ಯುವಜನತೆಯ ಡೇಟಿಂಗ್ ವರದಿ ಬಿಡುಗಡೆ ಮಾಡಿದ ಡೇಟಿಂಗ್ ಆಪ್ “ಐಸಲ್ ನೆಟ್‌ವರ್ಕ್”
ಅಧ್ಯಯನವು ಆಧುನಿಕ ಪ್ರೇಮದತ್ತ ಭಾರತೀಯರ ಮನೋಭಾವದಲ್ಲಿ ಸಂಭವಿಸಿರುವ ಬೃಹತ್ ಸಾಂಸ್ಕೃತಿಕ ಬದಲಾವಣೆಯನ್ನು ಬಹಿರಂಗಪಡಿಸುತ್ತದೆ. ಹಿಂದಿನ ದಶಕದಲ್ಲಿ ಹೆಚ್ಚಾಗಿ ಕಂಡುಬಂದ ‘ಕ್ಯಾಶುಯಲ್ ಡೇಟಿಂಗ್’ ಪರಂಪರೆಯ ಬದಲಿಗೆ ಈಗ 97% ಮಹಿಳೆ ಯರು ನಿಷ್ಠೆ ಮತ್ತು ಬದ್ಧತೆಯನ್ನು ಪ್ರಾಮುಖ್ಯತೆ ನೀಡುತ್ತಿದ್ದಾರೆ.
-
ಬೆಂಗಳೂರು: ಡೇಟಿಂಗ್ ಆಪ್‌ಗಳಲ್ಲಿ ಒಂದಾದ ಐಸಲ್ (Aisle) ಇಂದು "ದಿ ಕಮಿಟ್ ಮೆಂಟ್ ಡೆಕೇಡ್" ಎಂಬ ವಿಶ್ಲೇಷಿತ ಅಧ್ಯಯನ ಬಿಡುಗಡೆ ಮಾಡಿದೆ. ಈ ಅಧ್ಯಯನವು ೩,೪೦೦ ನಗರ ಭಾರತೀಯ ಸಿಂಗಲ್‌ಗಳ (ಮಿಲೇನಿಯಲ್ಸ್: ೭೪%, ಜನರೇಶನ್ Z: ೨೫%, ಇತರರು: ೧%) ಮೇಲೆ ನಡೆಸಲಾಯಿತು.
ಅಧ್ಯಯನವು ಆಧುನಿಕ ಪ್ರೇಮದತ್ತ ಭಾರತೀಯರ ಮನೋಭಾವದಲ್ಲಿ ಸಂಭವಿಸಿರುವ ಬೃಹತ್ ಸಾಂಸ್ಕೃತಿಕ ಬದಲಾವಣೆಯನ್ನು ಬಹಿರಂಗಪಡಿಸುತ್ತದೆ. ಹಿಂದಿನ ದಶಕದಲ್ಲಿ ಹೆಚ್ಚಾಗಿ ಕಂಡುಬಂದ ‘ಕ್ಯಾಶುಯಲ್ ಡೇಟಿಂಗ್’ ಪರಂಪರೆಯ ಬದಲಿಗೆ ಈಗ 97% ಮಹಿಳೆಯರು ನಿಷ್ಠೆ ಮತ್ತು ಬದ್ಧತೆಯನ್ನು ಪ್ರಾಮುಖ್ಯತೆ ನೀಡುತ್ತಿದ್ದಾರೆ.
ಇದನ್ನೂ ಓದಿ: Bangalore News: ಕನ್ನಡದಲ್ಲಿ ವಿಜ್ಞಾನದ ರಸದೌತಣ: ಪರಮ್ ಸೈನ್ಸ್ ಎಕ್ಸ್‌ಪೀರಿಯನ್ಸ್ ಸೆಂಟರ್‌ನಿಂದ ವಿಶೇಷ ಅಭಿಯಾನ!
ಐಸಲ್ ನೆಟ್ವರ್ಕ್ ಮುಖ್ಯಸ್ಥೆ ಚಾಂದ್ನಿ ಗಗ್ಲಾನಿ ಮಾತನಾಡಿ, ಈ ಅಧ್ಯಯನವು ಬೆಂಗಳೂರು (೧೯%), ಮುಂಬೈ (೧೭%), ದೆಹಲಿ NCR (೧೬%), ಪುಣೆ (೧೦%), ಹೈದರಾಬಾದ್ (೫%) ಮತ್ತು ಇತರ ನಗರಗಳು (೩೩%) ಒಳಗೊಂಡ ಪ್ರಮುಖ ಮಹಾನಗರಗಳಲ್ಲಿ ನಡೆಸಲಾಗಿದೆ. Tier ೧ ನಗರಗಳು ೭೬% ಮತ್ತು Tier ೨ ಮತ್ತು ೩ ನಗರಗಳು ೨೪% ಪ್ರತಿನಿಧಿಸುತ್ತವೆ. ಅಧ್ಯಯನವು ಪುರುಷರು ಮತ್ತು ಮಹಿಳೆಯರು ಡೇಟಿಂಗ್ ಮತ್ತು ಬದ್ಧತೆಯನ್ನು ಹೇಗೆ ವಿಭಿನ್ನ ದೃಷ್ಟಿ ಕೋನಗಳಿಂದ ನೋಡುವರು ಎಂಬುದನ್ನೂ ಬಿಚ್ಚಿಡುತ್ತದೆ ಎಂದು ಹೇಳಿದ್ದಾರೆ:
“ಡೇಟಿಂಗ್ ಮಾರುಕಟ್ಟೆ ತನ್ನ ಪ್ರಯೋಗಾತ್ಮಕ ಹಂತವನ್ನು ದಾಟಿ ಸಮತೋಲನದ ಹಂತಕ್ಕೆ ಬಂದಿದೆ. ಅಂಕಿ-ಅಂಶಗಳು ಸ್ಪಷ್ಟವಾಗಿ ತೋರಿಸುತ್ತವೆ – ಜನರು ಅಲ್ಪಾವಧಿಯ ‘ಸ್ವೈಪ್‌ಗಳು’ ಅಥವಾ ಮೇಲ್ಮಟ್ಟದ ಸಂಪರ್ಕಕ್ಕಿಂತ ನಿಜವಾದ ಸಂಭಾಷಣೆ ಮತ್ತು ಅರ್ಥ ಪೂರ್ಣ ಬಾಂಧವ್ಯಗಳನ್ನು ಹುಡುಕುತ್ತಿದ್ದಾರೆ. ದೆಹಲಿಯಾದರೂ ಅಥವಾ ಬೆಂಗಳೂರಾ ದರೂ, ಪ್ರೇಮವನ್ನು ಹುಡುಕುವುದು ಈಗ ಅರ್ಥಪೂರ್ಣ ಸಹಜತೆಯನ್ನು ಹುಡುಕುವುದೇ.
ವೃತ್ತಿಜೀವನದ ಆಸೆ, ವೈಯಕ್ತಿಕ ಜೀವನದ ಸಮತೋಲನ ಮತ್ತು ಸಾಂಸ್ಕೃತಿಕ ಮೌಲ್ಯ ಗಳೊಡನೆ ಸಹಜವಾಗಿ ಇರಬೇಕು ಎಂಬ ಅರಿವು ಬಂದಿದೆ. ಇದು ನಮ್ಮ ೩ ಮಿಲಿಯನ್ ಯಶಸ್ಸಿನ ಕಥೆಗಳ ಮೂಲಕವೂ ದೃಢವಾಗಿದೆ — ಭಾರತೀಯರು ಈಗ ವೈಯಕ್ತಿಕ ಬೆಳವಣಿಗೆಗೂ, ಸಾಂಸ್ಕೃತಿಕ ಗುರುತಿಗೂ ಮಾನ ನೀಡುವ ಸಂಬಂಧಗಳಿಗೆ ಸಿದ್ಧರಾಗಿದ್ದಾರೆ ಎಂದು ಹೇಳಿದರು.