ಫೇರ್‌ಟ್ರೇಡ್ ಇನ್ ಇಂಡಿಯಾ ಸಮ್ಮೇಳನದಲ್ಲಿ ಜಾಗತಿಕ ವ್ಯಾಪಾರ ವಲಯದ ಉತ್ಪಾದಕರಿಗೆ ಆದ್ಯತೆ
"ಫೇರ್‌ಟ್ರೇಡ್ ಇನ್ ಇಂಡಿಯಾ"ದ ಎರಡು ದಿನಗಳ ಸಮ್ಮೇಳನವು ಬೆಂಗಳೂರಿನ ದಿ ಛಾನ್ಸೆರಿ ಪೆವಿಲಿಯ ನ್‌ನಲ್ಲಿ ಆರಂಭವಾಗಿದ್ದು, ಈ ಬಾರಿ "ಸುಸ್ಥಿರತೆ, ಮಾರ್ಕೆಟ್‌ಗಳು ಮತ್ತು ಪ್ರಭಾವ" ಎಂಬ ಥೀಮ್ ಹೊಂದಿದೆ. ಇದರಲ್ಲಿ ಜಾಗತಿಕ ಮತ್ತು ಭಾರತೀಯ ಉತ್ಪಾದಕರು, ಉದ್ಯಮಗಳು, ಪಾಲಿಸಿ ನಿರೂಪಕರು ಮತ್ತು ಸುಸ್ಥಿರತೆ ನಾಯಕರು ಒಟ್ಟಿಗೆ ಸೇರಿದ್ದರು.

-

ಬೆಂಗಳೂರು: "ಫೇರ್‌ಟ್ರೇಡ್ ಇನ್ ಇಂಡಿಯಾ"ದ ಎರಡು ದಿನಗಳ ಸಮ್ಮೇಳನವು ಬೆಂಗಳೂರಿನ ದಿ ಛಾನ್ಸೆರಿ ಪೆವಿಲಿಯಯನ್‌ನಲ್ಲಿ ಆರಂಭವಾಗಿದ್ದು, ಈ ಬಾರಿ "ಸುಸ್ಥಿರತೆ, ಮಾರ್ಕೆಟ್‌ಗಳು ಮತ್ತು ಪ್ರಭಾವ" ಎಂಬ ಥೀಮ್ ಹೊಂದಿದೆ. ಇದರಲ್ಲಿ ಜಾಗತಿಕ ಮತ್ತು ಭಾರತೀಯ ಉತ್ಪಾದಕರು, ಉದ್ಯಮಗಳು, ಪಾಲಿಸಿ ನಿರೂಪಕರು ಮತ್ತು ಸುಸ್ಥಿರತೆ ನಾಯಕರು ಒಟ್ಟಿಗೆ ಸೇರಿದ್ದರು. ಪರಿಸರ ಸ್ನೇಹಿ ಕ್ರಮ, ಜವಾಬ್ದಾರಿಯುತವಾಗಿ ಖರೀದಿ ಮಾಡುವುದು ಮತ್ತು ಉತ್ಪಾದಕರ ಸಬಲೀಕರಣ ತಕ್ಷಣ ಅಗತ್ಯವಿದೆ ಎಂದು ಸಮ್ಮೇಳನದಲ್ಲಿ ಚರ್ಚಿಸಲಾಯಿತು ಮತ್ತು ಪಾರದರ್ಶಕತೆ, ನೈತಿಕತೆ ಮತ್ತು ಜಾಗತಿಕ ಪೂರೈಕೆ ಸರಪಣಿಯಲ್ಲಿ ಸಹಿಷ್ಣುತೆಯಲ್ಲಿ ಫೇರ್‌ಟ್ರೇಡ್ ಹೊಂದಿರುವ ಪ್ರಮುಖ ಪಾತ್ರವನ್ನು ಇದು ಒತ್ತಿ ಹೇಳಿತು. ಕಾರ್ಯಕ್ರಮಕ್ಕೆ ಯುರೋಪಿಯನ್ ಯೂನಿಯನ್‌ನ ಸ್ವಿಚ್-ಏಷ್ಯಾ ಪ್ರೋಗ್ರಾಮ್ ಮತ್ತು ಇಸಿ ಎಫ್‌ಎಫ್‌ಪಿಎ ಬೆಂಬಲ ನೀಡಿತ್ತು.
ಸಂವಾದ ಕಾರ್ಯಕ್ರಮದ ಮುಖ್ಯಾಂಶಗಳು: ಸುಸ್ಥಿರತೆ, ಮಾರ್ಕೆಟ್ ಮತ್ತು ಪ್ರಭಾವದಲ್ಲೇ ಭವಿಷ್ಯ
ಭಾರತ ಮತ್ತು ಭೂತಾನ್‌ಗೆ ಐರೋಪ್ಯ ಒಕ್ಕೂಟ ನಿಯೋಗದ ಮಿನಿಸ್ಟರ್ ಕೌನ್ಸಲರ್ ಫ್ರಾಂಕ್ ವೌಲ್ಟ್ ಮಾತನಾಡಿ "ಭವಿಷ್ಯದ ವ್ಯಾಪಾರವು ಸುಸ್ಥಿರ, ಸಮಗ್ರ ಮತ್ತು ನ್ಯಾಯೋಚಿತ ವಾಗಿರಬೇಕು. ಈ ನಿಟ್ಟಿನಲ್ಲಿ, ಭಾರತ ಮತ್ತು ಫೇರ್‌ಟ್ರೇಡ್ ಜೊತೆಗೆ ಪಾಲುದಾರಿಕೆ ವಹಿಸಲು ಐರೋಪ್ಯ ಒಕ್ಕೂಟಕ್ಕೆ ಹೆಮ್ಮೆಯಿದೆ. ಒಟ್ಟಾಗಿ ನಾವು ಜಾಗತಿಕ ಪೂರೈಕೆ ಸರಪಣಿಯನ್ನು ಪರಿಸರ ಸಹಿಷ್ಣುತೆ, ಸಮಾನತೆ ಮತ್ತು ಸಂಪದ್ಭರಿತತೆಯ ಶಕ್ತಿಯನ್ನಾಗಿ ಪರಿವರ್ತಿಸಬಹುದಾಗಿದ್ದು, ಉತ್ಪಾದಕರು ಕೇವಲ ಪಾಲುದಾರರಲ್ಲ. ಬದಲಿಗೆ ಸುಸ್ಥಿರ ಬೆಳವಣಿಗೆಯನ್ನು ರೂಪಿಸುವಲ್ಲಿ ನಾಯಕರು ಎಂಬುದಾಗಿ ಖಾತರಿಪಡಿಸುತ್ತಿದ್ದೇವೆ. ನಮ್ಮ ಐರೋಪ್ಯ ಒಕ್ಕೂಟ ಮತ್ತು ಭಾರತದ ಪಾಲುದಾರಿಕೆಯು ಇನ್ನಷ್ಟು ಆಳಕ್ಕೆ ಇಳಿಯುತ್ತಿದ್ದಂತೆಯೇ, ನಮ್ಮ ಬದ್ಧತೆಯೂ ಸ್ಪಷ್ಟವಾಗುತ್ತಿದೆ. ಪಾರದರ್ಶಕ, ಭವಿಷ್ಯಕ್ಕೆ ಪೂರಕ ಮತ್ತು ನ್ಯಾಯೋಚಿತವಾಗಿರುವ ಪೂರೈಕೆ ಸರಣಿಯನ್ನು ನಿರ್ಮಿಸುವುದಕ್ಕೆ ನಾವು ಬದ್ಧವಾಗಿದ್ದೇವೆ" ಎಂದಿದ್ದಾರೆ.
ಇದನ್ನೂ ಓದಿ: Bangalore News: ಸ್ವಿಗ್ಗಿ ಇನ್‌ಸ್ಟಾಮಾರ್ಟ್ ವತಿಯಿಂದ ಗ್ರಾಹಕರಿಗಾಗಿ "ಕ್ವಿಕ್ ಇಂಡಿಯಾ ಮೂವ್‌ಮೆಂಟ್ ಘೋಷಣೆ
ಫೇರ್‌ಟ್ರೇಡ್ ಇಂಟರ್‌ನ್ಯಾಷನಲ್ ಸಿಇಒ ಲಿಸಾ ಪ್ರಸ್ಸಾಕ್ ಹೇಳುವಂತೆ "ರೈತನೊಬ್ಬ ಬೆಳೆದ ಪ್ರತಿ ಉತ್ಪನ್ನವನ್ನೂ ನ್ಯಾಯಯುತ ವಿಧಾನದಲ್ಲಿ ಮಾರಾಟ ಮಾಡಲು ಸಾಧ್ಯವಾಗುವುದೇ ಪ್ರಗತಿಯ ನಿಜವಾದ ಅಳತೆಗೋಲಾಗಿದೆ. ಫೇರ್‌ಟ್ರೇಡ್‌ನಲ್ಲಿ ನಾವು ಡೇಟಾ, ಅನ್ವೇಷಣೆ ಮತ್ತು ಉತ್ತಮ ಮಾರುಕಟ್ಟೆ ಪಾಲುದಾರಿಕೆಯನ್ನು ಬಳಸಿಕೊಂಡು ಪರಿಸರ ಸ್ನೇಹಿ ಭವಿಷ್ಯವನ್ನು ನಿರ್ಮಿಸುವ ಗುರಿಯನ್ನು ಹೊಂದಿದ್ದೇವೆ ಮತ್ತು ಈ ಮೂಲಕ ಸಮಾನತೆ, ಸುಸ್ಥಿರತೆ ಮತ್ತು ಸಮಗ್ರ ಏಳ್ಗೆಯ ಪ್ರಚೋದಕವಾಗಿ ಜಾಗತಿಕ ಪೂರೈಕೆ ಸರಣಿಯನ್ನು ರೂಪಾಂತರಗೊಳಿಸುತ್ತೇವೆ. ಇದರಲ್ಲಿ ರೈತರು ಕೇವಲ ಆಹಾರ ಉತ್ಪನ್ನಗಳನ್ನು ಒದಗಿಸುವುದಷ್ಟೇ ಅಲ್ಲ, ನ್ಯಾಯಯುತ ವಿಶ್ವವನ್ನು ರೂಪಿಸುವಲ್ಲಿ ನಾಯಕರಾಗಿಯೂ ಕೆಲಸ ಮಾಡುತ್ತಾರೆ" ಎಂದಿದ್ದಾರೆ.
ಮ್ಯಾಕ್ಸ್ ಹ್ಯಾವೆಲಾರ್ ಫ್ರಾನ್ಸ್‌ನ ಬ್ಲೈಸ್ ಡೆಸ್ಪಾರ್ಡೆಸ್ ಹೇಳುವಂತೆ "ಪರಿಸರ ರಕ್ಷಣೆಯ ಜೊತೆಗೆ ಆರ್ಥಿಕ ಸಬಲೀಕರಣವನ್ನೂ ಸಂಪರ್ಕಿಸಲು ಫೇರ್‌ಟ್ರೇಡ್ ಒಂದು ಶಕ್ತಿಯುತ ಪರಿಕರವಾಗಿದ್ದು, ಪೂರೈಕೆ ಸರಣಿಯನ್ನು ಸಾಮಾಜಿಕ ನ್ಯಾಯ ಮತ್ತು ಪರಿಸರಕ್ಕೆ ಪೂರಕ ಅಂಶಗಳ ಚಾಲಕ ಶಕ್ತಿಯನ್ನಾಗಿ ಪೂರೈಕೆ ಸರಣಿಯನ್ನು ಪರಿವರ್ತಿಸುತ್ತದೆ. ಫ್ರಾನ್ಸ್‌ಗೆ, ಹತ್ತಿ, ಸಾಂಬಾರ ಪದಾರ್ಥಗಳು, ಚಹಾ ಅಥವಾ ತೆಂಗಿನಕಾಯಿ ಸೇರಿದಂತೆ ಹಲವು ಉತ್ಪನ್ನಗಳ ವಿಷಯದಲ್ಲಿ ಭಾರತವು ಪ್ರಮುಖ ಪಾಲುದಾರನಾಗಿದೆ ಮತ್ತು ಎರಡೂ ದೇಶಗಳು ಒಟ್ಟಾಗಿ ಗ್ರಾಹಕರಿಗೆ ವಿಶ್ವಾಸಾರ್ಹ, ಮೂಲವನ್ನು ಪತ್ತೆಮಾಡಬಹುದಾದ ಮತ್ತು ಸುಸ್ಥಿರವಾದ ಪರ್ಯಾಯವನ್ನು ಒದಗಿಸಬಹುದಾಗಿದೆ. ಈ ಪಾಲುದಾರಿಕೆಯನ್ನು ಬಲಪಡಿಸುವ ಮೂಲಕ ಇಂದಿನ ಸುಸ್ಥಿರತೆ ಸವಾಲನ್ನು ನಾವು ಪೂರೈಸು ತ್ತಿಲ್ಲ. ಬದಲಿಗೆ, ನ್ಯಾಯೋಚಿತ ಮತ್ತು ಹೆಚ್ಚು ಸುಸ್ಥಿರ ಜಾಗತಿಕ ಮಾರುಕಟ್ಟೆಯನ್ನು ರೂಪಿಸು ತ್ತಿದ್ದೇವೆ".
ಫೇರ್‌ಟ್ರೇಡ್ ಜರ್ಮನಿಯ ವ್ಯವಸ್ಥಾಪಕ ನಿರ್ದೇಶಕಿ ಕ್ಲೌಡಿಯಾ ಬ್ರಕ್ ಮಾತನಾಡಿ, "ಫೇರ್ ಟ್ರೇಡ್ ಕೇವಲ ಒಂದು ಲೇಬಲ್ ಅಲ್ಲ. ಇದೊಂದು ಜಾಗತಿಕ ಚಳವಳಿಯಾಗಿದ್ದು, ನ್ಯಾಯೋಚಿತತೆ, ಪಾರದರ್ಶಕತೆ ಮತ್ತು ಜವಾಬ್ದಾರಿಯನ್ನು ದೈನಂದಿನ ಸನ್ನಿವೇಶಕ್ಕೆ ಹೊಂದಿಸುತ್ತದೆ. ಮೂಲ ವನ್ನು ಪತ್ತೆ ಮಾಡಬಹುದಾದ ಪೂರೈಕೆ ಸರಣಿಯನ್ನು ನಿರ್ಮಿಸುವ ಮೂಲಕ, ಪರಿಸರ ಸ್ನೇಹಿ ವಾತಾವರಣವನ್ನು ಪೋಷಿಸುವ ಮೂಲಕ ಮತ್ತು ಸಮುದಾಯವನ್ನು ಸಬಲೀಕರಿಸುವ ಮೂಲಕ ಆರ್ಥಿಕ ಯಶಸ್ಸು ಮತ್ತು ಸಾಮಾಜಿಕ ಜವಾಬ್ದಾರಿಯು ಪರಸ್ಪರ ಸಂಬಂಧಿತವಾಗಿದೆ ಎಂದು ನಾವು ಸಾಬೀತುಪಡಿಸಬಹುದಾಗಿದೆ. ಭಾರತ ಮತ್ತು ವಿಶ್ವದ ಜೊತೆಗೆ ಪಾಲುದಾರಿಕೆಯಲ್ಲಿ ನಾವು ಫೇರ್‌ಟ್ರೇಡ್ ಅನ್ನು ಒಂದು ನಿಯಮವನ್ನಾಗಿ ರೂಪಿಸುತ್ತಿದ್ದೇವೆ" ಎಂದರು.
ಫೇರ್‌ಟ್ರೇಡ್ ಎನ್‌ಎಪಿಪಿ ಸಿಇಒ ಆಗಿರುವ ಬಿಂದು ಎಸ್ ಮಾತನಾಡಿ "ಭಾರತವು ಜಾಗತಿಕ ಫೇರ್‌ಟ್ರೇಡ್ ಚಳವಳಿಯಲ್ಲಿ ಮುಂಚೂಣಿಯಲ್ಲಿದೆ. 100,000 ಕ್ಕೂ ಹೆಚ್ಚು ರೈತರು ಮತ್ತು ಕೆಲಸ ಗಾರರ ಸಹಿಷ್ಣುತೆ ಮತ್ತು ನಾಯಕತ್ವವು ಸುಸ್ಥಿರ ವ್ಯಾಪಾರಕ್ಕೆ ಹೊಸ ವ್ಯಾಖ್ಯಾನವನ್ನು ಬರೆದಿದೆ. ಮಹಿಳೆಯರು ಮತ್ತು ಯುವಕ ಉತ್ಪಾದಕರನ್ನು ಪ್ರಮುಖವಾಗಿರಿಸಿಕೊಂಡಿರುವ ನಾವು ಸವಾಲು ಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸುತ್ತಿದ್ದೇವೆ ಮತ್ತು ಪರಿಸರ ಸ್ನೇಹಿ, ಅನ್ವೇಷಣೆ ಮತ್ತು ಸಮಗ್ರ ಏಳ್ಗೆಯ ಪ್ರಚೋದಕವನ್ನಾಗಿ ಪೂರೈಕೆ ಸರಣಿಗೆ ಹೊಸ ರೂಪ ನೀಡುತ್ತಿದೆ. ಫೇರ್‌ಟ್ರೇಡ್ ಕೇವಲ ದತ್ತಿ ಸಂಸ್ಥೆಯಲ್ಲ. ಇದು ನ್ಯಾಯ, ಘನತೆ ಮತ್ತು ಪಾಲುದಾರರಿಕೆಯ ಚಾಲಕ ಶಕ್ತಿಯಾಗಿದೆ. ಉತ್ಪಾದಕರು ನಿರ್ಧಾರ ಮಾಡುವವರಾದಾಗ ನಾವು ನ್ಯಾಯೋಚಿತ, ಭವಿಷ್ಯಕ್ಕೆ ಸಿದ್ಧ ಮತ್ತು ಪರಿವರ್ತನೀಯ ಮಾರುಕಟ್ಟೆಯನ್ನು ರೂಪಿಸಬಹುದು".
ಫೇರ್‌ಟ್ರೇಡ್ ಇಂಡಿಯಾ ಪ್ರಾಜೆಕ್ಟ್ ಸಿಇಒ ಅಭಿಷೇಕ್ ಜನಿ ಹೇಳುವಂತೆ "ಫೇರ್‌ಟ್ರೇಡ್ ಇನ್ ಇಂಡಿಯಾ ಅಪಾರ ಪ್ರಗತಿಯನ್ನು ಸಾಧಿಸುತ್ತಿದೆ. ಫೇರ್‌ಟ್ರೇಡ್ ಫ್ಯಾಷನ್‌ನ ಮಾರಾಟವು ದುಪ್ಪಟ್ಟಾಗುತ್ತಿದ್ದು, ಪ್ರತಿ ನಿಮಿಷ ಒಂದು ಉಡುಪು ಮಾರಾಟವಾಗುತ್ತಿದೆ. ನಮ್ಮ ಉತ್ಪಾದಕರ ಸಂಖ್ಯೆ ಹೆಚ್ಚುತ್ತಿದ್ದು, ಯುವಕರು ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುತ್ತಿದ್ದಾರೆ ಮತ್ತು ಫೇರ್‌ಟ್ರೇಡ್ ಉತ್ಪನ್ನಗಳ ಒಟ್ಟಾರೆ ಮೌಲ್ಯ ಕಳೆದ ಎರಡು ವರ್ಷಗಳಲ್ಲಿ ಮೂರು ಪಟ್ಟಾಗಿದೆ. ಭಾರತೀಯ ಗ್ರಾಹಕರು ಮತ್ತು ಉದ್ಯಮಗಳು ನ್ಯಾಯೋಚಿತತೆ ಮತ್ತು ಸುಸ್ಥಿರತೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂಬುದನ್ನು ಇದು ಸೂಚಿಸುತ್ತಿದೆ. ಜಾಗತಿಕ ಪಾಲುದಾರಿಕೆಯ ಮೂಲಕ ನಾವು ಪರಿಸರ ಸ್ನೇಹಿ, ಸಮಾನತೆ ಮತ್ತು ಸುಸ್ಥಿರ ಪೂರೈಕೆ ಸರರಣಿಗೆ ಒಂದು ಶಕ್ತಿಯುತ ಬಲವನ್ನಾಗಿ ನಾವು ವಿಸ್ತರಿಸಬಹುದಾಗಿದೆ."
ಸಂವಾದ ಕಾರ್ಯಕ್ರಮದಲ್ಲಿ ಜಾಗತಿಕ ವ್ಯಾಪಾರ ಸಂವಾದಕ್ಕೆ ಉತ್ಪಾದಕರು ಪ್ರಮುಖವಾಗಿರು ತ್ತಾರೆ ಮತ್ತು ಸುಸ್ಥಿರತೆ ಎಂಬುದು ಕೇವಲ ಐಚ್ಛಿಕವಲ್ಲ, ಬದಲಿಗೆ ಅತ್ಯಗತ್ಯವಾಗಿದೆ ಎಂಬುದನ್ನು ಸೂಚಿಸುತ್ತದೆ. ಮುಂದಿನ ಎರಡು ದಿನಗಳಲ್ಲಿ, ಜವಳಿ ವಲಯದಲ್ಲಿ ಡೀಕಾರ್ಬನೈಸೇಶನ್, ಐರೋಪ್ಯ ಒಕ್ಕೂಟದ ಸುಸ್ಥಿರತೆ ನಿಯಮಗಳು, ಸುಸ್ಥಿರ ಫ್ಯಾಷನ್ ಬ್ರ್ಯಾಂಡ್‌ಗಳು, ಜೀವನಾವಶ್ಯಕತೆ ಮತ್ತು ಪರಿಸರ ಸ್ನೇಹಿ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಅಲ್ಲದೆ, ಮೊಸೆಗಿ ಇಂಡಿಯಾ ಪ್ರೈ. ಲಿ. ಹಾಗೂ ಫೇರ್‌ಟ್ರೇಡ್ ಪಾಲುದಾರಿಕೆಯ ಬ್ರ್ಯಾಂಡ್ ಮೊಸೆಗಿ ಅನ್ನು ಬಿಡುಗಡೆ ಮಾಡಲಾಗುತ್ತದೆ.