ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Prajwal Revanna: ಪ್ರಜ್ವಲ್ ರೇವಣ್ಣ ಕೈದಿ ನಂಬರ್ ಏನು ಗೊತ್ತಾ? ಮಾಜಿ ಸಂಸದನ ಜೀವನ ಶೈಲಿ ಹೇಗಿರಲಿದೆ?

ಮಹಿಳೆ ಮೇಲೆ ನಿರಂತರ ಅತ್ಯಾಚಾರ ಪ್ರಕರಣಕ್ಕೆ (Prajwal Revanna) ಸಂಬಂಧಪಟ್ಟಂತೆ ಶನಿವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ಹಾಗೂ 10 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದೆ. ನಿನ್ನೆಯಿಂದಲೇ ಪ್ರಜ್ವಲ್‌ಗೆ ಸೆರೆವಾಸ ಪ್ರಾರಂಭವಾಗಿದೆ.

ಪ್ರಜ್ವಲ್ ರೇವಣ್ಣ ಕೈದಿ ನಂಬರ್ ಏನು ಗೊತ್ತಾ?

Vishakha Bhat Vishakha Bhat Aug 3, 2025 10:19 AM

ಬೆಂಗಳೂರು: ಮಹಿಳೆ ಮೇಲೆ ನಿರಂತರ ಅತ್ಯಾಚಾರ ಪ್ರಕರಣಕ್ಕೆ (Prajwal Revanna) ಸಂಬಂಧಪಟ್ಟಂತೆ ಶನಿವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ಹಾಗೂ 10 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದೆ. ನಿನ್ನೆಯಿಂದಲೇ ಪ್ರಜ್ವಲ್‌ಗೆ ಸೆರೆವಾಸ ಪ್ರಾರಂಭವಾಗಿದೆ. ಸಾಮಾನ್ಯ ಕೈದಿಯಂತೆ ಪ್ರಜ್ವಲ್‌ ಜೈಲಿನಲ್ಲಿ ಇರಲಿದ್ದಾರೆ. ಪೊಲೀಸರು ನಿನ್ನೆಯೇ ಪ್ರಜ್ವಲ್ ರೇವಣ್ಣನನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ.

ಪ್ರಜ್ವಲ್ ರೇವಣ್ಣಗೆ ನಿನ್ನೆಯಿಂದಲೇ ಜೈಲುವಾಸ ಆರಂಭವಾಗಿದ್ದು, ಇದೀಗ ಪ್ರಗಲ್ ರೇವಣ್ಣಗೆ ಜೈಲಾಧಿಕಾರಿಗಳು ಕೈದಿ ನಂಬರ್ ನೀಡಿದ್ದಾರೆ. ಪ್ರಜ್ವಲ್ ರೇವಣ್ಣ ಕೈದಿ ನಂಬರ್ 15528 ಎಂದು ತಿಳಿದು ಬಂದಿದೆ. ಇನ್ನು ಮುಂದೆ ಪ್ರಜ್ವಲ್‌ ಜೀವನಶೈಲಿ ಸಂಪೂರ್ಣ ಬದಲಾಗಲಿದೆ.

ಇಂದಿನಿಂದ ಪ್ರಜ್ವಲ್ ರೇವಣ್ಣ ಜೈಲಿನಲ್ಲಿ ಕೈದಿ ಸಮವಸ್ತ್ರ ಧರಿಸಬೇಕು. ಜೈಲಿನ ಸಜಾಬಂಧಿ ಕೈದಿಗಳನ್ನು ಪಾಲಿಸಬೇಕು. ನಿಯಮಗಳ ಪ್ರಕಾರ ಜೈಲಿನ ಅಧಿಕಾರಿಗಳು ನೀಡುವ ಕೆಲಸ ಮಾಡಬೇಕು. ಇಂದು ಪ್ರಜ್ವಲ್ ರೇವಣ್ಣಗೆ ಬಿಳಿ ಸಮವಸ್ತ್ರ ಕೊಡಲಿದ್ದಾರೆ. ಜೈಲಿನ ಒಳಗಡೆ ಪ್ರಜ್ವಲ್ ರೇವಣ್ಣ 8 ಗಂಟೆ ಕೆಲಸ ಮಾಡಬೇಕು ಬೇಕರಿ, ಗಾರ್ಡನ್ ಹೈನುಗಾರಿಕೆ, ತರಕಾರಿ ಬೆಳೆಯುವುದು ಕರಕುಶಲ ವಸ್ತು ಮರಗಲಸ ಸೇರಿ ಯಾವುದಾದರೂ ಒಂದು ಕೆಲಸ ಆಯ್ಕೆ ಮಾಡಿಕೊಳ್ಳಬೇಕು. ಪ್ರಜ್ವಲ್ ಆಯ್ಕೆ ಮಾಡಿಕೊಂಡ ಕೆಲಸಕ್ಕೆ ತಕ್ಕಂತೆ ಸಂಬಳ ಸಹ ಪಾವತಿ ನೀಡಲಾಗುತ್ತದೆ ಮೊದಲು ಒಂದು ವರ್ಷಕ್ಕೆ ಕೌಶಲ್ಯ ರಹಿತ ಎಂದು 524 ರೂ. ಸಂಬಳ ನೀಡಲಾಗುತ್ತದೆ . ನಂತರ ಕೌಶಲ್ಯ ವೃದ್ಧಿ ಬಳಿಕ ನುರಿತ ವರ್ಗಕ್ಕೆ ಬಡ್ತಿ ನೀಡಲಾಗುತ್ತದೆ.

ಈ ಸುದ್ದಿಯನ್ನೂ ಓದಿ: Prajwal Revanna Case: ಪ್ರಜ್ವಲ್‌ ರೇವಣ್ಣಗೆ ಶಿಕ್ಷೆ ಸುದ್ದಿ ತಿಳಿದು ಕಣ್ಣೀರಿಟ್ಟ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಸದ್ಯ ಪ್ರಜ್ವಲ್‌ ವಿಶೇಷ ಭದ್ರತಾ ಕೊಠಡಿಯಲ್ಲಿದ್ದರು. ಇನ್ನೂ ಮುಂದೆಯೂ ಅದೇ ಕೊಠಡಿಯಲ್ಲಿ ಮುಂದುವರಿಯುವ ಸಾಧ್ಯತೆ ಇದೆ. ಜೈಲಿನೊಳಗೇ ಪ್ರವೇಶಿಸುತ್ತಲೇ ಪ್ರಜ್ವಲ್‌ನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ನಂತರ ಅವರ ಸೆಲ್‌ಗೆ ಕಳುಹಿಸಿದ್ದಾರೆ.

ಪ್ರಜ್ವಲ್‌ಗೆ ಜೀವಾವಧಿ ಶಿಕ್ಷೆ ವಿಧಿಸುತ್ತಲೇ ಕುಟುಬಂಸ್ಥರು ಕಣ್ಣೀರು ಹಾಕಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡ ಅವರು ತೀರ್ಪನ್ನು ಕೇಳಿ ಕಣ್ಣೀರು ಹಾಕಿದ್ದಾರೆ.