ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Khelo India: ದೇಶಾದ್ಯಂತ 1.67 ಖೇಲೋ ಇಂಡಿಯಾ ಕೇಂದ್ರ ಸ್ಥಾಪನೆ

267 ಕ್ರೀಡಾ ಅಕಾಡೆಮಿಗಳಿಗೆ ಬೆಂಬಲ ನೀಡಲಾಗುತ್ತಿದ್ದು, ಸಾವಿರಾರು ಖೇಲೋ ಇಂಡಿಯಾ ಕ್ರೀಡಾ ಪಟುಗಳಿಗೆ ತರಬೇತಿ ಸೇರಿದಂತೆ ಅಗತ್ಯ ನೆರವು ಒದಗಿಸಲಾಗುತ್ತಿದೆ. ಕ್ರೀಡೆಯಲ್ಲಿ ಯಶಸ್ಸು ಎಂದರೆ ಕೇವಲ ಪದಕ ಗೆಲ್ಲುವುದಲ್ಲ. ಶಿಸ್ತು, ಸಮರ್ಪಣೆ, ಪರಿಶ್ರಮ, ತಂಡದ ಮನೋಭಾವ, ಸೋಲನ್ನು ಎದುರಿಸುವ ಧೈರ್ಯ ಹಾಗೂ ದೇಶಕ್ಕಾಗಿ ಸೇವೆ ಮಾಡುವ ಮನೋಭಾವ ಕ್ರೀಡೆ ಕಲಿಸುತ್ತದೆ

ರಾಮಯ್ಯ ಕಾನೂನು ಕಾಲೇಜಿನಲ್ಲಿ ಆಯೋಜಿಸಿದ ಖೇಲೋ ಇಂಡಿಯಾ ಸಂವಾದ ಕಾರ್ಯಕ್ರಮದಲ್ಲಿ ವಿ.ಸೋಮಣ್ಣ

ಬೆಂಗಳೂರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರವು ದೇಶದ ಕ್ರೀಡಾ ಕ್ಷೇತ್ರ ಬಲಪಡಿ ಸಲು ಹಲವು ಮಹತ್ವದ ಕ್ರಮ ಕೈಗೊಂಡಿದ್ದು, ಜುಲೈ 2026ರ ವೇಳೆಗೆ ದೇಶಾದ್ಯಂತ 1067 ಖೇಲೋ ಇಂಡಿಯಾ ಕೇಂದ್ರ ಸ್ಥಾಪಿಸಲಾಗಿದೆ ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆಗಳ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.

ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ನಗರದ ರಾಮಯ್ಯ ಕಾನೂನು ಕಾಲೇಜಿನಲ್ಲಿ ಆಯೋಜಿ ಸಿದ್ದ ಖೇಲೋ ಇಂಡಿಯಾ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶಾದ್ಯಂತ 349 ಕ್ರೀಡಾ ಮೂಲ ಸೌಕರ್ಯ ಯೋಜನೆಗಳಿಗೆ ಸುಮಾರು 3176 ಕೋಟಿ ರು. ಹೂಡಿಕೆಯೊಂದಿಗೆ ಅನುಮೋದನೆ ನೀಡಲಾಗಿದೆ.

267 ಕ್ರೀಡಾ ಅಕಾಡೆಮಿಗಳಿಗೆ ಬೆಂಬಲ ನೀಡಲಾಗುತ್ತಿದ್ದು, ಸಾವಿರಾರು ಖೇಲೋ ಇಂಡಿಯಾ ಕ್ರೀಡಾಪಟುಗಳಿಗೆ ತರಬೇತಿ ಸೇರಿದಂತೆ ಅಗತ್ಯ ನೆರವು ಒದಗಿಸಲಾಗುತ್ತಿದೆ. ಕ್ರೀಡೆಯಲ್ಲಿ ಯಶಸ್ಸು ಎಂದರೆ ಕೇವಲ ಪದಕ ಗೆಲ್ಲುವುದಲ್ಲ. ಶಿಸ್ತು, ಸಮರ್ಪಣೆ, ಪರಿಶ್ರಮ, ತಂಡದ ಮನೋಭಾವ, ಸೋಲನ್ನು ಎದುರಿಸುವ ಧೈರ್ಯ ಹಾಗೂ ದೇಶಕ್ಕಾಗಿ ಸೇವೆ ಮಾಡುವ ಮನೋಭಾವ ಕ್ರೀಡೆ ಕಲಿಸುತ್ತದೆ ಎಂದರು.

ಇದನ್ನೂ ಓದಿ: Bengaluru’s New Cricket Stadium: ಬೆಂಗಳೂರಿನಲ್ಲಿ ದೇಶದ 2ನೇ ಅತಿದೊಡ್ಡ ಕ್ರಿಕೆಟ್‌ ಸ್ಟೇಡಿಯಂಗೆ ಶಂಕುಸ್ಥಾಪನೆ ನೆರವೇರಿಸಿದ ಸಿಎಂ

ಭಾರತದ ಕ್ರೀಡಾ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ: ಕಳೆದ 12 ವರ್ಷಗಳಲ್ಲಿ ಭಾರತ ಕ್ರೀಡಾ ಕ್ಷೇತ್ರದಲ್ಲಿ ಮಹತ್ವದ ಪರಿವರ್ತನೆ ಕಂಡಿದೆ. ಹಿಂದೆ ಭಾರತೀಯ ಕ್ರೀಡಾಪಟುಗಳು ವಿಶ್ವಮಟ್ಟದಲ್ಲಿ ಸ್ಪರ್ಧಿಸುವುದೇ ದೊಡ್ಡ ಸಾಧನೆ ಎಂಬ ಮನೋಭಾವವಿತ್ತು. ಆದರೆ ಇಂದು ಪ್ರತಿಭೆ ಬಾಲ್ಯ ದಲ್ಲಿಯೇ ಗುರುತಿಸಿ, ವೈಜ್ಞಾನಿಕ ತರಬೇತಿ ನೀಡಿ ವಿಶ್ವಮಟ್ಟದ ಕ್ರೀಡಾಪಟುಗಳನ್ನಾಗಿ ರೂಪಿಸುವ ಚಿಂತನೆ ಬೆಳೆದಿದೆ. ಟೋಕಿಯೊ ಮತ್ತು ಪ್ಯಾರಿಸ್ ಒಲಿಂಪಿಕ್ಸ ಗಳಲ್ಲಿ ಭಾರತ ಹಲವು ಪದಕ ಗೆದ್ದಿದೆ. ಭಾರತೀಯ ಹಾಕಿ ತಂಡ ಸತತ ಒಲಿಂಪಿಕ್ಸ್‌ಗಳಲ್ಲಿ ಪದಕ ಗೆದ್ದು ತನ್ನ ವೈಭವ ಮರಳಿ ಪಡೆದಿದೆ.

2023ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತ 107 ಪದಕ ಗೆದ್ದು ಹೊಸ ದಾಖಲೆ ನಿರ್ಮಿಸಿದೆ. ಕ್ರೀಡೆ ಇಂದು ರಾಷ್ಟ್ರ ನಿರ್ಮಾಣದ ಪ್ರಮುಖ ಸಾಧನವಾಗಿ ರೂಪುಗೊಂಡಿದೆ ಎಂದರು. ಕ್ರೀಡೆ ಮತ್ತು ಯುವ ಸಬಲೀಕರಣ ಒಂದೇ ನಾಣ್ಯದ ಎರಡು ಮುಖಗಳಾಗಿವೆ. 2023ರಲ್ಲಿ ಆರಂಭವಾದ ಮೇರಾ ಯುವ ಭಾರತ್-ಮೈ ಭಾರತ್ ಯುವಜನರಿಗೆ ಸ್ವಯಂಸೇವೆ, ಅನುಭವಾಧಾರಿತ ಕಲಿಕೆ, ನಾಯಕತ್ವ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಭಾಗವಹಿಸಲು ವೇದಿಕೆ ಒದಗಿಸುತ್ತಿದೆ. ಯುವಕರು ಅಭಿವೃದ್ಧಿಯ ಫಲಾನುಭವಿಗಳಷ್ಟೇ ಅಲ್ಲ, ಅಭಿವೃದ್ಧಿಯ ಪಾಲುದಾರರಾಗಬೇಕು ಎಂದರು.

ಖೇಲೋ ಇಂಡಿಯಾ ಮಿಷನ್‌ಗೆ ಒತ್ತು

2026-27ರ ಕೇಂದ್ರ ಬಜೆಟ್‌ನಲ್ಲಿ ಖೇಲೋ ಇಂಡಿಯಾ ಮಿಷನ್ ಘೋಷಿಸಲಾಗಿದ್ದು, ಕ್ರೀಡಾ ಕ್ಷೇತ್ರದಲ್ಲಿ ದೀರ್ಘಕಾಲೀನ ಹಾಗೂ ಫಲಿತಾಂಶ ಆಧಾರಿತ ವ್ಯವಸ್ಥೆ ನಿರ್ಮಿಸುವುದು ಇದರ ಉದ್ದೇಶವಾಗಿದೆ. ಮೇಕ್ ಇನ್ ಇಂಡಿಯಾ ಅಡಿಯಲ್ಲಿ ದೇಶೀಯವಾಗಿ ಕ್ರೀಡಾ ಸಾಮಗ್ರಿಗಳ ಉತ್ಪಾ ದನೆ ಉತ್ತೇಜಿಸಲು 500 ಕೋಟಿ ರು. ವಿಶೇಷ ಅನುದಾನ ಘೋಷಿಸಲಾಗಿದೆ.

ಕ್ರಿಕೆಟ್, ಬ್ಯಾಡ್ಮಿಂಟನ್, ಅಥ್ಲೆಟಿಕ್ಸ್, ಬಿಲಿಯನ್ಸ್ ಸೇರಿದಂತೆ ಹಲವು ಕ್ರೀಡೆಗಳಲ್ಲಿ ಕರ್ನಾಟಕದ ಕ್ರೀಡಾಪಟುಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಆದರೆ ರಾಜ್ಯದ ಗುರಿ ಕೆಲವೇ ಕೆಲವು ಚಾಂಪಿ ಯನ್‌ಗಳನ್ನು ಸೃಷ್ಟಿಸುವುದಾಗಿರಬಾರದು. ಪ್ರತಿ ಜಿಲ್ಲೆ, ಪ್ರತಿ ವಿಶ್ವವಿದ್ಯಾಲಯ ಹಾಗೂ ಪ್ರತಿಯೊಬ್ಬ ಪ್ರತಿಭಾವಂತ ಯುವಕ-ಯುವತಿಗೂ ಕ್ರೀಡಾ ಕ್ಷೇತ್ರದಲ್ಲಿ ಮುಂದುವರಿಯಲು ಸ್ಪಷ್ಟ ಮಾರ್ಗ ಕಲ್ಪಿಸಬೇಕು ಎಂದು ಸಚಿವ ವಿ.ಸೋಮಣ್ಣ ತಿಳಿಸಿದರು.

image

2036ರ ಒಲಿಂಪಿಕ್ಸ್ ಭಾರತದಲ್ಲಿ ಆಯೋಜಿಸುವ ಮಹತ್ವಾಕಾಂಕ್ಷೆಗೆ ಬಲ ತುಂಬಲು ದೇಶಾದ್ಯಂತ ಬಾಲ ಪ್ರತಿಭೆ ಗುರುತಿಸುವುದು ಅತ್ಯಗತ್ಯ. 5 ರಿಂದ 8 ವರ್ಷದೊಳಗಿನ ಮಕ್ಕಳಲ್ಲಿರುವ ಸುಪ್ತ ಕ್ರೀಡಾ ಪ್ರತಿಭೆ ಗುರುತಿಸಿ, ಅವರಿಗೆ ಸೂಕ್ತ ಮಾರ್ಗದರ್ಶನ, ತರಬೇತಿ ಹಾಗೂ ಆಧುನಿಕ ಸೌಲಭ್ಯ ಒದಗಿಸುವ ಮೂಲಕ ವಿಶ್ವಮಟ್ಟದ ಕ್ರೀಡಾಪಟುಗಳನ್ನಾಗಿ ರೂಪಿಸಬೇಕು. ಇದೇ ಖೇಲೋ ಇಂಡಿಯಾದ ಮುಂದಿನ ಹಂತವಾಗಬೇಕು.

-ವಿ.ಸೋಮಣ್ಣ, ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆಗಳ ರಾಜ್ಯ ಸಚಿವ