ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಡ್ರಿವನ್ 6.0 | ಮಹಿಳಾ ದಿನದ ಅಂಗವಾಗಿ ಸಾವಯವ ಕೃಷಿ ಜಾಗೃತಿಯ ವಿಭಿನ್ನ ಕಾರು ರ್‍ಯಾಲಿ

ರ್‍ಯಾಲಿಯಲ್ಲಿ ಪಾಲ್ಗೊಂಡವರು ಆರ್ಗ್ಯಾನಿಕ್ ಮಂಡ್ಯ ಫ್ಯಾಕ್ಟರಿಗೆ ಭೇಟಿ ನೀಡುವ ಅವಕಾಶ ಪಡೆದುಕೊಂಡರಲ್ಲದೆ, ಸಾವಯವ ಉತ್ಪನ್ನಗಳನ್ನು ಹೇಗೆ ಸಂಸ್ಕರಿಸಲಾಗುತ್ತದೆ, ಪ್ಯಾಕ್ ಮಾಡಲಾಗುತ್ತದೆ ಮತ್ತು ವಿತರಿಸಲಾಗುತ್ತದೆ ಎಂಬುದನ್ನು ಪ್ರತ್ಯಕ್ಷವಾಗಿ ವೀಕ್ಷಿಸಿದರು. ಈ ಅನುಭವವು ಸುಸ್ಥಿರ ಕೃಷಿಯ ಬಗ್ಗೆ ಅಭಿಮಾನ ಮೂಡಿಸುವ ಜತೆಗೆ ಜವಾಬ್ದಾರಿಯುತ ಬಳಕೆಯ ಮಹತ್ವವನ್ನು ಎತ್ತಿ ತೋರಿಸಿತು.

ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಾರ್ಚ್ 8ರಂದು ಬೆಂಗಳೂರಿನಿಂದ ಮಂಡ್ಯ ದವರೆಗೆ ಆಯೋಜಿಸಲಾಗಿದ್ದ 'ಡ್ರಿವನ್ 6.0' ಎಂಬ ವಿಶಿಷ್ಟ ಕಾರ್ ರ್‍ಯಾಲಿಯಲ್ಲಿ 100ಕ್ಕೂ ಹೆಚ್ಚು ಮಂದಿ ಉತ್ಸಾಹಿಗಳು ಪಾಲ್ಗೊಂಡಿದ್ದರು. ಜೀರೋಯಿನ್ ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್ ಮತ್ತು ಬಕ್ಸಸ್ ಪ್ರೊಸ್ಪೋರ್ಟ್ಸ್, ಆರ್ಗ್ಯಾನಿಕ್ ಮಂಡ್ಯದ ಸಹಭಾಗಿತ್ವದಲ್ಲಿ 'ದಿ ಸಸ್ಟೈನಬಿಲಿಟಿ ಡ್ರೈವ್' ಎಂಬ ಧ್ಯೇಯದೊಂದಿಗೆ ಈ ರ್‍ಯಾಲಿಯನ್ನು ಏರ್ಪಡಿಸಿತ್ತು.

ಬೆಂಗಳೂರಿನ ದಿ ಯಾರ್ಡ್ನಲ್ಲಿ ಕಾರ್ ರ್‍ಯಾಲಿಗೆ ಹಸಿರ ನಿಶಾನೆ ತೋರಲಾಯಿತು. ಒಟ್ಟು 30 ಕಾರುಗಳು ಆರ್ಗ್ಯಾನಿಕ್ ಮಂಡ್ಯದ ಫಾರ್ಮ್ ಮತ್ತು ಫ್ಯಾಕ್ಟರಿಯತ್ತ ಸಾಗಿದವು. ಸಾಂಪ್ರದಾಯಿಕ ರ್‍ಯಾಲಿಗಳಿಗಿಂತ ಭಿನ್ನವಾಗಿ, ಡ್ರೈವ್ 6.0 ಅನ್ನು ಒಂದು ವಿಶಿಷ್ಟ ಅನುಭವಕ್ಕಾಗಿ ವಿನ್ಯಾಸಗೊಳಿಸಲಾಗಿತ್ತು. ಭಾಗವಹಿಸುವವರಿಗೆ ಸಾವಯವ ಕೃಷಿ ಮತ್ತು ಸುಸ್ಥಿರ ಕೃಷಿ ಅಭ್ಯಾಸಗಳಿಗೆ ನೇರ ಪರಿಚಯ ಮಾಡಿಸಲಾಯಿತು. ರ್‍ಯಾಲಿಯಲ್ಲಿ ಪಾಲ್ಗೊಂಡವರು ಮಾರ್ಗದರ್ಶಿ ಕೃಷಿ ಪ್ರವಾಸಗಳು, ಸಂವಾದಾತ್ಮಕ ಕೃಷಿ ಚಟುವಟಿಕೆಗಳು ಮತ್ತು ಸ್ಥಳೀಯ ರೈತರೊಂದಿಗೆ ಚರ್ಚೆಗಳು, ಸಾಂಪ್ರದಾಯಿಕ ತಂತ್ರಗಳು, ನೈಸ ರ್ಗಿಕ ಕೀಟ ನಿಯಂತ್ರಣ ವಿಧಾನಗಳು ಮತ್ತು ಸಾವಯವ ಆಹಾರ ಉತ್ಪಾದನೆಯ ಪ್ರಾಮುಖ್ಯತೆಯ ಕುರಿತು ಅರಿತು ಕೊಂಡರು.

ಇದನ್ನೂ ಓದಿ: Bangalore News: ಮಾ.2ರಂದು ನಗರದಲ್ಲಿ ಬೃಹತ್ “ಸ್ಕಿನ್ನಥಾನ್” : 10, 5 ಮತ್ತು 3 ಕಿಲೋಮೀಟರ್ ಓಟ ಆಯೋಜನೆ

ರ್‍ಯಾಲಿಯಲ್ಲಿ ಪಾಲ್ಗೊಂಡವರು ಆರ್ಗ್ಯಾನಿಕ್ ಮಂಡ್ಯ ಫ್ಯಾಕ್ಟರಿಗೆ ಭೇಟಿ ನೀಡುವ ಅವಕಾಶ ಪಡೆದುಕೊಂಡರಲ್ಲದೆ, ಸಾವಯವ ಉತ್ಪನ್ನಗಳನ್ನು ಹೇಗೆ ಸಂಸ್ಕರಿಸಲಾಗುತ್ತದೆ, ಪ್ಯಾಕ್ ಮಾಡಲಾಗುತ್ತದೆ ಮತ್ತು ವಿತರಿಸಲಾಗುತ್ತದೆ ಎಂಬುದನ್ನು ಪ್ರತ್ಯಕ್ಷ ವಾಗಿ ವೀಕ್ಷಿಸಿದರು. ಈ ಅನುಭವವು ಸುಸ್ಥಿರ ಕೃಷಿಯ ಬಗ್ಗೆ ಅಭಿಮಾನ ಮೂಡಿಸುವ ಜತೆಗೆ ಜವಾಬ್ದಾರಿಯುತ ಬಳಕೆಯ ಮಹತ್ವವನ್ನು ಎತ್ತಿ ತೋರಿಸಿತು.

"ಡ್ರಿವನ್, ಯಾವಾಗಲೂ ಕೇವಲ ಚಾಲನೆ ಮಾಡುವುದಕ್ಕಿಂತ ಮಿಗಿಲಾಗಿ, ಸಬಲೀಕರಣ, ಏಕತೆ ಮತ್ತು ಸಮುದಾಯಕ್ಕೆ ಮರಳಿ ನೀಡುವ ಕಾರ್ಯಕ್ರಮವಾಗಿದೆ. ಎಲ್ಲಾ ವರ್ಗದ ಮಹಿಳೆಯರಿಂದ ಇಂತಹ ಉತ್ಸಾಹಭರಿತ ಕಾರ್ಯದಲ್ಲಿ ಭಾಗವಹಿಸುವುದನ್ನು ನೋಡಿ ನಾವು ರೋಮಾಂಚನಗೊಂಡಿದ್ದೇವೆ. ಇಂತಹ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲು ನಾವು ಎದುರು ನೋಡುತ್ತಿದ್ದೇವೆ " ಎಂದು ಜೀರೋಯಿನ್ ಎಂಡಿ ಅರವಿಂದ್ ಜೆ ಸಭಾನೆ ಈ ಸಂದರ್ಭದಲ್ಲಿ ಹೇಳಿದರು. .