ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

'ಪ್ರಿವೆಂಟಿವ್ ಜೆನೊಮಿಕ್ಸ್ ಕ್ಲಿನಿಕ್' ಪ್ರಾರಂಭಿಸಿದ ಫೋರ್ಟಿಸ್ ಆಸ್ಪತ್ರೆ ಬೆಂಗಳೂರು; ನಿಖರ ವೈದ್ಯಕೀಯ ಪದ್ಧತಿಯಲ್ಲಿ ಹೊಸ ಅಧ್ಯಾಯ ಆರಂಭ

ಪ್ರಿವೆಂಟಿವ್ ಜೆನೊಮಿಕ್ಸ್ ಕ್ಲಿನಿಕ್ (ತಡೆಗಟ್ಟುವ ತಳಿವಿಜ್ಞಾನ ಚಿಕಿತ್ಸಾಲಯ) ಸುಧಾರಿತ ಆನುವಂಶಿಕ ಪರೀಕ್ಷೆ, ತಜ್ಞರ ಸಮಾಲೋಚನೆ ಮತ್ತು ವೈಯಕ್ತಿಕ ಚಿಕಿತ್ಸಾ ಯೋಜನೆಗಳನ್ನು ನೀಡುವ ಗುರಿಯನ್ನು ಹೊಂದಿದೆ. ಇದು ವ್ಯಕ್ತಿಗಳು ತಮ್ಮ ಆನುವಂಶಿಕ ಗುಣಲಕ್ಷಣಗಳ ಆಧಾರದ ಮೇಲೆ ಆರೋಗ್ಯ ರಕ್ಷಣೆಯ ಕುರಿತು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.

ವಿಶ್ವ ಡಿಎನ್‌ಎ ದಿನದ ಅಂಗವಾಗಿ ಬೆಂಗಳೂರಿನ ಐಐಎಸ್‌ಸಿ ಮಾಜಿ ನಿರ್ದೇಶಕ, ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಪ್ರೊ. ಪದ್ಮನಾಭನ್ ಬಲರಾಮ್ ಅವರಿಂದ ಕ್ಲಿನಿಕ್ ಉದ್ಘಾಟನೆ

ಬೆಂಗಳೂರು: ಪ್ರತಿಷ್ಠಿತ ಫೋರ್ಟಿಸ್ ಆಸ್ಪತ್ರೆ ಬೆಂಗಳೂರು, ರೋಗಿ-ಕೇಂದ್ರಿತ, ತಡೆಗಟ್ಟುವ ಮತ್ತು ಅತ್ಯಾಧುನಿಕ ನಿಖರ ಚಿಕಿತ್ಸೆಯನ್ನು ಒದಗಿಸುವ ಬದ್ಧತೆಯ ಭಾಗವಾಗಿ ಇಂದು ತನ್ನ ಬೆಂಗಳೂರಿನ ಎಲ್ಲಾ ಆಸ್ಪತ್ರೆಗಳಲ್ಲಿ 'ಪ್ರಿವೆಂಟಿವ್ ಜೆನೊಮಿಕ್ಸ್ ಕ್ಲಿನಿಕ್' ಅನ್ನು ಪ್ರಾರಂಭಿಸಿದೆ. ಬೆಂಗಳೂರಿನ ಐಐಎಸ್‌ಸಿ ಮಾಜಿ ನಿರ್ದೇಶಕ ಪ್ರೊ. ಪದ್ಮನಾಭನ್ ಬಲರಾಮ್ ಅವರು ಈ ಕ್ಲಿನಿಕ್ ಅನ್ನು ಉದ್ಘಾ ಟಿಸಿದರು. ಈ ಸಂದರ್ಭದಲ್ಲಿ ಹಿರಿಯ ವೈದ್ಯರು, ಆಸ್ಪತ್ರೆಯ ಪ್ರಮುಖರು ಮತ್ತು ಗಣ್ಯ ಅತಿಥಿಗಳು ಉಪಸ್ಥಿತರಿದ್ದರು.

ಈ ಪ್ರಿವೆಂಟಿವ್ ಜೆನೊಮಿಕ್ಸ್ ಕ್ಲಿನಿಕ್ (ತಡೆಗಟ್ಟುವ ತಳಿವಿಜ್ಞಾನ ಚಿಕಿತ್ಸಾಲಯ) ಸುಧಾರಿತ ಆನುವಂಶಿಕ ಪರೀಕ್ಷೆ, ತಜ್ಞರ ಸಮಾಲೋಚನೆ ಮತ್ತು ವೈಯಕ್ತಿಕ ಚಿಕಿತ್ಸಾ ಯೋಜನೆಗಳನ್ನು ನೀಡುವ ಗುರಿಯನ್ನು ಹೊಂದಿದೆ. ಇದು ವ್ಯಕ್ತಿಗಳು ತಮ್ಮ ಆನುವಂಶಿಕ ಗುಣಲಕ್ಷಣಗಳ ಆಧಾರದ ಮೇಲೆ ಆರೋಗ್ಯ ರಕ್ಷಣೆಯ ಕುರಿತು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ತಳಿವಿಜ್ಞಾನದ ಬಳಕೆಯ ಮೂಲಕ, ಫೋರ್ಟಿಸ್ ಆಸ್ಪತ್ರೆಯ ವೈದ್ಯರು ಅನುವಂಶಿಕ ವಾಗಿ ಬರುವ ಸಮಸ್ಯೆಗಳನ್ನು ಮೊದಲೇ ಪತ್ತೆಹಚ್ಚಲು, ಸಂಕೀರ್ಣ ಕಾಯಿಲೆಗಳ ನಿಖರ ರೋಗ ನಿರ್ಣಯ ಮಾಡಲು ಮತ್ತು ಹೆಚ್ಚು ನಿಖರ ಹಾಗೂ ಪರಿಣಾಮಕಾರಿಯಾದ ಚಿಕಿತ್ಸಾ ವಿಧಾನ ಗಳನ್ನು ರೂಪಿಸಲು ಶ್ರಮಿಸಲಿದ್ದಾರೆ.

ಇದನ್ನೂ ಓದಿ: Summer Health Tips: ಬಿಸಿಲಿಗೆ ಸ್ಮೃತಿ ತಪ್ಪದಿರಲಿ; ಆರೋಗ್ಯದ ಬಗ್ಗೆ ಕಾಳಜಿ ಇರಲಿ

ಈ ಕ್ಲಿನಿಕ್ ಈ ಕೆಳಗಿನ ವ್ಯಾಪಕ ಶ್ರೇಣಿಯ ಸೇವೆಗಳನ್ನು ಒದಗಿಸುತ್ತದೆ:

  • ಸಂಪೂರ್ಣ ಜಿನೋಮ್ ಮತ್ತು ಎಕ್ಸೋಮ್ ಸೀಕ್ವೆನ್ಸಿಂಗ್: ಅಪರೂಪದ ಮತ್ತು ಪತ್ತೆಹಚ್ಚಲಾಗದ ಕಾಯಿಲೆಗಳ ರೋಗನಿರ್ಣಯಕ್ಕಾಗಿ ತೀವ್ರ ರೀತಿಯ ವಿಶ್ಲೇಷಣೆ.
  • ಅನುವಂಶಿಕ ಕ್ಯಾನ್ಸರ್ ತಪಾಸಣೆ: ಸ್ತನ, ಅಂಡಾಶಯ, ಕೊಲೊರೆಕ್ಟಲ್ ಮತ್ತು ಇತರ ಕ್ಯಾನ್ಸರ್‌ ಗಳ ಅನುವಂಶಿಕ ಅಪಾಯವನ್ನು ಮೌಲ್ಯಮಾಪನ ಮಾಡುವುದು.
  • ಫಾರ್ಮಾಕೊಜೆನೊಮಿಕ್ಸ್: ಚಿಕಿತ್ಸೆಯ ಪರಿಣಾಮಕಾರಿತ್ವವನ್ನು ಹೆಚ್ಚಿಸಲು ವ್ಯಕ್ತಿಗೆ ತಕ್ಕಂತೆ ಔಷಧದ ಪ್ರತಿಕ್ರಿಯೆಯನ್ನು ಪರೀಕ್ಷಿಸುವುದು.
  • ಜನನ ಪೂರ್ವ ಮತ್ತು ನವಜಾತ ಶಿಶು ತಪಾಸಣೆ: ಗರ್ಭಾವಸ್ಥೆಯಲ್ಲಿ ಮತ್ತು ಶಿಶುಗಳಲ್ಲಿ ಇರಬಹುದಾದ ಆನುವಂಶಿಕ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲಿ ಪತ್ತೆಹಚ್ಚುವಿಕೆ.
  • ಕಾರ್ಡಿಯೋಜೆನೊಮಿಕ್ಸ್: ಹಠಾತ್ ಹೃದಯಾಘಾತ, ಅನಿರೀಕ್ಷಿತ ಹೃದಯ ವೈಫಲ್ಯ ಅಥವಾ ಜನ್ಮಜಾತ ಹೃದಯ ಕಾಯಿಲೆಯ ಇತಿಹಾಸ ಹೊಂದಿರುವ ಕುಟುಂಬಗಳಿಗೆ ವಿಶೇಷ ಆನುವಂಶಿಕ ಪರೀಕ್ಷೆ.
  • ನ್ಯೂರೋಜೆನೊಮಿಕ್ಸ್: ಸಂಕೀರ್ಣ ನರವೈಜ್ಞಾನಿಕ ಅಸ್ವಸ್ಥತೆ ಹೊಂದಿರುವ ರೋಗಿಗಳಿಗೆ ವಿಶೇಷ ಪರೀಕ್ಷೆ. ಇದು ಅಪಸ್ಮಾರ, ಪಾರ್ಕಿನ್ಸನ್ ಮತ್ತು ಅಪರೂಪದ ನರವೈಜ್ಞಾನಿಕ ಬೆಳವಣಿಗೆಯ ಲಕ್ಷಣಗಳ ರೋಗನಿರ್ಣಯ ಮತ್ತು ಚಿಕಿತ್ಸೆಯನ್ನು ಸುಧಾರಿಸಲು ತಳಿ ಆಧಾರಿತ ಒಳನೋಟಗಳನ್ನು ನೀಡುತ್ತದೆ.
  • ಆರ್ಥೋಜೆನೊಮಿಕ್ಸ್: ಅಸ್ಥಿಸಂಧಿವಾತ (ಆಸ್ಟಿಯೋಆರ್ಥರೈಟಿಸ್), ಆಸ್ಟಿಯೋಫೊರೋಸಿಸ್ ಮತ್ತು ಸಾರ್ಕೋಮಾದಂತಹ ಪರಿಸ್ಥಿತಿಗಳಿಗೆ ವೈಯಕ್ತಿಕ ರೋಗನಿರ್ಣಯ, ಅಪಾಯದ ಮೌಲ್ಯಮಾಪನ ಮತ್ತು ನಿಖರ ಗುರಿ ಆಧಾರಿತ ಚಿಕಿತ್ಸೆಗಳು.
  • ಆನುವಂಶಿಕ ಸಮಾಲೋಚನೆ (ಜೆನೆಟಿಕ್ ಕೌನ್ಸೆಲಿಂಗ್): ಪರೀಕ್ಷಾ ಫಲಿತಾಂಶಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ರೋಗಿಗಳಿಗೆ ಮತ್ತು ಕುಟುಂಬಗಳಿಗೆ ತಜ್ಞರ ಮಾರ್ಗದರ್ಶನ.
  • ಕ್ಯಾನ್ಸರ್ ನಿರ್ದೇಶಿತ ಜಿನೋಮಿಕ್ ಪರೀಕ್ಷೆ: ಹೆಮಟಾಲಜಿ (ರಕ್ತ ಸಂಬಂಧಿತ) ಮತ್ತು ಆಂಕಾಲಜಿ ಪ್ರಕರಣಗಳಿಗಾಗಿ ಸುಧಾರಿತ ರೋಗನಿರ್ಣಯ ವ್ಯವಸ್ಥೆ.
Fortis 2

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಬೆಂಗಳೂರಿನ ಐಐಎಸ್‌ಸಿ ಮಾಜಿ ನಿರ್ದೇಶಕ, ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಪ್ರೊ. ಪದ್ಮನಾಭನ್ ಬಲರಾಮ್ ಅವರು , “ಈ ಪ್ರಮುಖ ಯೋಜನೆ ಹಮ್ಮಿಕೊಂಡಿರುವುದಕ್ಕೆ ನಾನು ಫೋರ್ಟಿಸ್ ಆಸ್ಪತ್ರೆಯನ್ನು ಅಭಿನಂದಿಸು ತ್ತೇನೆ. ರೋಗದ ಕಾರ್ಯವಿಧಾನಗಳು ಮತ್ತು ವೈಯಕ್ತಿಕ ಅಪಾಯದ ವಿವರಗಳ ಬಗ್ಗೆ ಆಳವಾದ ಒಳನೋಟಗಳನ್ನು ನೀಡುವ ಮೂಲಕ ತಳಿವಿಜ್ಞಾನವು ಭವಿಷ್ಯದ ಆರೋಗ್ಯ ರಕ್ಷಣೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಸುಧಾರಿತ ವಿಜ್ಞಾನವನ್ನು ವೈದ್ಯಕೀಯ ಚಿಕಿತ್ಸಾ ಪದ್ಧತಿಯೊಂದಿಗೆ ಬೆಸೆಯಲು ಇಂತಹ ಯೋಜನೆಗಳು ಅತ್ಯಗತ್ಯವಾಗಿದ್ದು, ಆರೋಗ್ಯ ಸೇವೆಯನ್ನು ಹೆಚ್ಚು ತಡೆಗಟ್ಟುವ ಮತ್ತು ವೈಯಕ್ತಿಕಗೊಳಿಸಿದ ವಿಧಾನದತ್ತ ಕೊಂಡೊಯ್ಯಲು ಸಹಾಯ ಮಾಡುತ್ತವೆ” ಎಂದು ಹೇಳಿದರು.

ಫೋರ್ಟಿಸ್ ಆಸ್ಪತ್ರೆ ಬೆಂಗಳೂರಿನ ಮೆಡಿಕಲ್ ಆಂಕಾಲಜಿ ಮತ್ತು ಹೆಮಟೊ-ಆಂಕಾಲಜಿ ವಿಭಾಗದ ಪ್ರಧಾನ ನಿರ್ದೇಶಕಿ ಡಾ. ನೀತಿ ಕೃಷ್ಣ ರೈಜಾದಾ ಅವರು ಮಾತನಾಡಿ, “ಅನೇಕ ಗಂಭೀರ ಕಾಯಿಲೆ ಗಳು, ವಿಶೇಷವಾಗಿ ಕ್ಯಾನ್ಸರ್, ಆನುವಂಶಿಕ ಸಂಬಂಧವನ್ನು ಹೊಂದಿರುತ್ತವೆ. ಇವುಗಳನ್ನು ಮೊದಲೇ ಗುರುತಿಸುವ ಮೂಲಕ ಕಾಯಿಲೆ ಬರದಂತೆ ತಡೆಯಬಹುದು ಮತ್ತು ಮರಣ ಉಂಟಾ ಗುವ ಅಪಾಯವನ್ನು ತಪ್ಪಿಸಬಹುದು. ಪ್ರಿವೆಂಟಿವ್ ಜೆನೊಮಿಕ್ಸ್ ಕ್ಲಿನಿಕ್ ಮೂಲಕ, ರೋಗಿಗಳಿಗೆ ಅವರ ಆರೋಗ್ಯದ ಅಪಾಯಗಳ ಬಗ್ಗೆ ತಿಳುವಳಿಕೆ ನೀಡುವುದು ಮತ್ತು ಸಮಯೋಚಿತವಾಗಿ ಚಿಕಿತ್ಸೆ ಲಭ್ಯವಾಗುವಂತೆ ಮಾಡುವುದು ನಮ್ಮ ಗುರಿಯಾಗಿದೆ. ಇದು ಚಿಕಿತ್ಸೆಯ ಫಲಿತಾಂಶಗಳನ್ನು ಸುಧಾರಿಸಲು ಮತ್ತು ತಡೆಗಟ್ಟುವ ಚಿಕಿತ್ಸೆ ಒದಗಿಸಲು ಸಹಾಯ ಮಾಡುತ್ತದೆ,” ಎಂದು ತಿಳಿಸಿದರು.

ಫೋರ್ಟಿಸ್ ಆಸ್ಪತ್ರೆ ಬೆಂಗಳೂರಿನ ಕಾರ್ಡಿಯಾಕ್ ಸೈನ್ಸಸ್ ವಿಭಾಗದ ಅಧ್ಯಕ್ಷರಾದ ಡಾ.ವಿವೇಕ್ ಜವಳಿ ಅವರು ಮಾತನಾಡಿ, “ತಳಿವಿಜ್ಞಾನವು ನಾವು ಕಾಯಿಲೆಗಳನ್ನು ನಿರ್ವಹಿಸುವ ವಿಧಾನವನ್ನೇ ಬದಲಿಸುತ್ತಿದೆ. ಇದು ಎಲ್ಲರಿಗೂ ಒಂದೇ ರೀತಿಯ ಚಿಕಿತ್ಸೆ ನೀಡುವ ಬದಲು, ಪ್ರತಿಯೊಬ್ಬರಿಗೂ ವೈಯಕ್ತಿಕ ಮತ್ತು ನಿಖರವಾದ ಚಿಕಿತ್ಸೆಯನ್ನು ನೀಡಲು ಅನುವು ಮಾಡಿಕೊಡುತ್ತಿದೆ. ಈ ಕ್ಲಿನಿಕ್‌ ನಲ್ಲಿ ನಾವು ವಿವಿಧ ವಿಭಾಗಗಳನ್ನು ಒಂದೆಡೆ ಸೇರಿಸುವ ಮೂಲಕ, ಉತ್ತಮ ರೋಗನಿರ್ಣಯ ಸಾಧ್ಯವಾಗಲು ಮತ್ತು ಚಿಕಿತ್ಸೆಯ ಫಲಿತಾಂಶಗಳನ್ನು ಉತ್ತಮಗೊಳಿಸಲು ಆನುವಂಶಿಕ ಒಳನೋಟಗಳನ್ನು ಬಳಸಿಕೊಳ್ಳುತ್ತಿದ್ದೇವೆ,” ಎಂದು ಹೇಳಿದರು.

ಫೋರ್ಟಿಸ್ ಆಸ್ಪತ್ರೆ ಬೆಂಗಳೂರಿನ ಉಪಾಧ್ಯಕ್ಷ ಮತ್ತು ಬಿಸಿನೆಸ್ ಹೆಡ್ ಡಾ.ಅನಂತ್ ರಾವ್ ಅವರು ಮಾತನಾಡಿ, “ತಡೆಗಟ್ಟುವ ಆರೋಗ್ಯ ರಕ್ಷಣೆಯ ಬಗ್ಗೆ ಜಾಗೃತಿ ಹೆಚ್ಚುತ್ತಿರುವಂತೆ, ವ್ಯಕ್ತಿಗಳು ತಮ್ಮ ಆರೋಗ್ಯದ ಅಪಾಯಗಳನ್ನು ಮೊದಲೇ ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ಸುಧಾರಿತ ರೋಗನಿರ್ಣಯದ ಅಗತ್ಯವೂ ಹೆಚ್ಚುತ್ತಿದೆ. ಸುಲಭವಾಗಿ ಲಭ್ಯವಾಗುವ, ರೋಗಿ-ಕೇಂದ್ರಿತ ಮತ್ತು ಭವಿಷ್ಯಕ್ಕೆ ಸಜ್ಜಾದ ಆರೋಗ್ಯ ಸೇವೆಯನ್ನು ಒದಗಿಸುವ ನಮ್ಮ ಬದ್ಧತೆಯನ್ನು ಈ ವಿಶೇಷ ಚಿಕಿತ್ಸಾಲಯವು ಮತ್ತಷ್ಟು ಬಲಪಡಿಸುತ್ತದೆ,” ಎಂದು ತಿಳಿಸಿದರು.