ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬಿಸಿನೆಸ್ ಪ್ರಯಾಣಿಕರಿಗಾಗಿ ಕಾರ್ಪೊರೇಟ್ ಸಫೈರೋ ಫಾರೆಕ್ಸ್ ಕಾರ್ಡ್ ಅನ್ನು ಬಿಡುಗಡೆ ಮಾಡಿದ ಐಸಿಐಸಿಐ ಬ್ಯಾಂಕ್ ಮತ್ತು ವೀಸಾ

ಬ್ಯಾಂಕ್‌ ನಲ್ಲಿ ಕರೆಂಟ್ ಅಕೌಂಟ್ ಹೊಂದಿರುವ ಉದ್ಯಮಿಗಳು ಮತ್ತು ಏಕೈಕ ಮಾಲೀಕರುಗಳು ಈಗ ಬ್ಯಾಂಕ್‌ ನ ಬಿಸಿನೆಸ್ ಬ್ಯಾಂಕಿಂಗ್ ಆ್ಯಪ್ ಆದ ಇನ್ಸ್ಟಾ‌ಬಿಜ್ ಮೂಲಕ ಕಾರ್ಡ್ ಗೆ ಡಿಜಿಟಲ್ ಆಗಿ ಅರ್ಜಿ ಸಲ್ಲಿಸಬಹುದು, ಆಕ್ಟಿವೇಟ್ ಮಾಡಬಹುದು ಮತ್ತು ಲೋಡ್ ಮಾಡಬಹುದು. ಇದು ಶೀಘ್ರದಲ್ಲಿ ದೊಡ್ಡ ಕಾರ್ಪೊರೇಟ್‌ ಗಳ ನೌಕರರಿಗೆ ಲಭ್ಯವಾಗುತ್ತದೆ. ಇದರಿಂದ ಐಸಿಸಿಐಸಿಐ ಬ್ಯಾಂಕ್, ಫಾರೆಕ್ಸ್ ಕಾರ್ಡ್ ಕ್ಷೇತ್ರದಲ್ಲಿ ಬಿಸಿನೆಸ್ ಬ್ಯಾಂಕಿಂಗ್ ಗ್ರಾಹಕರಿಗೆ ಸಂಪೂರ್ಣ ಡಿಜಿಟಲ್ ಸೌಲಭ್ಯವನ್ನು ನೀಡುವ ಭಾರತದ ಏಕೈಕ ಬ್ಯಾಂಕ್ ಆಗಿ ಹೊರಹೊಮ್ಮಲಿದೆ.

ಫಾರೆಕ್ಸ್ ಕಾರ್ಡ್ ಬಿಡುಗಡೆ ಮಾಡಿದ ಐಸಿಐಸಿಐ ಬ್ಯಾಂಕ್ ಮತ್ತು ವೀಸಾ

-

Ashok Nayak Ashok Nayak Oct 11, 2025 9:04 AM

ಅಂತರರಾಷ್ಟ್ರೀಯ ಪ್ರವಾಸ ಮಾಡುವ ಉದ್ಯಮಿಗಳು ಮತ್ತು ಕಾರ್ಪೊರೇಟ್ ಮಂದಿಗೆ ಈ ಕಾರ್ಡ್ ವಿಶೇಷ ಸೌಲಭ್ಯಗಳನ್ನು ನೀಡುತ್ತದೆ. ಗ್ರಾಹಕರು ಡಿಜಿಟಲ್ ಮೂಲಕ ಕಾರ್ಡ್ ಗೆ ತಕ್ಷಣ ಅರ್ಜಿ ಹಾಕಬಹುದು ಮತ್ತು ಲೋಡ್ ಮಾಡಬಹುದು • ಟಾಪ್ ಟೈರ್ ಕಾರ್ಡ್‌ಗಳಿಗಾಗಿ ಇರುವ ಪ್ರೀಮಿಯಂ ಪ್ಲಾಟ್‌ ಫಾರ್ಮ್‌ ವೀಸಾ ಇನ್ಫಿನಿಟ್ ಆಧರಿತವಾದ ಪ್ರೀಪೇಯ್ಡ್ ಕಾರ್ಡ್ ಅನ್ನು ಒದಗಿಸುತ್ತಿರುವ ಏಷ್ಯಾದ ಮೊದಲ ಬ್ಯಾಂಕ್.

ಬೆಂಗಳೂರು: ಐಸಿಐಸಿಐ ಬ್ಯಾಂಕ್ ಮತ್ತು ವೀಸಾ ಸಂಸ್ಥೆಗಳು ಜಂಟಿಯಾಗಿ ಭಾರತದ ಉದ್ಯಮಿ ಗಳು ಮತ್ತು ಕಾರ್ಪೊರೇಟ್ ಮಂದಿಗೆ ವಿದೇಶ ಪ್ರವಾಸ ಸಂದರ್ಭದಲ್ಲಿ ಅನುಕೂಲ ಒದಗಿಸುವ ಪ್ರೀಪೇಯ್ಡ್ ಫಾರೆಕ್ಸ್ ಕಾರ್ಡ್ ಆಗಿರುವ ಕಾರ್ಪೊರೇಟ್ ಸಫೈರೋ ಫಾರೆಕ್ಸ್ ಕಾರ್ಡ್ ಅನ್ನು ಬಿಡುಗಡೆ ಮಾಡಿವೆ. ಬಿಸಿನೆಸ್ ಪ್ರಯಾಣಿಕರಿಗಾಗಿ ರೂಪಿಸಲಾದ ಮೊದಲ ಬಗೆಯ ಕಾರ್ಡ್ ಆಗಿದ್ದು, ವೀಸಾ ಇನ್ಫಿನಿಟ್ ಸೌಲಭ್ಯಗಳು ದೊರೆಯಲಿದೆ ಮತ್ತು ಪ್ರೀಪೇಯ್ಡ್ ಫಾರೆಕ್ಸ್ ಕಾರ್ಡ್‌ ನ ಅನುಕೂಲತೆ ಲಭ್ಯವಾಗಲಿದೆ.

ಆಗಾಗ ಪ್ರಯಾಣ ಮಾಡುವ ಉದ್ಯಮ ಪ್ರಯಾಣಿಕರಿಗೆ ಹಲವಾರು ಲೈಫ್ ಸ್ಟೈಲ್ ಪ್ರಯೋಜನಗಳು, ಅಪೂರ್ವ ಸೌಲಭ್ಯ ಮತ್ತು ಮೌಲ್ಯವನ್ನು ಒದಗಿಸಲಾಗುತ್ತದೆ. ಕಾರ್ಪೊರೇಟ್ ಸಫೈರೋ ಫಾರೆಕ್ಸ್ ಕಾರ್ಡ್ ಪ್ರೀಮಿಯಂ ಮಟ್ಟದ ಪ್ರವಾಸ ಮತ್ತು ಜೀವನಶೈಲಿ ಪ್ರಯೋಜನಗಳನ್ನು ನೀಡುತ್ತದೆ.

ಇದು ಬ್ಯಾಂಕ್‌ ನ ಕರೆಂಟ್ ಖಾತೆಗೆ ಸಂಬಂಧಿಸಿದ ಕಾರ್ಪೊರೇಟ್ ಪ್ರೀಪೇಯ್ಡ್ ಫಾರೆಕ್ಸ್ ಕಾರ್ಡ್‌ ನಲ್ಲಿ ದೊರೆಯುತ್ತಿರುವ ಮೊದಲ ಪ್ರಯೋಜನವಾಗಿದೆ. ₹15,000ಕ್ಕಿಂತ ಹೆಚ್ಚಿನ ಮೌಲ್ಯದ ವಿಶೇಷ ಪ್ರಯೋಜನಗಳು, ಎರಡು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಾಂಜ್‌ ಗಳಿಗೆ ಉಚಿತ ಭೇಟಿ ನೀಡುವ ಅವಕಾಶ, ಬಿಸಿನೆಸ್ ಪ್ರಯಾಣಿಕರಿಗೆ ಸುಗಮ ವಿಮಾನ ನಿಲ್ದಾಣ ಅನುಭವವನ್ನು ನೀಡುವ ‘ಮೀಟ್ ಅಂಡ್ ಅಸಿಸ್ಟ್’ ಸೇವೆಗಳು ಮತ್ತು ವಿಶೇಷ ಪ್ರವಾಸ ಮತ್ತು ಲೈಫ್ ಸ್ಟೈಲ್ ರಿಯಾಯಿತಿಗಳು ದೊರೆಯಲಿವೆ.

ಈ ಕಾರ್ಡ್ 15 ಕರೆನ್ಸಿಗಳನ್ನು ಲೋಡ್ ಮಾಡಿ ಮತ್ತು ವಹಿವಾಟು ಮಾಡುವ ಸ್ವಾತಂತ್ರ್ಯ ಮತ್ತು ಸೌಲಭ್ಯವನ್ನು ನೀಡುತ್ತದೆ. ಇದಲ್ಲದೆ, ಕ್ರಾಸ್-ಕರೆನ್ಸಿ ಮಾರ್ಕ್-ಅಪ್ ಶುಲ್ಕ ಜೀರೋ ಆಗಿದ್ದು, ಗ್ರಾಹಕರು ಕಾರ್ಡ್‌ ನಲ್ಲಿ ಒಂದು ಕರೆನ್ಸಿಯನ್ನು ಮಾತ್ರ ಲೋಡ್ ಮಾಡಿದರೂ ಸಹ ಜಗತ್ತಿನಾ ದ್ಯಂತ ಸುಲಭವಾಗಿ ಪ್ರವಾಸ ಮಾಡಬಹುದು. ಸ್ವಾಗತ ಕಿಟ್‌ ನೊಂದಿಗೆ ಎರಡು ಕಾರ್ಡ್‌ಗಳು ಬರುತ್ತವೆ, ಅದರಲ್ಲಿ ಪ್ರೈಮರಿ ಕಾರ್ಡ್ ಮತ್ತು ರಿಪ್ಲೇಸ್ ಮೆಂಟ್ ಕಾರ್ಡ್ ಇರುತ್ತದೆ. ರಿಪ್ಲೇಸ್ ಮೆಂಟ್ ಕಾರ್ಡ್, ಪ್ರೈಮರಿ ಕಾರ್ಡ್ ಕಳೆದು ಹೋದರೆ ಬ್ಯಾಕ್-ಅಪ್ ಆಗಿ ಕಾರ್ಯನಿರ್ವಹಿಸುತ್ತದೆ.

ಇದನ್ನೂ ಓದಿ: Roopa Gururaj Column: ವಿಧಿಬರಹ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ

ಬ್ಯಾಂಕ್‌ ನಲ್ಲಿ ಕರೆಂಟ್ ಅಕೌಂಟ್ ಹೊಂದಿರುವ ಉದ್ಯಮಿಗಳು ಮತ್ತು ಏಕೈಕ ಮಾಲೀಕರುಗಳು ಈಗ ಬ್ಯಾಂಕ್‌ ನ ಬಿಸಿನೆಸ್ ಬ್ಯಾಂಕಿಂಗ್ ಆ್ಯಪ್ ಆದ ಇನ್ಸ್ಟಾ‌ಬಿಜ್ ಮೂಲಕ ಕಾರ್ಡ್ ಗೆ ಡಿಜಿಟಲ್ ಆಗಿ ಅರ್ಜಿ ಸಲ್ಲಿಸಬಹುದು, ಆಕ್ಟಿವೇಟ್ ಮಾಡಬಹುದು ಮತ್ತು ಲೋಡ್ ಮಾಡಬಹುದು. ಇದು ಶೀಘ್ರದಲ್ಲಿ ದೊಡ್ಡ ಕಾರ್ಪೊರೇಟ್‌ ಗಳ ನೌಕರರಿಗೆ ಲಭ್ಯವಾಗುತ್ತದೆ. ಇದರಿಂದ ಐಸಿಸಿಐಸಿಐ ಬ್ಯಾಂಕ್, ಫಾರೆಕ್ಸ್ ಕಾರ್ಡ್ ಕ್ಷೇತ್ರದಲ್ಲಿ ಬಿಸಿನೆಸ್ ಬ್ಯಾಂಕಿಂಗ್ ಗ್ರಾಹಕರಿಗೆ ಸಂಪೂರ್ಣ ಡಿಜಿಟಲ್ ಸೌಲಭ್ಯವನ್ನು ನೀಡುವ ಭಾರತದ ಏಕೈಕ ಬ್ಯಾಂಕ್ ಆಗಿ ಹೊರಹೊಮ್ಮಲಿದೆ. ಕಾರ್ಡ್ ಗೆ ಅರ್ಜಿ ಹಾಕಿ, ಸಕ್ರಿಯಗೊಳಿಸಿ ಮತ್ತು ಲೋಡ್ ಮಾಡುವ ಸೌಲಭ್ಯ ಶೀಘ್ರದಲ್ಲಿ ಕಾರ್ಪೊರೇಟ್ ಇಂಟರ್ನೆಟ್ ಬ್ಯಾಂಕಿಂಗ್‌ ನಲ್ಲಿ ಲಭ್ಯವಾಗುತ್ತದೆ.

ಹೊಸ ಕಾರ್ಡ್ ಬಗ್ಗೆ ಮಾತನಾಡಿದ ಐಸಿಐಸಿಐ ಬ್ಯಾಂಕ್‌ ನ ಕಾರ್ಡ್‌ಗಳು ಮತ್ತು ಪೇಮೆಂಟ್ ಸೊಲ್ಯೂಶನ್ಸ್ ಹೆಡ್ ಮಿಸ್ಟರ್ ವಿಪುಲ್ ಅಗರ್ವಾಲ್ ಅವರು, “ಬಿಸಿನೆಸ್ ಪ್ರಯಾಣಿಕರಿಗಾಗಿ ಪ್ರೀಮಿಯಂ ಫಾರೆಕ್ಸ್ ಕಾರ್ಡ್‌ ನ ಹೊಸ ವರ್ಗಕ್ಕೆ ನಮ್ಮ ಫಾರೆಕ್ಸ್ ಕಾರ್ಡ್‌ ಗಳ ವ್ಯಾಪ್ತಿಯನ್ನು ವಿಸ್ತರಿಸಲು ವೀಸಾದೊಂದಿಗೆ ಸಹಯೋಗ ಮಾಡಿಕೊಂಡಿರುವುದಕ್ಕೆ ನಾವು ಸಂತೋಷ ಪಡುತ್ತೇವೆ. ಭಾರತೀಯ ಉದ್ಯಮಗಳು ಮತ್ತು ಕಾರ್ಪೊರೇಟ್‌ ಸಂಸ್ಥೆಗಳು ಅಂತರರಾಷ್ಟ್ರೀಯವಾಗಿ ಬೆಳೆಯು ತ್ತಿರುವಂತೆ ವ್ಯಾಪಾರ ಖಾತೆಗೆ ಸಂಬಂಧಿಸಿದ ಪ್ರೀಮಿಯಂ ಫಾರೆಕ್ಸ್ ಕಾರ್ಡ್‌ ಗೆ ವಿಶೇಷ ಸೌಲಭ್ಯಗಳು ದೊರೆಯಬೇಕಾದ ಅಗತ್ಯವನ್ನು ನಾವು ಊಹಿಸುತ್ತೇವೆ.

ಇನ್ಸ್ಟಾ‌ಬಿಜ್ ಮತ್ತು ಕಾರ್ಪೊರೇಟ್ ಇಂಟರ್ನೆಟ್ ಬ್ಯಾಂಕಿಂಗ್‌ ನ ಡಿಜಿಟಲ್ ಸೌಲಭ್ಯಗಳು ಬಿಸಿನೆಸ್ ಪ್ರಯಾಣಿಕರಿಗೆ ಎಲ್ಲೇ ಇದ್ದರೂ ಅವರ ಕಾರ್ಡ್‌ ಗಳಿಗೆ ಅರ್ಜಿ ಹಾಕಲು, ಲೋಡ್ ಮಾಡಲು ಮತ್ತು ನಿರ್ವಹಿಸಲು ಅನುವು ಮಾಡಿಕೊಡುತ್ತವೆ. ಆದ್ದರಿಂದ, ಕಾರ್ಪೊರೇಟ್ ಸಫೈರೋ ಫಾರೆಕ್ಸ್ ಕಾರ್ಡ್‌ ಅನ್ನು ಉದ್ಯಮ ಮಾಲೀಕರಿಗಾಗಿ ರೂಪಿಸಲ್ಪಟ್ಟಿದ್ದು, ಏಷ್ಯಾದಲ್ಲಿ ಮೊದಲ ಬಾರಿಗೆ ಮುಂಗಾರು ಫಾರೆಕ್ಸ್ ಕಾರ್ಡ್‌ ಗೆ ವೀಸಾ ಇನ್ಫಿನಿಟ್ ಪ್ಲಾಟ್‌ಫಾರ್ಮ್‌ ನ ಆಕರ್ಷಕ ಲಾಭಗಳನ್ನು ಒದಗಿಸುತ್ತದೆ” ಎಂದು ಹೇಳಿದರು.

ವೀಸಾ ಇಂಡಿಯಾ ಮತ್ತು ಸೌತ್ ಏಷ್ಯಾದ ಕಮರ್ಷಿಯಲ್ ಮತ್ತು ಮನಿ ಮೂವ್‌ಮೆಂಟ್ ಸೊಲ್ಯೂ ಶನ್ಸ್ ಹೆಡ್ ಶ್ರುತಿ ಗುಪ್ತಾ ಅವರು ಮಾತನಾಡಿ, "ಕಾರ್ಪೊರೇಟ್ ಸಫೈರೋ ಫಾರೆಕ್ಸ್ ಕಾರ್ಡ್ ಅನ್ನು ಆರಂಭಿಸಲು ಐಸಿಸಿಐಸಿಐ ಬ್ಯಾಂಕ್‌ ನೊಂದಿಗೆ ಸಹಯೋಗ ಮಾಡುವುದಕ್ಕೆ ನಾವು ಸಂತೋಷ ಪಡುತ್ತೇವೆ. ಈ ಸಹಯೋಗ ವ್ಯಾಪಾರ ಪೇಮೆಂಟ್‌ ಗಳಲ್ಲಿ ನವೀನತೆ ಒದಗಿಸುವ, ಅತ್ಯುತ್ತಮ ಗ್ರಾಹಕ ಅನುಭವ ಒದಗಿಸುವ ವೀಸಾ ಮತ್ತು ಐಸಿಐಸಿಐ ಬ್ಯಾಂಕ್‌ ನ ಬದ್ಧತೆಯನ್ನು ಸಾರುತ್ತದೆ. ಈ ಪ್ರೀಪೇಯ್ಡ್ ಫಾರೆಕ್ಸ್ ಕಾರ್ಡ್ ಅತ್ಯುತ್ತಮ ಸೌಲಭ್ಯ, ನಿಯಂತ್ರಣ ಮತ್ತು ವೀಸಾದ ಅನಂತ ಲಾಭ ಗಳನ್ನು ವಿಶಿಷ್ಟ ಸಂಯೋಜನೆಯನ್ನು ನೀಡುತ್ತದೆ” ಎಂದು ಹೇಳಿದರು.

ಬಿಸಿನೆಸ್ ಪ್ರಯಾಣಿಕರಿಗೆ ಒದಗುವ ಪ್ರಮುಖ ಲಾಭಗಳು: • ಪ್ರಯಾಣದಲ್ಲಿ ವಿಶಿಷ್ಟ ಸೌಲಭ್ಯಗಳು: o ಎರಡು ಉಚಿತ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಾಂಜ್ ಭೇಟಿ ಅವಕಾಶ o ಸೊಗಸಾದ ವಿಮಾನ ನಿಲ್ದಾಣ ಅನುಭವಕ್ಕಾಗಿ ಮೀಟ್ ಅಂಡ್ ಅಸಿಸ್ಟ್ ಸೇವೆಗಳು o ವೀಸಾದಿಂದ ನೀಡಲ್ಪ ಡುವ ಉಚಿತ ಅಂತರರಾಷ್ಟ್ರೀಯ ಇಎಸ್‌ಐಎಂ ಕಾರ್ಡ್ • ಪ್ರತೀ ತಿಂಗಳು ಮೂರು ಎಟಿಎಂ ಶುಲ್ಕ ಮನ್ನಾ ಕ್ಯಾಶ್ ವಿತ್ ಡ್ರಾವಲ್ ಗಳು • ಅಪೂರ್ವ ಮೌಲ್ಯ: ಸುರಕ್ಷಿತ ಮತ್ತು ವೆಚ್ಚ-ಪರಿಣಾಮಕಾರಿ ಜಾಗತಿಕ ವಹಿವಾಟುಗಳಿಗಾಗಿ • ಜೀರೋ ಕ್ರಾಸ್-ಕರೆನ್ಸಿ ಮಾರ್ಕ್‌ಅಪ್ • ಡಿಜಿಟಲ್ ಅನುಭವ : o ಇನ್ಸ್ಟಾ‌ಬಿಜ್ ಮೂಲಕ ತಕ್ಷಣ ಅರ್ಜಿ ಹಾಕಬಹುದು ಮತ್ತು ಆಕ್ಟಿವೇಟ್ ಮಾಡಬಹುದು o ಅವಿರತ ಬಳಕೆಗಾಗಿ ರಿಯಲ್- ಟೈಮ್ ಲೋಡ್‌ ಅವಕಾಶ • ವಿಶೇಷ ಸೌಲಭ್ಯಗಳು: ಟಾಪ್ ಜಾಗತಿಕ ಹೋಟೆಲ್ ಚೈನ್‌ ಗಳು ಮತ್ತು ವಿಮಾನಗಳಲ್ಲಿ ವಿಶೇಷ ದರ ಸೌಲಭ್ಯ ಕಾರ್ಪೊರೇಟ್ ಸಫೈರೋ ಫಾರೆಕ್ಸ್ ಕಾರ್ಡ್ ಜಾಯಿನಿಂಗ್ ಫೀ ₹2,999 + ಜಿಎಸ್‌ಟಿ ಬೆಲೆಯಲ್ಲಿ ದೊರೆಯುತ್ತದೆ.