108 ಆರೋಗ್ಯ ಕವಚ ಕೇಂದ್ರೀಕೃತ ಕಮಾಂಡ್-ಕಂಟ್ರೋಲ್ ಕೇಂದ್ರ ಉದ್ಘಾಟಿಸಿದ ಸಿಎಂ; ಏನಿದರ ಉಪಯೋಗ?
108 command centre: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಬೆಂಗಳೂರಿನ ಬಸವೇಶ್ವರ ನಗರದ ಕೇಂದ್ರೀಕೃತ ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೇಶದ ಮೊದಲ ಸರ್ಕಾರಿ ಸ್ವಾಮ್ಯದ ಅತ್ಯಾಧುನಿಕ ಮಾದರಿಯ ಸಮಗ್ರ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆಗೊಳಿಸಿದರು.
-
ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ '108 ಅರೋಗ್ಯ ಕವಚ ಕೇಂದ್ರೀಕೃತ ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರ' ವನ್ನು ನಗರದ ಬಸವೇಶ್ವರ ನಗರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ನಗರದಲ್ಲಿ ಸೋಮವಾರ ಉದ್ಘಾಟಿಸಿದರು. ಇದು ದೇಶದ ಮೊದಲ ಸರ್ಕಾರಿ ಸ್ವಾಮ್ಯದ ಅತ್ಯಾಧುನಿಕ ಮಾದರಿಯ ಸಮಗ್ರ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ (108 Command and Control Centre) ಆಗಿದ್ದು, ಈ ಕೇಂದ್ರವು ಸರ್ಕಾರದ ಒಡೆತನದ 108 ಆಂಬ್ಯುಲೆನ್ಸ್‌ಗಳ ಸುಗಮ ಕಾರ್ಯಾಚರಣೆಗೆ ನೆರವಾಗಲಿದೆ.
108 ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರ ಉಪಯೋಗಗಳೇನು?
ಸರ್ಕಾರದ ಒಡೆತನದ ಸಮಗ್ರ ತುರ್ತು ಆರೋಗ್ಯಜಾಲ:
ತುರ್ತು ಆಂಬ್ಯುಲೆನ್ಸ್ ಸೇವೆಗಳಾದ 108 ಆರೋಗ್ಯ ಕವಚ, ನಗು-ಮಗು ಮತ್ತು ಇತರ ಆಂಬ್ಯುಲೆನ್ಸ್‌ಗಳ ಸುಗಮ ಕಾರ್ಯಾಚರಣೆಗಾಗಿ ಕರ್ನಾಟಕ ಸರ್ಕಾರವು ಅತ್ಯಾಧುನಿಕ ಕೇಂದ್ರೀಕೃತ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ಅನ್ನು ಪರಿಚಯಿಸುತ್ತಿದೆ.
ಆರೋಗ್ಯ ಸಂಸ್ಥೆಗಳ ಡಿಜಿಟಲ್ ಮ್ಯಾಪಿಂಗ್
- ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಜಿಐಎಸ್ (GIS) ಮ್ಯಾಪಿಂಗ್
- ಸಮೀಪದ ಸೂಕ್ತ ಚಿಕಿತ್ಸಾ ಸೌಲಭ್ಯವಿರುವ ಆರೋಗ್ಯ ಸಂಸ್ಥೆಗಳ ಗುರುತಿಸುವಿಕೆ.
ಸದೃಢ ಮತ್ತು ಸುರಕ್ಷಿತ ಮೂಲಭೂತ ಸೌಕರ್ಯಗಳು
- ಕರ್ನಾಟಕ ರಾಜ್ಯ ಡೇಟಾ ಸೆಂಟರ್ (KSDC) ಸುರಕ್ಷಿತ ಸರ್ವರ್‌ಗಳಲ್ಲಿ ಅನುಷ್ಠಾನ ಮಾಡಲಾಗಿದೆ.
- ಕರ್ನಾಟಕ ರಾಜ್ಯ ವೈಡ್ ಏರಿಯಾ ನೆಟ್‌ವರ್ಕ್ (KSWAN) ಮತ್ತು ಡ್ಯುಯಲ್ SIP ಟ್ರಂಕ್ ಲೈನ್‌ಗಳ ಮೂಲಕ ವಿಶ್ವಾಸಾರ್ಹ ಮತ್ತು ಅನಿಯಮಿತ ಸಂಪರ್ಕ ಜಾಲ.
ರಿಯಲ್ ಟೈಮ್ ಆಂಬ್ಯುಲೆನ್ಸ್ ಟ್ರ್ಯಾಕಿಂಗ್
- ಸ್ವಯಂಚಾಲಿತವಾಗಿ ವಾಹನಗಳ ಸಂಚಲನೆಯ ಸ್ಥಳ ಪತ್ತೆ ಮತ್ತು ಅನುಸರಣಾ ವ್ಯವಸ್ಥೆಯನ್ನು ಹೊಂದಿರುವ ಆಂಬ್ಯುಲೆನ್ಸ್‌ಗಳು.
- ತಲುಪುವ ನಿರೀಕ್ಷಿತ ಸಮಯಕ್ಕೆ (ETA) ಅನುಗುಣವಾಗಿ ಸಮೀಪದ ಆಂಬ್ಯುಲೆನ್ಸ್ ವ್ಯವಸ್ಥೆ.
- ಕಿರು ಸಂದೇಶಗಳ ಮೂಲಕ ಅಂಬ್ಯುಲೆನ್ಸ್‌ಗಳ ಸಂಚಲನೆಯ ಅನುಸರಣಾ ವಿವರಗಳ್ಳುಳ್ಳ ಮಾಹಿತಿ ರವಾನೆ.
- ಮೊಬೈಲ್ ಡೇಟಾ ಟರ್ಮಿನಲ್ (MDT) ಸಾಧನಗಳನ್ನು ಬಳಸಿಕೊಂಡು ಡಿಜಿಟಲ್ ಪೇಷಂಟ್ ಕೇರ್ ರೆಕಾರ್ಡ್ ಮೂಲಕ ರೋಗಿಯ ಪ್ರಮುಖ ಆರೋಗ್ಯ ಮಾಹಿತಿಯ ದಾಖಲಾತಿ.
ತುರ್ತು ಸಂದರ್ಭಗಳಲ್ಲಿ ತ್ವರಿತ ಸ್ಪಂದನೆ
- ತುರ್ತು ಕರೆಗಳಿಗೆ 5 ಸೆಕೆಂಡುಗಳ ಒಳಗೆ ಪ್ರತಿಕ್ರಿಯೆ.
- ಕರೆ ಮಾಡಿದವರ ನಿಖರ ಸ್ಥಳವನ್ನು ಗುರುತಿಸಲು ಸ್ವಯಂಚಾಲಿತ ಸ್ಥಳ ಅಧಾರಿತ ವ್ಯವಸ್ಥೆ (LBS),
- ಅಮೂಲ್ಯವಾದ ಸಮಯವನ್ನು ಉಳಿಸಲು ತ್ವರಿತವಾಗಿ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗುವುದು.
ತಂತ್ರಜ್ಞಾನ ಆಧಾರಿತ ವೈದ್ಯಕೀಯ ಬೆಂಬಲ ವ್ಯವಸ್ಥೆ
- ಆಸ್ಪತ್ರೆಗೆ ದಾಖಲಿಸುವ ಮುನ್ನ ತಜ್ಞ ವೈದ್ಯರ ಮಾರ್ಗದರ್ಶನದಿಂದ ತುರ್ತು ಆರೈಕೆ.
- MDT ಸಾಧನಗಳ ಮೂಲಕ ನೈಜ-ಸಮಯದ (Real-time) ಸಮಾಲೋಚನೆ.
- ತುರ್ತು ಸಮಯದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿ ಪೂರ್ವ ಸಿದ್ಧತೆ ಮಾಡಿಕೊಳ್ಳಲು ಸಂದೇಶ ರವಾನೆ.
ಜೀವ ರಕ್ಷಣೆಗೆ ಬದ್ಧತೆ
- ಸಕಾಲದಲ್ಲಿ ಗರ್ಭಿಣಿಯರು, ಅಪಘಾತದ ಸಂತ್ರಸ್ತರು, ಆರೋಗ್ಯ ವಿಪತ್ತಿನ ತುರ್ತು ಪರಿಸ್ಥಿತಿಗಳು, ತುರ್ತು ಚಿಕಿತ್ಸೆಯು ಅಗತ್ಯವಿರುವ ರೋಗಿಗಳಿಗೆ ತುರ್ತು ವೈದ್ಯಕೀಯ ಆರೈಕೆಯನ್ನು ಒದಗಿಸುವುದು.
ಬೃಹತ್ ಮತ್ತು ಸಮಗ್ರ ತುರ್ತು ವಾಹನಗಳ ಸಮೂಹ
- ಆರೋಗ್ಯ ಮತ್ತು ಆರೋಗ್ಯ ಸಂಬಂಧಿ ಇಲಾಖೆಗಳ ವ್ಯಾಪ್ತಿಯಲ್ಲಿರುವ ಆಂಬ್ಯುಲೆನ್ಸ್‌ಗಳ ಕೇಂದ್ರೀಕೃತ ಕಾರ್ಯಾಚರಣೆ.
- 104 ಆರೋಗ್ಯ ಸಹಾಯವಾಣಿ, 112 ERSS, 181 ಮಹಿಳಾ ಮತ್ತು ಮಕ್ಕಳ ಸಹಾಯವಾಣಿ ಹಾಗೂ ಇನ್ನಿತರ ಸೇವೆಗಳೊಂದಿಗೆ ಸಂಯೋಜನೆ.
- 112 ಇಂಡಿಯಾ' ಮೊಬೈಲ್ ಅಪ್ಲಿಕೇಷನ್ ಮೂಲಕ ತುರ್ತು ವೈದ್ಯಕೀಯ ನೆರವು.