ಬೆಂಗಳೂರು: ಲೇಖಕ ರವಿ ಹಂಜ್(Author Ravi Hanj) ಅವರ ವಿವಾದಿತ ‘ಬಸವ ಮಂಟಪ’ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಕೃತಿಯ ಪ್ರಕಟಣೆ, ಮುದ್ರಣ ಹಾಗೂ ಪ್ರಸಾರವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸರ್ಕಾರ ಸಂಪೂರ್ಣವಾಗಿ ನಿರ್ಬಂಧಿಸಿದೆ.
ಇದನ್ನೂ ಓದಿ: Ravi Hanj: ಬಸವ ಮಂಟಪಕ್ಕೆ ಪುರಾಣಗಳೇ ಆಧಾರ: ರವಿ ಹಂಜ್
12ನೇ ಶತಮಾನದ ಸಮಾಜ ಸುಧಾರಕ ವಿಶ್ವಗುರು ಬಸವಣ್ಣನವರ ವ್ಯಕ್ತಿತ್ವ ಹಾಗೂ ವಚನ ಸಾಹಿತ್ಯಕ್ಕೆ ಧಕ್ಕೆ ತರುವಂತಹ ಆಕ್ಷೇಪಾರ್ಹ ಅಂಶಗಳು ಈ ಕೃತಿಯಲ್ಲಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ನಿರ್ಧರಿಸಲಾಗಿತ್ತು. ಇದೀಗ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಬಿಎನ್ಎನ್ಎಸ್ ಕಲಂ 98(1) ರ ಅಡಿಯಲ್ಲಿ ಸರ್ಕಾರ ಈ ಕಠಿಣ ಆದೇಶವನ್ನು ಜಾರಿಗೊಳಿಸಿದೆ.
ಡಿಜಿಟಲ್ ಪ್ರತಿಗಳ ಮೇಲೂ ನಿರ್ಬಂಧ ಕೇವಲ ಮುದ್ರಿತ ಪುಸ್ತಕ ಮಾತ್ರವಲ್ಲದೆ, ಅಂತರ್ಜಾಲ, ಸಾಮಾಜಿಕ ಜಾಲತಾಣಗಳು ಅಥವಾ ಇನ್ನಾವುದೇ ಡಿಜಿಟಲ್ ರೂಪದಲ್ಲಿರುವ ‘ಬಸವ ಮಂಟಪ’ ಕೃತಿಯ ಪ್ರಕಟಣೆ ಮತ್ತು ಪ್ರಸಾರದ ಮೇಲೂ ಸರ್ಕಾರ ನಿರ್ಬಂಧ ವಿಧಿಸಿದೆ. ಕೃತಿಯ ಪ್ರಕಟಣೆ, ವಿತರಣೆ ಸ್ಥಗಿತಗೊಳಿಸಲು ಸೂಚಿಸಲಾಗಿದೆ.