ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gold Price Today on 28th December 2025: ಚಿನ್ನದ ದರದಲ್ಲಿಂದು ಯಥಾಸ್ಥಿತಿ; ಹೊಸ ವರ್ಷಕ್ಕೆ ಇಳಿಕೆ ಕಾಣುತ್ತಾ ಬಂಗಾರ?

Gold Rate Today: ಹಲವು ದಿನಗಳಿಂದ ಸತತವಾಗಿ ಏರಿಕೆ ಕಾಣುತ್ತಿದ್ದ ಚಿನ್ನದ ಬೆಲೆಯಲ್ಲಿ ಇಂದು ಯಥಾಸ್ಥಿತಿ ಕಂಡು ಬಂದಿದೆ. 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ ಯಾವುದೇ ಏರಿಕೆ ಕಂಡು ಬರದೆ 12,945 ರೂ. ಇದೆ.

ಚಿನ್ನದ ದರದಲ್ಲಿಂದು ಯಥಾಸ್ಥಿತಿ;  ಹೊಸ ವರ್ಷಕ್ಕೆ ಇಳಿಕೆ ಕಾಣುತ್ತಾ ಬಂಗಾರ?

ಚಿನ್ನದ ದರದಲ್ಲಿ ಇಂದು ಯಥಾಸ್ಥಿತಿ ಕಂಡುಬಂದಿದೆ (ಸಂಗ್ರಹ ಚಿತ್ರ) -

Vishakha Bhat
Vishakha Bhat Dec 28, 2025 1:08 PM

ಬೆಂಗಳೂರು: ಹಲವು ದಿನಗಳಿಂದ ಸತತವಾಗಿ ಏರಿಕೆ ಕಾಣುತ್ತಿದ್ದ ಚಿನ್ನದ ಬೆಲೆಯಲ್ಲಿ ಇಂದು ಯಥಾಸ್ಥಿತಿ ಕಂಡು ಬಂದಿದೆ. 22 ಕ್ಯಾರಟ್‌ನ 1 ಗ್ರಾಂ (Gold Price Today on 28th December 2025) ಚಿನ್ನದ ಬೆಲೆಯಲ್ಲಿ ಯಾವುದೇ ಏರಿಕೆ ಕಂಡು ಬರದೆ 12,945 ರೂ. ಇದೆ. 24 ಕ್ಯಾರಟ್‌ 1 ಗ್ರಾಂ ಚಿನ್ನದ ದರ 14,122 ರೂ . ಆಗಿದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,03,560 ಆದರೆ, 10 ಗ್ರಾಂಗೆ ನೀವು 1,29,450 ರೂ. ಮತ್ತು 100 ಗ್ರಾಂಗೆ 12,94,500 ರೂ. ಪಾವತಿ ಮಾಡಬೇಕು. ಇನ್ನು 24 ಗ್ರಾಂ 8 ಗ್ರಾಂ ಚಿನ್ನಕ್ಕೆ 1,12,976 ಹಾಗೂ 10 ಗ್ರಾಂಗೆ ನೀವು 1,41,220 ರೂ. ಹಾಗೂ 100 ಗ್ರಾಂಗೆ ನೀವು 14,12,200 ರೂ. ಪಾವತಿ ಮಾಡಬೇಕಾಗುತ್ತದೆ.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 12,945 ರೂ. 14,122 ರೂ .
ಮುಂಬೈ 12,945 ರೂ. 14,122 ರೂ .
ದೆಹಲಿ 12,945 ರೂ. 14,122 ರೂ .
ಕೋಲ್ಕತ್ತಾ 12,945 ರೂ. 14,122 ರೂ .
ಹೈದರಾಬಾದ್‌ 12,945 ರೂ. 14,122 ರೂ .

ಬೆಳ್ಳಿ ದರದಲ್ಲಿಯೂ ಇಂದು ಯಾವುದೇ ಏರಿಕೆ ಕಂಡು ಬಂದಿಲ್ಲ. 1 ಗ್ರಾಂಗೆ 251 ರೂ. ಇದೆ. 10 ಗ್ರಾಂಗೆ ನೀವು 2,510 ರೂ. ಹಾಗೂ 1 ಕೆಜಿ ಬೆಳ್ಳಿಗೆ ನೀವು 2,51,000 ರೂ. ಪಾವತಿ ಮಾಡಬೇಕು.

2026 ರಲ್ಲಿ ಇಳಿಯುತ್ತಾ ಚಿನ್ನದ ಬೆಲೆ?

ವಿಶ್ವ ಚಿನ್ನ ಮಂಡಳಿ ಸಿಇಒ ಡೇವಿಡ್ ಟೈಟ್ 2026ರಲ್ಲಿ ಚಿನ್ನದ ಬೆಲೆ ಏರಿಕೆ ಕುರಿತು ಮಾತನಾಡಿದ್ದಾರೆ. ಸದ್ಯ ಚಿನ್ನದ ಬೆಲೆ ಏರಿಕೆಯಾಗುತ್ತಿರುವ ರೀತಿ, ಅಮೆರಿಕ, ಚೀನಾ ಮಾರುಕಟ್ಟೆ, ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಆಗುತ್ತಿರುವ ಬದಲಾವಣೆಗಳಿಂದ ಚಿನ್ನದ ಬೆಲೆ ದುಪ್ಪಟ್ಟಾಗಲಿದೆ ಎಂಬ ಶಾಕಿಂಗ್‌ ಹೇಳಿಕೆಯನ್ನು ನೀಡಿದ್ದಾರೆ. ಜಾಗತಿಕ ಅಸ್ಥಿರತೆ, ಭೌಗೋಳಿಕ ರಾಜಕೀಯ ಉದ್ವಿಗ್ನತೆ, ಅಮೆರಿಕದ ಬಡ್ಡಿ ದರ ಕಡಿತ ಮತ್ತು ಕೇಂದ್ರ ಬ್ಯಾಂಕುಗಳ ಹೆಚ್ಚುತ್ತಿರುವ ಖರೀದಿಗಳಿಂದ ಬೆಲೆಗಳು 10 ಗ್ರಾಂಗೆ 1.25 ಲಕ್ಷದಿಂದ 1.90 ಲಕ್ಷ ರೂ. ಅಥವಾ ಅದಕ್ಕಿಂತಲೂ ಹೆಚ್ಚಾಗಬಹುದು ಎಂದು ವಿವಿಧ ಸಂಸ್ಥೆಗಳು ಭವಿಷ್ಯ ನುಡಿದಿವೆ.

ಶುಕ್ರವಾರವೂ ಚಿನ್ನ-ಬೆಳ್ಳಿ ದರದಲ್ಲಿ ಭಾರೀ ಏರಿಕೆ; ಬೆಂಗಳೂರಿನಲ್ಲಿ ಎಷ್ಟಿದೆ ಬೆಲೆ?

ವಿಶ್ವದಾದ್ಯಂತ ಕೇಂದ್ರ ಬ್ಯಾಂಕುಗಳು ಭಾರೀ ಪ್ರಮಾಣದಲ್ಲಿ ಚಿನ್ನವನ್ನು ಖರೀದಿಸುತ್ತಿವೆ, ಇದು ಬೆಲೆ ಏರಿಕೆಗೆ ಕಾರಣವಾಗಿದೆ. 2026ರ ಹೊತ್ತಿಗೆ ಚಿನ್ನದ ಬೆಲೆ 10 ಗ್ರಾಂಗೆ 1.90 ಲಕ್ಷ ರೂ. ತಲುಪಬಹುದು ಎಂದು ಅಂದಾಜಿಸಿವೆ.