ಬೆಂಗಳೂರು: ಭಾಗೊ ಮೊಬಿಲಿಟಿ ಭಾರತದ ವೃದ್ಧಿಸುತ್ತಿರುವ ನಗರ ಚಲನೆಗೆ ವಿನ್ಯಾಸ ಗೊಳಿಸಲಾದ ಸಮಗ್ರ ವಿದ್ಯುಚ್ಛಾಲಿತ ಮೊಬಿಲಿಟಿ ಪ್ಲಾಟ್ ಫಾರಂ ಬಿಡುಗಡೆ ಮಾಡಿದೆ. ಹೊಂಡಾ ಮೋಟಾರ್ ಸೈಕಲ್ ಅಂಡ್ ಸ್ಕೂಟರ್ ಇಂಡಿಯಾ (ಎಚ್.ಎಂ. ಎಸ್.ಐ.) ಸಹಯೋಗದಲ್ಲಿ ಮತ್ತು ಹೊಂಡಾ ಪವರ್ ಪ್ಯಾಕ್ ಎನರ್ಜಿ ಇಂಡಿಯಾದ ಬೆಂಬಲ ಪಡೆದ ಬ್ಯಾಟರಿ-ಸ್ವಾಪಿಂಗ್ ಮೂಲಸೌಕರ್ಯದೊಂದಿಗೆ ಕಂಪನಿಯು ದೆಹಲಿ ಮತ್ತು ಬೆಂಗಳೂರು ಗಳಲ್ಲಿ ವಿದ್ಯುಚ್ಛಾಲಿತ ದ್ವಿಚಕ್ರ ವಾಹನಗಳನ್ನು ಅಳವಡಿಸಲು ಯೋಜಿಸಿದ್ದು ಮುಂದಿನ ಮೂರು ವರ್ಷಗಳಲ್ಲಿ ಅಖಿಲ ಭಾರತ ವ್ಯಾಪ್ತಿಗೆ ವಿಸ್ತರಿಸಲಿದೆ.
ಈ ಪ್ಲಾಟ್ ಫಾರಂ ಅನ್ನು ಡೆಲಿವರಿ ಪಾಲುದಾರರು, ರೈಡ್-ಹಾಲಿಂಗ್ ಚಾಲಕರು ಮತ್ತು ಕೊನೆಯ ಹಂತದ ಲಾಜಿಸ್ಟಿಕ್ ಕೆಲಸಗಾರರಿಗೆ ವಿನ್ಯಾಸಗೊಳಿಸಿದ್ದು ಅವರಿಗೆ ವಿದ್ಯುತ್ ವಾಹನಗಳ ಲಭ್ಯತೆ, ಬ್ಯಾಟರಿ ಸ್ವಾಪಿಂಗ್, ಅನುಸರಣೆ ಮತ್ತು ತಂತ್ರಜ್ಞಾನದ ಬೆಂಬಲ ವನ್ನು ಒಂದು ಚಂದಾದಾರಿಕೆ ಆಧರಿತ ಮಾದರಿಯಲ್ಲಿ ನೀಡುತ್ತದೆ.
ಇದು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಅನುಕೂಲಕರ ಮಾಲೀಕತ್ವ ಮತ್ತು ಬಳಕೆ ಮಾದರಿಯ ಮೂಲಕ ಆನ್-ಡಿಮ್ಯಾಂಡ್ ಲಭ್ಯತೆ ನೀಡುತ್ತದೆ. ಈ ಪ್ಲಾಟ್ ಫಾರಂನಲ್ಲಿ ವ್ಯಕ್ತಿಗಳು ಅವರು ಬಯಸಿದ ಇವಿಯನ್ನು ತಮ್ಮ ವೈಯಕ್ತಿಕ ಬಳಕೆ ಅಥವಾ ಇತರರ ಬಳಕೆಗೆ ಆಯ್ಕೆ ಮಾಡಬಹುದು.
ಇದನ್ನೂ ಓದಿ: T20 World Cup: ಅಭಿಷೇಕ್ ಶರ್ಮಾರನ್ನು ʻಸ್ಲಾಗರ್ʼ ಎಂದಿದ್ದ ಮೊಹಮ್ಮದ್ ಆಮಿರ್ ಯು-ಟರ್ನ್!
ಈ ಉಪಕ್ರಮವು ಕನಿಷ್ಠ ಔಪಚಾರಿಕ ಶಿಕ್ಷಣ ಹೊಂದಿದ ವ್ಯಕ್ತಿಗಳಿಗೆ ಉದ್ಯೋಗದ ಅವಕಾಶ ಗಳನ್ನು ಸೃಷ್ಟಿಸುವ ಗುರಿ ಹೊಂದಿದ್ದು ಒಂದು ಡ್ರೈವಿಂಗ್ ಲೈಸೆನ್ಸ್ ಇದ್ದರೆ ಅವರು ಈ ಪ್ಲಾಟ್ ಫಾರಂ ಅನುಕೂಲ ಪಡೆದು ಅವರ ಪ್ರಸ್ತುತ ಗಳಿಕೆಗಿಂತ ಶೇ.20ರಷ್ಟು ಹೆಚ್ಚು ಗಳಿಸಬಹುದು.
ಈ ಕುರಿತು ಹೊಂಡಾ ಮೋಟಾರ್ ಸೈಕಲ್ ಅಂಡ್ ಸ್ಕೂಟರ್ ಇಂಡಿಯಾದ ಸೇಲ್ಸ್ ಅಂಡ್ ಮಾರ್ಕೆಟಿಂಗ್ ನಿರ್ದೇಶಕ ಶ್ರೀ ಮುಟ್ಸುವೊ ಉಸುಯಿ, “ಹೊಂಡಾ ಮೋಟಾರ್ ಸೈಕಲ್ ಅಂಡ್ ಸ್ಕೂಟರ್ ಇಂಡಿಯಾದಲ್ಲಿ ನಮ್ಮ ವಿಧಾನವು ಎಲೆಕ್ಟ್ರಿಕ್ ಮೊಬಿಲಿಟಿಯು ಸುಸ್ಥಿರ, ವಿಶ್ವಾಸಾರ್ಹ ಮತ್ತು ನಿಜಕ್ಕೂ ಪ್ರತಿನಿತ್ಯದ ರೈಡರ್ ಗಳಿಗೆ ಪರಿಣಾಮಕಾರಿಯಾದ ಪರಿಹಾರಗಳನ್ನು ಸೃಷ್ಟಿಸುವುದಾಗಿದೆ. ಭಾಗೊ ಮೊಬಿಲಿಟಿಯೊಂದಿಗೆ ನಮ್ಮ ಸಹಯೋಗ ವು ಈ ಬದ್ಧತೆಯನ್ನು ತೋರುತ್ತಿದ್ದು ಹೊಂಡಾದ ವಿಶ್ವಾಸಾರ್ಹ ಗುಣಮಟ್ಟ ಮತ್ತು ಆವಿಷ್ಕಾರವನ್ನು ಸದೃಢ, ತಂತ್ರಜ್ಞಾನ-ಪ್ರೇರಿತ ಬ್ಯಾಟರಿ-ಸ್ವಾಪಿಂಗ್ ಇಕೊಸಿಸ್ಟಂ ನೊಂದಿಗೆ ಸಂಯೋಜಿಸುತ್ತದೆ. ಎಚ್.ಇ.ಐ.ಡಿ.ಯ ಸದೃಢ ಸ್ವಾಪಿಂಗ್ ಜಾಲದೊಂದಿಗೆ ಸಂಯೋಜಿಸಿದ ಆಕ್ಟಿವಾ ಇ ಮೂಲಕ ನಾವು ಸುರಕ್ಷಿತ, ದಕ್ಷ ಮತ್ತು ಉತ್ಪಾದಕತೆ ಹೆಚ್ಚಿಸುವ ಮೊಬಿಲಿಟಿ ಪರಿಹಾರಗಳನ್ನು ತರುವ ಗುರಿ ಹೊಂದಿದ್ದೇವೆ” ಎಂದರು.
ಭಾಗೊ ಮೊಬಿಲಿಟಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ಆದಿತ್ಯ ಗೋಯಲ್, “ನಗರದ ಚಲನೆಯನ್ನು ಒಂದು ಕಂಪನಿ ಅಥವಾ ಒಂದು ಉತ್ಪನ್ನದಿಂದ ಪರಿಹರಿಸಲಾಗದು. ಅದಕ್ಕೆ ನೈಜ, ಸ್ಥಳದಲ್ಲಿನ ಸವಾಲುಗಳನ್ನು ಎದುರಿಸಲು ಜನರು, ತಂತ್ರಜ್ಞಾನಗಳು ಮತ್ತು ಸಾಮರ್ಥ್ಯಗಳು ಒಟ್ಟಿಗೆ ಸೇರಬೇಕು. ಆದ್ದರಿಂದಲೇ ನಾವು ಸಮಾನ ಮನಸ್ಕ, ಕಾರ್ಯ ತಂತ್ರೀಯವಾಗಿ ಕೆಲಸ ಮಾಡುವ ಪಾಲುದಾರರನ್ನು ಒಟ್ಟಿಗೆ ತಂದಿದ್ದೇವೆ” ಎಂದರು.