ಎಪ್ಸಿಲಾನ್ ಗ್ರೂಪ್ ರೂ.15,350 ಕೋಟಿ ಹೂಡಿಕೆ, ಕರ್ನಾಟಕ ಸರ್ಕಾರದೊಂದಿಗೆ ಒಡಂಬಡಿಕೆಗೆ ಸಹಿ
ಯೋಜನೆಯಲ್ಲಿ ಗ್ರಾಫೈಟ್ ಅನೋ ಡ್ ಉತ್ಪಾದನಾ ಘಟಕ ಪ್ರಾರಂಭಿಸಲು ರೂ.9,000 ಕೋಟಿ, ಎಲ್. ಎಫ್.ಪಿ.ಕ್ಯಾಥೋಡ್ ಉತ್ಪಾದನಾ ಘಟಕಕ್ಕೆ ರೂ.6,000 ಕೋಟಿ ಮತ್ತು ಬ್ಯಾಟರಿ ಮೆಟೀರಿಯಲ್ಸ್ ಮತ್ತು ಬ್ಯಾಟರಿ ಟೆಸ್ಟಿಂಗ್ ಆರ್ ಅಂಡ್ ಡಿ ಹಾಗೂ ತರಬೇತಿ ಕೇಂದ್ರಕ್ಕೆ ರೂ.350 ಕೋಟಿ ಹೂಡಿಕೆ ಒಳ ಗೊಂಡಿದೆ.
![ಕರ್ನಾಟಕ ಸರ್ಕಾರದೊಂದಿಗೆ ಎಪ್ಸಿಲಾನ್ ಗ್ರೂಪ್ ಒಡಂಬಡಿಕೆಗೆ ಸಹಿ](https://cdn-vishwavani-prod.hindverse.com/media/original_images/Invest_karnataka.jpg)
![Profile](https://vishwavani.news/static/img/user.png)
ಜಾಗತಿಕ ಕಾರ್ಬನ್ ಬ್ಲಾಕ್ ಮತ್ತು ಸುಧಾರಿತ ಬ್ಯಾಟರಿ ಮೆಟೀರಿ ಯಲ್ಸ್ ಉದ್ಯಮದ ಮುಂಚೂಣಿ ಯ ಕೈಗಾರಿಕಾ ಸಂಸ್ಥೆ ಎಪ್ಸಿಲಾನ್ ಗ್ರೂಪ್, ಕರ್ನಾಟಕ ಸರ್ಕಾರ ದೊಂದಿಗೆ ಇವಿ ಬ್ಯಾಟರಿ ಟೆಸ್ಟಿಂಗ್ ಮತ್ತು ಸುಧಾರಿತ ಮೆಟೀರಿಯಲ್ಸ್ ಸಂಬಂಧಿತ ಅತ್ಯಾಧುನಿಕ ಉತ್ಪಾದನೆ ಮತ್ತು ಸಂಶೋಧನಾ ಸೌಲಭ್ಯ ಅಭಿವೃದ್ಧಿಪಡಿಸಲು ರೂ.15,350 ಕೋಟಿ ಹೂಡಿಕೆ ಮಾಡುವ ಒಡಂಬಡಿಕೆ (ಎಂ.ಒ.ಯು.) ಗೆ ಸಹಿ ಹಾಕಿದೆ. ಈ ಕಾರ್ಯತಂತ್ರೀಯ ಹೂಡಿಕೆಯನ್ನು ಮುಂದಿನ 10 ವರ್ಷಗಳಿಗೆ ಯೋಜಿಸ ಲಾಗಿದ್ದು ಭಾರತದ ವಿದ್ಯುಚ್ಛಾಲಿತ (ಇವಿ) ಇಕೊಸಿಸ್ಟಂ ಅನ್ನು ಉತ್ತೇಜಿಸಲಿದ್ದು ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸಲಿದೆ ಮತ್ತು ಸುಧಾರಿತ ಬ್ಯಾಟರಿ ತಂತ್ರ ಜ್ಞಾನದ ಕೇಂದ್ರವಾಗಿ ಭಾರತದ ಸ್ಥಾನವನ್ನು ಸದೃಢಗೊಳಿಸಲಿದೆ.
ಈ ಒಡಂಬಡಿಕೆಯ ಭಾಗವಾಗಿ ಎಪ್ಸಿಲಾನ್ ಗ್ರೂಪ್ ತನ್ನ ಅಧೀನ ಸಂಸ್ಥೆಗಳಾದ ಎಪ್ಸಿಲಾನ್ ಅಡ್ವಾನ್ಸ್ಡ್ ಮೆಟೀರಿಯಲ್ಸ್ ಮತ್ತು ಎಪ್ಸಿಲಾನ್ ಕ್ಯಾಮ್ ಪ್ರೈ.ಲಿ.ಗಳೊಂದಿಗೆ ಸುಸ್ಥಿರ ಮತ್ತು ಉನ್ನತ ಕಾರ್ಯಕ್ಷಮತೆಯ ಗ್ರಾಫೈಟ್ ಅನೋಡ್ ಮತ್ತು ಲಿಥಿಯಂ ಅಯಾನ್ ಫಾಸ್ಫೇಟ್ (ಎಲ್.ಎಫ್.ಪಿ.) ಕ್ಯಾಥೋಡ್ ಬ್ಯಾಟರಿ ಮೆಟೀರಿಯಲ್ಸ್ ಉತ್ಪಾದಿಸಲಿದ್ದು ಇನ್ಸ್ಪೈರ್ ಎನರ್ಜಿ ರೀಸರ್ಚ್ ಸೆಂಟರ್ ಪ್ರೈ.ಲಿ.ಯು ಸಂಶೋಧನೆ ಮತ್ತು ಅಭಿವೃದ್ಧಿ, ಇವಿ ಬ್ಯಾಟರಿ ಮೆಟೀರಿಯಲ್ ಮತ್ತು ಬ್ಯಾಟರಿ ಉತ್ಪಾದಕರ ಪರೀಕ್ಷೆ ಮತ್ತು ತರಬೇತಿಗೆ ಗಮನ ನೀಡಲಿದೆ. ಈ ಯೋಜನೆಯಲ್ಲಿ ಗ್ರಾಫೈಟ್ ಅನೋ ಡ್ ಉತ್ಪಾದನಾ ಘಟಕ ಪ್ರಾರಂಭಿಸಲು ರೂ.9,000 ಕೋಟಿ, ಎಲ್.ಎಫ್.ಪಿ.ಕ್ಯಾಥೋಡ್ ಉತ್ಪಾದನಾ ಘಟಕಕ್ಕೆ ರೂ.6,000 ಕೋಟಿ ಮತ್ತು ಬ್ಯಾಟರಿ ಮೆಟೀರಿಯಲ್ಸ್ ಮತ್ತು ಬ್ಯಾಟರಿ ಟೆಸ್ಟಿಂಗ್ ಆರ್ ಅಂಡ್ ಡಿ ಹಾಗೂ ತರಬೇತಿ ಕೇಂದ್ರಕ್ಕೆ ರೂ.350 ಕೋಟಿ ಹೂಡಿಕೆ ಒಳಗೊಂಡಿದೆ.
ಇದನ್ನೂ ಓದಿ: Bangalore University: ಬೆಂಗಳೂರು ವಿವಿ ಹಾಸ್ಟೆಲ್‌ನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿನಿ ಆತ್ಮಹತ್ಯೆ
ಈ ಉಪಕ್ರಮವು ಭಾರತದ ಶಕ್ತಿಯ ಪರಿವರ್ತನೆಯ ಕೇಂದ್ರವಾಗುವ ಕರ್ನಾಟಕದ ಮಹತ್ವಾ ಕಾಂಕ್ಷೆಗೆ ಬೆಂಬಲಿಸುವ ಮೂಲಕ ರಾಜ್ಯವನ್ನು ಬ್ಯಾಟರಿ ಮೆಟೀರಿಯಲ್ಸ್ ಉತ್ಪಾದನೆಗೆ ಪ್ರಮುಖ ತಾಣವಾಗಿಸಲಿದೆ. ಎಪ್ಸಿಲಾನ್ ಸಮೂಹವು ಭಾರತೀಯ ಬ್ಯಾಟರಿ ಉತ್ಪಾದಕರಿಗೆ ಪೂರೈಸಲಿದ್ದು ಅವರಿಗೆ ಸ್ಥಳೀಯವಾಗಿ ಉತ್ಪಾದನೆಯಾಗುವ, ಉನ್ನತ ಕಾರ್ಯಕ್ಷಮತೆಯ ಮೆಟಿರಿಯಲ್ಸ್ ಅನ್ನು ಒದಗಿಸುವ ಮೂಲಕ ಪೂರೈಕೆ ಸರಣಿಯ ಸದೃಢತೆ ಹೆಚ್ಚಿಸುತ್ತದೆ ಮತ್ತು ಭಾರತದ ವೃದ್ಧಿಸುತ್ತಿರುವ ಇವಿ ಮಾರುಕಟ್ಟೆಗೆ ಬೆಂಬಲಿಸುತ್ತದೆ. ರಾಜ್ಯ ಸರ್ಕಾರವು ಕೈಗಾರಿಕಾ ಅಭಿವೃದ್ಧಿಯ ತನ್ನ ನೀತಿಗಳಿಗೆ ಪೂರಕವಾಗಿ ಅಗತ್ಯ ಅನುಮೋದನೆಗಳು, ಪ್ರೋತ್ಸಾಹಕಗಳು ಮತ್ತು ಮೂಲಸೌಕರ್ಯ ಬೆಂಬಲ ವನ್ನು ಎಪ್ಸಿಲಾನ್ ಗ್ರೂಪ್ ಯೋಜನೆಗಳಿಗೆ ನೀಡಲಿದೆ.
ಭಾರತದಲ್ಲಿ ಇವಿಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಎಪ್ಸಿಲಾನ್ ಗ್ರೂಪ್ ಗ್ರಾಫೈಟ್ ಅನೋಡ್ ಮತ್ತು ಎಲ್.ಎಫ್.ಪಿ. ಕ್ಯಾಥೋಡ್ ಮೆಟೀರಿಯಲ್ ಗಳಿಗೆ ಸುಸ್ಥಿರ ಮತ್ತು ವಿಶ್ವಾಸಾರ್ಹ ಉತ್ಪಾದಕನಾಗಿ ಕೆಲಸ ಮಾಡಲಿದ್ದು ಆಮದು ಮೇಲೆ ಆಧಾರಪಡುವುದನ್ನು ಕಡಿಮೆ ಮಾಡಲಿದೆ ಮತ್ತು ಭಾರತದ ಸೆಲ್ ಉತ್ಪಾದಕರಿಗೆ ಹೆಚ್ಚಿನ ಸ್ಥಳೀಯ ಮೌಲ್ಯ ಸೇರ್ಪಡೆ(ಡಿವಿಎ) ಸಾಧಿಸಲು ಬೆಂಬಲಿಸುತ್ತದೆ. ಎಪ್ಸಿಲಾನ್ ನೋಡ್ ಮೆಟೀರಿಯಲ್ಸ್ ಗೆ ಶೇ.100ರಷ್ಟು ಡಿವಿಎ ಪೂರೈಸುತ್ತದೆ, ಕ್ಯಾಥೋಡ್ ಮೆಟೀರಿಯಲ್ಸ್ ಶೇ.60ರಷ್ಟು ಡಿವಿಎ ಸಾಧಿಸುವ ಮೂಲಕ ಸ್ಥಳೀಯ ಮೌಲ್ಯ ಸೃಷ್ಟಿ ಮತ್ತು ಪೂರೈಕೆ ಸರಣಿ ಸ್ಥಳೀಕರಣವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ.
ಈ ಸಂದರ್ಭ ಕುರಿತು ಎಪ್ಸಿಲಾನ್ ಗ್ರೂಪ್ ನ ವ್ಯವಸ್ಥಾಪಕ ನಿರ್ದೇಶಕ ವಿಕ್ರಮ್ ಹಂಡಾ, “ಈ ಸಹಯೋಗವು ಸ್ವಚ್ಛ ಶಕ್ತಿ ಮತ್ತು ಇವಿ ಕ್ರಾಂತಿಯತ್ತ ಭಾರತದ ಪರಿವರ್ತನೆಯಲ್ಲಿ ಗಮನಾರ್ಹ ಮೈಲಿಗಲ್ಲಾಗಿದೆ. ಕರ್ನಾಟಕದಲ್ಲಿ ನಮ್ಮ ಹೂಡಿಕೆಯು ಭಾರತವನ್ನು ಸುಧಾರಿತ ಬ್ಯಾಟರಿ ಮೆಟೀರಿ ಯಲ್ಸ್ ನಲ್ಲಿ ಭಾರತವನ್ನು ಸ್ವಾವಲಂಬಿಯಾಗಿಸುವುದಕ್ಕೆ ಪೂರಕವಾಗಿದೆ ಮತ್ತು ದೇಶದ ಇವಿ ಮಹತ್ವಾಕಾಂಕ್ಷೆಗಳನ್ನು ಬೆಂಬಲಿಸುತ್ತಿದೆ. ನಾವು ಉದ್ಯೋಗಗಳ ಸೃಷ್ಟಿಗೆ ಬದ್ಧರಾಗಿದ್ದು ಆವಿ ಷ್ಕಾರಕ ತಂತ್ರಜ್ಞಾನದ ಆವಿಷ್ಕಾರ ಉತ್ತೇಜಿಸುತ್ತಿದ್ದೇವೆ ಮತ್ತು ರಾಜ್ಯದ ಒಳಗಡೆ ವಿಕಸಿತ ಭಾರತದ ಧ್ಯೇಯೋದ್ದೇಶಕ್ಕೆ ಆರ್ಥಿಕ ಪರಗತಿ ಉತ್ತೇಜಿಸಲು ಸುಸ್ಥಿರ ಉತ್ಪಾದನೆಯನ್ನು ಉತ್ತೇಜಿಸುತ್ತಿದ್ದೇವೆ” ಎಂದರು.
ಎಪ್ಸಿಲಾನ್ ಸಮೂಹವು ಕರ್ನಾಟಕದಲ್ಲಿ ರೂ.15,350 ಕೋಟಿ ಹೂಡಿಕೆ ಮಾಡಿದ್ದು ಇದು ಚೀನಾ ದ ಆಮದಿನ ಮೇಲೆ ಆಧಾರಪಡುವುದನ್ನು ಕಡಿಮೆ ಮಾಡಲು ಮತ್ತು ಸ್ಥಳೀಕೃತ, ಸ್ವಾವಲಂಬನೆಯ ಬ್ಯಾಟರಿ ಮೆಟೀರಿಯಲ್ ಇಕೊಸಿಸ್ಟಂ ನಿರ್ಮಿಸಲು ಪ್ರಮುಖ ಹೆಜ್ಜೆಯಾಗಿದೆ. ಅತ್ಯಾಧುನಿಕ ಗ್ರಾಫೈ ಟ್ ಅನೋಡ್ ಮತ್ತು ಎಲ್.ಎಫ್.ಪಿ. ಕ್ಯಾಥೋಡ್ ಉತ್ಪಾದನಾ ಘಟಕಗಳನ್ನು ಅಭಿವೃದ್ಧಿ ಪಡಿಸು ವುದಲ್ಲದೆ ಸುಧಾರಿತ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಟೆಸ್ಟಿಂಗ್ ಸೆಂಟರ್ ಪ್ರಾರಂಭಿಸುವ ಮೂಲಕ ಎಪ್ಸಿಲಾನ್ ಭಾರತವು ಬ್ಯಾಟರಿ ತಂತ್ರಜ್ಞಾನದಲ್ಲಿ ಸ್ಥಳೀಯ ಸಾಮರ್ಥ್ಯಗಳ ಅಭಿವೃದ್ಧಿ ಯನ್ನು ದೃಢೀಕರಿಸುತ್ತಿದೆ.
ಈ ಹೂಡಿಕೆಯು ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಇವಿ ಉತ್ಪಾದಕರಿಗೆ ಪ್ರಮುಖ ಬ್ಯಾಟರಿ ಮೆಟೀರಿಯಲ್ಸ್ ನ ಸುಸ್ಥಿರ ಪೂರೈಕೆ ನೀಡಲಿದ್ದು ಇದರಿಂದ ಭಾರತವನ್ನು ಜಾಗತಿಕ ಬ್ಯಾಟರಿ ಹಬ್ ಆಗಿ ಸದೃಢಗೊಳಿಸಿ ಆಮದು ಆಧಾರಪಡುವಿಕೆ ಕಡಿಮೆ ಮಾಡುತ್ತದೆ ಮತ್ತು ಶಕ್ತಿ ವಲಯದಲ್ಲಿ ಭದ್ರತೆ ಹೆಚ್ಚಿಸಿ ಆತ್ಮ ನಿರ್ಭರ ಭಾರತ ಮತ್ತು ವಿಕಸಿತ ಭಾರತದ ಧ್ಯೇಯಕ್ಕೆ ಬೆಂಬಲಿಸುತ್ತದೆ, ಆವಿಷ್ಕಾರ ಉತ್ತೇಜಿಸುತ್ತದೆ ಮತ್ತು 2,000ಕ್ಕೂ ಹೆಚ್ಚು ನೇರ ಉದ್ಯೋಗ ನೀಡುತ್ತದೆ ಮತ್ತು ವಿಶ್ವಾ ಸಾರ್ಹ, ಚೀನಾದ ಹೊರಗಿನ ಪೂರೈಕೆ ಸರಣಿ ಬಯಸುವ ಜಾಗತಿಕ ಒಇಎಂಗಳನ್ನು ಆಕರ್ಷಿಸು ತ್ತದೆ.