ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Ravi Hanj: ಬಸವ ಮಂಟಪಕ್ಕೆ ಪುರಾಣಗಳೇ ಆಧಾರ: ರವಿ ಹಂಜ್

ಸರಕಾರವೇ ಇಂತಹ ತಪ್ಪು ಮಾಡಿ ನನ್ನನ್ನು ಹೇಗೆ ತಪ್ಪು ಎನ್ನುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿದ್ದ ಗಣ್ಯರ ಮೇಲೆ ಒತ್ತಡ ತಂದಿದ್ದಾರೆ. ಕೆಲವು ರಾಜಕಾರಣಿಗಳು ವೋಟ್ ಬ್ಯಾಂಕ್‌ಗಾಗಿ ಪುಸ್ತಕ ಬ್ಯಾನ್ ಮಾಡಬೇಕು ಎನ್ನುತ್ತಿದ್ದಾರೆ. ಕಾಂಗ್ರೆಸ್‌ನವರು ವೀರಶೈವ ಬೇರೆ ಲಿಂಗಾ ಯತ ಬೇರೆ ಎನ್ನುತ್ತಿದ್ದರು. ಈಗ ವೋಟ್ ಬ್ಯಾಂಕ್‌ಗಾಗಿ ಬಳಸುತ್ತಿದ್ದಾರೆ.

ಬಸವ ಮಂಟಪಕ್ಕೆ ಪುರಾಣಗಳೇ ಆಧಾರ: ರವಿ ಹಂಜ್

-

Profile
Ashok Nayak Nov 25, 2026 12:43 AM

ಬೆಂಗಳೂರು: ನಾನು ಬಸವಣ್ಣನನ್ನು ಅವಹೇಳನ ಮಾಡಿಲ್ಲ. ಬಸವಣ್ಣನ ಪುರಾಣ, ಚನ್ನಬಸವಣ್ಣನ ಪುರಾಣಗಳಲ್ಲಿನ ಚಿತ್ರಣವನ್ನೇ ಹೇಳಿದ್ದೇನೆ. ಹರಿಹರನ ಬಸವರಾಜ ದೇವರ ರಗಳೆ ಮತ್ತು ಪಾಲ್ಕುರಿಕೆ ಸೋಮನಾಥನ ಬಸವ ಪುರಾಣದಲ್ಲಿನ ಅಂಶಗಳನ್ನೇ ಪುಸ್ತಕದಲ್ಲಿ ಬರೆದಿದ್ದೇನೆ. ಸರಕಾರದಿಂದಲೇ ಹರಿಹರನ ರಗಳೆ ಮೇಲೆ ನೂರಾರು ಸಂಶೋಧನೆ ಆಗಿದೆ ಎಂದು ಲೇಖಕ ರವಿ ಹಂಜ್(Ravi Hanj) ಕಿಡಿಕಾರಿದ್ದಾರೆ.

ವಿವಾದಿತ ಬಸವ ಮಂಟಪ ಪುಸ್ತಕ ಮುಟ್ಟುಗೋಲಿಗೆ ಸರಕಾರ ಆದೇಶದ ವಿರುದ್ಧ ಕಿಡಿಕಾರಿರುವ ಅವರು ಸರಕಾರ ಕ್ರಮ ಕೈಗೊಳ್ಳುವುದಾದರೆ ಹರಿಹರನ ಬಸವರಾಜ ದೇವರ ರಗಳೆ, ಪಾಲ್ಕುರಿಕೆ ಸೋಮನಾಥನ ಬಸವ ಪುರಾಣವನ್ನೂ ಬ್ಯಾನ್ ಮಾಡಬೇಕು. ಸರಕಾರದ ಪ್ರಾಯೋಜಕತ್ವದಲ್ಲಿ ಪ್ರೊ. ಎಂ.ಎಂ.ಕಲ್ಬುರ್ಗಿಯವರು ಈ ಎಲ್ಲಾ ರಗಳೆ ಪುರಾಣಗಳ ಬಗ್ಗೆ ಪುಸ್ತಕ ಮುದ್ರಿಸಿದ್ದಾರೆ.

ಇದನ್ನೂ ಓದಿ: Ravi Hanj: ಬಸವಣ್ಣ, ಶರಣರ ಪರಂಪರೆ ಅವಹೇಳನ ಖಂಡನೆ: ರವಿ ಹಂಜ್ ವಿರುದ್ಧ ಕ್ರಮಕ್ಕೆ ಆಗ್ರಹ

ಸರಕಾರವೇ ಇಂತಹ ತಪ್ಪು ಮಾಡಿ ನನ್ನನ್ನು ಹೇಗೆ ತಪ್ಪು ಎನ್ನುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿದ್ದ ಗಣ್ಯರ ಮೇಲೆ ಒತ್ತಡ ತಂದಿದ್ದಾರೆ. ಕೆಲವು ರಾಜಕಾರಣಿಗಳು ವೋಟ್ ಬ್ಯಾಂಕ್‌ಗಾಗಿ ಪುಸ್ತಕ ಬ್ಯಾನ್ ಮಾಡಬೇಕು ಎನ್ನುತ್ತಿದ್ದಾರೆ. ಕಾಂಗ್ರೆಸ್‌ನವರು ವೀರಶೈವ ಬೇರೆ ಲಿಂಗಾ ಯತ ಬೇರೆ ಎನ್ನುತ್ತಿದ್ದರು. ಈಗ ವೋಟ್ ಬ್ಯಾಂಕ್‌ಗಾಗಿ ಬಳಸುತ್ತಿದ್ದಾರೆ. ವೀರಶೈವ ಲಿಂಗಾಯತ ಧರ್ಮದ ಕಳಕಳಿ ಯಾರಿಗೂ ಇಲ್ಲ, ವೋಟ್ ಬ್ಯಾಂಕ್ ಆಸಕ್ತಿ ಅಷ್ಟೇ. ನನ್ನ ವಿರುದ್ಧದ ಆಕ್ರೋಶ ಕ್ಷಣಿಕ. ಜನ ಮುಗ್ಧರು, ಕ್ರಮೇಣ ಪುಸ್ತಕ ಓದಿದಾಗ ನಿಜ ತಿಳಿಯುತ್ತದೆ. ನನ್ನ ವಿರುದ್ಧ 5 ಲಕ್ಷಕ್ಕೆ ಫತ್ವಾ ಹೊರಡಿಸಿದ್ದಾರೆ. ಇದನ್ನು ಯಾರಾದರೂ ಖಂಡಿಸಿದ್ದೀರಾ. ಬೆದರಿಕೆ ಕರೆ ಬಂದಿದ್ದಕ್ಕೆ ಆತ್ಮರಕ್ಷಣೆಗಾಗಿ ಅಮೆರಿಕಾ ಹೋಗಿದ್ದೇನೆ ಎಂದು ಸುಳ್ಳು ಹೇಳಿದ್ದೇನೆ.

ಬೆಂಗಳೂರಲ್ಲಿ ಪ್ರತಿಭಟನೆ ಬುಗಿಲೆದ್ದಿದ್ದರಿಂದ ಕೊಚ್ಚಿಯಿಂದ ವಿಮಾನ ಹತ್ತಲು ಹೋಗಿದ್ದೆ. 4 ದಿವಸದ ಮಟ್ಟಿಗೆ ದುಬೈಗೆ ಹೊರಟಿದ್ದೆ ನಂತರ ಭಾರತಕ್ಕೆ ವಾಪಸ್ ಬರುವ ಪ್ಲಾನ್ ಇತ್ತು. ನನ್ನನ್ನು ಹಣಿಯಲು ರಾಜ್ಯ ಸರಕಾರವೇ ಕುತಂತ್ರ ಮಾಡಿದೆ ಎಂದರು.

ಇಬ್ಬರು ಕುತಂತ್ರಿಗಳ ಕುತಂತ್ರಕ್ಕೆ ಹಲವರು ಬಲಿ: ನನ್ನ ವಿರುದ್ಧ ಆರೋಪ ಮಾಡುತ್ತಿರು ವವರು ಯಾರೂ ಪುಸ್ತಕದ ಒಂದು ಹಾಳೆ ಓದಿಲ್ಲ. ಆರೋಪ ಮಾಡುವವರು 90 ನಿಮಿಷದ ಪೂರ್ಣ ವಿಡಿಯೋ ನೋಡಿಲ್ಲ. ಯಾರೋ ಇಬ್ಬರು ಕುತಂತ್ರಿಗಳ ಕುತಂತ್ರಕ್ಕೆ ಹಲವರು ಬಲಿಯಾಗಿದ್ದಾರೆ. ಸಚಿವರು ಸೇರಿ ಮುಗ್ಧ ಜನರವರೆಗೆ ಅಪಪ್ರಚಾರಕ್ಕೆ ಬಲಿಯಾಗಿದ್ದಾರೆ. ಸಾಮಾಜಿಕ ತಲ್ಲಣ ಸೃಷ್ಟಿಸಿ ಸಾಮಾಜಿಕ ಸ್ವಾಸ್ಥ್ಯ ಕೆಡಿಸುತ್ತಿರುವ ಕುತಂತ್ರಿಗಳ ವಿರುದ್ಧ ಕ್ರಮ ಕೈಗೊಳ್ಳ ಬೇಕು. ಅಪಪ್ರಚಾರ ಮತ್ತು ಸಾಮಾಜಿಕ ತಲ್ಲಣಕ್ಕೆ ತಾವು ಹೊಣೆಯಲ್ಲ. ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆ ಎಂದವರನ್ನು ಪುಸ್ತಕದಲ್ಲಿ ಲಿಂಗಾಹತಿಗಳು ಎಂದಿದ್ದೇನೆ. ಇಡೀ ಲಿಂಗಾಯತರನ್ನ ನಾನು ನಿಂದಿಸಿಲ್ಲ. ಬಸವಣ್ಣನನ್ನು ಕಾರ್ಲ್‌ಮಾರ್ಕ್ಸ್ ಎಂದವರನ್ನು ಲಿಂಗಾಹತಿಗಳು ಎಂದಿದ್ದೇನೆ. ತಮ್ಮ ಅಭಿಯಾನ ಹಿಡಿದಿಟ್ಟುಕೊಳ್ಳಲು ಹುಲ್ಲು ಕಡ್ಡಿಯ ಆಸರೆ ಹುಡುಕು ತ್ತಿರುವ ಕುತಂತ್ರ ಇದು ಎಂದು ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಗಾರರ ವಿರುದ್ಧ ಲೇಖಕ ರವಿ ಹಂಜ್ ಕಿಡಿಕಾರಿದ್ದಾರೆ.

ನನ್ನ ವಿರುದ್ದ ಫತ್ವಾ ಹೊರಡಿಸಿದವರ ಮೇಲೆ ರಾಜ್ಯ ಸರಕಾರ ಕ್ರಮಕೈಗೊಳ್ಳಲಿ

ಸಿಎಂ, ಗೃಹ ಸಚಿವ ಅಥವಾ ಸಚಿವರು ನನ್ನ ಮೇಲೆ ಫತ್ವಾ ಹೊರಡಿಸಿದ ವ್ಯಕ್ತಿಯನ್ನ ಬಂಧಿಸಿ ಎಂದಿದ್ದಾರಾ?. ನನ್ನ ವಿರುದ್ಧ ಫತ್ವಾ ಹೊರಡಿಸಿದವರ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕು. ಅಮೆರಿಕನ್ ಎಂಬಸಿ ವಿಮಾನ ನಿಲ್ದಾಣದಲ್ಲಿ ಡಿಟೈನ್ ಮಾಡಿದ ತಕ್ಷಣ ಸಹಾಯಕ್ಕೆ ಬಂತು. ಒಂದೇ ಒಂದು ಕೂದಲು ಕೊಂಕದಂತೆ ನೋಡಿಕೊಂಡು ಗೌರವಪೂರ್ವಕ ವಾಗಿ ಚೆನ್ನೈಗೆ ಕರೆದುಕೊಂಡು ಹೋಗಿ ಸುರಕ್ಷಿತ ತಾಣದಲ್ಲಿ ಇರಿಸಿzರೆ. ತನಗೆ ಭದ್ರತೆ ಒದಗಿಸುವವರೆಗೂ ಕರ್ನಾಟಕಕ್ಕೆ ಬರುವುದಿಲ್ಲ, ವಿಚಾರಣೆಗೆ ಹಾಜರಾಗುವುದಿಲ್ಲ. ಅಮೆರಿಕನ್ ಕಾನ್ಸುಲೇಟ್ ಕೇಂದ್ರ ಗೃಹ ಇಲಾಖೆ ಜತೆ ಸಂಪರ್ಕದಲ್ಲಿದೆ. ರೆಡ್ ಅಲರ್ಟ್, ಎಲ್ಓಸಿ ತೆರವಿನ ಬಗ್ಗೆ ಕೇಂದ್ರ ಸರಕಾರದಿಂದ ರಿವರ್ಕ್ ಮಾಡಿಸಲಿದ್ದಾರೆ. ಪುಸ್ತಕ ಬಿಡುಗಡೆಯಾಗಿ ಒಂದೇ ದಿವಸಕ್ಕೆ, ಒಂದು ಹಾಳೆಯನ್ನ ತಿರುವಿ ಹಾಕದೆ, 90 ನಿಮಿಷ ವಿಡಿಯೋ ನೋಡದೆ ಬೆಳಗ್ಗೆ ಪತ್ರಿಕಾಗೋಷ್ಠಿ ಮಾಡಿದ್ದಾರೆ. ಸಚಿವ ಸಂಪುಟದಲ್ಲಿ ತುರ್ತಾಗಿ ಪುಸ್ತಕ ಬ್ಯಾನ್ ಮಾಡಿದೆ. ನನ್ನ ಕೃತಿ ಮೇಲೆ ಅವರಿಗೆ ದ್ವೇಷವಿದೆ ಎಂದು ರವಿ ಹಂಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಫ್ಐಆರ್ ರದ್ದು ಕೋರಿ ಹೈಕೋರ್ಟ್‌ಗೆ ಅರ್ಜಿ

ವಿಶ್ವಗುರು ಬಸವಣ್ಣ ಹಾಗೂ ಲಿಂಗಾಯತ ಸಮುದಾಯದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಡಿ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಅನಿವಾಸಿ ಭಾರತೀಯ ಲೇಖಕ ರವಿ ಹಂಜಗಿಮಠ್ (ರವಿ ಹಂಜ್) ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ರವಿ ಹಂಜಿಗಿಮಠ್ ಈ ಅರ್ಜಿ ಸಲ್ಲಿಸಿದ್ದು, ಅರ್ಜಿಯಲ್ಲಿ ದೂರುದಾರ ಅರವಿಂದ ಜತ್ತಿ ಮತ್ತು ಹೈಗ್ರೌಂಡ್ಸ್ ಠಾಣೆಯ ಪೊಲೀಸರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಪ್ರಸ್ತಾವಿತ ಪುಸ್ತಕದಲ್ಲಿ ಉಖಿರುವ ಅಂಶಗಳು ತಮ್ಮ ಸ್ವಂತ ಅಭಿಪ್ರಾಯವಲ್ಲ. ಅವು ಬಿ.ಎಲ್.ರೈಸ್ ಅವರ ’ಮೈಸೂರು ಗೆಜೆಟಿಯರ್’, ಬಸವ ಪುರಾಣ ಹಾಗೂ ಡಾ.ಎಂ.ಎಂ.ಕಲ್ಬುರ್ಗಿ ಸೇರಿದಂತೆ ಹಲವು ವಿದ್ವಾಂಸರ ಸಂಶೋಧನಾ ಕೃತಿಗಳನ್ನು ಆಧರಿಸಿದ್ದಾಗಿವೆ.

ಐತಿಹಾಸಿಕ ಮತ್ತು ಸಾಹಿತ್ಯಿಕ ವಿಮರ್ಶೆ ನಡೆಸುವುದು ಸಂವಿಧಾನದ 19(1)(ಎ) ವಿಧಿಯಡಿ ಬರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಪ್ತಿಗೆ ಬರುತ್ತದೆ. ಬಸವಣ್ಣನವರನ್ನಾಗಲಿ ಅಥವಾ ಲಿಂಗಾಯತ ಸಮುದಾಯವನ್ನಾಗಲಿ ಅವಮಾನಿಸುವ ಉದ್ದೇಶವಿಲ್ಲ. ಬಸವ ಸಮಿತಿಗೆ ಸರಕಾರ ದಿಂದ ಮಂಜೂರಾಗಿರುವ ಭೂಮಿಯ ದುರ್ಬಳಕೆ ಕುರಿತು ತಾವು ಬರೆದಿದ್ದ ಲೇಖನಕ್ಕೆ ಪ್ರತೀಕಾರ ವಾಗಿ ದೂರುದಾರರು ರಾಜಕೀಯ ಪ್ರಭಾವ ಬಳಸಿ ಸುಳ್ಳು ದೂರು ದಾಖಲಿಸಿದ್ದಾರೆ.

image

ನನ್ನ ಬಸವ ಮಂಟಪ ಪುಸ್ತಕ ಮುಟ್ಟುಗೋಲಿಗೆ ಸಂಪುಟದಲ್ಲಿ ತೀರ್ಮಾನ ಆಗಿದೆ ಅಷ್ಟೇ. ಕಾನೂನಾತ್ಮಕ ವಾಗಿ ಮುಟ್ಟುಗೋಲಿನ ತೀರ್ಮಾನ ಆಗಿಲ್ಲ. ನನ್ನ ಪುಸ್ತಕ ಒಂದೇ ಒಂದು ಪ್ರತಿ ಉಳಿಯದಂತೆ ಸೋಲ್ಡ್ ಔಟ್ ಆಗಿದೆ. ಸರಕಾರ ಕಾನೂನಾತ್ಮಕವಾಗಿ ಪುಸ್ತಕ ನಿಷೇಧ ಮಾಡಿದ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೇನೆ.

-ರವಿ ಹಂಜ್, ಲೇಖಕ