ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಪುರುಷತ್ವ ಪರೀಕ್ಷೆ ಮಾಡಿಸಲು ಪತಿ ನಕಾರ; ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ

ಐದಾರು ತಿಂಗಳ ಹಿಂದೆ ನಡೆದ ಮದುವೆಯೊಂದು ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ಪ್ರಕರಣ ಬೆಂಗಳೂರಿನ ನೆಲಮಂಗಲ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹೆಸರಘಟ್ಟದ 26 ವರ್ಷದ ಯುವತಿ ಮತ್ತು ನೆಲಮಂಗಲದ 30 ವರ್ಷದ ಚಾರ್ಟೆಡ್ ಅಕೌಂಟೆಂಟ್‌ ಜೋಡಿ ಜೂನ್ 9ರಂದು ವೈಭವದಿಂದ ಮದುವೆಯಾಗಿದ್ದರು.

ಸಾಂದರ್ಭಿಕ ಚಿತ್ರ

ಬೆಂಗಳೂರು: ಐದಾರು ತಿಂಗಳ ಹಿಂದೆ ನಡೆದ ಮದುವೆಯೊಂದು ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ಪ್ರಕರಣ ಬೆಂಗಳೂರಿನ ನೆಲಮಂಗಲ ಟೌನ್ ಪೊಲೀಸ್ (Viral News) ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹೆಸರಘಟ್ಟದ 26 ವರ್ಷದ ಯುವತಿ ಮತ್ತು ನೆಲಮಂಗಲದ 30 ವರ್ಷದ ಚಾರ್ಟೆಡ್ ಅಕೌಂಟೆಂಟ್‌ ಜೋಡಿ ಜೂನ್ 9ರಂದು ವೈಭವದಿಂದ ಮದುವೆಯಾಗಿದ್ದರು. ಸಾಕಷ್ಟು ವರದಕ್ಷಿಣೆ ಹಾಗೂ ಚಿನ್ನಾಭರಣ ನೀಡಿ ಮದುವೆ ಮಾಡಲಾಗಿತ್ತು. ಆದರೆ ಈ ಜೋಡಿಯ ಮೊದಲ ರಾತ್ರಿಯಿಂದ ಸಮಸ್ಯೆ ಪ್ರಾರಂಭವಾಗಿತ್ತು.

ದಂಪತಿಗೆ ಮಕ್ಕಳಲಾಗಲಿಲ್ಲ ಎಂದು ಗಂಡನ ಮನೆಯವರು ದೂರಲು ಪ್ರಾರಂಭಿಸಿದ್ದರು. ದಂಪತಿಗೆ ಮಕ್ಕಳಾಗದಿರುವ ಬಗ್ಗೆ ಮನೆಯವರಲ್ಲಿ ಆತಂಕ ಹೆಚ್ಚಾಗುತ್ತಿದ್ದಂತೆ, ಎರಡೂ ಕುಟುಂಬಗಳು ವೈದ್ಯಕೀಯ ಪರೀಕ್ಷೆ ನಡೆಸುವ ನಿರ್ಧಾರಕ್ಕೆ ಬಂದಿವೆ. ಬೆಂಗಳೂರಿನ ಕ್ಲೌಡ್ ನೈನ್ ಫರ್ಟಿಲಿಟಿ ಆಸ್ಪತ್ರೆಯಲ್ಲಿ ತಪಾಸಣೆ ನಡೆದಿದ್ದು, ವಧುವಿನ ಎಲ್ಲಾ ವೈದ್ಯಕೀಯ ವರದಿಗಳು ಸಾಮಾನ್ಯವಾಗಿದ್ದವು. ಆದರೆ ಪತಿಯು ಪುರುಷತ್ವ ಪರೀಕ್ಷೆ ಮಾಡಿಸದೇ, ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ.

ಘಟನೆ ಬಳಿಕ ಮಹಿಳೆ ದೂರು ನೀಡಿದ್ದು, ತನಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲಾಗುತ್ತಿತ್ತು ಎಂದು ನೆಲಮಂಗಲ ಟೌನ್ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಪತಿ, ಅತ್ತೆ ಹಾಗೂ ಮಾವನ ವಿರುದ್ಧ ಸೆಕ್ಷನ್ 85 (BNS) ಮತ್ತು ಡೌರಿ ಪ್ರೊಹಿಬಿಷನ್ ಆಕ್ಟ್‌ನ ಸೆಕ್ಷನ್ 3, 4 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಾಗುತ್ತಿದ್ದಂತೆಯೇ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ಬಗ್ಗೆ ಸಂಪೂರ್ಣ ತನಿಖೆ ಆರಂಭಿಸಿದ ನೆಲಮಂಗಲ ಪೊಲೀಸರು, ಆರೋಪಿಗಳ ಶೋಧ ಕಾರ್ಯ ಆರಂಭಿಸಿದ್ದಾರೆ.

ಮಹಾರಾಷ್ಟ್ರದ ಥಾಣೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ತಲಾಖ್​ ನೀಡಿದ್ದು, ಆತನ ವಿರುದ್ಧ ಪ್ರಕರಣ ದಾಖಲಾಗಿದೆ. ಭಿವಾಂಡಿ ನಗರದ ನಿವಾಸಿಯಾದ 25 ವರ್ಷದ ಸಂತ್ರಸ್ತ ಯುವತಿಯನ್ನು ಉತ್ತರ ಪ್ರದೇಶದ ಸುಲ್ತಾನ್‌ಪುರ ಜಿಲ್ಲೆಯ ರಶೀದ್ ಎಂಬಾತನ ಜೊತೆ ಕೆಲವು ತಿಂಗಳ ಹಿಂದೆ ವಿವಾಹ ಮಾಡಿಸಲಾಗಿತ್ತು. ಮದುವೆ ಕಾರ್ಯಕ್ರಮಗಳನ್ನು ಮುಗಿಸಿಕೊಂಡು ಆಕೆ ಗಂಡನ ಮನೆಗೆ ಹೋಗಿದ್ದಳು. ಕೆಲ ದಿನಗಳ ಬಳಿಕ ಆಕೆಯನ್ನು ಪತಿಯ ಕುಟುಂಬಸ್ಥರು ಹಿಂಸಿಸಲು ಆರಂಭಿಸಿದ್ದಾರೆ. ವಿವಾಹದ ವೇಳೆ ಕನ್ಯೆಯ ಮನೆಯವರಿಂದ ಕಡೆಯಿಂದ ವರದಕ್ಷಿಣೆ ರೂಪದಲ್ಲಿ ಬುಲೆಟ್​ ಬೈಕ್​ ಕೊಡುವ ವಾಗ್ದಾನ ಮಾಡಲಾಗಿತ್ತು. ಆದರೆ, ಬೈಕ್​ ಕೊಡಿಸದ ಕಾರಣಕ್ಕಾಗಿ ಗಂಡನ ಕಡೆಯವರು ಯುವತಿಯನ್ನು ಪೀಡಿಸಲು ಶುರು ಮಾಡಿದ್ದರು. ಕಳೆದ ತಿಂಗಳು ಆಕೆಯನ್ನು ನಿಂದಿಸಿದ್ದಲ್ಲದೆ, ಹಲ್ಲೆ ಮಾಡಿದ್ದಾರೆ. ಬಳಿಕ ಪತಿ ತ್ರಿವಳಿ ತಲಾಖ್​ ಹೇಳಿ ವಿಚ್ಛೇದನ ನೀಡಿದ್ದಾಗಿ ಘೋಷಿಸಿದ್ದಾನೆ.

Thawarchand Gehlot: ರಾಜ್ಯಪಾಲರ ಮೊಮ್ಮಗನ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ; ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ

ಈ ಕುರಿತು ಸಂತ್ರಸ್ತ ಯುವತಿ ತವರಿಗೆ ವಾಪಸ್​ ಬಂದು, ತನಗಾದ ಅನ್ಯಾಯದ ವಿರುದ್ಧ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ. ಮದುವೆಯ ವೇಳೆ ವರದಕ್ಷಿಣೆ ರೂಪದಲ್ಲಿ ಚಿನ್ನ ನೀಡಲಾಗಿದೆ. ಬುಲೆಟ್​ ಬೈಕ್​ ನೀಡಿಲಿಲ್ಲ ಎಂಬ ಕಾರಣಕ್ಕಾಗಿ ತಲಾಖ್​ (ವಿಚ್ಛೇದನ) ನೀಡಿದ್ದಾರೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ.