ಬೆಂಗಳೂರು: ಟೆರಾಡೈನ್ ರೋಬೋಟಿಕ್ಸ್ ಇಂದು ಬೆಂಗಳೂರಿನಲ್ಲಿ ತನ್ನ ಪ್ರಮುಖ ಉದ್ಯಮ ವೇದಿಕೆಯಾದ 'ಎಲಿವೇಟ್ ಎಕ್ಸ್ 2026' ಅನ್ನು ಆಯೋಜಿಸಿತು. ಈ ಕಾರ್ಯಕ್ರಮವು ಯುನಿ ವರ್ಸಲ್ ರೋಬೋಟ್ಸ್ (UR) ಮತ್ತು ಮೊಬೈಲ್ ಇಂಡಸ್ಟ್ರಿಯಲ್ ರೋಬೋಟ್ಸ್ (MiR) ಸಂಸ್ಥೆ ಗಳನ್ನು ಒಂದೇ ವೇದಿಕೆಗೆ ತರುವ ಮೂಲಕ, ಭಾರತದ ಉತ್ಪಾದನಾ ಮತ್ತು ಇಂಟ್ರಾ ಲಾಜಿಸ್ಟಿಕ್ಸ್ ಕ್ಷೇತ್ರವನ್ನು ಮರುರೂಪಿಸುತ್ತಿರುವ ಮಾನವ ಕೇಂದ್ರಿತ, ಸಹಕಾರಿ ಮತ್ತು ಬುದ್ಧಿವಂತ ಸ್ವಯಂ ಚಾಲಿತ ವ್ಯವಸ್ಥೆಯ ಮುಂದಿನ ಹಂತದ ಮೇಲೆ ಬೆಳಕು ಚೆಲ್ಲಿದೆ.
ಉದ್ಯಮದ ನಾಯಕತ್ವ ಮತ್ತು ಪರಿಸರ ವ್ಯವಸ್ಥೆಯ ತೊಡಗಿಸಿಕೊಳ್ಳುವಿಕೆಗಾಗಿ ಪ್ರಭಾವಶಾಲಿ ವೇದಿಕೆಯಾಗಿ ವಿನ್ಯಾಸಗೊಳಿಸಲಾದ ಎಲಿವೇಟ್ ಎಕ್ಸ್ 2026 ರಲ್ಲಿ, 25ಕ್ಕೂ ಹೆಚ್ಚು ಸಿಇಒ/ಸಿಎಕ್ಸ್ಒ (CEO/CXO) ನಾಯಕರು, ತಂತ್ರಜ್ಞಾನ ತಜ್ಞರು, ಸ್ಟಾರ್ಟ್‌ಅಪ್‌ಗಳು ಮತ್ತು ಮಾಧ್ಯಮ ಪ್ರತಿನಿಧಿಗಳು ಭಾಗವಹಿಸಿದ್ದರು. ಭಾರತೀಯ ಉದ್ಯಮಗಳು ಕೇವಲ ಪ್ರಾಯೋಗಿಕ ಹಂತದ ಸ್ವಯಂಚಾಲಿತ ವ್ಯವಸ್ಥೆಗಳಿಂದ ಈಗ ಹೇಗೆ ದೊಡ್ಡ ಮಟ್ಟದ ಮತ್ತು ವ್ಯವಹಾರಕ್ಕೆ ಪೂರಕವಾದ ನಿಯೋಜನೆಗಳ ಕಡೆಗೆ ಮುನ್ನಡೆಯುತ್ತಿವೆ ಎಂಬುದನ್ನು ಈ ಸಮ್ಮೇಳನವು ಪುಷ್ಠೀಕರಿಸಿತು.
ಟೆರಾಡೈನ್ ರೋಬೋಟಿಕ್ಸ್, ಉದ್ಯಮಗಳು ವಿಶ್ವಾಸದಿಂದ ಮತ್ತು ಸುರಕ್ಷಿತವಾಗಿ ಬೆಳೆಯಲು ಪೂರಕವಾಗಿರುವ ಹೊಂದಿಕೊಳ್ಳಬಲ್ಲ ಮತ್ತು ಬುದ್ಧಿವಂತ ಸ್ವಯಂಚಾಲಿತ ವ್ಯವಸ್ಥೆಗಳ ವಿಸ್ತಾರ ವಾಗುತ್ತಿರುವ ಪಾತ್ರವನ್ನು ಒತ್ತಿಹೇಳಿತು. ವಿವಿಧ ಕ್ಷೇತ್ರಗಳಲ್ಲಿ ಕೈಗಾರಿಕಾ ಸಹಕಾರಿ ರೋಬೋಟ್ ಗಳು ಮತ್ತು ಸ್ವಾಯತ್ತ ಮೊಬೈಲ್ ರೋಬೋಟ್‌ಗಳು (AMRs) ಮುಖ್ಯವಾಹಿನಿಗೆ ಬರುತ್ತಿರುವ ಹಿನ್ನೆಲೆಯಲ್ಲಿ, ಭಾರತದಲ್ಲಿ ಸುಧಾರಿತ ಸ್ವಯಂಚಾಲಿತ ವ್ಯವಸ್ಥೆ, ಕೌಶಲ್ಯ ಅಭಿವೃದ್ಧಿ ಮತ್ತು ಬಲವಾದ ಉದ್ಯಮ-ಪಾಲುದಾರರ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸಲು ಕಂಪನಿಯು ತನ್ನ ಬದ್ಧತೆಯನ್ನು ವ್ಯಕ್ತಪಡಿಸಿತು.
ಇದನ್ನೂ ಓದಿ: Bangalore News: ಡಾ.ವಿಷ್ಣು ಭರತ್ ಆಲಂಪಳ್ಳಿ ಅವರ ಲೈಫ್ ಟ್ವಿಸ್ಟ್ ಅಂಡ್ ಟರ್ನ್ ಎಂಬ ಪುಸ್ತಕ ಬಿಡುಗಡೆ
ಈ ಕಾರ್ಯಕ್ರಮವು ಆಟೋಮೋಟಿವ್, ಆಹಾರ ಮತ್ತು ಪಾನೀಯ (F&B), ವೇಗವಾಗಿ ಮಾರಾಟ ವಾಗುವ ಗ್ರಾಹಕ ಸರಕುಗಳು (FMCG), ಶಿಕ್ಷಣ ಮತ್ತು ಲಾಜಿಸ್ಟಿಕ್ಸ್ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಕೋಬಾಟ್‌ಗಳು (cobots) ಮತ್ತು ಎಎಮ್‌ಆರ್‌ಗಳ (AMR's) ನೈಜ-ಪ್ರಪಂಚದ ಅನ್ವಯಿಕೆಗಳನ್ನು ಪ್ರದರ್ಶಿಸಿತು. ಸಂಸ್ಥೆಗಳು ವೇಗವಾಗಿ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಲು, ಸುಲಭವಾಗಿ ಮರು-ನಿಯೋಜಿಸಲು ಹಾಗೂ ಉತ್ಪಾದನಾ ಸಾಮರ್ಥ್ಯ ಮತ್ತು ಉದ್ಯೋಗಿಗಳ ದಕ್ಷತೆಯನ್ನು ಸುಧಾರಿ ಸಲು ಯುನಿವರ್ಸಲ್ ರೋಬೋಟ್ಸ್ ಮತ್ತು MiR ಹೇಗೆ ಸಹಾಯ ಮಾಡುತ್ತವೆ ಎಂಬುದನ್ನು ಈ ಪ್ರಾತ್ಯಕ್ಷಿಕೆಗಳು ಎತ್ತಿ ತೋರಿಸಿದವು.
ಪ್ಯಾಲೆಟೈಜಿಂಗ್ ಮತ್ತು ವೆಲ್ಡಿಂಗ್‌ನಿಂದ ಹಿಡಿದು ಮೆಟೀರಿಯಲ್ ಟ್ರಾನ್ಸ್‌ಪೋರ್ಟ್, ಮೆಷಿನ್ ಟೆಂಡಿಂಗ್ ಮತ್ತುತರಬೇತಿಯವರೆಗೆ ಹೆಚ್ಚಿನ ಬೇಡಿಕೆಯಿರುವ ಅನ್ವಯಿಕೆಗಳನ್ನು ಪ್ರದರ್ಶಿಸ ಲಾಯಿತು. ಈ ಪ್ರಾತ್ಯಕ್ಷಿಕೆಗಳು ಟೆರಾಡೈನ್ ರೋಬೋಟಿಕ್ಸ್ ಹೇಗೆ ಹೂಡಿಕೆಯ ಮೇಲೆ ವೇಗವಾದ ಲಾಭ (ROI), ಸರಳ ನಿಯೋಜನೆ ಮತ್ತು ವೈವಿಧ್ಯಮಯ ಹಾಗೂ ದೊಡ್ಡ ಪ್ರಮಾಣದ ಕಾರ್ಯಾ ಚರಣೆಗಳಲ್ಲಿ ಸುರಕ್ಷಿತ ಸ್ವಯಂಚಾಲಿತ ವ್ಯವಸ್ಥೆಯನ್ನು ಸಾಧ್ಯವಾಗಿಸುತ್ತದೆ ಎಂಬುದನ್ನು ಪ್ರತಿ ಬಿಂಬಿಸಿದವು.
ಕಾರ್ಯಕ್ರಮದಲ್ಲಿ ಮಾತನಾಡಿದ ಟೆರಾಡೈನ್ ರೋಬೋಟಿಕ್ಸ್‌ನ ಮುಖ್ಯ ಕೃತಕ ಬುದ್ಧಿಮತ್ತೆ ಅಧಿಕಾರಿ ಜೇಮ್ಸ್ ಡೇವಿಡ್‌ಸನ್ ಅವರು ಹೀಗೆ ಹೇಳಿದರು: "ಸ್ವಯಂಚಾಲಿತ ವ್ಯವಸ್ಥೆಯು ಒಂದು ನಿರ್ಣಾಯಕ ಯುಗವನ್ನು ಪ್ರವೇಶಿಸುತ್ತಿದೆ - ಇಲ್ಲಿ ಬುದ್ಧಿವಂತಿಕೆ, ನಮ್ಯತೆ ಮತ್ತು ಮಾನವ ಕೇಂದ್ರಿತ ವಿನ್ಯಾಸಗಳು ಕೇವಲ ಆಯ್ಕೆಗಳಾಗಿ ಉಳಿದಿಲ್ಲ, ಬದಲಿಗೆ ವ್ಯವಹಾರಗಳು ಹೊಸ ಆವಿಷ್ಕಾರಗಳನ್ನು ಮಾಡಲು, ಬೆಳೆಯಲು ಮತ್ತು ಸ್ಪರ್ಧಿಸಲು ಮೂಲಭೂತ ಅವಶ್ಯಕತೆಗಳಾಗಿವೆ. ಕೃತಕ ಬುದ್ಧಿಮತ್ತೆಯು (AI) ರೋಬೋಟ್‌ಗಳನ್ನು ಕೇವಲ ಕೆಲಸ ನಿರ್ವಹಿಸುವ ಸಾಧನಗಳ ಬದಲಾಗಿ, ಪರಿಸರಕ್ಕೆ ತಕ್ಕಂತೆ ಕಲಿಯುವ ಮತ್ತು ಹೊಂದಿಕೊಳ್ಳುವ ಬುದ್ಧಿವಂತ ಸಹವರ್ತಿಗಳಾಗಿ ಬದಲಾಯಿಸುತ್ತಿದೆ. ಭಾರತದಲ್ಲಿ ನಾವು ಕೇವಲ ಪ್ರಯೋಗಶೀಲತೆಯಿಂದ ಉದ್ಯಮದಾದ್ಯಂತ ಅಳವಡಿಸಿಕೊಳ್ಳುವಿಕೆಯ ಕಡೆಗೆ ಒಂದು ನಿರ್ಣಾಯಕ ಬದಲಾವಣೆಯನ್ನು ಕಾಣುತ್ತಿದ್ದೇವೆ. ಎಲಿವೇಟ್ ಎಕ್ಸ್ 2026 ಈ ವೇಗವನ್ನು ಪ್ರತಿಬಿಂಬಿಸುತ್ತದೆ - ಸಹಕಾರಿ ಮತ್ತು ಬುದ್ಧಿವಂತ ಸ್ವಯಂಚಾಲಿತ ವ್ಯವಸ್ಥೆಯು ಸ್ಥಾಪಿತ ಉದ್ಯಮಗಳು ಮತ್ತು ಮುಂದಿನ ಪೀಳಿಗೆಯ ಸ್ಟಾರ್ಟ್ ಅಪ್‌ಗಳಿಗೆ ಹೇಗೆ ಕಾರ್ಯತಂತ್ರದ ಬೆಳವಣಿಗೆಯ ಇಂಜಿನ್ ಆಗಬಲ್ಲದು ಎಂಬುದನ್ನು ಅನ್ವೇಷಿ ಸಲು ಈ ಪರಿಸರ ವ್ಯವಸ್ಥೆಯನ್ನು ಒಂದೆಡೆ ಸೇರಿಸುತ್ತಿದೆ."
ಟೆರಾಡೈನ್ ರೋಬೋಟಿಕ್ಸ್‌ನ ಏಷ್ಯಾ ಪೆಸಿಫಿಕ್ ವಲಯದ ಮಾರಾಟ ವಿಭಾಗದ ಉಪಾಧ್ಯಕ್ಷರಾದ ಪೋಯ್ ಟೂಂಗ್ ಟಾಂಗ್ ಅವರು ಮಾತನಾಡಿ, "ಏಷ್ಯಾ ಪೆಸಿಫಿಕ್ ವಲಯದಲ್ಲಿ ಭಾರತವು ಅತ್ಯಂತ ಪ್ರಮುಖ ಮತ್ತು ಕ್ರಿಯಾತ್ಮಕ ಸ್ವಯಂಚಾಲಿತ ಮಾರುಕಟ್ಟೆಗಳಲ್ಲಿ ಒಂದಾಗಿ ವೇಗವಾಗಿ ಹೊರಹೊಮ್ಮುತ್ತಿದೆ. ಇಂದಿನ ಸಂಸ್ಥೆಗಳು ಕೇವಲ ಸ್ವಯಂಚಾಲಿತ ವ್ಯವಸ್ಥೆಯನ್ನು ಅಳವಡಿಸಿ ಕೊಳ್ಳಲು ಮಾತ್ರ ಬಯಸುತ್ತಿಲ್ಲ - ಬದಲಿಗೆ ಅವು ನಮ್ಯತೆ, ಚೇತರಿಸಿಕೊಳ್ಳುವ ಶಕ್ತಿ ಮತ್ತು ಭವಿಷ್ಯ ದ ಸವಾಲುಗಳನ್ನು ಎದುರಿಸಲು ಸಿದ್ಧವಿರುವ ಕಾರ್ಯಾಚರಣೆಗಳನ್ನು ನಿರ್ಮಿಸಲು ಬಯಸುತ್ತಿವೆ.
ಹೂಡಿಕೆಯ ಮೇಲೆ ವೇಗವಾಗಿ ಲಾಭ ನೀಡುವ ಮತ್ತು ವ್ಯವಹಾರದ ಅಗತ್ಯಗಳಿಗೆ ಅನುಗುಣವಾಗಿ ವಿಕಸನಗೊಳ್ಳಬಲ್ಲ 'ಮಾಡ್ಯುಲರ್ ಆಟೋಮೇಷನ್'ಗೆ ಇಂದು ಹೆಚ್ಚಿನ ಬೇಡಿಕೆಯಿದೆ. ಯುನಿ ವರ್ಸಲ್ ರೋಬೋಟ್ಸ್ ಮತ್ತು MiR ಮೂಲಕ ನಾವು ಉತ್ಪಾದನೆ ಮತ್ತು ಇಂಟ್ರಾ-ಲಾಜಿಸ್ಟಿಕ್ಸ್‌ನಲ್ಲಿ ಸಮಗ್ರ ಸ್ವಯಂಚಾಲಿತ ವ್ಯವಸ್ಥೆಯನ್ನು ಸಾಧ್ಯವಾಗಿಸುತ್ತಿದ್ದೇವೆ, ಇದು ಭಾರತೀಯ ಕಂಪನಿಗಳು ಆತ್ಮವಿಶ್ವಾಸದಿಂದ ಬೆಳೆಯಲು ಮತ್ತು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಸಹಾಯ ಮಾಡುತ್ತಿದೆ," ಎಂದು ಹೇಳಿದರು.
ಟೆರಾಡೈನ್ ರೋಬೋಟಿಕ್ಸ್‌ನ ದಕ್ಷಿಣ ಏಷ್ಯಾದ ಬಿಸಿನೆಸ್ ಡೈರೆಕ್ಟರ್ ಆದ ಸೌಗಂಧ್ ಕೆ.ಎಂ. ಅವರು ಮಾತನಾಡಿ, "ಭಾರತದ ಸ್ವಯಂಚಾಲಿತ ಪಯಣವು ಅದರ ಪರಿಸರ ವ್ಯವಸ್ಥೆಯಾದ್ಯಂತದ ಸಹಯೋಗದಿಂದ ವ್ಯಾಖ್ಯಾನಿಸಲ್ಪಡುತ್ತದೆ — ಪಾಲುದಾರರು, ಸಿಸ್ಟಮ್ ಇಂಟಿಗ್ರೇಟರ್‌ಗಳು, ಸ್ಟಾರ್ಟ್‌ಅಪ್‌ಗಳು ಮತ್ತು ನುರಿತ ಪ್ರತಿಭೆಗಳು ಒಟ್ಟಾಗಿ ತಂತ್ರಜ್ಞಾನವನ್ನು ನೈಜ ಪ್ರಭಾವವಾಗಿ ಪರಿವರ್ತಿಸುತ್ತಾರೆ.
ಟೆರಾಡೈನ್ ರೋಬೋಟಿಕ್ಸ್‌ನಲ್ಲಿ ನಮ್ಮ ನಂಬಿಕೆ ಸರಳವಾಗಿದೆ: ಸ್ವಯಂಚಾಲಿತ ವ್ಯವಸ್ಥೆಯು ಯಾರಿಗಾದರೂ ಮತ್ತು ಎಲ್ಲಿಯಾದರೂ ಲಭ್ಯವಿರಬೇಕು ಮತ್ತು ರೋಬೋಟ್‌ಗಳು ಜನರು ಉತ್ತಮ ಕೆಲಸ ಮಾಡಲು ಶಕ್ತರನ್ನಾಗಿ ಮಾಡಬೇಕೇ ಹೊರತು, ಜನರು ರೋಬೋಟ್‌ಗಳಂತೆ ಕೆಲಸ ಮಾಡುವಂತಾಗಬಾರದು. ನಾವು ಬೇಸರದ, ಕೊಳಕು ಮತ್ತು ಅಪಾಯಕಾರಿ ಕೆಲಸಗಳನ್ನು ಸ್ವಯಂ ಚಾಲಿತಗೊಳಿಸುವತ್ತ ಗಮನಹರಿಸುತ್ತೇವೆ, ಅದೇ ಸಮಯದಲ್ಲಿ ಸಂಸ್ಥೆಗಳ ಉತ್ಪಾದಕತೆ, ಸುರಕ್ಷತೆ ಮತ್ತು ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತೇವೆ.
ಎಲಿವೇಟ್ ಎಕ್ಸ್ 2026 ಕಾರ್ಯಕ್ರಮವು ತಂತ್ರಜ್ಞಾನ ಅಳವಡಿಕೆಯಲ್ಲಿನ ಅಡೆತಡೆಗಳನ್ನು ಕಡಿಮೆ ಮಾಡುವುದು ಮತ್ತು ಭಾರತದಲ್ಲಿ ದೀರ್ಘಕಾಲೀನ ಸಾಮರ್ಥ್ಯವನ್ನು ವೃದ್ಧಿಸುವುದರ ಬಗ್ಗೆಯಾಗಿದೆ. ಆ ಮೂಲಕ ಸ್ವಯಂಚಾಲಿತ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ, ಸುಲಭವಾಗಿ ಲಭ್ಯವಾಗುವಂತೆ ಮಾಡುವುದು ಮತ್ತು ಈ ಬೆಳವಣಿಗೆಯ ಪಯಣದ ಪ್ರತಿಯೊಂದು ಹಂತದಲ್ಲೂ ಟೆರಾಡೈನ್ ರೋಬೋಟಿಕ್ಸ್ ಅನ್ನು ನಂಬಿಕಸ್ತ ಪಾಲುದಾರನನ್ನಾಗಿ ರೂಪಿಸುವುದು ನಮ್ಮ ಗುರಿಯಾಗಿದೆ," ಎಂದರು.
ಗ್ರಾಹಕ ಯಶೋಗಾಥೆಯ ಪ್ರಶಂಸೆ/ಝಲಕ್
ಎಲಿವೇಟ್ ಎಕ್ಸ್ 2026 ಕಾರ್ಯಕ್ರಮದ ಪ್ರಮುಖ ಆಕರ್ಷಣೆಯೆಂದರೆ ಗ್ರಾಹಕರ ಯಶಸ್ಸಿನ ಮೇಲೆ ಬೀರಿದ ಬೆಳಕು, ಅದರಲ್ಲಿ 'ಒರಿಜಿನ್' ಸಂಸ್ಥೆಯು ಎದ್ದು ಕಾಣುತ್ತಿತ್ತು. ವೇಗವಾಗಿ ಬೆಳೆಯುತ್ತಿರುವ ಅಮೆರಿಕದ ಈ ಕನ್‌ಸ್ಟ್ರಕ್ಷನ್ ಟೆಕ್ (ನಿರ್ಮಾಣ ತಂತ್ರಜ್ಞಾನ) ಸ್ಟಾರ್ಟ್‌ಅಪ್, ಯುನಿವರ್ಸಲ್ ರೋಬೋಟ್ಸ್‌ನೊಂದಿಗಿನ ಪಾಲುದಾರಿಕೆಯು ಹೇಗೆ ಸುಧಾರಿತ ಉತ್ಪಾದಕತೆ, ಹೆಚ್ಚಿನ ಸುರಕ್ಷತೆ ಮತ್ತು ಸಹಕಾರಿ ಸ್ವಯಂಚಾಲಿತ ವ್ಯವಸ್ಥೆಯ ಮೂಲಕ ನಿರಂತರ ಗುಣಮಟ್ಟದ ಫಲಿತಾಂಶ ಗಳನ್ನು ನೀಡುತ್ತಿದೆ ಎಂಬುದನ್ನು ಹಂಚಿಕೊಂಡಿತು.
ಒರಿಜಿನ್ ಸಂಸ್ಥೆಯ ಸಹ-ಸ್ಥಾಪಕ ಮತ್ತು ಸಿಇಒ ಆದ ಯೋಗೇಶ್ ಘಟುರ್ಲೆ ಅವರು ಮಾತನಾಡಿ, "ನಿರ್ಮಾಣ ಪ್ರದೇಶಗಳಲ್ಲಿ ನಿಜವಾದ ಸ್ವಾಯತ್ತತೆಯನ್ನು ತರುವುದು ಮತ್ತು ಜಗತ್ತು ಕಟ್ಟಡಗಳನ್ನು ನಿರ್ಮಿಸುವ ರೀತಿಯನ್ನು ಬದಲಿಸುವುದು ನಮ್ಮ ಗುರಿಯಾಗಿದೆ. ಇದನ್ನು ದೊಡ್ಡ ಮಟ್ಟದಲ್ಲಿ ಕಾರ್ಯಗತಗೊಳಿಸಲು ಪ್ರತಿಯೊಂದು ಘಟಕವೂ ಸಂಪೂರ್ಣ ನಿಖರತೆಯಿಂದ ಕೆಲಸ ಮಾಡುವ ತಾಂತ್ರಿಕ ವ್ಯವಸ್ಥೆಯ ಅಗತ್ಯವಿದೆ. ಯುನಿವರ್ಸಲ್ ರೋಬೋಟ್ಸ್ ನಮಗೆ ಬೇಕಾದ ಅಂತಹ ದೃಢವಾದ ಮತ್ತು ಕಾರ್ಯಾಚರಣೆಯ ಬೆನ್ನೆಲುಬನ್ನು ಒದಗಿಸುತ್ತದೆ. ಅವರ ಕೋಬಾಟ್‌ಗಳು ಯಾಂತ್ರಿಕ ನಿಖರತೆಯನ್ನು ನಿರ್ವಹಿಸುವುದರಿಂದ, ನಾವು ನಮ್ಮ ಬುದ್ಧಿವಂತ ವ್ಯವಸ್ಥೆಗಳನ್ನು ನೈಜ ಜಗತ್ತಿನಲ್ಲಿ ಅಳವಡಿಸುವತ್ತ ಗಮನಹರಿಸಲು ಸಾಧ್ಯವಾಗುತ್ತಿದೆ," ಎಂದು ತಿಳಿಸಿದರು.