T20 World Cup: ಅಭಿಷೇಕ್ ಶರ್ಮಾರನ್ನು ʻಸ್ಲಾಗರ್ʼ ಎಂದಿದ್ದ ಮೊಹಮ್ಮದ್ ಆಮಿರ್ ಯು-ಟರ್ನ್!
2026ರ ಟಿ20 ವಿಶ್ವಕಪ್ ಟೂರ್ನಿಯ ಆರಂಭಿಕ ಮೂರು ಇನಿಂಗ್ಸ್‌ಗಳಲ್ಲಿ ಡಕ್‌ಔಟ್ ಆಗಿದ್ದ ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ, ಜಿಂಬಾಬ್ವೆ ವಿರುದ್ಧ ಅರ್ಧಶತಕ ಗಳಿಸಿದರು. ಈ ಇನಿಂಗ್ಸ್‌ನ ನಂತರ ಅವರನ್ನು ಹಿಂದೆ ʻಸ್ಲಾಗರ್ʼ ಎಂದು ಕರೆದಿದ್ದ ಪಾಕಿಸ್ತಾನ ಮಾಜಿ ವೇಗಿ ಮೊಹಮ್ಮದ್ ಆಮಿರ್ ಕೂಡ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.
ಅಭಿಷೇಕ್ ಶರ್ಮಾ ಅರ್ಧಶತಕ ಸಿಡಿಸಿದ ಬಳಿಕ ಆಮಿರ್ ಯು-ಟರ್ನ್. -
ನವದೆಹಲಿ: ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಯ ಆರಂಭಿಕ ಹಂತದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಭಾರತರ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ (Abhishek Sharma) ಅವರನ್ನು ʻಸ್ಲಾಗರ್ʼ ಎಂದು ಟೀಕಿಸಿದ್ದ ಪಾಕಿಸ್ತಾನ ತಂಡದ ಮಾಜಿ ವೇಗದ ಬೌಲರ್ ಮೊಹಮ್ಮದ್ ಆಮಿರ್ (Mohammad Amir), ಇದೀಗ ಯು-ಟರ್ನ್ ಹೊಡೆದಿದ್ದಾರೆ. ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಸ್ಪೋಟಕ ಅರ್ಧಶತಕ ಸಿಡಿಸಿದ ಬಳಿಕ ಭಾರತ ತಂಡದ ಎಡಗೈ ಬ್ಯಾಟ್ಸ್‌ಮನ್ ಅನ್ನು ಪಾಕ್ ಮಾಜಿ ವೇಗಿ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.
ಗುರುವಾರ ಚೆನ್ನೈನ ಎಂಎ ಚಿದಂಬರಂನಲ್ಲಿ ನಡೆದಿದ್ದ ಜಿಂಬಾಬ್ವೆ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಭಾರತ ಪರ ಸ್ಫೋಟಕ ಅರ್ಧಶತಕ ಸಿಡಿಸಿದರು. ಈ ಇನಿಂಗ್ಸ್‌ನ ನಂತರ ಮೊಹಮ್ಮದ್ ಆಮಿರ್ ಅಭಿಷೇಕ್ ಶರ್ಮಾ ಅವರನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.
ಪಾಕಿಸ್ತಾನದ ಶೋಯೆಬ್ ಮಲಿಕ್ ದಾಖಲೆ ಮುರಿದ ಪಾಂಡ್ಯ
ಪಾಕಿಸ್ತಾನದ ಚಾನೆಲ್‌ನಲ್ಲಿ ಅಭಿಷೇಕ್ ಶರ್ಮಾ ಅವರ ಇನಿಂಗ್ಸ್ ಬಗ್ಗೆ ಮಾತನಾಡಿದ ಮೊಹಮ್ಮದ್ ಆಮಿರ್, "ಅಭಿಷೇಕ್ ಶರ್ಮಾ ಸರಿಯಾದ ಸಮಯದಲ್ಲಿ ಫಾರ್ಮ್‌ನಲ್ಲಿ ಇರುವುದು ಅವರ ಪಾಲಿಗೆ ಒಳ್ಳೆಯದು, ಆದರೆ ಅವರ ಮುಂದೆ ನಿರ್ಣಾಯಕ ಪಂದ್ಯವಿದೆ, ಮುಂದಿನ ಪಂದ್ಯ ಕೂಡ ಮಾಡು ಇಲವೇ ಮಡಿ ಪಂದ್ಯ. ನೀವು ಇಂದು (ಗುರುವಾರ) ಅವರ ಬ್ಯಾಟಿಂಗ್ ಅನ್ನು ನೋಡಿದರೆ, ಅವರು ಚೆಂಡಿಗಾಗಿ ಕಾಯುತ್ತಿದ್ದಾರೆ. ಅವರು ಲೆಗ್ ಸೈಡ್‌ನ ಮುಂಭಾಗದಲ್ಲಿ ಮತ್ತು ಆಫ್ ಸೈಡ್‌ನಲ್ಲಿಯೂ ಸಹ ಹೊಡೆತಗಳನ್ನು ಹೊಡೆಯುತ್ತಿದ್ದರು. ಪಂದ್ಯದ ಸಮಯದಲ್ಲಿ, ರವಿಶಾಸ್ತ್ರಿ ಅವರು ಪ್ರತಿ ಚೆಂಡನ್ನು ಬಲವಾಗಿ ಹೊಡೆಯಲು ಪ್ರಯತ್ನಿಸದೆ, ಸಮತೋಲನದಿಂದ ಚೆಂಡನ್ನು ಸಮಯಕ್ಕೆ ತಕ್ಕಂತೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳುತ್ತಿದ್ದರು. ನೇರವಾಗಿ ಮತ್ತು ಲೈನ್‌ನಲ್ಲಿ ಆಡುತ್ತಿರುವ ಅವರು ಅಭ್ಯಾಸ ಮಾಡುತ್ತಿರುವ ವಿಡಿಯೊವನ್ನು ಸಹ ತೋರಿಸಿದರು," ಎಂದು ಹೇಳಿದ್ದಾರೆ.
ಜಿಂಬಾಬ್ವೆ ವಿರುದ್ಧ ಗೆದ್ದರೂ ತಂಡದ ಬೌಲಿಂಗ್ ಬಗ್ಗೆ ನಾಯಕ ಸೂರ್ಯಕುಮಾರ್ ಬೇಸರ
ಅಭಿಷೇಕ್ ಶರ್ಮಾ 30 ಎಸೆತಗಳಲ್ಲಿ 55 ರನ್
ಅಭಿಷೇಕ್ ಶರ್ಮಾ ಟೂರ್ನಿಯ ಮೊದಲ ಮೂರು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧ 15 ರನ್ ಗಳಿಸಿದರೂ ಕ್ರೀಸ್‌ನಲ್ಲಿ ರನ್ ಗಳಿಸಲು ಕಷ್ಟಪಟ್ಟಿದ್ದರು. ಜಿಂಬಾಬ್ವೆ ವಿರುದ್ಧ ಔಟಾಗುವುದಕ್ಕೂ ಮುನ್ನ ಅವರು 55 ರನ್ ಗಳಿಸಿದರು. ಅವರು ಕೇವಲ 30 ಎಸೆತಗಳನ್ನು ಎದುರಿಸಿ ನಾಲ್ಕು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದರು.
ಅಭಿಷೇಕ್ ಮತ್ತು ಸಂಜು ಸ್ಯಾಮ್ಸನ್ ಮೊದಲ ವಿಕೆಟ್‌ಗೆ ಕೇವಲ 22 ಎಸೆತಗಳಲ್ಲಿ 48 ರನ್ ಸೇರಿಸುವ ಮೂಲಕ ದೊಡ್ಡ ಸ್ಕೋರ್‌ಗೆ ಅಡಿಪಾಯ ಹಾಕಿದರು. ಭಾರತ ತಂಡ 4 ವಿಕೆಟ್‌ಗೆ 256 ರನ್ ಗಳಿಸಿತು, ಇದು ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತ್ಯಧಿಕ ಮೊತ್ತವಾಗಿದೆ. ಜಿಂಬಾಬ್ವೆ ಉತ್ತಮವಾಗಿ ಬ್ಯಾಟ್ ಮಾಡಿ 184 ರನ್ ಗಳಿಸಿತು, ಆದರೆ ಇದರ ಹೊರತಾಗಿಯೂ, ತಂಡವು 72 ರನ್‌ಗಳಿಂದ ಸೋಲು ಅನುಭವಿಸಿತು.