ಬೆಂಗಳೂರು: ಅಪೋಲೊ ಹಾಸ್ಪಿಟಲ್ಸ್, ಶೇಷಾದ್ರಿಪುರಂನಲ್ಲಿ ಹಠಾತ್ ಹೃದಯಾಘಾತ ಕ್ಕೀಡಾದ ಯುವಕನಿಗೆ ಅಪೋಲೊನ ಪರಿಣತ ವೈದ್ಯರು ಮತ್ತು ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಕೇವಲ 18 ನಿಮಿಷಗಳಲ್ಲಿ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರೋಗಿಯೊಬ್ಬರು ಆಸ್ಪತ್ರೆಯ ಹೊರರೋಗಿಗಳ ವಿಭಾಗದಲ್ಲಿ ಕುಳಿತಿದ್ದಾಗ ಎಚ್ಚರಿಕೆ ಸೂಚನೆಯಿಲ್ಲದೆ ಹಠಾತ್ ಹೃದಯ ಸ್ತಂಭನಕ್ಕೆ (ಕಾರ್ಡಿಯಾಕ್ ಅರೆಸ್ಟ್) ಗುರಿಯಾದರು. ಘಟನೆಯ ತಾಣದಲ್ಲೇ ಅವರಿಗೆ ತಕ್ಷಣ ಕೃತಕ ಶ್ವಾಸೋಚ್ಛ್ವಾಸ ಮತ್ತು ಹೃದಯಕ್ಕೆ ಅಗತ್ಯ ಚಿಕಿತ್ಸೆ ನೀಡಲು ಆರಂಭಿಸಲಾಯಿತು.
ಡಾ. ಬಿ.ಇ. ಶರವಣನ್, ಡಾ. ಜಯರಂಗನಾಥ್ ಎಂ ಮತ್ತು ಡಾ. ಹಿಮಾಲ್ದೇವ್ ಜಿಜೆ ಅವರ ನೇತೃತ್ವದಲ್ಲಿ ಹೃದಯರೋಗ ವಿಭಾಗದ ತಂಡಗಳು ಸುಸಂಘಟಿತವಾಗಿ ಕಾರ್ಯ ನಿರ್ವಹಿಸಿ, ಹಲವಾರು ಸುತ್ತಿನ CPR ಮತ್ತು ಐದು DC ಷಾಕ್ (ಡಿಫಿಬ್ರಿಲೇಶನ್) ನೀಡಿದವು. ಇದರ ಫಲವಾಗಿ ರೋಗಿಯ ನಾಡಿಯ ಸ್ಪಂದನೆ ಮರಳಿ ಪಡೆಯುವ ಮಹತ್ವದ ಫಲಿತಾಂಶ ದೊರೆಯಿತು.
ಇದನ್ನೂ ಓದಿ: Bangalore News: ಆರಂಭಿಕ ಪತ್ತೆ ಮತ್ತು ತಡೆಗಟ್ಟುವಿಕೆ ಉತ್ತೇಜಿಸಲು ಕ್ಯಾನ್ಸರ್ ಜಾಗೃತಿ ವಾಕಥಾನ್ ಆಯೋಜಿಸಿದ ನ್ಯೂಬರ್ಗ್ ಆನಂದ್
"ಇಂತಹ ಹೆಚ್ಚಿನ ಅಪಾಯದ ಸಂದರ್ಭಗಳಲ್ಲಿ, ರೋಗಿಯನ್ನು ರಕ್ಷಿಸಲು ತಕ್ಷಣದ ಪ್ರತಿಕ್ರಿಯೆ ಮುಖ್ಯವಾಗುತ್ತದೆ. ಬದಲಾಯಿಸಲಾಗದ ಹಾನಿ ಸಂಭವಿಸುವ ಮೊದಲು ಅವನನ್ನು ಸ್ಥಿರಗೊಳಿಸುವ ಅಗತ್ಯವೇ ನಮ್ಮ ಕ್ರಮಗಳಿಗೆ ಮಾರ್ಗದರ್ಶನ ನೀಡಿತು. ಅವನ ವಾಯುಮಾರ್ಗ ಸುರಕ್ಷಿತಗೊಳಿಸುವುದರಿಂದ ಹಿಡಿದು ಸಿಪಿಆರ್ ಚಕ್ರಗಳು ಮತ್ತು ಡಿಫಿಬ್ರಿಲೇಷನ್ ಅನ್ನು ಸಂಯೋಜಿಸುವವರೆಗೆ, ಪ್ರತಿಯೊಂದು ಹೆಜ್ಜೆಯೂ ಅವನಿಗೆ ಹೋರಾಡುವ ಅವಕಾಶವನ್ನು ನೀಡುವುದರ ಮೇಲೆ ಕೇಂದ್ರೀಕೃತವಾಗಿತ್ತು. ಹೃದಯ ಸ್ತಂಭನದಲ್ಲಿ, ಸಂಕ್ಷಿಪ್ತ ವಿಳಂಬವೂ ಸಹ ಫಲಿತಾಂಶವನ್ನು ಬದಲಾಯಿಸಬಹುದು ಎಂಬ ಕಾರಣದಿಂದಾಗಿ ನಮ್ಮ ತಂಡಗಳು ಸೆಕೆಂಡುಗಳಲ್ಲಿ ಪ್ರತಿಕ್ರಿಯಿಸಿದವು" ಎಂದು ತುರ್ತು ವೈದ್ಯಕೀಯ ಸಲಹೆಗಾರ ಡಾ. ಬಿ.ಇ. ಶರವಣನ್ ಮತ್ತು ಅಪೋಲೋ ಆಸ್ಪತ್ರೆಗಳ ಶೇಷಾ ದ್ರಿಪುರಂನ ಕ್ರಿಟಿಕಲ್ ಕೇರ್ನ ಮುಖ್ಯ ಸಲಹೆಗಾರ ಡಾ. ಹಿಮಾಲ್ ದೇವ್ ಜಿಜೆ ಹೇಳಿದರು.
"ಹೃದಯ ಸ್ತಂಭನದ ಸಂದರ್ಭದಲ್ಲಿ ಪ್ರತಿ ಕ್ಷಣವೂ ಮಹತ್ವದ್ದು. ಪುನರುಜ್ಜೀವನದಿಂದ ರಿವ್ಯಾಸ್ಕುಲರೈಸೇಶನ್ ವರೆಗೆ ನಿಖರವಾದ ಸಮನ್ವಯದಿಂದ ನಾವು ಕಾರ್ಯ ನಿರ್ವಹಿಸಿದ್ದೇವೆ. ಆ ವೇಗವಿಲ್ಲದಿದ್ದರೆ, ಮೆದುಳಿನ ಗಾಯ ಅಥವಾ ಮರಣದ ಅಪಾಯ ಹೆಚ್ಚಾಗಿತ್ತು," ಎಂದು ಡಾ. ಜಯರಂಗನಾಥ್ ಎಂ ಹೇಳಿದರು.
ರಕ್ತಪ್ರವಹನ ಸುಧಾರಿಸಿದ ನಂತರ, ರೋಗಿಯನ್ನು ತ್ವರಿತಗತಿಯಲ್ಲಿ ಕ್ಯಾಥ್ ಲ್ಯಾಬ್ಗೆ ಸಾಗಿಸಲಾಯಿತು. ಅಲ್ಲಿ ವೈದ್ಯರು ತುರ್ತು ರಿವ್ಯಾಸ್ಕುಲರೈಸೇಶನ್ ಚಿಕಿತ್ಸೆ ನಡೆಸಿ, ರೋಗಿಯ ಹೃದಯಕ್ಕೆ ರಕ್ತದ ಹರಿವು ಸರಾಗವಾಗುವಂತೆ ಮಾಡಿದರು. ಶಸ್ತ್ರಚಿಕಿತ್ಸೆಯ ನಂತರ, ತಂಡದ ಕಟ್ಟುನಿಟ್ಟಿನ ಮೇಲ್ವಿಚಾರಣೆಯಲ್ಲಿ ರೋಗಿಯನ್ನು ಇಡಲಾಯಿತು.ಅವನು ಮತ್ತೆ ಕಣ್ಣು ತೆರೆಯುವುದೇ ಇಲ್ಲವೇ ಎಂದು ಭಯವಾಗಿತ್ತು. ಆದರೆ ವೈದ್ಯರು ಅವನನ್ನು ಮರಳಿ ಬದುಕಿಸಿದಾಗ, ಅದು ಅವನಿಗೆ ಎರಡನೇ ಜನ್ಮವೇ ಆಯಿತು" ಎಂದು ರೋಗಿಯ ತಾಯಿ ಆ ಸಂಕಟದ ಕ್ಷಣಗಳನ್ನು ನೆನೆದು ಕಣ್ಣೀರು ಸುರಿಸಿದರು.
ಅಪೋಲೊ ಹಾಸ್ಪಿಟಲ್ಸ್ ಶೇಷಾದ್ರಿಪುರಂನ ಯೂನಿಟ್ ಹೆಡ್ ಮತ್ತು ಉಪಾಧ್ಯಕ್ಷರು, ಉದಯ ದವ್ಡಾ ಅವರು, "ಈ ಪ್ರಕರಣವು ನಮ್ಮ ವೈದ್ಯಕೀಯ ಸಾಮರ್ಥ್ಯದ ಜೊತೆಗೆ ಒಂದು ಸಾರ್ವಜನಿಕ ಆರೋಗ್ಯದ ಪಾಠವನ್ನು ಒತ್ತಿಹೇಳುತ್ತದೆ. ತುರಿತಪರಿಸ್ಥಿತಿಯಲ್ಲಿ ವೇಗವಾಗಿ ಪ್ರತಿಕ್ರಯಿಸುವ ಸಿದ್ಧತೆ, ತರಬೇತಿ ಪಡೆದ ತಂಡಗಳು ಮತ್ತು ವ್ಯವಸ್ಥೆಗಳು ಜೀವಳಿಸುತ್ತವೆ," ಎಂದು ಮನವಿ ಮಾಡಿದರು.
ವೈದ್ಯರು ತಂಡವು, ನುರಿತ ಸಿಪಿಆರ್, ತ್ವರಿತ ಸಾಗಣೆ ಮತ್ತು ಕ್ಯಾಥ್ ಲ್ಯಾಬ್ ಸಿದ್ಧತೆಯು ಹೃದಯ ಸ್ತಂಭನದಿಂದ ಬದುಕುಳಿಯುವಲ್ಲಿ ನಿರ್ಣಾಯಕ ಅಂಶಗಳು ಎಂದು ಒತ್ತಿ ಹೇಳಿದರು. ಅನಾಯಾಸ ಹೃದಯಾಘಾತಗಳನ್ನು ತಡೆಗಟ್ಟಲು ಸಕಾಲಿಕ ತಪಾಸಣೆ, ಜೀವನಶೈಲಿ ಮೌಲ್ಯಮಾಪನ ಮತ್ತು ಆರಂಭಿಕ ಲಕ್ಷಣಗಳ ಬಗ್ಗೆ ಜಾಗೃತಿ ಅತ್ಯಗತ್ಯ ವೆಂದೂ ತಿಳಿಸಿದರು.