Fire accident: ಭಾರೀ ಅಗ್ನಿ ಅವಘಡ- 40 ಕ್ಕೂ ಹೆಚ್ಚು ಕೂಲಿ ಕಾರ್ಮಿಕರ ಶೆಡ್ ಸುಟ್ಟು ಭಸ್ಮ
Fire accident:ಬೆಂಗಳೂರಿನ ವೀರಣ್ಣಪಾಳ್ಯದಲ್ಲಿರುವ ಕಾರ್ಮಿಕರ ಶೆಡ್ ಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡಿದ್ದು, 40 ಕ್ಕೂ ಹೆಚ್ಚು ಶೆಡ್ ಗಳು ಬೆಂಕಿಗಾಹುತಿಯಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ(Fire accident) ಸಂಭವಿಸಿದೆ. ಘಟನೆಯಲ್ಲಿ 40 ಕ್ಕೂ ಹೆಚ್ಚು ಕೂಲಿ ಕಾರ್ಮಿಕರ ಶೆಡ್ ಗಳು ಸುಟ್ಟು ಭಸ್ಮವಾಗಿವೆ. ವೀರಣ್ಣಪಾಳ್ಯದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಕಾರ್ಮಿಕರ ಶೆಡ್ ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮವಾಗಿ 40 ಕ್ಕೂ ಹೆಚ್ಚು ಶೆಡ್ ಗಳು ಬೆಂಕಿಗಾಹುತಿಯಾಗಿವೆ. ಇನ್ನು ಆಟಿಕೆ ಫ್ಯಾಕ್ಟರಿ ಕಾರ್ಮಿಕರಿಗಾಗಿ 50 ಶೆಡ್ ಗಳನ್ನು ನಿರ್ಮಿಸಲಾಗಿತ್ತು. ಈ ಪೈಕಿ 40 ಶೆಡ್ ಗಳು ಸುಟ್ಟು ಹೋಗಿವೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸಿಲ್ಲ.
ಬಿಸಿಲಿನ ಝಳ ದಿನಕಳೆದಂತೆ ಹೆಚ್ಚಾಗುತ್ತಿದ್ದು, ಬೆಂಕಿ ಅವಘಡಗಳು ಅಲ್ಲಲ್ಲಿ ವರದಿಯಾಗುತ್ತಿವೆ. ಕೆಲವು ತಿಂಗಳ ಹಿಂದೆ ತಡರಾತ್ರಿ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ತೋವಿನಕೆರೆ ಗ್ರಾಮದಲ್ಲಿ ಬೆಂಕಿ ಆಕಸ್ಮಿಕ ನಡೆದಿದ್ದು, ಹಸು ಮತ್ತು ಕರು ಸಜೀವ ದಹನವಾಗಿದೆ. ಸ್ಥಳೀಯ ನಿವಾಸಿ ಕೊಂಡಪ್ಪ ಅವರಿಗೆ ಸೇರಿದ ಕೊಟ್ಟಿಗೆಯಲ್ಲಿ ಬೆಂಕಿ ಕಾಣಿಸಿಕೊಂಡು ಈ ಅನಾಹುತ ಜರುಗಿದೆ (Tumkur News). ಗ್ರಾಮದ ಸರ್ವೆ ನಂಬರ್ 15/3ರಲ್ಲಿ ನಿರ್ಮಿಸಲಾದ ಜಾನುವಾರು ಕೊಟ್ಟಿಗೆಗೆ ತಡರಾತ್ರಿ ಆಕಸ್ಮಿಕ ಬೆಂಕಿ ತಗಲಿ 1 ಕರು, 4 ಹಸು ಸಾವನ್ನಪ್ಪಿದ್ದವು.
ಈ ಸುದ್ದಿಯನ್ನೂ ಓದಿ: Fire Accident: ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ; ಅರಮನೆ ಮೈದಾನದಲ್ಲಿ ಕಾಣಿಸಿಕೊಂಡ ಬೆಂಕಿ
ಆಕಸ್ಮಿಕ ಬೆಂಕಿಗೆ 4 ಜಾನುವಾರುಗಳು ಸ್ಥಳದಲ್ಲಿ ಮೃತಪಟ್ಟಿದ್ದು, 1 ಹಸುವನ್ನು ರಕ್ಷಿಸಲಾಗಿತ್ತು. ಮಾಹಿತಿ ತಿಳಿದ ಕೂಡಲೇ ಪಶು ಇಲಾಖೆ ವೈದ್ಯರು ಸ್ಥಳಕ್ಕೆ ಬೇಟಿ ನೀಡಿ ರಕ್ಷಿಸಲಾದ ರಾಸುವಿಗೆ ಚಿಕಿತ್ಸೆ ನೀಡುದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಹಸು ಮಂಗಳವಾರ ಬೆಳಗ್ಗೆ ಮೃತಪಟ್ಟಿತ್ತು. ಆ ಮೂಲಕ ಬೆಂಕಿ ಆಕಸ್ಮಿಕ ಘಟನೆಗೆ ಒಟ್ಟು 1 ಕರು, 4 ಹಸು ಬೆಂಕಿಗೆ ಆಹುತಿಯಾದಂತಾಗಿದೆ. ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ. ನಾಗಭೂಷಣ್ ಭೇಟಿ ನೀಡಿ, ರೈತನಿಗೆ ಸಾಂತ್ವನ ತಿಳಿಸಿದ್ದಾರೆ. ಜತೆಗೆ ಇಲಾಖೆಯಿಂದ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ.