ಬೆಂಗಳೂರು: ಕರ್ನಾಟಕ ರಾಜ್ಯ ಸಹಕಾರಿ ಮಂಡಳಿ ಅಧ್ಯಕ್ಷರಾಗಿ ಶಾಸಕ ಜಿ.ಟಿ.ದೇವೇಗೌಡ (MLA G T Devegowda)ವಿರೋಧವಾಗಿ ಆಯ್ಕೆಯಾಗಿದ್ದು, ಸಹಕಾರಿ ಮಂಡಳಿಯ ಕಚೇರಿಯಲ್ಲಿ ಶುಕ್ರವಾರ ಅಧಿಕಾರ ಸ್ವೀಕರಿಸಿದರು. ಕಳೆದ ಕೆಲವು ವರ್ಷಗಳಿಂದ ಚುನಾವಣಾ ಪ್ರಕ್ರಿಯೆ ಮುಂದು ವರಿಸುವುದು ಸೇರಿದಂತೆ ಹಲವು ವಿಚಾರಗಳು ನ್ಯಾಯಾಲಯದ ಮೆಟ್ಟಿಲೇರಿದ್ದ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಿಕೆಯಾಗಿತ್ತು.
ಇದನ್ನೂ ಓದಿ: HD Devegowda: ಹುಟ್ಟೂರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರಿಗೊಂದು ಮ್ಯೂಸಿಯಂ
ಆದರೆ ಸಹಕಾರ ಕ್ಷೇತ್ರವು ಪಕ್ಷ ರಾಜಕಾರಣಕ್ಕೆ ಒಳಗಾಗಬಾರದು ಎಂಬ ಉದ್ದೇಶದಿಂದ ಸಿಎಂ ಡಿಕೆಶಿ ಹಾಗೂ ಸಹಕಾರ ಸಚಿವ ಲಕ್ಷ್ಮಣ ಸವದಿ ಸೇರಿ ಎಲ್ಲರನ್ನು ಒಟ್ಟಾಗಿ ಕರೆದು ಮಾತುಕತೆ ನಡೆಸಿದ ಪರಿಣಾಮ ನಿರ್ದೇಶಕರು ಒಮ್ಮತದಿಂದ ಅಧ್ಯಕ್ಷರಾಗಿ ಜಿ.ಟಿ.ದೇವೇಗೌಡ, ಉಪಾಧ್ಯಕ್ಷ ರಾಗಿ ಬಿ.ಕೆ. ಶಿವಕುಮಾರ್ ಹಾಗೂ ನಿರ್ದೇಶಕರಾಗಿ ನಿರ್ದೇಶಕ ಕೆ.ಎಸ್.ನವೀನ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ.