ಬೆಂಗಳೂರು: ನೀಟ್ ಆಕಾಂಕ್ಷಿ (NEET aspirants) ಪರೀಕ್ಷಾ ಕೇಂದ್ರಕ್ಕೆ (NEET exam centre) ತಡವಾಗಿ ಬರಲು ಕಾಂಗ್ರೆಸ್ ರ‍್ಯಾಲಿ (Congress rally) ಕಾರಣವಲ್ಲ ಎಂಬುದಾಗಿ ಬೆಂಗಳೂರು ಪೊಲೀಸರು ಕಂಡುಕೊಂಡಿದ್ದಾರೆ. ವೈದ್ಯಕೀಯ ಪ್ರವೇಶ ಪರೀಕ್ಷೆಗಾಗಿ ಭಾನುವಾರ ಆಕೆ ಪರೀಕ್ಷಾ ಸಮಯಕ್ಕಿಂತ ಅರ್ಧಗಂಟೆ ಮೊದಲು ಮನೆಯಿಂದ ಹೊರಟಿದ್ದು, ದೀರ್ಘ ದಾರಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಪರೀಕ್ಷಾ ಕೇಂದ್ರ ತಲುಪುವಲ್ಲಿ ವಿಳಂಬವಾಗಿದೆ ಎಂಬುದು ತನಿಖೆ ವೇಳೆ ತಿಳಿದುಬಂದಿದೆ. ಅಲ್ಲದೇ ಅವರು ಹೊರಟಿದ್ದ ರಸ್ತೆಯಲ್ಲಿ ಯಾವುದೇ ಸಂಚಾರ ದಟ್ಟಣೆ ಅಥವಾ ಸಾರ್ವಜನಿಕ ಕಾರ್ಯಕ್ರಮ ಇರಲಿಲ್ಲ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನೀಟ್ ಆಕಾಂಕ್ಷಿ ಪರೀಕ್ಷೆಗೆ ತಡವಾಗಿ ಬರಲು ಕಾಂಗ್ರೆಸ್ ರ‍್ಯಾಲಿ ಕಾರಣ ಎಂದು ಬಿಜೆಪಿ ದೂರಿದ್ದು, ಈ ಕುರಿತು ತನಿಖೆ ನಡೆಸಿರುವ ಪೊಲೀಸರು ಇದೀಗ ಸತ್ಯ ಏನೆಂದು ಪತ್ತೆ ಹಚ್ಚಿದ್ದಾರೆ. ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ತಪ್ಪಿಸಿಕೊಂಡ ನೀಟ್ ಆಕಾಂಕ್ಷಿಯು ಬಂದಿದ್ದ ದಾರಿಯಲ್ಲಿ ಯಾವುದೇ ಸಂಚಾರ ದಟ್ಟಣೆ ಅಥವಾ ಸಾರ್ವಜನಿಕ ಕಾರ್ಯಕ್ರಮಗಳು ಇರಲಿಲ್ಲ. ಆಕೆ ಪರೀಕ್ಷೆ ಸಮಯಕ್ಕಿಂತ ಕೇವಲ ಅರ್ಧ ಗಂಟೆ ಮೊದಲು ಪರೀಕ್ಷಾ ಕೇಂದ್ರಕ್ಕೆ ಹೊರಟಿದ್ದು, ದೀರ್ಘ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದರು ಎಂದು ತಿಳಿಸಿದ್ದಾರೆ.
ಬೆಂಗಳೂರು ಟ್ರಾಫಿಕ್ ಪೊಲೀಸ್ ಎಕ್ಸ್ ಪೋಸ್ಟ್:
ಈ ಕುರಿತು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ. ಅಭ್ಯರ್ಥಿ ಮತ್ತು ಪೋಷಕರನ್ನು ವಿಚಾರಣೆಗೂ ಒಳಪಡಿಸಲಾಗಿದೆ. ಮಾರ್ಗ ವಿಶ್ಲೇಷಣೆಯನ್ನು ನಡೆಸಿದ್ದು, ಅಭ್ಯರ್ಥಿಯು ಪರೀಕ್ಷಾ ಕೇಂದ್ರಕ್ಕೆ ತಡವಾಗಿ ಬರಲು ಸಂಚಾರ ದಟ್ಟಣೆ ಕಾರಣವಲ್ಲ ಎಂಬುದನ್ನು ಕಂಡುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ಶೌಚಾಲಯದಲ್ಲಿ ಮೊಬೈಲ್ ಅಡಗಿಸಿಟ್ಟಿದ್ದ ನೀಟ್ ಆಕಾಂಕ್ಷಿ; ಸಿಕ್ಕಿ ಬಿದ್ದಿದ್ದು ಹೇಗೆ?
ಪರೀಕ್ಷಾ ಸಮಯಕ್ಕಿಂತ ಕೇವಲ 33 ನಿಮಿಷಗಳ ಮೊದಲು ಮನೆಯಿಂದ ಹೊರಟ ಆಕೆ ದೀರ್ಘ ಪ್ರಯಾಣದ ಮಾರ್ಗವನ್ನು ಆಯ್ಕೆ ಮಾಡಿಕೊಂಡಿರುವುದು ಖಚಿತವಾಗಿದೆ. ಅಭ್ಯರ್ಥಿಯು ಮಧ್ಯಾಹ್ನ 12:57 ಕ್ಕೆ ಮನೆಯಿಂದ ಹೊರಟು 1.33ಕ್ಕೆ ಪರೀಕ್ಷಾ ಕೇಂದ್ರ ತಲುಪಿದ್ದಾರೆ. ಪರೀಕ್ಷೆಯು ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾಗಿದೆ.
ಸಿಸಿಟಿವಿ ದೃಶ್ಯಗಳಲ್ಲಿ ಆತ ಪರೀಕ್ಷಾ ಕೇಂದ್ರಕ್ಕೆ ಬರಲು ಕಡಿಮೆ ದೂರದ ಮಾರ್ಗವಿದ್ದರೂ ದೀರ್ಘ ಪ್ರಯಾಣದ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅಲ್ಲದೇ ಅವನು ಬಂದ ದಾರಿಯಲ್ಲಿ ಯಾವುದೇ ವಾಹನ ದಟ್ಟಣೆ, ಜನ ದಟ್ಟಣೆ ಇರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಕಳೆದ ಮೇ ತಿಂಗಳಲ್ಲಿ ನಡೆದ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಕಾರಣದಿಂದ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಇದರ ಬಳಿಕ ಭಾನುವಾರ ದೇಶಾದ್ಯಂತ ಮರುಪರೀಕ್ಷೆಯನ್ನು ನಡೆಸಲಾಗಿದೆ. ದೇಶಾದ್ಯಂತ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೀಟ್ ಯುಜಿ ಮರು ಪರೀಕ್ಷೆಗೆ ಹಾಜರಾಗಿದ್ದರು.
ಬೆಂಗಳೂರಿನ ಪರೀಕ್ಷಾ ಕೇಂದ್ರದ ಹೊರಗೆ ಗಡಿಯಾರವು ಕಟ್-ಆಫ್ ಸಮಯಕ್ಕಿಂತ ಮೊದಲೇ ಗೇಟ್‌ಗಳು ಮುಚ್ಚಿದ್ದರಿಂದ ಮೂವರು ವಿದ್ಯಾರ್ಥಿಗಳು ಬಂದರು ಕೂಡ ಅವರನ್ನು ಒಳಗೆ ಬಿಡಲಿಲ್ಲ. ಇದರಿಂದ ನಿರಾಶೆಗೊಂಡ ಅವರ ಪೋಷಕರು ಟ್ರಾಫಿಕ್ ಜಾಮ್‌ನಿಂದಾಗಿ ತಡವಾಗಿ ಬಂದಿದ್ದೇವೆ ಎಂದು ದೂರಿದ್ದರು.
ಬಿಗಿ ಭದ್ರತೆಯ ನಡುವೆ ನೀಟ್ ಪರೀಕ್ಷೆ ಬರೆದ 20 ಲಕ್ಷಕ್ಕೂ ಹೆಚ್ಚು ಆಕಾಂಕ್ಷಿಗಳು
ಅಭ್ಯರ್ಥಿಗಳಲ್ಲಿ ಒಬ್ಬರ ತಂದೆ ಕೃಷ್ಣಮೂರ್ತಿ ಎಂಬವರು ಕಾಂಗ್ರೆಸ್ ರ‍್ಯಾಲಿಯಿಂದ ಪರೀಕ್ಷಾ ಕೇಂದ್ರವನ್ನು ತಲುಪಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದರು. ಮಾಧ್ಯಮವೊಂದರ ಜೊತೆ ಮಾತನಾಡಿದ ಅವರು, ಸಾಮಾನ್ಯವಾಗಿ 20 ನಿಮಿಷಗಳನ್ನು ತೆಗೆದುಕೊಳ್ಳುವ 7 ಕಿಮೀ ದೂರವು ನಿನ್ನೆ 35 ನಿಮಿಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿತು. ಒಬ್ಬ ತಂದೆಯಾಗಿ ನಾನು ಭಯಭೀತನಾದೆ. ಫುಟ್‌ಪಾತ್‌ನಲ್ಲಿ ವಾಹನ ಚಲಾಯಿಸಿಕೊಂಡು ಬರಬೇಕಾಯಿತು. ಪೊಲೀಸರು ನಮ್ಮನ್ನು ಗದರಿಸಿದರು. ಆದರೆ ಬೇರೆ ದಾರಿ ಇರಲಿಲ್ಲ. ರಾಜಕೀಯ ರ‍್ಯಾಲಿಗಳು ಬೆಂಗಳೂರಿನಲ್ಲಿ ಅಲ್ಲ ಹೊರವಲಯದಲ್ಲಿ ನಡೆಯಬೇಕು ಎಂದು ಹೇಳಿದ್ದರು. ಇದು ರಾಜಕೀಯ ವಾದವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ಇದೀಗ ಪೊಲೀಸರು ತನಿಖೆಯನ್ನು ನಡೆಸಿ ಸತ್ಯವೇನೆಂಬುದನ್ನು ಬಹಿರಂಗ ಪಡಿಸಿದ್ದಾರೆ.