GBA elections: ಜೂನ್ 14 ರಿಂದ 24ರೊಳಗೆ ಜಿಬಿಎ 5 ಪಾಲಿಕೆಗಳ ಚುನಾವಣೆ: ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್. ಸಂಗ್ರೇಶಿ
ಸುಪ್ರೀಂ ಕೋರ್ಟ್ ನಿರ್ದೆಶನ ಹಿನ್ನೆಯಲ್ಲಿ ಶೀಘ್ರದಲ್ಲೇ ಜಿಬಿಎ 5 ಪಾಲಿಕೆಗಳ ಚುನಾವಣೆ ಮುಗಿಸುತ್ತೇವೆ. ಯಾವುದೇ ಕುಂಟು ನೆಪಗಳಿಗೆ ಅವಕಾಶ ಇಲ್ಲ. ತಾಲೂಕು ಮತ್ತು ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲು ಸಹ ತಯಾರಿ ನಡೆಸಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜಿ.ಎಸ್. ಸಂಗ್ರೇಶಿ ತಿಳಿಸಿದ್ದಾರೆ.
ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್. ಸಂಗ್ರೇಶಿ -
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಚುನಾವಣೆಯ ಬಗ್ಗೆ ರಾಜ್ಯ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜಿ.ಎಸ್. ಸಂಗ್ರೇಶಿ ಮಹತ್ವದ ಮಾಹಿತಿ ನೀಡಿದ್ದಾರೆ. ಜೂನ್ 14 ರಿಂದ 24 ರ ಒಳಗೆ ಜಿಬಿಎ ಚುನಾವಣೆ ದಿನಾಂಕ (GBA elections) ನಿಗದಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ್ದು, ಸೆಕ್ಷನ್ 34ರ ಪ್ರಕಾರ ಚುನಾವಣಾ ದಿನಾಂಕವನ್ನು ಜಿಬಿಎ ಜತೆ ಸಭೆ ಮಾಡಿ ಘೋಷಣೆ ಮಾಡಬೇಕು. ಹೀಗಾಗಿ ಜಿಬಿಎ ಮುಖ್ಯ ಆಯುಕ್ತರಿಗೆ ಸಭೆಗೆ ಆಹ್ವಾನ ಮಾಡಿದ್ದೇವೆ. ಜಿಬಿಎ ಮುಖ್ಯ ಆಯುಕ್ತರು ಹಾಗೂ 5 ನಗರ ಪಾಲಿಕೆಗಳ ಆಯುಕ್ತರು ಬಂದಿದ್ದರು. ದಿನಾಂಕ ನಿಗದಿ ಮಾತ್ರ ಬಾಕಿ ಉಳಿದಿದೆ, ಉಳಿದೆಲ್ಲ ಪ್ರಕ್ರಿಯೆ ಮುಗಿಸಿದ್ದೇವೆ ಎಂದರು.
ಮಳೆಗಾಲ, ಶಾಲಾ ಕಾಲೇಜು, ಸೆನ್ಸಸ್ ಇವೆಲ್ಲ ಗಮನಿಸಿ ದಿನಾಂಕ ನಿಗದಿ ಆಗಬೇಕು. ಜೂನ್ 30 ರ ಒಳಗಾಗಿ ಜಿಬಿಎ ಚುನಾವಣೆ ಮಾಡಬೇಕು ಅಂತ ಸುಪ್ರೀಂ ಕೋರ್ಟ್ ಹೇಳಿದೆ. ನಿಗದಿತ ಕಾಲಮಿತಿಯಲ್ಲಿ ಚುನಾವಣೆ ಮುಗಿಸಿ ಸುಪ್ರೀಂ ಕೋರ್ಟ್ಗೆ ನಾವು ವರದಿ ಕೊಡಬೇಕು. ನಾವು ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ ನಡೆಯಬೇಕಾಗುತ್ತದೆ. ಜೂನ್ 14 ರಿಂದ ಜೂನ್ 24ರ ಒಳಗಾಗಿ ಒಂದು ಡೇಟ್ ಹೇಳಿ ಅಂತ ಸೂಚನೆ ಕೊಟ್ಟಿದ್ದೇನೆ. ಈ ಅಂತರದಲ್ಲೇ ಚುನಾವಣಾ ದಿನಾಂಕ ಘೋಷಣೆ ಆಗಬೇಕು. ಕೆಲವೇ ದಿನಗಳಲ್ಲಿ ಅಂತಿಮ ದಿನಾಂಕವನ್ನು ನಿಮ್ಮೆಲ್ಲರಿಗೂ ಹೇಳುತ್ತೇವೆ. ಮುಂದೂಡಿಕೆ ಮಾಡುವ ಅಧಿಕಾರ ಸುಪ್ರೀಂ ಕೋರ್ಟ್ಗೆ ಮಾತ್ರ ಇದೆ ಎಂದರು.
Keshava Prasad B Column: ಚುನಾವಣೆ ಗೆಲ್ಲಲು ಆಮಿಷಗಳ ಕಂತೆ, ಯಾರಿಗೂ ಇಲ್ಲ ಚಿಂತೆ !
ಜೂನ್ 14 ರಿಂದ ಜೂನ್ 24ರ ಒಳಗೆ ಒಂದು ಡೇಟ್ ಹೇಳದೆ ಇದ್ದರೆ, ನಾವೇ ನಮ್ಮ ಅಧಿಕಾರ ಬಳಸಿ ಅಂತಿಮ ದಿನಾಂಕ ಘೋಷಣೆ ಮಾಡುತ್ತೇವೆ. ರಾಜ್ಯ ಚುನಾವಣಾ ಆಯೋಗಕ್ಕೆ ದಿನಾಂಕ ಘೋಷಣೆ ಮಾಡುವ ಅಧಿಕಾರ ಇದೆ. ಸಿಬ್ಬಂದಿ ಇಲ್ಲ, ಮತ್ತೊಂದು ಇಲ್ಲ ಅಂತ ಆಗಲಿಂದಲೂ ಹೇಳುತ್ತಾ ಬಂದಿದ್ದಾರೆ. ಸುಪ್ರೀಂ ಕೋರ್ಟ್ನಲ್ಲಿ ಮುಂದೂಡಿಕೆ ಆಗಿದೆ ಅಂತೇನೂ ಆಗಿಲ್ಲ. ಬ್ಯಾಲೆಟ್ ಪೇಪರ್ ಅಥವಾ ಇವಿಎಂ ಬಳಸಬೇಕಾ ಅಂತ ಮುಂದೆ ಹೇಳುತ್ತೇವೆ ಎಂದು ತಿಳಿಸಿದರು.