ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bangalore Traffic:: ಬೆಂಗಳೂರಿನ ಟ್ರಾಫಿಕ್‌ ದಟ್ಟಣೆ ನಿವಾರಣೆಗೆ ʼಕೋಬ್ರಾ ಬೀಟ್‌ʼ, ಏನಿದು?

Bengaluru Traffic Cobra Beat System: ‘ಕೋಬ್ರಾ ಬೀಟ್’ ಸಿಬ್ಬಂದಿ ಗರಿಷ್ಠ ಮಟ್ಟದಲ್ಲಿ ಎರಡು ನಿಯೋಜಿತ ಮಾರ್ಗಗಳಲ್ಲಿ ನಿಯಮಿತವಾಗಿ ಗಸ್ತು ತಿರುಗುತ್ತಾರೆ. ಪುನರಾವರ್ತಿತ ಸಂಚಾರ ದಟ್ಟಣೆಯ ಪಾಯಿಂಟ್‌ಗಳು, ಪಾರ್ಕಿಂಗ್ ಉಲ್ಲಂಘನೆಗಳು ಮತ್ತು ಅಡಚಣೆಗಳನ್ನು ಗುರುತಿಸುತ್ತಾರೆ. ಜತೆಗೆ ತಕ್ಷಣವೇ ಸ್ಪಂದಿಸಿ ಸಮಸ್ಯೆ ಪರಿಹರಿಸಲಿದ್ದಾರೆ. ಆಗಾಗ ಸಂಚಾರ ದಟ್ಟಣೆ ಮತ್ತು ನಿಧಾನಗತಿಯ ಸಂಚಾರ ವರದಿಯಾಗುವ ಕಮರ್ಷಿಯಲ್ ಸ್ಟ್ರೀಟ್‌ನಂತಹ ಪ್ರದೇಶಗಳಲ್ಲಿ ಈ ‘ಕೋಬ್ರಾ’ ಸಿಬ್ಬಂದಿ ಗಸ್ತು ಕಾರ್ಯಾಚಣೆ ನಡೆಸಲಿದ್ದಾರೆ.

ಬೆಂಗಳೂರಿನ ಟ್ರಾಫಿಕ್‌ ದಟ್ಟಣೆ ನಿವಾರಣೆಗೆ ʼಕೋಬ್ರಾ ಬೀಟ್‌ʼ, ಏನಿದು?

-

ಹರೀಶ್‌ ಕೇರ
ಹರೀಶ್‌ ಕೇರ Nov 7, 2025 9:25 AM

ಬೆಂಗಳೂರು, ನ.7: ಬೆಂಗಳೂರಿನ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು (Bengaluru Traffic Jam) ನಿರ್ವಹಿಸುವುದಕ್ಕಾಗಿ ‘ಕೋಬ್ರಾ ಬೀಟ್' (Cobra Beat) ಎಂಬ ಹೊಸ ವ್ಯವಸ್ಥೆಯನ್ನು ಬೆಂಗಳೂರು ಸಂಚಾರ ಪೊಲೀಸರು (‌Traffic police) ಜಾರಿಗೆ ತರಲು ಮುಂದಾಗಿದ್ದಾರೆ. ‘ಕೋಬ್ರಾ ಬೀಟ್’ ಸಂಚಾರ ದಟ್ಟಣೆಯ ಸೂಕ್ಷ್ಮ ಕಾರಣಗಳನ್ನು ಗುರುತಿಸಿ ಅಲ್ಲಲ್ಲೇ ಪರಿಹಾರ ಒದಗಿಸಲಿದೆ. ಸಂಚಾರ ದಟ್ಟಣೆ ಸಂದರ್ಭದಲ್ಲಿ ಪ್ರತಿ ಸಂಚಾರ ಪೊಲೀಸ್ ಠಾಣೆಯಿಂದಲೂ ಕ್ಷಿಪ್ರ ಪ್ರತಿಕ್ರಿಯೆ ನೀಡುವಂತೆ ವ್ಯವಸ್ಥೆಯನ್ನು ರೂಪಿಸಲಾಗಿದೆ.

ಹೇಗೆ ಕೆಲಸ ಮಾಡುತ್ತೆ ಕೋಬ್ರಾ ಬೀಟ್?

‘ಕೋಬ್ರಾ ಬೀಟ್’ ಸಿಬ್ಬಂದಿ ಗರಿಷ್ಠ ಮಟ್ಟದಲ್ಲಿ ಎರಡು ನಿಯೋಜಿತ ಮಾರ್ಗಗಳಲ್ಲಿ ನಿಯಮಿತವಾಗಿ ಗಸ್ತು ತಿರುಗುತ್ತಾರೆ. ಪುನರಾವರ್ತಿತ ಸಂಚಾರ ದಟ್ಟಣೆಯ ಪಾಯಿಂಟ್‌ಗಳು, ಪಾರ್ಕಿಂಗ್ ಉಲ್ಲಂಘನೆಗಳು ಮತ್ತು ಅಡಚಣೆಗಳನ್ನು ಗುರುತಿಸುತ್ತಾರೆ. ಜತೆಗೆ ತಕ್ಷಣವೇ ಸ್ಪಂದಿಸಿ ಸಮಸ್ಯೆ ಪರಿಹರಿಸಲಿದ್ದಾರೆ. ಮೂಲಸೌಕರ್ಯ ಹೊರತುಪಡಿಸಿದ ಸಂಚಾರ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯತಂತ್ರದ ಭಾಗವಾಗಿ ಬೆಂಗಳೂರು ಸಂಚಾರ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ ಎಂದು ‘ದಿ ಹಿಂದೂ’ ವರದಿ ಉಲ್ಲೇಖಿಸಿದೆ.

ಇತ್ತೀಚೆಗಷ್ಟೇ, ಸಂಚಾರ ದಟ್ಟಣೆಗೆ ಕಾರಣವಾಗುವ 103 ಕಳಪೆ ಬಸ್ ನಿಲ್ದಾಣಗಳನ್ನು ಗುರುತಿಸಿದ್ದ ಅಧಿಕಾರಿಗಳು ಅವುಗಳ ಸ್ಥಳಾಂತರಕ್ಕೆ ಕ್ರಮ ಕೈಗೊಂಡಿದ್ದಾರೆ. ಕಾಯುವ ಸಮಯವನ್ನು ಕಡಿಮೆ ಮಾಡಲು ಮತ್ತು ಸಂಚಾರ ಸುಗಮಗೊಳಿಸಲು ಹಲವಾರು ಜಂಕ್ಷನ್‌ಗಳಲ್ಲಿ ಸಿಗ್ನಲ್ ಸಿಂಕ್ರೊನೈಸೇಶನ್ ವ್ಯವಸ್ಥೆ ಪರಿಚಯಿಸಲಾಗಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: ಸಂಚಾರ ನಿರ್ವಹಣೆಗೆ (ಟ್ರಾಫಿಕ್ ಮ್ಯಾನೇಜ್ಮೆಂಟ್) ಇರುವೆಗಳ ಮಾರ್ಗದರ್ಶನ ಅಥವಾ ಟ್ರಾಫಿಕ್ ಜಾಮ್ ಸಮಸ್ಯೆಗೆ ಇರುವೆಗಳ ರೂಲ್ಸ್‌!

ಪ್ರತಿ ಸಂಚಾರ ಠಾಣೆಯಲ್ಲೂ ಇರಲಿದೆ ಕೋಬ್ರಾ

ಪ್ರತಿಯೊಂದು ಸಂಚಾರ ಠಾಣೆಯು ಅದರ ವ್ಯಾಪ್ತಿಯನ್ನು ಅವಲಂಬಿಸಿ ಮೂರರಿಂದ ನಾಲ್ಕು ಕೋಬ್ರಾಗಳನ್ನು ಹೊಂದಿರುತ್ತದೆ. ಆಗಾಗ ಸಂಚಾರ ದಟ್ಟಣೆ ಮತ್ತು ನಿಧಾನಗತಿಯ ಸಂಚಾರ ವರದಿಯಾಗುವ ಕಮರ್ಷಿಯಲ್ ಸ್ಟ್ರೀಟ್‌ನಂತಹ ಪ್ರದೇಶಗಳಲ್ಲಿ ಈ ‘ಕೋಬ್ರಾ’ ಸಿಬ್ಬಂದಿ ಗಸ್ತು ಕಾರ್ಯಾಚಣೆ ನಡೆಸಲಿದ್ದಾರೆ. ಅಕ್ರಮ ಪಾರ್ಕಿಂಗ್, ರಾಂಗ್ ಸೈಡ್ ಚಾಲನೆಯಂಥ ಪ್ರಕರಣಗಳನ್ನು ಅಲ್ಲಲ್ಲೇ ನಿಭಾಯಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಿದ್ದಾರೆ.

ಸಣ್ಣ ಪುಟ್ಟ ತಪ್ಪುಗಳು ಕೂಡ ದೊಡ್ಡ ಟ್ರಾಫಿಕ್ ಜಾಮ್ ಆಗಿ ಬದಲಾಗಬಹುದು. ತಪ್ಪಾಗಿ ನಿಲ್ಲಿಸಿದ ಒಂದೇ ಒಂದು ವಾಹನವು 10 ಸೆಕೆಂಡುಗಳ ವಿಳಂಬಕ್ಕೆ ಕಾರಣವಾಗಬಹುದು. ಇದೇ ರೀತಿ ಹಲವು ಮಂದಿ ಮಾಡಿದಾಗ ತಾಸುಗಟ್ಟಲೆ ಟ್ರಾಫಿಕ್ ಜಾಮ್ ಕೂಡ ಉಂಟಾಗಬಹುದು ಎಂದು ಡಿಸಿಪಿ (ದಕ್ಷಿಣ) ಗೋಪಾಲ್ ಎಂ ಬ್ಯಾಕೋಡ್ ಹೇಳಿದ್ದಾರೆ. ‘ಕೋಬ್ರಾ’ ಸಿಬ್ಬಂದಿ ವಾಹನಗಳನ್ನು ಗುರುತಿಸಿ ಕ್ರಮ ಕೈಗೊಳ್ಳಲಿದ್ದಾರೆ. ದಂಡ ವಿಧಿಸುವುದು ಮತ್ತು ಸ್ಥಳದಲ್ಲೇ ಅಡೆತಡೆಗಳನ್ನು ತೆರವುಗೊಳಿಸುವ ಮೂಲಕ ಮೇಲ್ವಿಚಾರಣೆ ಮಾಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.‌

ಇದನ್ನೂ ಓದಿ: Sunil Joshi: ಬೆಂಗಳೂರು ಟ್ರಾಫಿಕ್‌ ಬಗ್ಗೆ ಅಸಮಾಧಾನ ಹೊರಹಾಕಿದ ಕ್ರಿಕೆಟರ್‌ ಸುನೀಲ್‌ ಜೋಶಿ