ ವ್ಯಾಪ್ತಿಯನ್ನು ಭಾರತದಾದ್ಯಂತ ವಿಸ್ತರಿಸುವ ಗುರಿ ಹೊಂದಿದ್ದು, ಶೀಘ್ರದಲ್ಲೇ ನವದೆಹಲಿಯಲ್ಲಿ ನಿರ್ಮಾಣ.

ಬೆಂಗಳೂರು: ವಿದ್ಯಾರ್ಥಿಗಳ ಪ್ರಾಯೋಗಿಕ ವಾಯುಯಾನ ತರಬೇತಿಗಾಗಿ ಭಾರತದ ಪ್ರಮುಖ ವಾಯುಯಾನ ತರಬೇತಿ ಸಂಸ್ಥೆಯಾದ ಚೆನ್ನೈನ ಅಮೃತ ಇಂಟರ್ನ್ಯಾಷನಲ್ ಏವಿಯೇಷನ್ ಕಾಲೇಜ್, ಮಲೇಷ್ಯಾದ ಯೂನಿವರ್ಸಿಟಿ ಕಾಲೇಜ್ ಆಫ್ ಏವಿಯೇಷನ್ ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಜಾಗತಿಕವಾಗಿ ವಾಯುಯಾನ ಬಗ್ಗೆ ವಿದ್ಯಾರ್ಥಿಗಳು ಪರಿಣಿತಿ ಹೊಂದಲು ಅಂತಾರಾಷ್ಟ್ರೀಯ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದು ವಿದ್ಯಾರ್ಥಿಗಳ ಪ್ರಾಯೋಗಿಕ ಅನುಭವ ನೀಡಲಿದೆ. ವಾಯು ಯಾನ ತರಬೇತಿಯಿಂದ ವೃತ್ತಿಜೀವನಕ್ಕೆ ಅಗತ್ಯವಿರುವ ಕೌಶಲ್ಯಗಳನ್ನು ಪಡೆದುಕೊಳ್ಳ ಬಹುದಾಗಿದೆ.

ಏವಿಯೇಷನ್ 4.0 ಮತ್ತು ಡಿಜಿಟಲ್ ರೂಪಾಂತರ; ವಾಯುಯಾನದಲ್ಲಿ ಕೃತಕ ಬುದ್ಧಿಮತ್ತೆಯ ಪಾತ್ರ; ವಿಮಾನ ನಿಲ್ದಾಣ ಕಾರ್ಯಾಚರಣೆ ಮತ್ತು ವಿಮಾನ ನಿರ್ವಹಣಾ ಆವಿಷ್ಕಾರಗಳು; ಮತ್ತು ವಾಯುಯಾನದಲ್ಲಿ ಉದಯೋನ್ಮುಖ ವೃತ್ತಿ ಮಾರ್ಗಗಳ ಕುರಿತು ವಾಯು ಯಾನ ಕ್ಷೇತ್ರದ ಅನುಭವಿಗಳು ಉಪನ್ಯಾಸ ನಡೆಸಿಕೊಟ್ಟರು.

ಇದನ್ನೂ ಓದಿ: SMSIMSR Medical college: ಎಸ್‌ಎಂಎಸ್‌ಐಎಂಎಸ್‌ಆರ್‌ ಮಹತ್ವದ ಸಾಧನೆ: ಎಲ್ಲ ಸಾಮಾನ್ಯ ವಿಮಾ ಕಂಪನಿಗಳ ಸೇರ್ಪಡೆ ಸಾಧಿಸಿದ ಭಾರತದ ಮೊದಲ ಆಸ್ಪತ್ರೆ

ವಾಯುಯಾನ ತರಬೇತಿ ಸಂಬಂಧದ ಒಪ್ಪಂದಕ್ಕೆ ಚೆನ್ನೈ ಅಮೃತ ಸಮೂಹ ಸಂಸ್ಥೆಗಳ ಅಧ್ಯಕ್ಷ ರಾದ ಭೂಮಿ ನಾಥನ್ ಮತ್ತು ಮಲೇಷ್ಯಾದ ಯುನಿಕ್ಯಾಮ್ ಡೀನ್ ಉಮರ್ ಅಬ್ದಿಲ್ಲಾ ಅನ್ವರ್ ಅವರು ಸಹಿ ಹಾಕಿದ್ದಾರೆ. ಮಲೇಷ್ಯಾದ ಫ್ಯೂಚರ್ ಡ್ರೀಮ್ ಅಕಾಡೆಮಿಯ ಅಧ್ಯಕ್ಷರಾದ ಕಲೈ ಅರಸನ್ ಮತ್ತು ಸಿಇಒ ಜೈನಾನಕ್ ಸಿಂಗ್ ಅವರ ಸಮ್ಮುಖದಲ್ಲಿ ಈ ಒಪ್ಪಂದ ನಡೆದಿದೆ. ಚೆನ್ನೈ ಅಮೃತ ಇಂಟರ್ನ್ಯಾಷನಲ್ ಏವಿಯೇಷನ್ ಕಾಲೇಜಿನ ಸಿಒಒ ಭಾನುಮತಿ, ಡೀನ್ ಸುರೇನ್, ಪ್ರಾಂಶುಪಾಲರಾದ ಡಾ. ರಾಹುಲ್ ಮತ್ತು ಎಚ್ಒಡಿ ಅರುಣ್ ಉಪಸ್ಥಿತರಿದ್ದರು.

ಚೆನ್ನೈ ಅಮೃತ ಸಮೂಹದ ಅಧ್ಯಕ್ಷರಾದ ಶ ಆರ್. ಭೂಮಿ ನಾಥನ್ ಅವರು ಮಾತನಾಡಿ: ಶೈಕ್ಷಣಿಕ ಪ್ರಯಾಣದ ಭಾಗವಾಗಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿರುವ ದಕ್ಷಿಣ ಭಾರತದ ಮೊದಲ ಕಾಲೇಜುಗಳಲ್ಲಿ ನಾವೂ ಒಬ್ಬರು. ಜಾಗತಿಕ ಸಹಯೋಗ ಗಳು ಮತ್ತು ವಿಶೇಷ ಮೂಲಸೌಕರ್ಯಗಳು, ಇದರಲ್ಲಿ ವಿಮಾನದ ಮಾದರಿ ಮತ್ತು ಕಿರು ವಿಮಾನ ನಿಲ್ದಾಣ ಸೇರಿದ್ದು, ಪ್ರಾಯೋಗಿಕ ಕಲಿಕೆಗೆ ಪೂರಕವಾಗಿವೆ. ನಮ್ಮ ವ್ಯಾಪ್ತಿಯನ್ನು ಪ್ಯಾನ್-ಇಂಡಿಯಾ ಮಟ್ಟಕ್ಕೆ ವಿಸ್ತರಿಸುತ್ತಿದ್ದೇವೆ ಮತ್ತು ಶೀಘ್ರದಲ್ಲೇ ನವದೆಹಲಿಯಲ್ಲಿ ನಮ್ಮ ಶಾಖೆಯನ್ನು ಸ್ಥಾಪಿಸಲಿದ್ದೇವೆ ಎಂದು ಹೇಳಿದ ಅವರು 2035 ರ ವೇಳೆಗೆ ಪೈಲಟ್ಗಳು, ಕ್ಯಾಬಿನ್ ಕ್ರೂ, ಎಂಜಿನಿಯ ರ್ಗಳು ಮತ್ತು ಗ್ರೌಂಡ್ ಸ್ಟಾಫ್ಗಳಂತಹ ವಿವಿಧ ಹುದ್ದೆಗಳಲ್ಲಿ 1.5 ರಿಂದ 2 ಲಕ್ಷ ನುರಿತ ವೃತ್ತಿಪರರ ಅಗತ್ಯವಿರುತ್ತದೆ ಎಂದು ತಿಳಿಸಿದರು.

ಅಮೃತ ಕಾಲೇಜಿನಲ್ಲಿ ಏವಿಯೇಷನ್ ಪದವಿ ಕೋರ್ಸ್ (3 ವರ್ಷಗಳು); ಬಿ.ಎಸ್ಸಿ. ಇನ್ ಏರ್ ಟ್ರಾನ್ಸ್ಪೋರ್ಟ್, ಮತ್ತು ಏವಿಯೇಷನ್ ಅಂಡ್ ಟೂರಿಸಂ ಮ್ಯಾನೇಜ್ಮೆಂಟ್ನಲ್ಲಿ ಡಿಪ್ಲೊಮಾ. ಈ ಸಹಯೋಗದ ಅಡಿಯಲ್ಲಿ, ಮೂರು ವರ್ಷಗಳ ಪದವಿ ಮತ್ತು ಡಿಪ್ಲೊಮಾ ಕಾರ್ಯಕ್ರಮಗಳಿಗೆ ಸೇರುವ ವಿದ್ಯಾರ್ಥಿಗಳು ತಮ್ಮ ಮೊದಲ ಎರಡು ವರ್ಷಗಳನ್ನು ಚೆನ್ನೈನ ಕ್ಯಾಂಪಸ್ನಲ್ಲಿ ಪೂರೈಸ ಲಿದ್ದಾರೆ. ನಂತರ ಮಲೇಷ್ಯಾಕ್ಕೆ ತೆರಳುತ್ತಾರೆ. ಅಂತಿಮ ವರ್ಷವು ಯುನಿಕ್ಯಾಮ್ನಲ್ಲಿ ಆರು ತಿಂಗಳ ಶೈಕ್ಷಣಿಕ ತರಬೇತಿ ಮತ್ತು ಮಲೇಷ್ಯಾದ ವಿಮಾನ ನಿಲ್ದಾಣಗಳಲ್ಲಿ ಆರು ತಿಂಗಳ ಇಂಟರ್ನ್ಶಿಪ್ ಅನ್ನು ಒಳಗೊಂಡಿರುತ್ತದೆ, ಇದು ವಿದ್ಯಾರ್ಥಿಗಳಿಗೆ ಅಮೂಲ್ಯವಾದ ಅಂತರಾಷ್ಟ್ರೀಯ ಅನುಭವ ನೀಡುತ್ತದೆ.

ವಾಯುಯಾನ ಉದ್ಯಮದಲ್ಲಿ, ಅಂತರಾಷ್ಟ್ರೀಯ ವಾಯು ಸಾರಿಗೆ ಸಂಸ್ಥೆ (ಐಎಟಿಎ) ಅತ್ಯಂತ ಉನ್ನತ ಮಟ್ಟದಲ್ಲಿದೆ. ಚೆನ್ನೈ ಅಮೃತ ಸಂಸ್ಥೆಯು ಈ ಐಎಟಿಎ ತರಬೇತಿಯನ್ನು ಉಚಿತವಾಗಿ ನೀಡಲಿದೆ. ಇತರ ಸಂಸ್ಥೆಗಳು 50 ಸಾವಿರದಿಂದ 1.5 ಲಕ್ಷದವರೆಗೆ ಶುಲ್ಕ ವಿಧಿಸುತ್ತಾರೆ. ಆದರೆ ಈ ತರಬೇತಿಯನ್ನು ಕಾಲೇಜಿನ ವಿದ್ಯಾರ್ಥಿಗಳು ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುತ್ತಿದೆ. ಐಎಟಿಎ ದಲ್ಲಿ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ಶ್ರೇಣಿ ಪಡೆದ ಗ್ರೀಷ್ಮಾ ಅವರು ಈ ತರಬೇತಿ ನೀಡಲಿದ್ದಾರೆ.