ಲಕ್ಷಾಂತರ ಮೆಟ್ರೋ ಗ್ರಾಹಕರಿಗಾಗಿ ಕ್ರೆಡಿಟ್ ಕಾರ್ಡ್ ಆರಂಭಿಸಿದ ಕೋಟಕ್, ಮೆಟ್ರೋ ಕ್ಯಾಶ್& ಕ್ಯಾರಿ
ಲಕ್ಷಾಂತರ ಮೆಟ್ರೋ ಗ್ರಾಹಕರಿಗಾಗಿ ಕ್ರೆಡಿಟ್ ಕಾರ್ಡ್ ಆರಂಭಿಸಿದ ಕೋಟಕ್, ಮೆಟ್ರೋ ಕ್ಯಾಶ್& ಕ್ಯಾರಿ
Vishwavani News
Dec 15, 2022 5:01 PM
ಬೆಂಗಳೂರು: ಕೋಟಕ್ ಮಹಿಂದ್ರಾ ಬ್ಯಾಂಕ್ ಲಿಮಿಟೆಡ್ (“KMBL”/Kotak), ಭಾರತದ ಮುಂಚೂಣಿ ಸಂಘಟಿತ ಸಗಟು ವ್ಯಾಪಾರ ಮತ್ತು ಆಹಾರತಜ್ಞ ಸಂಸ್ಥೆಯಾದ ಮೆಟ್ರೋ ಕ್ಯಾಶ್ & ಕ್ಯಾರಿ ಇಂಡಿಯಾದ ಸಹಯೋಗದೊಂದಿಗೆ ಹೊಸ ಸಹ-ಬ್ರ್ಯಾಂಡೆಡ್ ಕ್ರೆಡಿಟ್ ಕಾರ್ಡ್ ‘METRO Kotak Credit Card’ಅನ್ನು ಪರಿಚಯಿಸಿತು.
ಈ ಕಾರ್ಡ್, 3 ದಶಲಕ್ಷಕ್ಕಿಂತ ಹೆಚ್ಚಿನ ನೋಂದಾಯಿತ ಮೆಟ್ರೋ ಇಂಡಿಯಾ ಗ್ರಾಹಕರಿಗೆ 48 ದಿನಗಳವರೆಗೆ ಸುಲಭವಾದ ಬಡ್ಡಿರಹಿತ ಸಾಲಸೌಲಭ್ಯ ಒದಗಿಸುತ್ತದೆ. ಈ ಕಾರ್ಡ್‌ಅನ್ನು RuPay ಕಾರ್ಯಜಾಲದಲ್ಲಿ ಪರಿಚಯಿಸಲಾಗಿದೆ.
ಮೆಟ್ರೋದ ಗ್ರಾಹಕ ಬೇಸ್, ಸಣ್ಣ ವ್ಯಾಪಾರಸ್ಥರು, ಕಿರಾಣಾ ಮಾಲೀಕರು, ಎಮ್‌ಎಸ್‌ಎಮ್‌ಇಗಳು, ಸಣ್ಣ ರೆಸ್ಟಾರೆಂಟ್ ಗಳು HoReCa (ಹೋಟೆಲುಗಳು, ರೆಸ್ಟಾರೆಂಟ್‌ಗಳು ಮತ್ತು ಕೇಟರರ್ಸ್) ಸಂಸ್ಥೆಗಳು, ಕಚೇರಿಗಳು, ಸಂಸ್ಥೆಗಳು, ಇನ್ಸ್‌ಟಿಟ್ಯೂಶನ್ಸ್, ಹಾಗೂ ಸ್ವ-ಉದ್ಯೋಗಸ್ಥ ವೃತ್ತಿಪರರನ್ನು ಒಳಗೊಂಡಿದೆ.
ಹೊಸ ಮೆಟ್ರೋ ಕೋಟಕ್ ಕ್ರೆಡಿಟ್ ಕಾರ್ಡ್‌ಅನ್ನು ಭಾರತದ 21 ನಗರಗಳಲ್ಲಿ ಸ್ಥಾಪಿತವಾಗಿರುವ 31 ಸಗಟುವ್ಯಾಪಾರ ವಿತರಣಾ ಕೇಂದ್ರಗಳ(ಮಳಿಗೆಗಳು) ಮೆಟ್ರೋ ಕಾರ್ಯಜಾಲದಾದ್ಯಂತ ಮತ್ತಿವಾಣಿಜ್ಯ ವೇದಿಕೆಯಾದ ಮೆಟ್ರೋ ಹೋಲ್‌ಸೇಲ್ ಆಪ್‌ನಲ್ಲಿ ಬಳಸಿಕೊಳ್ಳಬಹುದಾಗಿದೆ.
ಮೆಟ್ರೋ ಕೋಟಕ್ ಕ್ರೆಡಿಟ್ ಕಾರ್ಡ್‌ಅನ್ನು, ಮೆಟ್ರೋದಿಂದ ತಮ್ಮ ಚಿಲ್ಲರೆ ಅಂಗಡಿಗಳಿಗೆ ಸ್ಟಾಕ್ ಮಾಡಿಕೊಳ್ಳುವು ದಕ್ಕಾಗಿ ಖರೀದಿಸುವ ಚಿಲ್ಲರೆವ್ಯಾಪಾರಸ್ಥರ ಸಾಲ ಅಗತ್ಯಗಳನ್ನು ಪೂರೈಸುವುದಕ್ಕಾಗಿಯೇ ವಿನ್ಯಾಸಗೊಳಿಸಲಾಗಿದೆ.
ಬಿ2ಬಿ ವರ್ಗದಲ್ಲಿ ಆಕರ್ಷಕ ಸಾಲ ಸೌಲಭ್ಯ- 48 ದಿನಗಳವರೆಗೆ ಮೆಟ್ರೋದ ವ್ಯಾಪಾರಸ್ಥ ಗ್ರಾಹಕರಿಗೆ ಬಡ್ಡಿರಹಿತ ಸಾಲ
ಸಾಲ ಮಿತಿಯ ಶ್ರೇಣಿ- ರೂ. 25,000ದಿಂದ ಮೆಟ್ರೋದೊಂದಿಗೆ ಗ್ರಾಹಕರ ಖರೀದಿ ಪ್ರವೃತ್ತಿಯ ಆಧಾರದ ಮೇಲೆ ಗರಿಷ್ಟ ಸಾಲ
ನಗದು ಅಥವಾ ಆನ್‌ಲೈನ್ ವರ್ಗಾವಣೆ ಮೂಲಕ ಅನುಕೂಲಕರ ಮರುಪಾವತಿ ಆಯ್ಕೆಗಳು
ಮೆಟ್ರೋದಲ್ಲಿ ತಮ್ಮ ಮಾಸಿಕ ವ್ಯಯಗಳಿಗೆ ಒಳಪಟ್ಟು, ಕಾರ್ಡ್ ಬಳಕೆದಾರರು ಪ್ರತಿ ತಿಂಗಳು ರೂ. 10,000ದವರೆಗೆ ಕ್ಯಾಶ್‌ಬ್ಯಾಕ್ ಗಳಿಸಬಹುದು
ಬ್ಯಾಂಕ್ ಖಾತೆ ಇಲ್ಲದ ಮೆಟ್ರೋ ವ್ಯಾಪಾರಸ್ಥ ಗ್ರಾಹಕರೂ ಕೂಡ ಕಾರ್ಡ್‌ಗೆ ಅಪ್ಲೈ ಮಾಡಬಹುದು
ಕಾರ್ಡ್‌ಗೆ ಅಪ್ಲೈ ಮಾಡುವುದಕ್ಕೆ ಕನಿಷ್ಟ ದಾಖಲೀಕರಣ ಮತ್ತು ಸುಲಭ ಪ್ರಕ್ರಿಯೆ
“ಸೇರಿಕೊಳ್ಳುವ” ಮತ್ತು”ವಾರ್ಷಿಕ” ಶುಲ್ಕ ಇಲ್ಲ.