ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಗ್ಯಾಲರಿ ಜಿ: 'ಬಿಯಾಂಡ್ ದಿ ಫ್ಯಾಮಿಲಿಯರ್' ಕಲಾ ಪ್ರದರ್ಶನ – ದಕ್ಷಿಣ ಭಾರತದ ಕಲಾ ವೈವಿಧ್ಯದ ಅನಾವರಣ

ಪ್ರತಿಷ್ಠಿತ 'ಗ್ಯಾಲರಿ ಜಿ'ಯಲ್ಲಿ ದಕ್ಷಿಣ ಭಾರತದ 16 ಸಮಕಾಲೀನ ಕಲಾವಿದರ 47 ವಿಶಿಷ್ಟ ಕಲಾಕೃತಿ ಗಳನ್ನೊಳಗೊಂಡ 'ಬಿಯಾಂಡ್ ದಿ ಫ್ಯಾಮಿಲಿಯರ್: ಬಿಟ್ವೀನ್ ರಿಯಾಲಿಟಿ, ಅಬ್‌ಸ್ಟ್ರಾಕ್ಷನ್ ಅಂಡ್ ಇಮ್ಯಾಜಿನೇಷನ್' ಗುಂಪು ಕಲಾ ಪ್ರದರ್ಶನವನ್ನು ಆಯೋಜಿಸ ಲಾಗಿದೆ. ನವೆಂಬರ್ 30ರವರೆಗೆ ಈ ಪ್ರದರ್ಶನ ಕಲಾಭಿಮಾನಿಗಳಿಗೆ ಮುಕ್ತವಾಗಿರಲಿದೆ.

ಬೆಂಗಳೂರು: 'ಗ್ಯಾಲರಿ ಜಿ'ಯಲ್ಲಿ ದಕ್ಷಿಣ ಭಾರತದ 16 ಸಮಕಾಲೀನ ಕಲಾವಿದರ 47 ವಿಶಿಷ್ಟ ಕಲಾಕೃತಿಗಳನ್ನೊಳಗೊಂಡ 'ಬಿಯಾಂಡ್ ದಿ ಫ್ಯಾಮಿಲಿಯರ್: ಬಿಟ್ವೀನ್ ರಿಯಾಲಿಟಿ, ಅಬ್‌ಸ್ಟ್ರಾಕ್ಷನ್ ಅಂಡ್ ಇಮ್ಯಾಜಿನೇಷನ್' ಗುಂಪು ಕಲಾ ಪ್ರದರ್ಶನವನ್ನು ಆಯೋಜಿಸಲಾಗಿದೆ. ನವೆಂಬರ್ 30ರವರೆಗೆ ಈ ಪ್ರದರ್ಶನ ಕಲಾಭಿಮಾನಿಗಳಿಗೆ ಮುಕ್ತವಾಗಿರಲಿದೆ.

ಇದರ ಬೆನ್ನಲ್ಲೇ, ದಸರಾ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ಮದ್ರಾಸ್ ಆಧುನಿಕತಾವಾದಿ ಚಳವಳಿಯ (Madras Modernist Movement) ಒಂಬತ್ತು ಅಗ್ರಗಣ್ಯ ಕಲಾವಿದರ 'ಮದ್ರಾಸ್ ಮಾಡರ್ನ್ಸ್' ವಿಶೇಷ ಪ್ರದರ್ಶನವೂ ನಡೆಯುತ್ತಿದ್ದು, ಇದು ಅ.24ರವರೆಗೆ ವೀಕ್ಷಣೆಗೆ ಲಭ್ಯವಿರಲಿದೆ.

ಪ್ರದರ್ಶನದ ವೈಶಿಷ್ಟ್ಯಗಳು: 'ಬಿಯಾಂಡ್ ದಿ ಫ್ಯಾಮಿಲಿಯರ್' ಕಲಾ ಪ್ರದರ್ಶನವು ವಾಸ್ತವ, ಅಮೂರ್ತತೆ ಹಾಗೂ ಕಲ್ಪನೆಗಳ ನಡುವಿನ ಸೂಕ್ಷ್ಮ ಸಂಘರ್ಷ ಮತ್ತು ಸಮನ್ವಯವನ್ನು ಅದ್ಭುತ ವಾಗಿ ತೆರೆದಿಡುತ್ತದೆ. ನೈಜತೆಯ ಭಾವಚಿತ್ರಗಳಿಂದ ಹಿಡಿದು ಅಮೂರ್ತ ಕಲೆಯವರೆಗೆ ವಿಸ್ತರಿಸಿ ರುವ ಈ ಪ್ರದರ್ಶನದಲ್ಲಿ ಕ್ಯಾನ್ವಾಸ್, ಕಾಗದ, ಜೇಡಿಮಣ್ಣು, ತಾಮ್ರ ಹಾಗೂ ನೈಸರ್ಗಿಕ ಬಣ್ಣಗಳನ್ನು ಬಳಸಿ ರಚಿಸಲಾದ ಅತ್ಯಾಕರ್ಷಕ ಕಲಾಕೃತಿಗಳಿವೆ.

ಇದನ್ನೂ ಓದಿ: Vishweshwar Bhat Column: ʼನ್ಯೂಯಾರ್ಕರ್ʼ ಫ್ಯಾಕ್ಟ್‌ ಚೆಕಿಂಗ್: ಪತ್ರಿಕೋದ್ಯಮದ ಆತ್ಮಸಾಕ್ಷಿ

ದೇವಾಲಯಗಳ ನಗರಿ, ಗ್ರಾಮೀಣ ಬದುಕು, ಬಾಲ್ಯದ ಸುಮಧುರ ನೆನಪುಗಳು, ಪೌರಾಣಿಕ ಕಥಾನಕಗಳು, ಸಾಗರ ಜೀವ ಸಂಕುಲಹಾಗೂ ಶಾರೀರಿಕ ರಾಜಕಾರಣ (Politics of the body) ಗಹನವಾದ ವಿಷಯಗಳನ್ನು ಕಲಾವಿದರು ತಮ್ಮ ಕುಂಚದ ಮೂಲಕ ಜೀವಂತವಾಗಿಸಿದ್ದಾರೆ. ದಕ್ಷಿಣ ಭಾರತದ ವಿಶಿಷ್ಟ ದೃಶ್ಯ ಪರಂಪರೆಯನ್ನು ಸಮಕಾಲೀನ ದೃಷ್ಟಿಕೋನದಲ್ಲಿ ಹೇಗೆ ಮರು-ವಿಶ್ಲೇಷಿಸಬಹುದು ಎಂಬುದಕ್ಕೆ ಈ ಕಲಾಕೃತಿಗಳು ಸಾಕ್ಷಿಯಾಗಿವೆ.

ತಂತ್ರಜ್ಞಾನದ ಸ್ಪರ್ಶ: ಕಲಾವಿದ ಹಾಗೂ ಶಿಕ್ಷಣ ತಜ್ಞ ಎಸ್. ವಿಜಯರಾಘವನ್ ಅವರು ಈ ಪ್ರದರ್ಶನವನ್ನು ಅಚ್ಚುಕಟ್ಟಾಗಿ ಸಂಯೋಜಿಸಿದ್ದಾರೆ. ಪ್ರದರ್ಶನದ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ, ಪ್ರತಿಯೊಂದು ಕಲಾಕೃತಿಗೂ ಅಳವಡಿಸಲಾದ ಕ್ಯೂಆರ್ ಕೋಡ್. ಕಲಾಭಿ ಮಾನಿಗಳು ಇದನ್ನು ಸ್ಕ್ಯಾನ್ ಮಾಡುವ ಮೂಲಕ ಆಯಾ ಕಲಾಕೃತಿಯ ಹಿನ್ನೆಲೆ ಹಾಗೂ ಕಲಾವಿದರ ಸಂಪೂರ್ಣ ಮಾಹಿತಿಯನ್ನು ಮೂರು ಭಾಷೆಗಳಲ್ಲಿ ಆಡಿಯೋ ಮೂಲಕ ಆಲಿಸಬ ಹುದು.

ವಿನೂತನ ಪ್ರದರ್ಶನದ ಕುರಿತು ಹರ್ಷ ವ್ಯಕ್ತಪಡಿಸಿದ ಗ್ಯಾಲರಿ ಜಿ-ಯ ಸಂಸ್ಥಾಪಕಿ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಗೀತಾಂಜಲಿ ಮೈನಿ, "ಈ ವಿಶೇಷ ಗುಂಪು ಕಲಾ ಪ್ರದರ್ಶನವು ಸೃಜನ ಶೀಲತೆಯ ವಿಕಸನಕ್ಕೆ ದಾರಿಮಾಡಿಕೊಡುವ ಆಧುನಿಕ ಪ್ರಯೋಗಾಲಯದಂತೆ ಕಾರ್ಯ ನಿರ್ವಹಿಸುತ್ತಿದೆ. 16 ವಿಭಿನ್ನ ಪ್ರತಿಭೆಗಳ ಸೃಷ್ಟಿಗಳನ್ನು ಒಳಗೊಂಡಿರುವ ಈ ಪ್ರದರ್ಶನ, ಭೌತಿಕ ಪರಿಸರ, ಪರಿಕಲ್ಪನಾ ಚಿಂತನೆ ಮತ್ತು ವಸ್ತುವಿನ ಅನ್ವೇಷಣೆಯ ನಡುವಿನ ಮಿತಿಗಳನ್ನು ಮೀರಿ ನಿಲ್ಲುವ ಮೂಲಕ ಅತ್ಯದ್ಭುತ ದೃಶ್ಯ-ಕಥನವನ್ನು ಕಟ್ಟಿಕೊಡುತ್ತದೆ," ಎಂದರು.

design 2

ದಸರಾ–ದೀಪಾವಳಿ ವಿಶೇಷ ಕಲಾ ಪ್ರದರ್ಶನ: ಹಬ್ಬದ ಸೀಸನ್ ಹಿನ್ನೆಲೆಯಲ್ಲಿ ಗ್ಯಾಲರಿ ಜಿ-ಯಲ್ಲಿ ಮದ್ರಾಸ್ ಆಧುನಿಕತಾವಾದಿ ಚಳವಳಿಯ ಒಂಬತ್ತು ದಿಗ್ಗಜ ಕಲಾವಿದರ ಕಲಾಕೃತಿಗಳ ಪ್ರತ್ಯೇಕ ಪ್ರದರ್ಶನ ಏರ್ಪಡಿಸಲಾಗಿದೆ. ದಕ್ಷಿಣ ಭಾರತದ ಆಧುನಿಕ ಕಲಾ ಇತಿಹಾಸದಲ್ಲಿ ಮೈಲಿಗಲ್ಲಾಗಿರುವ ಈ ಚಳವಳಿಯ ಪರಂಪರೆಯನ್ನು ಸಂಭ್ರಮಿಸುವುದು ಹಾಗೂ ಹಿರಿಯ ಕಲಾವಿದರು ಮತ್ತು ಇಂದಿನ ಸಮಕಾಲೀನ ಕಲಾ ಪದ್ಧತಿಗಳ ನಡುವೆ ಅರ್ಥಪೂರ್ಣ ಸಂವಾದ ವನ್ನು ಸೃಷ್ಟಿಸುವುದು ಈ ಪ್ರದರ್ಶನದ ಪ್ರಮುಖ ಉದ್ದೇಶ.

ಪಾಲ್ಗೊಂಡಿರುವ ಕಲಾ ದಿಗ್ಗಜರು: ಅಚ್ಯುತನ್ ಕೂಡಲ್ಲೂರ್, ಅಕ್ಕಿತಂ ನಾರಾಯಣನ್, ಅಲ್ಫೋನ್ಸೊ ಅರುಳ್ ದಾಸ್, ಎ.ಪಿ. ಸಂತಾನರಾಜ್, ಕೆ.ಎಂ. ಆದಿಮೂಲಂ, ಕೆ.ವಿ. ಹರಿದಾಸನ್, ಎಂ. ಸೇನಾಧಿಪತಿ, ಎಂ. ಸೂರ್ಯಮೂರ್ತಿ ಮತ್ತು ಪಿ. ಪೆರುಮಾಳ್.

ಪ್ರದರ್ಶನದ ವಿವರಗಳು:

ಪ್ರದರ್ಶನ 1:

* ಶೀರ್ಷಿಕೆ: ಬಿಯಾಂಡ್ ದಿ ಫ್ಯಾಮಿಲಿಯರ್: ಬಿಟ್ವೀನ್ ರಿಯಾಲಿಟಿ, ಅಬ್‌ಸ್ಟ್ರಾಕ್ಷನ್ ಅಂಡ್ ಇಮ್ಯಾಜಿನೇಷನ್

* ದಿನಾಂಕ: ಅಕ್ಟೋಬರ್ 14 ರಿಂದ ನವೆಂಬರ್ 30, 2026ರವರೆಗೆ

* ಸ್ಥಳ: ಗ್ಯಾಲರಿ ಜಿ, ಲ್ಯಾವೆಲ್ಲೆ ರಸ್ತೆ, ಬೆಂಗಳೂರು.

ಪ್ರದರ್ಶನ 2:

* ಶೀರ್ಷಿಕೆ: ದಸರಾ-ದೀಪಾವಳಿ ವಿಶೇಷ ಪ್ರದರ್ಶನ: ಮದ್ರಾಸ್ ಮಾಡರ್ನ್ಸ್

* ದಿನಾಂಕ: ಅಕ್ಟೋಬರ್ 24, 2026ರವರೆಗೆ

* ಸ್ಥಳ: ಗ್ಯಾಲರಿ ಜಿ, ಲ್ಯಾವೆಲ್ಲೆ ರಸ್ತೆ, ಬೆಂಗಳೂರು.