ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Road Accident: ಭೀಕರ ಅಪಘಾತ; ಅಮೆರಿಕದಲ್ಲಿ ಆಂಧ್ರ ಮೂಲದ ದಂಪತಿ ಸಾವು, ಮಕ್ಕಳು ಅನಾಥ

ಅಮೆರಿಕದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಪಾಲಕೊಲ್ಲುವಿನ ದಂಪತಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಗ ಮತ್ತು ಮಗಳು ಗಂಭೀರವಾಗಿ ಗಾಯಗೊಂಡಿದ್ದು, ತುರ್ತು ರಕ್ಷಣಾ ತಂಡವು ಮಕ್ಕಳನ್ನು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಿದೆ.

ಅಮೆರಿಕದಲ್ಲಿ ಆಂಧ್ರ ಮೂಲದ ದಂಪತಿ ಸಾವು, ಮಕ್ಕಳು ಅನಾಥ

ಆಂಧ್ರ ಮೂಲದ ಮೃತ ದಂಪತಿ -

Vishakha Bhat
Vishakha Bhat Jan 5, 2026 3:52 PM

ಹೈದರಾಬಾದ್‌: ಅಮೆರಿಕದಲ್ಲಿ (America) ನಡೆದ ಭೀಕರ ರಸ್ತೆ ಅಪಘಾತದಲ್ಲಿ ಆಂಧ್ರಪ್ರದೇಶದ (Andra Pradesh) ಪಶ್ಚಿಮ ಗೋದಾವರಿ ಜಿಲ್ಲೆಯ ಪಾಲಕೊಲ್ಲುವಿನ ದಂಪತಿ ಸ್ಥಳದಲ್ಲಿಯೇ (Road Accident) ಮೃತಪಟ್ಟಿದ್ದು, ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ವಾಷಿಂಗ್ಟನ್‌ನಲ್ಲಿ ಈ ಅಪಘಾತ ಸಂಭವಿಸಿದ್ದು, ಸಾಫ್ಟ್‌ವೇರ್ ಎಂಜಿನಿಯರ್ ಕೃಷ್ಣ ಕಿಶೋರ್ ಮತ್ತು ಅವರ ಪತ್ನಿ ಆಶಾ ತಮ್ಮ ಮಕ್ಕಳೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಅವರ ವಾಹನವು ತೀವ್ರ ಅಪಘಾತಕ್ಕೀಡಾಗಿದ್ದು, ದಂಪತಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಮಗ ಮತ್ತು ಮಗಳು ಗಂಭೀರವಾಗಿ ಗಾಯಗೊಂಡಿದ್ದು, ತುರ್ತು ರಕ್ಷಣಾ ತಂಡವು ಮಕ್ಕಳನ್ನು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಿದೆ. ಅವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇಡೀ ಕುಟುಂಬ 10 ದಿನಗಳ ಹಿಂದೆಯಷ್ಟೇ ಭಾರತಕ್ಕೆ ಬಂದು ಅಮೆರಿಕಕ್ಕೆ ವಾಪಸ್ಸಾಗಿದ್ದರು. ಅಮೆರಿಕಕ್ಕೆ ಹಿಂದಿರುಗುವ ಪ್ರಯಾಣದಲ್ಲಿ, ಕುಟುಂಬವು ದುಬೈನಲ್ಲಿ ವಿಶ್ರಾಂತಿ ಪಡೆದು, ಅಲ್ಲಿ ಒಟ್ಟಿಗೆ ಹೊಸ ವರ್ಷವನ್ನು ಆಚರಿಸಿದ್ದರು.

ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬದಲ್ಲಿ ಶೋಕ ಮಡುಗಟ್ಟಿದೆ. ಅಪಘಾತದಲ್ಲಿ ಬದುಕುಳಿದ ಮಕ್ಕಳ ನೆರವಿಗೆ ವಾಷಿಂಗ್ಟನ್‌ನ ತೆಲುಗು ಸಮುದಾಯ ಹಾಗೂ ಉತ್ತರ ಅಮೆರಿಕದ ತೆಲುಗು ಅಸೋಸಿಯೇಷನ್ (TANA) ಧಾವಿಸಿದೆ. ಅಲ್ಲದೆ ಮೃತದೇಹಗಳನ್ನು ಭಾರತಕ್ಕೆ ತರಲು ಮತ್ತು ಗಾಯಗೊಂಡ ಮಕ್ಕಳಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಪ್ರಯತ್ನಗಳು ನಡೆಯುತ್ತಿವೆ ಎನ್ನಲಾಗಿದೆ. ಕೆಲವೇ ದಿನಗಳ ಹಿಂದೆ ಅವರು ಭೇಟಿ ನೀಡಿದ್ದಾಗ ತುಂಬಾ ಸಂತೋಷಪಟ್ಟರು. ಈಗ ಈ ಸುದ್ದಿ ಕೇಳುವುದು ತುಂಬಾ ದುಃಖಕರವಾಗಿದೆ" ಎಂದು ಪಾಲಕೊಲ್ಲುವಿನಲ್ಲಿ ವಾಸಿಸುವ ಕುಟುಂಬದ ಆಪ್ತ ಸ್ನೇಹಿತರೊಬ್ಬರು ಹೇಳಿದ್ದಾರೆ.

ಅಬುದಾಬಿಯಲ್ಲಿ ಅಪಘಾತ

ಶನಿವಾರ ಮುಂಜಾನೆ ಅಬುಧಾಬಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಭಾರತೀಯ ಮೂಲದ ಮೂವರು ಮಕ್ಕಳು ಹಾಗೂ ಮನೆ ಸಹಾಯಕಿಯೊಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಒಡಹುಟ್ಟಿದವರಾದ ಅವರೆಲ್ಲರೂ ತಮ್ಮ ಕುಟುಂಬದ ಮನೆ ಸಹಾಯಕಿಯೊಂದಿಗೆ ವಾಹನದಲ್ಲಿ ಪ್ರಯಾಣಿಸುವಾಗ ಅಬುಧಾಬಿ-ದುಬೈ ಹೆದ್ದಾರಿಯ ಶಹಾಮಾದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಕೇರಳ ಮೂಲದ ಕುಟುಂಬವೊಂದಕ್ಕೆ ಸೇರಿದ ಈ ಮೂವರು ಮಕ್ಕಳು ರಾಸ್ ಅಲ್ ಖೈಮಾ ದಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಅಪಘಾತ ಸಂಭವಿಸಿದಾಗ ಅವರು ಯುಎಇ ರಾಜಧಾನಿ ಅಬುಧಾಬಿಯಲ್ಲಿ ಆಯೋಜನೆಗೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮುಗಿಸಿಕೊಂಡು ಮನೆಗೆ ಮರಳುತ್ತಿದ್ದರು ಎಂದು ಹೇಳಲಾಗಿದೆ.