ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

3ನೇ ಮಗುವೂ ಹೆಣ್ಣಾಗಿದ್ದಕ್ಕೆ ಪತ್ನಿ, ಮಕ್ಕಳನ್ನು ಬಿಟ್ಟು ಮತ್ತೊಬ್ಬ ಯುವತಿಯ ಹಿಂದೆ ಹೋದ ಗಂಡ!

ಬೆಂಗಳೂರಿನಲ್ಲಿ ಈ ಘಟನೆ ನಡೆದಿದ್ದು, ಗಂಡನ ವಿರುದ್ಧ ಪತ್ನಿ ದೂರು ನೀಡಿದ್ದಾಳೆ. ಮೊದಲ ಇಬ್ಬರು ಮಕ್ಕಳು ಹೆಣ್ಣು ಎಂದು ಗೊತ್ತಾದಾಗ ಮೂರನೇಯ ಬಾರಿಗೆ ಗಂಡು ಹುಟ್ಟಬಹುದು ಎಂದು ಗಂಡ ಆಸೆ ಹೊಂದಿದ್ದ. ಆದರೆ ಮೂರನೇ ಮಗುವೂ ಹೆಣ್ಣಾಗಿದ್ದರಿಂದ ಪತ್ನಿ ಹಾಗೂ ಮಕ್ಕಳನ್ನೂ ಬಿಟ್ಟು ಗಂಡ ಪರಾರಿಯಾಗಿದ್ದಾನೆ.

ಮೂರನೇ ಮಗುವೂ ಹೆಣ್ಣಾಗಿದ್ದಕ್ಕೆ ಪತ್ನಿ ತೊರೆದು ಗಂಡ ಪರಾರಿ

ಬೆಂಗಳೂರಿನಲ್ಲಿ ಪತ್ನಿಯನ್ನು ಬಿಟ್ಟು ಪರಾರಿಯಾದ ಗಂಡ ಹರೀಶ್. -

Prabhakara R
Prabhakara R Jan 4, 2026 8:20 PM

ಬೆಂಗಳೂರು, ಜ.4: ಮೂರನೇ ಮಗುವೂ ಹೆಣ್ಣಾಗಿದ್ದಕ್ಕೆ ಪತ್ನಿ ಮತ್ತು ಮಕ್ಕಳನ್ನು ಬಿಟ್ಟು ಗಂಡ ಪರಾರಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಸಂಬಂಧ ನಗರದ ಈಶಾನ್ಯ ವಿಭಾಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹರೀಶ್ ಎಂಬಾತ ಪತ್ನಿಗೆ ಕೈಕೊಟ್ಟು ಪರಾರಿಯಾದ ವ್ಯಕ್ತಿ. ಹರೀಶ್ ಮೂಲತಃ ರಾಜಸ್ಥಾನದವನಾಗಿದ್ದು, ಬೆಂಗಳೂರಿನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಕೆಲಸ ಮಾಡುತ್ತಿದ್ದ. ಈತ ವರಲಕ್ಷ್ಮೀ ಎಂಬ ಸ್ಟಾಫ್ ನರ್ಸ್​ನ ಪ್ರೀತಿಸಿ ಮದುವೆಯಾಗಿದ್ದ. ಮದುವೆಯ ಹೊಸದರಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ, ಹುಟ್ಟಿದ ಮೂವರು ಮಕ್ಕಳು ಕೂಡ ಹೆಣ್ಣಾಗಿದ್ದರಿಂದ ಪತ್ನಿ ವರಲಕ್ಷ್ಮೀಗೆ ಹರೀಶ್ ಕೈಕೊಟ್ಟು ಪರಾರಿಯಾಗಿದ್ದಾನೆ.

ಮೊದಲ ಇಬ್ಬರು ಮಕ್ಕಳು ಹೆಣ್ಣು ಎಂದು ಗೊತ್ತಾದಾಗ ಮೂರನೇಯ ಬಾರಿಗೆ ಗಂಡು ಹುಟ್ಟಬಹುದು ಎಂದು ಹರೀಶ್‌ ಆಸೆ ಹೊಂದಿದ್ದ. ಆದರೆ ಹರೀಶ್ ಪತ್ನಿ ವಿಜಯಲಕ್ಷ್ಮೀ ಕಳೆದ ಒಂದೂವರೆ ತಿಂಗಳ ಹಿಂದೆ ಮತ್ತೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಇದೀಗ ಒಂದೂವರೆ ತಿಂಗಳ ಹಸುಗೂಸು ಸೇರಿ ಮೂವರು ಮಕ್ಕಳು ಹಾಗೂ ಪತ್ನಿಯನ್ನು ತೊರೆದು ಗಂಡ ನಾಪತ್ತೆಯಾಗಿದ್ದಾನೆ.

ಪತಿ ಕೈಕೊಟ್ಟ ಬೆನ್ನಲ್ಲೇ ಪತ್ನಿ ವರಲಕ್ಷ್ಮೀ ಆತನ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ. ಮೂವರು ಹೆಣ್ಮಕ್ಕಳು ಎಂದು ನಮ್ಮನ್ನು ಬಿಟ್ಟು ಹೋಗಿ ಮತ್ತೊಂದು ಮಹಿಳೆ ಜತೆ ವಾಸವಿದ್ದಾನೆ. ಈಗ ನನಗೆ ಮೂವರು ಮಕ್ಕಳನ್ನು ಸಾಕುವುದಕ್ಕೆ ಆಗುತ್ತಿಲ್ಲ. ಮಕ್ಕಳ ಶಾಲಾ ಶುಲ್ಕ, ಮನೆ ಬಾಡಿಗೆ ಕಟ್ಟಲೂ ಕೂಡ ಆಗುತ್ತಿಲ್ಲ. ಹಸುಗೂಸನ್ನು ಆರೈಕೆ ಮಾಡುವುದೇ ಕಷ್ಟವಾಗಿದೆ ಎಂದು ಆರೋಪಿಸಿ ಒಂದು ತಿಂಗಳ ಹಿಂದೆಯೇ ಈಶಾನ್ಯ ವಿಭಾಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಆದರೆ ಪೊಲೀಸರು, ಹರೀಶನನ್ನು ಪತ್ತೆ ಮಾಡಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾಳೆ.

ಗುಡಿಸಲಿಗೆ ಬೆಂಕಿ ಹಚ್ಚಿ ಲೀವ್‌ ಇನ್‌ ಜೋಡಿಯ ಕೊಲೆ; ಹತ್ಯೆಯ ಹಿಂದಿನ ಕಾಣದ ಕೈ ಯಾರದ್ದು?

ಹುಬ್ಬಳ್ಳಿ ಯುವತಿಯ ಮರ್ಯಾದಾ ಹತ್ಯೆ; ವಿಚಾರಣೆಗೆ ತ್ವರಿತಗತಿ ನ್ಯಾಯಾಲಯ

ಬೆಂಗಳೂರು: ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರದ ಮಾನ್ಯ ಎಂಬ ಯುವತಿಯ ಮರ್ಯಾದಾಗೇಡು ಹತ್ಯೆಗೆ (Hubli honor killing case) ಸಂಬಂಧಿಸಿ ಪ್ರಕರಣದ ತ್ವರಿತ ವಿಚಾರಣೆ ನಡೆದು, ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವುದು ನಮ್ಮ ಪ್ರಮುಖ ಆದ್ಯತೆ. ಈ ಹಿನ್ನೆಲೆಯಲ್ಲಿ ತ್ವರಿತಗತಿ ನ್ಯಾಯಾಲಯ ರಚನೆಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ಕೇಸ್‌ನಲ್ಲಿ ದಲಿತರ ಮೇಲಿನ ದೌರ್ಜನ್ಯ ಹಾಗೂ ಕೊಲೆ ಪ್ರಕರಣ ದಾಖಲಾಗಿದೆ. ಇದು ಅಟ್ರಾಸಿಟಿ ಪ್ರಕರಣವಾಗಿರುವುದರಿಂದ 60 ದಿನಗಳ ಒಳಗಾಗಿ ದೋಷರೋಪ ಪಟ್ಟಿ ಸಲ್ಲಿಸಬೇಕಾಗಿದೆ. ಹೀಗಾಗಿ ಖಾಸಗಿ ಪ್ರಾಸಿಕ್ಯೂಟರ್‌ರನ್ನು ನೇಮಕ ಮಾಡಿಕೊಳ್ಳಲು ಕ್ರಮ ವಹಿಸಲಾಗಿದೆ.

ಹೆಣ್ಣುಮಗಳೊಬ್ಬಳ ನಿಲುವಿಗೆ ವಿರುದ್ಧವಾಗಿ ಮದುವೆಗೆ ಬಲವಂತಪಡಿಸುವುದು ಅಥವಾ ಮದುವೆ ನಿರಾಕರಿಸುವುದು, ಜಾತಿಯಾಧಾರಿತ ಹಿಂಸೆ -ಹಲ್ಲೆ, ಮರ್ಯಾದಾಗೇಡು ಹತ್ಯೆಯಂತಹ ಘಟನೆಗಳು ಇಡೀ ಮಾನವ ಸಮಾಜ ತಲೆತಗ್ಗಿಸುವಂತಹ ಹೀನ ಕೃತ್ಯಗಳು. ಯಾವುದೇ ಕಾರಣಕ್ಕೂ ನಮ್ಮ ಸರ್ಕಾರ ಇದನ್ನು ಸಹಿಸುವುದಿಲ್ಲ. ಮುಂದೆ ಇಂತಹ ಘಟನೆಗಳಿಗೆ ಕಡಿವಾಣ ಹಾಕುವ ಹಾಗೂ ಜನರಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ವಿಶೇಷ ಕಾನೂನು ರಚನೆ ಮಾಡಲಾಗುವುದು. ಈ ಬಗ್ಗೆ ವಿಧಾನ ಮಂಡಲದ ಮುಂದಿನ ಅಧಿವೇಶನದಲ್ಲಿ ಚರ್ಚಿಸಿ, ಸೂಕ್ತ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ತಿಳಿಸಿದ್ದಾರೆ.