ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

obesity Awareness: ಒಬೆಸಿಟಿ ಕುರಿತು ಮಕ್ಕಳಿಗೆ ಶಾಲೆಯಂದಲೇ ಅರಿವು ಮೂಡಿಸುವ ಕೆಲಸವಾಗಬೇಕು : ಮಕ್ಕಳ ತಜ್ಞ ಡಾ. ರಾಜೀವ್‌ ಅಗರ್ವಾಲ್‌

ಇಂದಿನ ದಿನಗಳಲ್ಲಿ ನಾಲಿಗೆಗೆ ರುಚಿ ಹೆಚ್ಚಿಸುವ ಆಹಾರಗಳು ಮಕ್ಕಳ ಕೈಗೆ ಸುಲಭವಾಗಿ ಸಿಗು ತ್ತಿರುವ ಕಾರಣ, ಜಂಕ್‌ಫುಡ್‌ನತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಅವರಿಗೆ ಯಾವುದು ಆರೋಗ್ಯಕ್ಕೆ ಆಪ್ತ ಹಾಗೂ ಆಪತ್ತು ಎಂಬುದನ್ನು ತಿಳಿ ಹೇಳುವ ಕೆಲಸ ಶಾಲೆಯಿಂದಲೇ ಆಗಬೇಕು. ಮನೆಯಲ್ಲಿ ಪೋಷಕರಷ್ಟೇ ಶಿಕ್ಷಕರಿಗೂ ಜವಾಬ್ದಾರಿ ಇರಲಿದೆ.

ಒಬೆಸಿಟಿ ಕುರಿತು ಮಕ್ಕಳಿಗೆ ಶಾಲೆಯಂದಲೇ ಅರಿವು ಮೂಡಿಸುವ ಕೆಲಸವಾಗಬೇಕು

-

Ashok Nayak
Ashok Nayak Dec 6, 2025 7:49 PM

ಬೆಂಗಳೂರು: ಮಕ್ಕಳಲ್ಲಿ ಹೆಚ್ಚುತ್ತಿರುವ ಒಬೆಸಿಟಿ ಕುರಿತ ಜಾಗೃತಿಯನ್ನು ಶಾಲೆಯಿಂದಲೇ ಪ್ರಾರಂಭಿಸದಿದ್ದರೆ, ಭವಿಷ್ಯದ ಪೀಳಿಗೆ ಆರೋಗ್ಯ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಅಧಿಕ ಎಂದು ಮಕ್ಕಳ ತೀವ್ರ ನಿಗಾ ತಜ್ಞ ಮತ್ತು ನವಜಾತ ತಜ್ಞರ ಹಿರಿಯ ಸಲಹೆಗಾರ ರಾಜೀವ್ ಅಗರ್ವಾಲ್ ಅಭಿಪ್ರಾಯಪಟ್ಟರು.

ಹ್ಯಾಪಿಯೆಸ್ಟ್ ಹೆಲ್ತ್ ಬೆಂಗಳೂರಿನ ಸೇಂಟ್ ಜಾನ್ಸ್ ಆಡಿಟೋರಿಯಂನಲ್ಲಿ ಆಯೋಜಿಸಿದ್ದ 'ಗೆಟ್ ಸೆಟ್, ಗ್ರೋ! ಮಕ್ಕಳ ಸ್ವಾಸ್ಥ್ಯ” ಕುರಿತ ಸಮ್ಮಿಟ್‌- ೩ನೇ ಆವತ್ತಿಯಲ್ಲಿ ಪಾಲ್ಗೊಂಡು ಮಾತನಾಡಿ ದರು.

ಇಂದಿನ ದಿನಗಳಲ್ಲಿ ನಾಲಿಗೆಗೆ ರುಚಿ ಹೆಚ್ಚಿಸುವ ಆಹಾರಗಳು ಮಕ್ಕಳ ಕೈಗೆ ಸುಲಭವಾಗಿ ಸಿಗು ತ್ತಿರುವ ಕಾರಣ, ಜಂಕ್‌ಫುಡ್‌ನತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಅವರಿಗೆ ಯಾವುದು ಆರೋಗ್ಯಕ್ಕೆ ಆಪ್ತ ಹಾಗೂ ಆಪತ್ತು ಎಂಬುದನ್ನು ತಿಳಿ ಹೇಳುವ ಕೆಲಸ ಶಾಲೆಯಿಂದಲೇ ಆಗಬೇಕು. ಮನೆಯಲ್ಲಿ ಪೋಷಕರಷ್ಟೇ ಶಿಕ್ಷಕರಿಗೂ ಜವಾಬ್ದಾರಿ ಇರಲಿದೆ. ಕೇವಲ ಪಠ್ಯದಲ್ಲಿನ ವಿಷಯ ಹೇಳುದಷ್ಟೇ ಅಲ್ಲದೆ, ಪಠ್ಯೇತರ ಚಟುವಟಿಕೆಯಲ್ಲಿ ಆರೋಗ್ಯ ಆಹಾರದ ಬಗ್ಗೆಯೂ ಮಕ್ಕಳಿಗೆ ಜಾಗೃತಿ ಮೂಡಿಸಬೇಕು ಎಂದರು. ಮಕ್ಕಳಿಂದಲೇ ಉತ್ತಮ ಆಹಾರಭ್ಯಾಸ ರೂಢಿಸುವುದು, ನಾವು ತಿನ್ನುವ ಆಹಾರದ ಬಗ್ಗೆ ಜ್ಞಾನ ನೀಡುವುದರಿಂದ ಅವರಿಗೇ ತಾವು ತಿನ್ನುತ್ತಿರುವ ಆಹಾರದಿಂದ ನಮ್ಮ ದೇಹಕ್ಕೆ ಯಾವ ರೀತಿಯ ಪ್ರಯೋಜನ ಅಥವಾ ಅಪಾಯ ಆಗಲಿದೆ ಎಂಬುದನ್ನು ಅವರೇ ನಿರ್ಧಾರ ಮಾಡುವ ಆಲೋಚನೆ ಬರಲಿದೆ.

ಇದನ್ನೂ ಓದಿ: Bangalore News: ಟಿಫಾದಲ್ಲಿ ಮಿಂಚಿದ ಯುವ ಸಿನಿಮಾಸಕ್ತರು, ವಿಜೇತರಿಗೆ ಹೊಂಬಾಳೆ ಫಿಲ್ಮ್ಸ್ ನೆರವು

ಇಂತಹ ಸಕಾರಾತ್ಮಕ ನಡವಳಿಕೆಗಳು ಮಕ್ಕಳಿಂದಲೇ ಪ್ರಾರಂಭವಾದಾಗ, ಮಕ್ಕಳು ಸ್ವಾಭಾವಿಕವಾಗಿ ಅನುಸರಿಸುತ್ತಾರೆ. ಈ ರೀತಿಯ ವೇದಿಕೆಗಳು ಆ ಬದಲಾವಣೆಯನ್ನು ವೇಗಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ, ಬಲವಾದ, ಆರೋಗ್ಯಕರ ಮತ್ತು ಉತ್ತಮ ಮಾಹಿತಿಯುಕ್ತ ಪೀಳಿಗೆಯನ್ನು ಬೆಳೆಸಲು ನಮಗೆ ಸಹಾಯ ಮಾಡುತ್ತವೆ ಎಂದರು.

grow 2

ಮೈಂಡ್ ಕೇರ್‌ನ ಮನೋವೈದ್ಯಶಾಸ್ತ್ರದ ವೈದ್ಯಕೀಯ ನಿರ್ದೇಶಕ ಡಾ. ಗಿರೀಶ್‌ ಚಂದ್ರ ಮಾತನಾಡಿ, ಭಾರತದ ಶೇ.10–12ರಷ್ಟು ಮಕ್ಕಳು ಒಬೇಸಿ ಹೊಂದಿದ್ದಾರೆ ಎಂದು ಅಧ್ಯಯನಗಳು ತಿಳಿಸುತ್ತಿವೆ. ಕಳೆದ ಐದು ವರ್ಷಗಳಲ್ಲಿ ಮಕ್ಕಳಲ್ಲಿ ಅಧಿಕ ತೂಕ ಮತ್ತು ಸ್ಥೂಲಕಾಯತೆಯು ಸ್ಥಿರವಾಗಿ ಹೆಚ್ಚಾಗಿದೆ ಎಂದು ಸೂಚಿಸುತ್ತದೆ, ಇದು ದೇಶದ ಮೇಲೆ ಹೆಚ್ಚುತ್ತಿರುವ ಆರೋಗ್ಯ ಹೊರೆಯ ಬಗ್ಗೆ ನೀತಿ ನಿರೂಪಕರು ಮತ್ತು ಆರೋಗ್ಯ ನಿರ್ವಾಹಕರಲ್ಲಿ ಎಚ್ಚರಿಕೆಯನ್ನು ಹೆಚ್ಚಿಸಿದೆ ಎಂದರು.

ಸಮ್ಮಿಟ್‌ನಲ್ಲಿ ಹ್ಯಾಪಿಯೆಸ್ಟ್ ಹೆಲ್ತ್‌ ನಾಲೆಡ್ಜ್‌ನ ಸಹ-ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘು ಕೃಷ್ಣನ್ , ಸಹ-ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವಿ ಜೋಶಿ , ಹಿರಿಯ ಸಂಪಾದಕಿ ಸುನೀತಾ ರಾವ್ ಮತ್ತಿತರರು ಇದ್ದರು.ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಮಕ್ಕಳು ಹಾಗೂ ಪೋಷಕರು ಪಾಲ್ಗೊಂಡಿದ್ದರು.