ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

CM- DCM Meeting: ಇಡ್ಲಿ-ನಾಟಿಕೋಳಿ ಸಾರು ಸವಿದ ಸಿದ್ದರಾಮಯ್ಯ; ಸಿಎಂ-ಡಿಸಿಎಂ ಸಭೆಯ Exclusive​ ಫೋಟೋಸ್‌ ಇಲ್ಲಿವೆ

Siddaramaiah - DK Shivakumar: ಅಧಿಕಾರ ಹಂಚಿಕೆ ಚರ್ಚೆ ನಡುವೆಯೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಇಂದು ಮತ್ತೆ ಭೇಟಿಯಾಗಿದ್ದಾರೆ. ಉಪಹಾರ ಸವಿಯಲು ಡಿಸಿಎಂ ಡಿಕೆ ಶಿವಕುಮಾರ್‌ ನಿವಾಸಕ್ಕೆ ಸಿಎಂ ಆಗಮಿಸಿದ್ದು, ಡಿಕೆ ಸುರೇಶ್‌ ಹಾಗೂ ಶಿವಕುಮಾರ್‌ ಆತ್ಮೀಯವಾಗಿ ಅವರನ್ನು ಬರಮಾಡಿಕೊಂಡರು

ಡಿಸಿಎಂ ಡಿಕೆ ನಿವಾಸಕ್ಕೆ ಬಂದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಅಧಿಕಾರ ಹಂಚಿಕೆ ಚರ್ಚೆ ನಡುವೆಯೇ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿಕೆ (CM- DCM Meeting) ಶಿವಕುಮಾರ್‌ ಇಂದು ಮತ್ತೆ ಭೇಟಿಯಾಗಿದ್ದಾರೆ. ಉಪಹಾರ ಸವಿಯಲು ಡಿಸಿಎಂ ಡಿಕೆ ಶಿವಕುಮಾರ್‌ ನಿವಾಸಕ್ಕೆ ಸಿಎಂ ಆಗಮಿಸಿದ್ದು, ಡಿಕೆ ಸುರೇಶ್‌ ಹಾಗೂ ಶಿವಕುಮಾರ್‌ ಆತ್ಮೀಯವಾಗಿ ಅವರನ್ನು ಬರಮಾಡಿಕೊಂಡರು. ಕಾವೇರಿ ನಿವಾಸದಿಂದ ಒಬ್ಬರೇ ಹೊರಟ ಸಿಎಂ ಬೆಳಗ್ಗೆ 9:40 ರ ವೇಳೆಗೆ ಡಿಕೆಶಿಯ ಸದಾಶಿವನಗರದಲ್ಲಿರುವ ನಿವಾಸಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಕುಣಿಗಲ್‌ ರಂಗನಾಥ್‌ ಅವರು ಸಿಎಂ ಕಾಲಿಗೆ ನಮಸ್ಕರಿಸಿದ್ದಾರೆ.

CM- DCM Meeting (1)

ಇಡ್ಲಿ, ಪೂರಿ, ಸಿಹಿ ತಿಂಡಿ ಜೊತೆಗೆ ನಾಟಿ ಕೋಳಿ ಸಾರನ್ನು ಸಿಎಂಗೋಸ್ಕರ ತಯಾರಿಸಲಾಗಿದೆ. ಡಿಕೆಶಿಯ ಸರ್ಕಾರಿ ನಿವಾಸದಲ್ಲಿ ಸಾಕಿದ್ದ ಕನಕಪುರದ ನಾಟಿ‌ ಕೋಳಿಯನ್ನೇ ಸಿಎಂಗೆ ಉಣಬಡಿಸಲಾಗುತ್ತದೆ. ಉಪಹಾರದ ಜೊತೆಗೆ ಸಿಎಂ ಹಾಗೂ ಡಿಸಿಎಂ ಪ್ರತ್ಯೇಕವಾಗಿ ಸಭೆ ನಡೆಸಿದ್ದಾರೆ. ಸದಾಶಿವನಗರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರ ಖಾಸಗಿ ನಿವಾಸಕ್ಕೆ ನಿನ್ನೆ ಸಿಎಂ ಸಿದ್ದರಾಮಯ್ಯ ಅವರನ್ನು ಡಿಕೆ ಶಿವಕುಮಾರ್ ಉಪಹಾರ ಕೂಟಕ್ಕೆ ಅಧಿಕೃತವಾಗಿ ಆಹ್ವಾನಿಸಿದ್ದರು.

CM- DCM Meeting (2)

ಕಳೆದ ವಾರ ಸಿಎಂ ನಿವಾಸದಲ್ಲಿ ಉಪಹಾರ ಸಭೆಯನ್ನು ಆಯೋಜಿಸಲಾಗಿತ್ತು. ಸಿದ್ದರಾಮಯ್ಯ ನಿವಾಸಕ್ಕೆ ತೆರಳಿದ್ದ ಡಿಕೆ ಶಿವಕುಮಾರ್‌ ಸಿಎಂ ಜೊತೆ ಮಾತುಕತೆ ನಡೆಸಿದ್ದರು. ಬಳಿಕ ಇಬ್ಬರೂ ನಾಯಕರು ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದ್ದರು. ಮೀಟಿಂಗ್‌ನಲ್ಲಿ 2028 ರ ಚುನಾವಣೆಯ ಕುರಿತು ಚರ್ಚೆ ನಡೆಸಿದ್ದೇವೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಗೆಲುವಿನ ಕುರಿತು ಚರ್ಚೆ ನಡೆಸಲಾಯಿತು. ನಮ್ಮ ಮುಖ್ಯ ಉದ್ದೇಶ ಕಾಂಗ್ರೆಸ್‌ ಅನ್ನು ಮತ್ತೆ ಅಧಿಕಾರಕ್ಕೆ ತರುವುದು. ನನ್ನ ಹಾಗೂ ಶಿವಕುಮಾರ್‌ ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಅನಗತ್ಯ ಚರ್ಚೆಗಳಿಗೆ ಇಂದು ನಾವು ಬ್ರೇಕ್‌ ಹಾಕಿದ್ದೇವೆ ಎಂದು ಭಾವಿಸುತ್ತೇವೆ ಇಬ್ಬರೂ ನಾಯಕರು ಹೇಳಿದ್ದರು.

ಸಿಎಂ ಮತ್ತು ಡಿಸಿಎಂ ಇಬ್ಬರೂ ಒಂದಾಗಿದ್ದಾರೆ : ಬದಲಾವಣೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ : ಸಚಿವ ಕೆ.ಹೆಚ್.ಮುನಿಯಪ್ಪ

ಆದರೆ ಇದೀಗ ಮತ್ತೆ ಮೀಟಿಂಗ್‌ ನಡೆಸುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಸಭೆ ಮುಗಿದ ಬಳಿಕ ಡಿಕೆ ಶಿವಕುಮಾರ್‌ ಹೈಕಮಾಂಡ್‌ ನಾಯಕರನ್ನು ಭೇಟಿಯಾಗುವ ಸಾಧ್ಯತೆ ಇದೆ ಹೇಳಲಾಗುತ್ತಿದೆ.