ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Encroachment: ಪಾದಚಾರಿ ಮಾರ್ಗ ಒತ್ತುವರಿ ತೆರವಿಗೆ ಜಿಬಿಎ ಸಮರ

ಐದು ಪಾಲಿಕೆಗಳ ವ್ಯಾಪ್ತಿಯಲ್ಲಿ ತೆರವು ಸಮರ ಬೆಂಗಳೂರಿನ ಐದೂ ನಗರ ಪಾಲಿಕೆಗಳ ಆಯುಕ್ತರ ನೇತೃತ್ವದಲ್ಲಿ, ಪೊಲೀಸ್ ಭದ್ರತೆ ಯೊಂದಿಗೆ ಬೃಹತ್ ತೆರವು ಕಾರ್ಯಾಚರಣೆ ನಡೆಯಿತು. ಬೆಂಗಳೂರು ಪೂರ್ವ ಪಾಲಿಕೆಯ ವ್ಯಾಪ್ತಿಯ ಮಾರತಹಳ್ಳಿ, ಐಟಿಪಿಎಲ, ವರ್ತೂರು, ಟಿನ್ ಫ್ಯಾಕ್ಟರಿ ಮತ್ತು ರಾಮ ಮೂರ್ತಿನಗರ ಭಾಗದಲ್ಲಿ ಅಕ್ರಮ ಶೆಡ್ ಮತ್ತು ನಾಮಫಲಕಗಳನ್ನು ತೆರವುಗೊಳಿಸಲಾಯಿತು.

ಬೀದಿ ಬದಿ ವ್ಯಾಪಾರಿಗಳ ತೀವ್ರ ವಿರೋಧದ ನಡುವೆ ನೂರಾರು ಅಂಗಡಿ, ತಳ್ಳುಗಾಡಿಗಳ ತೆರವು

ಪಾದಚಾರಿಗಳ ಹಕ್ಕುಗಳನ್ನು ಮರುಸ್ಥಾಪಿಸಲು ಮತ್ತು ನಗರದ ರಸ್ತೆಗಳನ್ನು ಅಡೆತಡೆಯಿಲ್ಲದ ಸಂಚಾರಕ್ಕೆ ಮುಕ್ತಗೊಳಿಸಲು, ಗ್ರೇಟರ್ ಬೆಂಗಳೂರು ಪ್ರಾಧಿಕಾರವು (ಜಿಬಿಎ) ಐದು ನಗರ ಪಾಲಿಕೆ ಗಳ ವ್ಯಾಪ್ತಿಯಲ್ಲಿ ‘ಸುರಕ್ಷಿತ ಪಾದಚಾರಿ ಮಾರ್ಗ ಅಭಿಯಾನ’ ವನ್ನು ಅಧಿಕೃತವಾಗಿ ಆರಂಭಿಸಿದ್ದು, ಇದಕ್ಕೆ ಬೀದಿ ಬದಿ ವ್ಯಾಪಾರಿಗಳಿಂ ತೀವ್ರ ವಿರೋಧ ವ್ಯಕ್ತವಾಗಿದೆ.

ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ನಿರ್ದೇಶನ ಮತ್ತು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮಾರ್ಗದರ್ಶನದಂತೆ 5 ನಗರ ಪಾಲಿಕೆಗಳ ಪ್ರಮುಖ ರಸ್ತೆಗಳಲ್ಲಿ ಬರುವ ಪಾದಚಾರಿ ಮಾರ್ಗಗಳಲ್ಲಿದ್ದ ಅಡೆತಡೆಗಳನ್ನು ತೆರವುಗೊಳಿಸಿ, ಪಾದಚಾರಿಗಳ ಸುಗಮ ಓಡಾಟಕ್ಕೆ ಅನುವು ಮಾಡಿಕೊಡಲಾಗಿದೆ. ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಟ್ರಾಫಿಕ್ ದಟ್ಟಣೆ ಮತ್ತು ಪಾದಚಾರಿ ಮಾರ್ಗಗಳ ಮೇಲಿನ ಅಕ್ರಮ ಒತ್ತುವರಿಯು ಪಾದಚಾರಿಗಳ ಜೀವಕ್ಕೆ ಅಪಾಯಕಾರಿಯಾಗಿ ಪರಿಣಮಿಸಿದೆ.

ಸಾರ್ವಜನಿಕರ ಆಸ್ತಿಯಾದ ಪಾದಚಾರಿ ಮಾರ್ಗಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಅಥವಾ ಅಕ್ರಮ ನಿರ್ಮಾಣಗಳಿಗಾಗಿ ಬಳಸುವುದನ್ನು ತಡೆಯಲು ಸರಕಾರ ಈ ನಿರ್ಧಾರ ಕೈಗೊಂಡಿದೆ.

ಇದನ್ನೂ ಓದಿ: GBA elections: ಜೂನ್ 14 ರಿಂದ 24ರೊಳಗೆ ಜಿಬಿಎ 5 ಪಾಲಿಕೆಗಳ ಚುನಾವಣೆ: ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್. ಸಂಗ್ರೇಶಿ

ಐದು ಪಾಲಿಕೆಗಳ ವ್ಯಾಪ್ತಿಯಲ್ಲಿ ತೆರವು ಸಮರ ಬೆಂಗಳೂರಿನ ಐದೂ ನಗರ ಪಾಲಿಕೆಗಳ ಆಯುಕ್ತರ ನೇತೃತ್ವದಲ್ಲಿ, ಪೊಲೀಸ್ ಭದ್ರತೆ ಯೊಂದಿಗೆ ಬೃಹತ್ ತೆರವು ಕಾರ್ಯಾಚರಣೆ ನಡೆಯಿತು. ಬೆಂಗಳೂರು ಪೂರ್ವ ಪಾಲಿಕೆಯ ವ್ಯಾಪ್ತಿಯ ಮಾರತಹಳ್ಳಿ, ಐಟಿಪಿಎಲ, ವರ್ತೂರು, ಟಿನ್ ಫ್ಯಾಕ್ಟರಿ ಮತ್ತು ರಾಮ ಮೂರ್ತಿನಗರ ಭಾಗದಲ್ಲಿ ಅಕ್ರಮ ಶೆಡ್ ಮತ್ತು ನಾಮಫಲಕಗಳನ್ನು ತೆರವುಗೊಳಿಸ ಲಾಯಿತು.

ಬೆಂಗಳೂರು ಕೇಂದ್ರ ಪಾಲಿಕೆಯ ವ್ಯಾಪ್ತಿಯಲ್ಲಿ ಎಂಜಿ ರಸ್ತೆ, ಇಂದಿರಾನಗರ, ಮೆಜೆಸ್ಟಿಕ್ ಮತ್ತು ಜಯನಗರದಂತಹ ಜನನಿಬಿಡ ಪ್ರದೇಶಗಳಲ್ಲಿ ಪಾದಚಾರಿ ಮಾರ್ಗಗಳನ್ನು ಆವರಿಸಿದ್ದ ಕಟ್ಟಡ ಸಾಮಗ್ರಿ ಮತ್ತು ಅನಧಿಕೃತ ರಚನೆಗಳನ್ನು ತೆರವುಗೊಳಿಸಲಾಯಿತು.

ಅಕ್ರಮ ನಿರ್ಮಾಣಗಳ ತೆರವು: ಬೆಂಗಳೂರು ದಕ್ಷಿಣ ಪಾಲಿಕೆ ವ್ಯಾಪ್ತಿಯಲ್ಲಿ ಉತ್ತರಹಳ್ಳಿ, ಬಿಟಿಎಂ ಲೇಔಟ್, ಕೋರಮಂಗಲ ಮತ್ತು ಜೆಪಿ ನಗರದಲ್ಲಿ ವ್ಯಾಪಾರಿಗಳು ಪಾದಚಾರಿ ಮಾರ್ಗವನ್ನೇ ತಮ್ಮ ವಿಸ್ತರಣಾ ಜಾಗವನ್ನಾಗಿ ಮಾಡಿ ಕೊಂಡಿದ್ದನ್ನು ಅಧಿಕಾರಿಗಳು ನೆಲಸಮಗೊಳಿಸಿದರು. ಬೆಂಗಳೂರು ಉತ್ತರ ಪಾಲಿಕೆ ವ್ಯಾಪ್ತಿಯಲ್ಲಿ ಹೆಬ್ಬಾಳ ಮತ್ತು ಯಲಹಂಕ ಸುತ್ತಮುತ್ತಲಿನ ರಸ್ತೆಗಳಲ್ಲಿ ಅಕ್ರಮ ಒತ್ತುವರಿಗಳನ್ನು ತೆರವುಗೊಳಿಸಲಾಯಿತು. ಬೆಂಗಳೂರು ಪಶ್ಚಿಮ ಪಾಲಿಕೆ ವ್ಯಾಪ್ತಿಯಲ್ಲಿ ಮೈಸೂರು ರಸ್ತೆ, ರಾಜಾಜಿನಗರ ಮತ್ತು ಮಾಗಡಿ ರಸ್ತೆಯಂತಹ ಪ್ರಮುಖ ಮಾರ್ಗಗಳಲ್ಲಿ ಜೆಸಿಬಿಗಳ ಬಳಕೆಯ ಮೂಲಕ ಅಕ್ರಮ ನಿರ್ಮಾಣಗಳನ್ನು ತೆರವುಗೊಳಿಸಲಾಯಿತು.

GBA

ತೆರವುಗೊಂಡ ಅಡೆತಡೆಗಳೇನು?

ಕಾರ್ಯಾಚರಣೆಯ ವೇಳೆ ಅಕ್ರಮ ನಾಮ-ಲಕಗಳು, ಅಂಗಡಿಗಳ ಮುಂಭಾಗ ಹಾಕಲಾಗಿದ್ದ ಶೀಟ್‌ಗಳು, ಮೆಟ್ಟಿಲುಗಳು, ಓಎಫ್‌ʼಸಿ ಕೇಬಲ್‌ಗಳು, ಕಟ್ಟಡ ತ್ಯಾಜ್ಯಗಳು, ತಳ್ಳುಗಾಡಿಗಳು ಮತ್ತು ಶಾಶ್ವತ ಪೆಟ್ಟಿಗೆಗಳನ್ನು ವಶಕ್ಕೆ ಪಡೆಯಲಾಗಿದೆ. ಅತಿಕ್ರಮಣಕಾರರಿಗೆ ಮೊದಲೇ ಎಚ್ಚರಿಕೆ ನೀಡಿದ್ದರೂ ಮಣಿಯದ ಕಾರಣ, ಇದೀಗ ಬಲವಂತದ ತೆರವು ಕಾರ್ಯಾಚರಣೆಯನ್ನು ಅನಿವಾರ್ಯವಾಗಿ ಕೈಗೊಳ್ಳಲಾಗಿದೆ. ವ್ಯಾಪಾರಿಗಳಿಗೆ ಕಠಿಣ ಎಚ್ಚರಿಕೆ ನೀಡಿರುವ ಅಧಿಕಾರಿಗಳು ಮುಂದಿನ ಶುಕ್ರವಾರದೊಳಗೆ ಪಾದಚಾರಿ ಮಾರ್ಗವನ್ನು ಸ್ವಯಂಪ್ರೇರಿತವಾಗಿ ತೆರವುಗೊಳಿ ಸದಿದ್ದರೆ, 5 ಸಾವಿರ ರು. ದಂಡ ವಿಧಿಸುವುದರ ಜತೆಗೆ ಪಾದಚಾರಿ ಮಾರ್ಗದಲ್ಲಿಟ್ಟಿರುವ ಎಲ್ಲಾ ಸರಕುಗಳನ್ನು ಜಪ್ತಿ ಮಾಡಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಆಕ್ರೋಶ, ಕಣ್ಣೀರಿನ ನಡುವೆ ಕಾರ‍್ಯಾಚರಣೆ

ಬೀದಿ ಬದಿ ವ್ಯಾಪಾರಿಗಳು, ಒತ್ತುವರಿದಾರರ ಆಕ್ರೋಶ, ಗದ್ದಲ, ವಿರೋಧ, ಪ್ರತಿಭಟನೆ ಬಳಿಕ ಕಣ್ಣೀರಿನ ನಡುವೆಯೂ ಮೊದಲ ದಿನದ ಒತ್ತುವರಿ ತೆರವು ಕಾರ್ಯಾಚರಣೆ ಮುಕ್ತಾಯವಾಗಿದೆ. ಕೆಲ ಪಾದಚಾರಿ ಮಾರ್ಗ ತೆರವು ಸಂದರ್ಭದಲ್ಲಿ ಜಿಬಿಎ ಅಧಿಕಾರಿಗಳ ಜತೆ ವ್ಯಾಪಾರಿಗಳು ವಾಗ್ವಾದ ಕ್ಕಿಳಿದರು. ಆದರೂ ಪೊಲೀಸ್ ಬಂದೋಬಸ್ತ್‌ನಲ್ಲಿ ಪಾದಚಾರಿ ಮಾರ್ಗ ತೆರವು ಕಾರ್ಯಾಚರಣೆ ನಡೆಯಿತು. ಗುರುವಾರವೂ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

image

ಬೆಂಗಳೂರಿನ ನಾಗರಿಕರಿಗೆ ಸುರಕ್ಷಿತವಾಗಿ ನಡೆಯುವ ಹಕ್ಕಿದೆ. ಪಾದಚಾರಿ ಮಾರ್ಗಗಳ ಒತ್ತುವರಿ ಎಂದರೆ ನಾಗರಿಕರ ಸುರಕ್ಷತೆ ಕಸಿದುಕೊಂಡಂತೆ. ಇದು ಕೇವಲ ಸರಕಾರದ ಕಾರ್ಯಾಚರಣೆಯಲ್ಲ. ಪಾದಚಾರಿ ಮಾರ್ಗ ತೆರವುಗೊಳಿಸಲು ಸುಪ್ರೀಂ ಕೋರ್ಟ್ ಆದೇಶವೂ ಇದೆ. ಇದು ಪ್ರತಿಯೊಬ್ಬ ನಾಗರಿಕನೂ ಪಾಲ್ಗೊಳ್ಳಬೇಕಾದ ಜನಾಂದೋಲನ ಆಗಬೇಕು.

-ಕೃಷ್ಣ ಬೈರೇಗೌಡ, ಸಚಿವ
image

ಈ ವಿಶೇಷ ಅಭಿಯಾನ ನಿರಂತರವಾಗಿ ಮುಂದುವರಿಯಲಿದೆ. ಸಾರ್ವಜನಿಕರಿಂದ ಬರುವ ದೂರು ಗಳಿಗೆ ತ್ವರಿತವಾಗಿ ಸ್ಪಂದಿಸಿ ನಗರದ ಎಲ್ಲ ಭಾಗಗಳಲ್ಲಿಯೂ ಪಾದಚಾರಿ ಮಾರ್ಗ ಅತಿಕ್ರಮಣ ಮುಕ್ತಗೊಳಿಸುವ ಗುರಿ ಜಿಬಿಎ ಹೊಂದಿದೆ. ನಗರದ ಮೂಲಸೌಕರ್ಯ ಪಾದಚಾರಿ ಸ್ನೇಹಿಯಾಗಿ ರೂಪಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.

-ಮಹೇಶ್ವರ್ ರಾವ್, ಜಿಬಿಎ ಮುಖ್ಯ ಆಯುಕ್ತ