ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Minister K.H. Muniyappa: ಸಿಎಂ ಮತ್ತು ಡಿಸಿಎಂ ಇಬ್ಬರೂ ಒಂದಾಗಿದ್ದಾರೆ : ಬದಲಾವಣೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ : ಸಚಿವ ಕೆ.ಹೆಚ್.ಮುನಿಯಪ್ಪ.

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಬ್ಬರೂ ಒಂದಾಗಿದ್ದು ಮುಖ್ಯ ಮಂತ್ರಿ ಬದಲಾವಣೆ ವಿಚಾರದ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ ಇದು ಮುಗಿದ ಅಧ್ಯಾಯ. ಇದನ್ನು ಪಕ್ಷದ ವರಿಷ್ಟರು ತೀರ್ಮಾನ ಮಾಡುತ್ತಾರೆ. ನಾನು ಇಲ್ಲಿಗೆ ಬಂದಿರುವುದು ಕರ್ನಾಟಕ ಮಾದಾರ ಮಹಾಸಭಾ ಕಾರ್ಯಕ್ರಮದ ಸದಸ್ಯತ್ವ ನೋಂದಣಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದಿದ್ದೇನೆ. ಇದು ರಾಜಕೀಯದ ಕಾರ್ಯಕ್ರಮವಲ್ಲ ಸಮುದಾಯದ ಕಾರ್ಯಕ್ರಮ

ಬದಲಾವಣೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ

ದೇವರಗುಡಿಪಲ್ಲಿ ಗ್ರಾಮದ ಗಿರಿಜಾ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಚಿವ ಕೆ.ಹೆಚ್.ಮುನಿಯಪ್ಪ ಮಾತನಾಡಿದರು. -

Ashok Nayak
Ashok Nayak Dec 2, 2025 12:04 AM

ಬಾಗೇಪಲ್ಲಿ: ಸಿಎಂ ಮತ್ತು ಡಿಸಿಎಂ ಇಬ್ಬರೂ ಒಂದಾಗಿದ್ದಾರೆ ಮುಖ್ಯಮಂತ್ರಿ ಬದಲಾವಣೆ ವಿಚಾರ ಮುಗಿದ ಅಧ್ಯಾಯ ಇದನ್ನು ಪಕ್ಷದ ವರಿಷ್ಟರು ತೀರ್ಮಾನಿಸುತ್ತಾರೆ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಚಿವ ಕೆ.ಚ್.ಮುನಿಯಪ್ಪ(Minister K.H.Muniyappa) ತಿಳಿಸಿ ದ್ದಾರೆ.

ತಾಲ್ಲೂಕಿನ ದೇವರಗುಡಿಪಲ್ಲಿ ಗ್ರಾಮದ ಗಿರಿಜಾ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಮಾದಾರ ಮಹಾಸಭಾದ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಮಾತನಾಡಿದರು.

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಬ್ಬರೂ ಒಂದಾಗಿದ್ದು ಮುಖ್ಯ ಮಂತ್ರಿ ಬದಲಾವಣೆ ವಿಚಾರದ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ ಇದು ಮುಗಿದ ಅಧ್ಯಾಯ. ಇದನ್ನು ಪಕ್ಷದ ವರಿಷ್ಟರು ತೀರ್ಮಾನ ಮಾಡುತ್ತಾರೆ. ನಾನು ಇಲ್ಲಿಗೆ ಬಂದಿರುವುದು ಕರ್ನಾಟಕ ಮಾದಾರ ಮಹಾಸಭಾ ಕಾರ್ಯಕ್ರಮದ ಸದಸ್ಯತ್ವ ನೋಂದಣಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದಿ ದ್ದೇನೆ. ಇದು ರಾಜಕೀಯದ ಕಾರ್ಯಕ್ರಮವಲ್ಲ ಸಮುದಾಯದ ಕಾರ್ಯಕ್ರಮ. ಮಾದಿಗ ಸಮಾಜದ ಪ್ರತಿಯೊಬ್ಬರೂ ಸದಸ್ಯತ್ವ ನೋಂದಣಿ ಮಾಡಿಸಲೇಬೇಕು. ಏಕೆಂದರೆ ಒಕ್ಕಲಿಗರ ಸಂಘ, ವೀರಶೈವ ಸಂಘ, ಕುರುಬ ಸಂಘಗಳು ತಮ್ಮ ಸದಸ್ಯತ್ವದ ಹಣದಿಂದ ತಮ್ಮ ಸಮಾಜದ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ವ್ಯಯ ಮಾಡುತ್ತಿದ್ದಾರೆ. ಅದೇ ರೀತಿಯಲ್ಲಿ ನಮ್ಮ ಸಮಾಜದವರು ನೋಂದಣಿಯ ಹಣದಲ್ಲಿ ಒಂದು ಒಳ್ಳೆಯ ಶೈಕ್ಷಣಿಕ ಸಂಸ್ಥೆಗಳನ್ನು ತೆರೆದು ಬಡ ಮಕ್ಕಳಿಗೆ ಉಚಿತ ಶಿಕ್ಷಣ ಒದಗಿಸಲು ಇದರ ಮೂಲ ಉದ್ದೇಶವಾಗಿದೆ ಎಂದರು.

ಇದನ್ನೂ ಓದಿ: Chikkaballapur News: ಪುಟ್ಟತಿಮ್ಮನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಂಚನಬಲೆ ಸದಾಶಿವ ನೆರವು

ಸರಕಾರ ನೀಡಿರುವ ಮೀಸಲಾತಿಯಲ್ಲಿ ಶೇ೬ ರಷ್ಟು ಪಡೆಯಲು ನಾನು, ಗೃಹಮಂತ್ರಿ ಡಾ.ಜಿ. ಪರಮೇಶ್ವರ್, ಇತರೆ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ, ಪ್ರಿಯಾಂಕ ಖರ್ಗೆ, ತಿಮ್ಮಾಪುರ ಸೇರಿದಂತೆ ಹಲವಾರು ಸಚಿವರು ಶಾಸಕರ ಸತತ ಪ್ರಯತ್ನದಿಂದ ಶೇ೬ ರಷ್ಟು ಮೀಸಲಾತಿ ಪಡೆ ಯಲು ಸಾಧ್ಯವಾಯಿತೇ ಹೊರತು ನನ್ನ ಒಬ್ಬನಿಂದಲೇ ಸಾದ್ಯವಾಗಲಿಲ್ಲ ಎಂದ ಅವರು ಪರಿಶಿಷ್ಟ ಜಾತಿಗಳಲ್ಲಿ ಅತ್ಯಂತ ಹಿಂದುಳಿದ ಜಾತಿಯಾದ ಮಾದಿಗ ಸಮುದಾಯದ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ಹಾಗೂ ಸಾಂಸ್ಕೃತಿಕ ಸಬಲೀಕರಣಕ್ಕೆ ಕರ್ನಾಟಕ ಮಾದಾರ ಮಹಾಸಭೆ ಯನ್ನು ಸ್ಥಾಪನೆ ಮಾಡಲಾಗಿದೆ ಇಲ್ಲಿ ಪೂಜಪ್ಪ ಮತ್ತು ಬಿ.ವಿ.ವೆಂಕಟರವಣ ಇಬ್ಬರೂ ಒಂದಾ ಗಿರುವುದು ತುಂಬಾ ಸಂತೋಷದ ವಿಚಾರ ಎಂದರು.

ಮಾಜಿ ಸಂಸದ ಚಂದ್ರಪ್ಪ ಮಾತನಾಡಿ, ಸಚಿವ ಮುನಿಯಪ್ಪ ಅವರ ೪೦ ವರ್ಷಗಳ ರಾಜಕಾರಣ ದಲ್ಲಿ ೩೦ ವರ್ಷಗಳಲ್ಲಿ ಭಾರತದ ಸರಕಾರದ ಸಚಿವರಾಗಿ ಈಗ ರಾಜ್ಯ ಸರಕಾರದಲ್ಲಿ ಪ್ರಭಾವಿ ಸಚಿವರಾಗಿರುವುದು ನಮ್ಮ ಅದೃಷ್ಟ ಅವರು ರಾಜ್ಯ ರಾಜಕಾರಣಕ್ಕೆ ಬರದೆ ಇದ್ದಿದ್ದರೆ ನಮಗೆ ಶೇ೬ ರಷ್ಟು ಮೀಸಲಾತಿ ಸಿಗಲಿಕ್ಕೆ ಸಾದ್ಯವೇ ಆಗುತ್ತಿರಲಿಲ್ಲ. ಬಾಬಾ ಸಾಹೇಬ್ ಅಂಬೇಂಡ್ಕರ್ ಅವರ ರಥವನ್ನು ಸಾದ್ಯ ಆದರೆ ಮುಂದೆ ಎಳೆದುಕೊಂಡು ಹೋಗಿ ಹಿಂದೇ ಮಾತ್ರ ಬಿಡಬೇಡಿ ಎಂದು ಹೇಳಿದ್ದರು. ಆ ರಥವನ್ನು ಸಚಿವ ಮುನಿಯಪ್ಪ ಅವರು ಮುಂದೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಆದ್ದರಿಂದ ಮಾದಾರ ಮಹಾಸಭಾದ ಅಧೀಕೃತ ವೆಬ್ಸೆöÊಟ್ ಅನಾವರಣ ಗೊಂಡಿದ್ದು ನಮ್ಮ ಸಮುದಾಯದ ಎಲ್ಲರೂ ನೋಂದಣಿ ಮಾಡಿಕೊಳ್ಳುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಕಡಪದ ಆದಿಜಾಂಭವ ಮಠದ ಪೀಠಾಧಿಪತಿ, ಆನಂದ ಗುರೂಜಿ, ಮಾತಂಗ ಪೌಂಡೇಷಣ್ ಅಧ್ಯಕ್ಷ ಲೋಕೇಶ್, ಮಾದಾರ ಮಹಾಸಭಾ ಜಿಲ್ಲಾಧ್ಯಕ್ಷ ಕೃಷ್ಣ, ತಿರುಪಾಲಪ್ಪ, ಬಿ.ಇ.ವಿಶ್ವನಾಥ್, ಜಿ.ಪಂ ಮಾಜಿ ಉಪಾಧ್ಯಕ್ಷ ಎ.ವಿ.ಪೂಜಪ್ಪ, ದಸಂಸ ಜಿಲ್ಲಾ ಸಂಚಾಲಕ, ಬಿ.ವಿ.ವೆಂಕಟರವಣ, ಜಿಲ್ಲಾ ಮಾದಾರ ಮಹಾಸಭಾದ ಅಧ್ಯಕ್ಷ ಡಾ.ಚಿನ್ನಕೈವಾರಮಯ್ಯ, ತಾಲ್ಲೂಕು ಅಧ್ಯಕ್ಷ ರಮೇಶ್‌ಬಾಬು, ಮುಖಂಡರಾದ ಕಡ್ಡೀಲು ವೆಂಕಟವರಣ, ಎ.ನಂಜುಂಡಪ್ಪ, ಕಿರಣ್ ಕುಮಾರ್, ಎ.ನರಸಿಂಹಮೂರ್ತಿ, ಸೇರಿದಂತೆ ಸಾವಿರಾರು ಮುಖಂಡರು ಹಾಜರಿದ್ದರು.