ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಭಾಪತಿ ಹೊರಟ್ಟಿ ವಿರುದ್ದ ಡಿಕೆಶಿ ಅವಿಶ್ವಾಸ

ಸರಕಾರ ಅಧಿಕಾರದಲ್ಲಿದ್ದಾಗ 1983ರಿಂದ 87ರವರೆಗೆ ಕಾಂಗ್ರೆಸ್‌ನ ರೆಹಮಾನ್ ಖಾನ್ ಹಾಗೂ ಪೋತ ದಾರ್ ಅವರು ಸಭಾಪತಿಗಳಾಗಿದ್ದರು. ವೀರೇಂದ್ರ ಪಾಟೀಲ್, ಬಂಗಾರಪ್ಪ ಅವರ ಕಾಲದಲ್ಲಿ ಜೆಡಿಎಸ್‌ನ ಡಿ.ಮಂಜುನಾಥ್ ಸಭಾಪತಿಗಳಾಗಿದ್ದರು. ಇದೇ ರೀತಿ 1994ರಲ್ಲಿ ಎಚ್.ಡಿ.ದೇವೇಗೌಡ ನೇತೃತ್ವದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದಾಗಲೂ, ಕಾಂಗ್ರೆಸ್‌ನ ಡಿ.ಬಿ.ಕಲ್ಮಣಕರ್ ಅವರು ಸಭಾಪತಿಯಾಗಿ, ಬಳಿಕ ಎಸ್.ಎಂ.ಕೃಷ್ಣ ಅವರ ಅವಧಿಯೂ ಸೇರಿ ಸುಮಾರು 10 ವರ್ಷಗಳ ಕಾಲ ಸಭಾಪತಿಯಾಗಿ ಕಾರ್ಯ ನಿರ್ವಹಿಸಿದ್ದರು.

ಸ್ವಪಕ್ಷದವರನ್ನೇ ನೇಮಿಸುವ ಹೊಸ ಸಂಪ್ರದಾಯಕ್ಕೆ ಚಿಂತನೆ

ಹೊರಟ್ಟಿಗೆ ರಾಜೀನಾಮೆ ನೀಡಲು ಸೂಚನೆ?

ಬೆಂಗಳೂರು: ವಿಧಾನಪರಿಷತ್‌ನಲ್ಲಿ ಸ್ಪಷ್ಟ ಬಹುಮತ ಬರುತ್ತಿ ದ್ದಂತೆ, ಸಭಾಪತಿಯನ್ನು ಬದಲಾ ಯಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೆಜ್ಜೆ ಯಿಟ್ಟಿದ್ದಾರೆ. ಅದೀಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಈ ಹಿಂದೆ ಪರಿಷತ್‌ನಲ್ಲಿ ಅಗತ್ಯ ಸಂಖ್ಯಾಬಲ ಸಿಗುತ್ತಿದ್ದಂತೆ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಬದಲಾಯಿಸುತ್ತಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು.

ಆದರೆ ಸಿದ್ದರಾಮಯ್ಯ ಅವರು ಹಿರಿಯ ಸದಸ್ಯ ಹೊರಟ್ಟಿ ಅವರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಒಪ್ಪಿರಲಿಲ್ಲ. ಆದರೀಗ ಸಿಎಂ ಡಿ.ಕೆ.ಶಿವಕುಮಾರ್ ಸ್ವತಃ ಹೊರಟ್ಟಿ ಅವರಿಗೆ ಕರೆ ಮಾಡಿ, ರಾಜೀನಾಮೆ ನೀಡಿ ಎನ್ನುವ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ಒಂದು ವೇಳೆ ರಾಜೀನಾಮೆ ನೀಡದಿದ್ದರೆ ಅವಿಶ್ವಾಸ ನಿರ್ಣಯ ಮಂಡಿಸುವ ಪರೋಕ್ಷ ಮಾತು ಗಳನ್ನು ಆಡಿದ್ದಾರೆ. ಆದರೆ ಪರಿಷತ್‌ನ ಇತಿಹಾಸದಲ್ಲಿ ಈವರೆಗೆ ಸಭಾಪತಿಗಳನ್ನು ಅವಿಶ್ವಾಸ ಗೊತ್ತುವಳಿ ಮೂಲಕ ಕೆಳಗೆ ಇಳಿಸಿರುವ ಇತಿಹಾಸವಿಲ್ಲ.

ಹೀಗಿರುವಾಗ, ಕರೆ ಮಾಡಿ ರಾಜೀನಾಮೆಗೆ ಸೂಚಿಸಿರುವುದು ಸರಿಯಲ್ಲ. ಅದೂ ಹೊರಟ್ಟಿ ಅವರು ಆಸ್ಪತ್ರೆಯಲ್ಲಿದ್ದಾಗ ಈ ಮಾತುಗಳನ್ನು ಆಡಿರುವ ಬಗ್ಗೆ ಆಕ್ಷೇಪಗಳು ಕೇಳಿಬರುತ್ತಿದೆ. ಬಸವರಾಜ ಹೊರಟ್ಟಿ ಅವರಿಗೆ ಡಿ.ಕೆ.ಶಿವಕುಮಾರ್ ಕರೆ ಮಾಡಿರುವುದನ್ನು ಒಪ್ಪಿಕೊಂಡಿದ್ದರೂ ಆರೋಗ್ಯ ವಿಚಾರಣೆ ಮಾಡಿದ್ದಾರೆ ಎಂದಷ್ಟೇ ಹೇಳಿದ್ದಾರೆ. ಆದರೆ ಆರೋಗ್ಯ ವಿಚಾರಿಸುವ ಜತೆಗೆ ಇನ್ಯಾವ ಚರ್ಚೆಗಳು ನಡೆದಿವೆ ಎನ್ನುವ ಸ್ಪಷ್ಟನೆ ನೀಡಿಲ್ಲವಾದರೂ, ಮೂಲಗಳ ಪ್ರಕಾರ ರಾಜೀನಾಮೆಯ ಬಗ್ಗೆ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Basavaraj Horatti: ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದ ಬಸವರಾಜ್​ ಹೊರಟ್ಟಿ

ಆದರೆ ಅತ್ಯುನ್ನತ ಸಾಂವಿಧಾನಿಕ ಹುzಗಳಲ್ಲೊಂದರಲ್ಲಿರುವ ಸಭಾಪತಿಗಳಿಗೆ ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿಗಳೇ ನೇರವಾಗಿ ಹೇಳಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.ಕರ್ನಾಟಕ ವಿಧಾನಪರಿಷತ್‌ನ ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇಲ್ಲಿ ಸಭಾಪತಿಯಾಗಿ ಆಯ್ಕೆಯಾಗುವವರು ಕೇವಲ ರಾಜಕೀಯ ಹಿನ್ನೆಲೆ, ಪಕ್ಷ ಮೀರಿ ಹಿರಿತನಕ್ಕೆ ಆದ್ಯತೆ ನೀಡಲಾಗುತ್ತಿದೆ. ಆದ್ದರಿಂದ ಒಂದು ಪಕ್ಷ ಅಧಿಕಾರದಲ್ಲಿದ್ದಾಗ ಸಭಾಪತಿಯಾಗಿ ಆಯ್ಕೆಯಾದವ ರನ್ನೇ ಇನ್ನೊಂದು ಪಕ್ಷ ಅಧಿಕಾರಕ್ಕೆ ಬಂದರೂ ಮುಂದುವರಿಸಿರುವ ಉದಾಹರಣೆಗಳಿವೆ.

ಅದರಲ್ಲಿಯೂ ವಿಧಾನಪರಿಷತ್‌ನ ಸದಸ್ಯರಾಗಿ ಸುಮಾರು ನಾಲ್ಕು ದಶಕ ಸೇವೆ ಸಲ್ಲಿಸಿರುವ ಹೊರಟ್ಟಿ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು. ಸಭಾಪತಿಯಾಗಿ ಪಕ್ಷಾತೀತವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ. ಪುಟ್ಟಣ್ಣಗೆ ಸಭಾಪತಿ ಸ್ಥಾನ? ಇನ್ನು ಸದನದ ಹಿರಿಯ ಸದಸ್ಯರಾಗಿರುವ ಹೊರಟ್ಟಿ ಅವರ ರಾಜೀನಾಮೆಯಿಂದ ತೆರವಾಗುವ ಸಭಾಪತಿ ಹುದ್ದೆಯ ಮೇಲೆ ತಮ್ಮ ಆಪ್ತರನ್ನು ಕೂರಿಸುವ ಲೆಕ್ಕಾಚಾರದಲ್ಲಿ ಡಿ.ಕೆ.ಶಿವಕುಮಾರ್ ತಮ್ಮ ಆಪ್ತ ಪುಟ್ಟಣ್ಣ ಅವರನ್ನು ಸಭಾಪತಿ ಮಾಡುವ ಮೂಲಕ ಕೊಟ್ಟ ಮಾತು ಉಳಿಸಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ. ಆದರೆ ಈ ರೀತಿ ಬಹುಮತ ಬರುತ್ತಿದ್ದಂತೆ ಸಭಾಪತಿಯನ್ನು ಬದಲಾಯಿಸಿದರೆ, ಮುಂದಿನ ದಿನದಲ್ಲಿ ಇದೇ ಕೆಟ್ಟ ಪರಂಪರೆ ಮುಂದುವರಿಯು ತ್ತದೆ. ಇದರಿಂದ ಸಾಂವಿಧಾನಿಕ ಪೀಠದ ಗೌರವಕ್ಕೆ ಧಕ್ಕೆಯಾಗುತ್ತದೆ ಎನ್ನುವ ಅಸಮಾಧಾನದ ಮಾತುಗಳು ಕೇಳಿ ಬರುತ್ತಿದೆ.

ಈ ಹಿಂದೆ ಏನಾಗಿತ್ತು?

ಸರಕಾರ ಅಧಿಕಾರದಲ್ಲಿದ್ದಾಗ 1983ರಿಂದ 87ರವರೆಗೆ ಕಾಂಗ್ರೆಸ್‌ನ ರೆಹಮಾನ್ ಖಾನ್ ಹಾಗೂ ಪೋತದಾರ್ ಅವರು ಸಭಾಪತಿಗಳಾಗಿದ್ದರು. ವೀರೇಂದ್ರ ಪಾಟೀಲ್, ಬಂಗಾರಪ್ಪ ಅವರ ಕಾಲದಲ್ಲಿ ಜೆಡಿಎಸ್‌ನ ಡಿ.ಮಂಜುನಾಥ್ ಸಭಾಪತಿಗಳಾಗಿದ್ದರು. ಇದೇ ರೀತಿ 1994ರಲ್ಲಿ ಎಚ್.ಡಿ.ದೇವೇಗೌಡ ನೇತೃತ್ವದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದಾಗಲೂ, ಕಾಂಗ್ರೆಸ್‌ನ ಡಿ.ಬಿ.ಕಲ್ಮಣಕರ್ ಅವರು ಸಭಾಪತಿಯಾಗಿ, ಬಳಿಕ ಎಸ್.ಎಂ.ಕೃಷ್ಣ ಅವರ ಅವಧಿಯೂ ಸೇರಿ ಸುಮಾರು 10 ವರ್ಷಗಳ ಕಾಲ ಸಭಾಪತಿಯಾಗಿ ಕಾರ್ಯನಿರ್ವಹಿಸಿದ್ದರು.

2006ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಸಭಾಪತಿಯಾದ ಬಿ.ಕೆ. ಚಂದ್ರಶೇಖರ್ ಅವರು ಬಿಜೆಪಿ-ಜೆಡಿಎಸ್ ಅವಧಿಗೂ ಮುಂದುವರಿಯುವುದು ಮಾತ್ರವಲ್ಲದೇ, 2008ರಲ್ಲಿ ಅಧಿಕಾರಕ್ಕೆ ಬಂದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದಲ್ಲಿಯೂ ಮುಂದು ವರಿದರು.

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ಧಾಗಲೇ ಕಾಂಗ್ರೆಸ್‌ನ ವೀರಣ್ಣ ಮತ್ತಿಕಟ್ಟಿ ಅವರು ಸಭಾಪತಿಯಾದರು. ಇನ್ನು ಬಿಜೆಪಿಯ ಡಿ.ಎಚ್.ಶಂಕರಮೂರ್ತಿ ಅವರು, 2010ರಲ್ಲಿ ಸಭಾಪತಿ ಯಾಗಿ ಆಯ್ಕೆಯಾಗಿ, ಬಿಜೆಪಿಯ ಯಡಿಯೂರಪ್ಪ, ಸದಾನಂದಗೌಡ, ಜಗದೀಶ್ ಶೆಟ್ಟರ್ ಅವಧಿ ಯಲ್ಲಿ ಹಾಗೂ 2013ರಿಂದ 18ರವರೆಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ಹಾಗೂ 2018ರಲ್ಲಿ ಅಧಿಕಾರಕ್ಕೆ ಬಂದ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸರಕಾರದ ಅವಧಿ ಯಲ್ಲಿಯೂ ಸಭಾಪತಿಯಾಗಿದ್ದರು.

ಕಾಂಗ್ರೆಸ್‌ನಲ್ಲಿಯೇ ವಿರೋಧ ಸಭಾಪತಿ ಬಸವರಾಜ ಹೊರಟ್ಟಿ ರಾಜೀನಾಮೆ ಪಡೆಯಲು ಸಿಎಂ ಡಿಕೆಶಿ ನಡೆಸಿರುವ ಕಸರತ್ತಿಗೆ ಕಾಂಗ್ರೆಸ್‌ನಲ್ಲಿಯೇ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಪರಿಷತ್‌ ನಲ್ಲಿ ಆಡಳಿತಪಕ್ಷದಲ್ಲಿ ಯಾವುದೇ ಸರಕಾರವಿದ್ದರೂ, ಸರ್ವಾನುಮತದಿಂದ ಸಭಾಪತಿಗಳನ್ನು ಆಯ್ಕೆ ಮಾಡಲಾಗುತ್ತದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್‌ನಿಂದ ಆಯ್ಕೆಯಾದ ಸದಸ್ಯರು ಸಭಾಪತಿಗಳಾಗಿರುವ, ಕಾಂಗ್ರೆಸ್ ಅವಧಿಯಲ್ಲಿ ಜೆಡಿಎಸ್‌ದಿಂದ ಆಯ್ಕೆಯಾಗಿರುವ ಅನೇಕರಿದ್ದಾರೆ.

ಇದಿಷ್ಟೇ ಅಲ್ಲದೇ, ವಿಧಾನಪರಿಷತ್ ಇತಿಹಾಸದಲ್ಲಿ ಈವರೆಗೆ ಸಭಾಪತಿಗಳನ್ನು ಅವಿಶ್ವಾಸ ನಿರ್ಣಯ ಮಂಡಿಸಿ ಕೆಳಗೆ ಇಳಿಸಿರುವ ಉದಾಹರಣೆಯೇ ಇಲ್ಲ. ಆದ್ದರಿಂದ ಈ ಕೆಟ್ಟ ಪರಂಪರೆಗೆ ನಾಂದಿ ಹಾಡುವುದು ಬೇಡ ಎನ್ನುವ ಮಾತುಗಳನ್ನು ಹಲವು ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ಈ ಹಿಂದೆ ಏನಾಗಿತ್ತು?

ಜನತಾಪಕ್ಷದ ಸರಕಾರ ಅಧಿಕಾರದಲ್ಲಿದ್ದಾಗ 1983ರಿಂದ 87ರವರೆಗೆ ಕಾಂಗ್ರೆಸ್‌ನ ರೆಹಮಾನ್ ಖಾನ್ ಹಾಗೂ ಪೋತದಾರ್ ಅವರು ಸಭಾಪತಿಗಳಾಗಿದ್ದರು. ವೀರೇಂದ್ರ ಪಾಟೀಲ್, ಬಂಗಾರಪ್ಪ ಅವರ ಕಾಲದಲ್ಲಿ ಜೆಡಿಎಸ್‌ನ ಡಿ.ಮಂಜುನಾಥ್ ಸಭಾಪತಿಗಳಾಗಿದ್ದರು. ಇದೇ ರೀತಿ 1994ರಲ್ಲಿ ಎಚ್.ಡಿ. ದೇವೇಗೌಡ ನೇತೃತ್ವದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದಾಗಲೂ, ಕಾಂಗ್ರೆಸ್‌ನ ಡಿ.ಬಿ.ಕಲ್ಮಣಕರ್ ಅವರು ಸಭಾಪತಿಯಾಗಿ, ಬಳಿಕ ಎಸ್.ಎಂ. ಕೃಷ್ಣ ಅವರ ಅವಽಯೂ ಸೇರಿ ಸುಮಾರು 10 ವರ್ಷ ಗಳ ಕಾಲ ಸಭಾಪತಿಯಾಗಿ ಕಾರ್ಯ ನಿರ್ವಹಿಸಿದ್ದರು

ಕಾಂಗೆ ಸ್‌ನಲ್ಲಿಯೇ ವಿರೋಧ ಸಭಾಪತಿ ಬಸವರಾಜ ಹೊರಟ್ಟಿ ಅವರ ರಾಜೀನಾಮೆ ಪಡೆಯಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡೆಸಿರುವ ಕಸರತ್ತಿಗೆ ಕಾಂಗ್ರೆಸ್‌ನಲ್ಲಿಯೇ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ವಿಧಾನಪರಿಷತ್‌ನಲ್ಲಿ ಆಡಳಿತಪಕ್ಷದಲ್ಲಿ ಯಾವುದೇ ಸರಕಾರವಿದ್ದರೂ, ಸರ್ವಾ ನುಮತದಿಂದ ಸಭಾಪತಿಗಳನ್ನು ಆಯ್ಕೆ ಮಾಡಲಾಗುತ್ತದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್‌ನಿಂದ ಆಯ್ಕೆಯಾದ ಸದಸ್ಯರು ಸಭಾಪತಿಗಳಾಗಿರುವ, ಕಾಂಗ್ರೆಸ್ ಅವಧಿಯಲ್ಲಿ ಜೆಡಿಎಸ್‌ ದಿಂದ ಆಯ್ಕೆಯಾಗಿರುವ ಅನೇಕರಿದ್ದಾರೆ. ಇದಿಷ್ಟೇ ಅಲ್ಲದೇ, ವಿಧಾನಪರಿಷತ್ ಇತಿಹಾಸದಲ್ಲಿ ಈವರೆಗೆ ಸಭಾಪತಿಗಳನ್ನು ಅವಿಶ್ವಾಸ ನಿರ್ಣಯ ಮಂಡಿಸಿ ಕೆಳಗೆ ಇಳಿಸಿರುವ ಉದಾಹರಣೆಯೇ ಇಲ್ಲ.