ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

D.K. Shivakumar: ಬೆಂಗಳೂರು ಜಲ ಮಂಡಳಿಯ ಕ್ಯಾಲೆಂಡರ್ ಬಿಡುಗಡೆಗೊಳಿಸಿದ ಡಿಸಿಎಂ ಡಿಕೆಶಿ

ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು 2025ರ ಕ್ಯಾಲೆಂಡರ್‌ಗಳನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಿಡುಗಡೆಗೊಳಿಸಿದರು.

ಬೆಂಗಳೂರು ಜಲ ಮಂಡಳಿಯ ಕ್ಯಾಲೆಂಡರ್ ಬಿಡುಗಡೆಗೊಳಿಸಿದ ಡಿಸಿಎಂ ಡಿಕೆಶಿ

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

Profile Ramesh B Jan 27, 2025 1:53 PM

ಬೆಂಗಳೂರು: ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು 2025ರ ಕ್ಯಾಲೆಂಡರ್‌ಗಳನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (D.K. Shivakumar) ಅವರು ಸೋಮವಾರ (ಜ. 27) ಬಿಡುಗಡೆಗೊಳಿಸಿದರು. ವಜ್ರ ಮಹೋತ್ಸವದ ಸಂಭ್ರಮದಲ್ಲಿರುವ ಬೆಂಗಳೂರು ಜಲಮಂಡಳಿಯು ಸಾರ್ಥಕ 60- ಸಾಧನೆ ಮತ್ತಷ್ಟು ಎಂಬ ಘೋಷವಾಕ್ಯದೊಂದಿಗೆ ಕ್ಯಾಲೆಂಡರ್ ಹೊರತಂದಿದೆ.

ಈ ಕ್ಯಾಲೆಂಡರ್‌ನಲ್ಲಿ ಬೆಂಗಳೂರು ಎಂಬ ಮಾಯಾನಗರಿಗೆ 1896ರಿಂದ ಹೆಸರಘಟ್ಟದಿಂದ ಹಾಗೂ 1933ರಿಂದ ತಿಪ್ಪೆಗೊಂಡನಹಳ್ಳಿಯಿಂದ ನೀರು ಸರಬರಾಜು ಮಾಡಿದ ಅಪರೂಪದ ಚಿತ್ರಗಳು, 1964ರಲ್ಲಿ ಜಲಮಂಡಳಿ ಸ್ಥಾಪನೆ, ಕಾವೇರಿ ನದಿಯಿಂದ ಬೆಂಗಳೂರಿಗೆ ನೀರು ಪೂರೈಸುವ ಮೊದಲ ಹಂತದ ಯೋಜನೆಯಿಂದಿಡಿದು 5ನೇ ಹಂತದ ಯೋಜನೆಯವರೆಗಿನ, ಮಳೆ ನೀರು ಸುಗ್ಗಿ ಕೇಂದ್ರ, ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಅಪರೂಪದ, ಅತ್ಯಾಕರ್ಷಕ ಚಿತ್ರಗಳಿವೆ. ಬೆಂಗಳೂರಿಗೆ ಸಮರ್ಪಕ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಇದುವರೆಗೆ ಕೈಗೊಂಡಿರುವ ಕ್ರಮಗಳನ್ನೂ ವಿವರಿಸಲಾಗಿದೆ.



ಕ್ಯಾಲೆಂಡರ್ ನೋಡಿ ಉಪಮುಖ್ಯಮಂತ್ರಿ ಡಿಕೆಶಿ ಮೆಚ್ಚುಗೆ ವ್ಯಕ್ತಪಡಿಸಿದರು. ಉನ್ನತ ಶಿಕ್ಷಣ ಸಚಿವ ಕೆ.ಸುಧಾಕರ್, ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್, ಮಂಡಳಿಯ ಮುಖ್ಯ ಆಡಳಿತಾಧಿಕಾರಿ ಹಾಗೂ ಕಾರ್ಯದರ್ಶಿಗಳಾದ ಮದನ್ ಮೋಹನ್, ಪ್ರಧಾನ ಮುಖ್ಯ ಎಂಜನಿಯರ್ ‌ಸುರೇಶ, ಜಲಮಂಡಳಿ ನೌಕರರ ಸಂಘದ ಅಧ್ಯಕ್ಷ ಬಿ.ಕೆ.ಮರಿಯಪ್ಪ, ಪ್ರಧಾನ ಕಾರ್ಯದರ್ಶಿ ಗೋವಿಂದರಾಜಲು ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿಯನ್ನೂ ಓದಿ: MUDA Scam: ಮುಡಾ ಹಗರಣ; ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ, ಸಚಿವ ಭೈರತಿ ಸುರೇಶ್‌ಗೆ ಇಡಿ ನೋಟಿಸ್​

ಡಿಸಿಎಂಗೆ ನೆನಪಿನ ಕಾಣಿಕೆ

ಜಲಮಂಡಳಿ ವತಿಯಿಂದ ಡಿಕೆಶಿ ಅವರಿಗೆ ಅಪರೂಪದ ಚಿತ್ರವನ್ನು ಹಸ್ತಾಂತರಿಸಲಾಯಿತು. ಡಿಕೆಶಿ ‌ಕ್ರಿಕೆಟ್ ಪಂದ್ಯವೊಂದರಲ್ಲಿ ಬ್ಯಾಟ್ ಮಾಡುತ್ತಿರುವ ಅಪರೂಪದ ಚಿತ್ರ ಇದಾಗಿದ್ದು, ನೆನಪಿನ ಕಾಣಿಕೆಯಾಗಿ ನೀಡಿ ಸನ್ಮಾನಿಸಲಾಯಿತು.