ಟಾಟಾ ಮೋಟಾರ್ಸ್ ಕಮರ್ಷಿಯಲ್ ವೆಹಿಕಲ್ಸ್ ಶೂನ್ಯ-ಹೊರಸೂಸುವಿಕೆ ಟ್ರಕ್ಕಿಂಗ್ ಮುಂದುವರಿಕೆ
ಎನ್ವಿರೋ ವೀಲ್ಸ್ ಮೊಬಿಲಿಟಿಗೆ ಪ್ರೈಮಾ ಇ.55ಎಸ್ ಎಲೆಕ್ಟ್ರಿಕ್ ಪ್ರೈಮ್ ಮೂವರ್ ಗಳ ಮೊದಲ ಬ್ಯಾಚ್ ಅನ್ನು ವಿತರಿಸಿರುವುದು ಸಂತೋಷ ತಂದಿದೆ. ಟ್ರಕ್ ವಿಭಾಗದಲ್ಲಿ ಮಾರುಕಟ್ಟೆಯಲ್ಲಿ ಮುಂಚೂಣಿ ಯಲ್ಲಿರುವ ಟಾಟಾ ಮೋಟಾರ್ಸ್ ಕಮರ್ಷಿಯಲ್ ವೆಹಿಕಲ್ಸ್, ಸುಧಾರಿತ ಉತ್ಪನ್ನ ಗಳೊಂದಿಗೆ ಭಾರತದ ಸುಸ್ಥಿರ ಸರಕು ಸಾಗಣೆಗೆ ಕೊಡುಗೆ ನೀಡುತ್ತಿರುವುದಕ್ಕೆ ಹೆಮ್ಮೆ ಪಡುತ್ತದೆ

-

ಬೆಂಗಳೂರು: ಸುಸ್ಥಿರ ಸಾರಿಗೆ ಉತ್ಪನ್ನಗಳ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಟಾಟಾ ಮೋಟಾರ್ಸ್ ಕಮರ್ಷಿಯಲ್ ವೆಹಿಕಲ್ಸ್ ಸಂಸ್ಥೆಯು ವಿದ್ಯುತ್, ಗಣಿಗಾರಿಕೆ, ಸಿಮೆಂಟ್ ಮತ್ತು ಉಕ್ಕು ಕ್ಷೇತ್ರಗಳಿಗೆ ಹಸಿರು ವಾಣಿಜ್ಯ ಸಾರಿಗೆ ಉತ್ಪನ್ನಗಳನ್ನು ಒದಗಿಸುವ ಪ್ರಮುಖ ಸಂಸ್ಥೆಯಾದ ಎನ್ವಿರೋ ವೀಲ್ಸ್ ಮೊಬಿಲಿಟಿಗೆ ಅತ್ಯಾಧುನಿಕ ಟಾಟಾ ಪ್ರೈಮಾ ಇ.55ಎಸ್ ಬ್ಯಾಟರಿ ಎಲೆಕ್ಟ್ರಿಕ್ ಪ್ರೈಮ್ ಮೂವರ್ ಗಳ ವಿತರಣೆಯನ್ನು ಇಂದು ಆರಂಭಿಸಿದೆ. ಮೊದಲ ಬ್ಯಾಚ್ ನ ವಾಹನಗಳನ್ನು ಇಂದು ರಾಜಸ್ಥಾನದ ಚಿತ್ತೋರ್ ಗಢದಲ್ಲಿ ಹಸ್ತಾಂತರಿಸಲಾಯಿತು. ಹೆವೀ- ಡ್ಯೂಟಿ, ಜೀರೋ-ಎಮಿಷನ್ ಸಾಮರ್ಥ್ಯದ ಈ ಪ್ರೈಮಾ ಇ.55ಎಸ್ ಅನ್ನು ಖನಿಜಗಳು ಮತ್ತು ಅದಿರುಗಳ ಸಾಗಣೆಗೆ ಬಳಸಲಾಗುವುದು.
ಈ ವಾಹನಗಳ ಮೊದಲ ಬ್ಯಾಚ್ ಅನ್ನು ಸ್ವೀಕರಿಸಿದ ಎನ್ವಿರೋ ವೀಲ್ಸ್ ಮೊಬಿಲಿಟಿ ಮತ್ತು ಇನ್ ಲ್ಯಾಂಡ್ ವರ್ಲ್ಡ್ ಲಾಜಿಸ್ಟಿಕ್ಸ್ ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪ್ರವೀಣ್ ಸೋಮಾನಿ ಅವರು ಈ ಸಂದರ್ಭದಲ್ಲಿ ಮಾತನಾಡಿ, “ಸುಸ್ಥಿರ ಸಾಗಾಣಿಕೆಗೆ ಬದ್ಧವಾಗಿರುವ ಯುವ ಕಂಪನಿಯಾಗಿ ನಮಗೆ ಟಾಟಾ ಮೋಟಾರ್ಸ್ ಕಮರ್ಷಿಯಲ್ ವೆಹಿಕಲ್ಸ್ ನ ಅತ್ಯಾಧುನಿಕ ಎಲೆಕ್ಟ್ರಿಕ್ ಪ್ರೈಮ್ ಮೂವರ್ ಗಳನ್ನು ನಮ್ಮ ವಾಹನ ಸಮೂಹಕ್ಕೆ ಸೇರಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಯಾಗಿದೆ ಮತ್ತು ಕಾರ್ಬನ್- ಮುಕ್ತ ಕಾರ್ಯಾಚರಣೆಯತ್ತ ಸಾಗುವ ಪಯಣದಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ.
ಶೂನ್ಯ ಹೊರಸೂಸುವಿಕೆ, ಉನ್ನತ ಕಾರ್ಯಕ್ಷಮತೆ ಮತ್ತು ಸುಧಾರಿತ ಸುರಕ್ಷತೆ ಹಾಗೂ ಅನುಕೂಲಕರ ಫೀಚರ್‌ಗಳೊಂದಿಗೆ, ಪ್ರೈಮಾ ಇ.55ಎಸ್ ನಮ್ಮ ಗ್ರಾಹಕರ ಶೂನ್ಯ-ಕಾರ್ಬನ್ ಗುರಿಗಳನ್ನು ಸಾಧಿಸಲು ಆದರ್ಶ ಆಯ್ಕೆಯಾಗಿದೆ. ಟಾಟಾ ಮೋಟಾರ್ಸ್ ಕಮರ್ಷಿಯಲ್ ವೆಹಿಕಲ್ಸ್ ನ ದೃಢವಾದ ಮಾರಾಟೋತ್ತರ ಸೇವಾ ವ್ಯವಸ್ಥೆಯ ಬೆಂಬಲದೊಂದಿಗೆ, ಖನಿಜ ಮತ್ತು ಅದಿರು ಸಾಗಣೆಯಲ್ಲಿ ಸ್ವಚ್ಛ ಮತ್ತು ದಕ್ಷ ಕಾರ್ಯನಿರ್ವಹಣೆ ಸಾಧ್ಯವಾಗಿಸಿ ಹೊಸ ಭವಿಷ್ಯ ನಿರ್ಮಿಸುವ ಕುರಿತು ನಾವು ವಿಶ್ವಾಸ ಹೊಂದಿದ್ದೇವೆ” ಎಂದು ಹೇಳಿದರು.
ಇದನ್ನೂ ಓದಿ: Mohan Vishwa Column: ಮುಂಬೈ ದಾಳಿಯ ಚಿದಂಬರ ರಹಸ್ಯ
ವಾಹನ ವಿತರಣೆಯ ಕುರಿತು ಮಾತನಾಡಿದ ಟಾಟಾ ಮೋಟಾರ್ಸ್ ಕಮರ್ಷಿಯಲ್ ವೆಹಿಕಲ್ಸ್ ನ ಉಪಾಧ್ಯಕ್ಷ ಮತ್ತು ಟ್ರಕ್ ವ್ಯಾಪಾರ ಮುಖ್ಯಸ್ಥ ಶ್ರೀ ರಾಜೇಶ್ ಕೌಲ್ ಅವರು, “ಎನ್ವಿರೋ ವೀಲ್ಸ್ ಮೊಬಿಲಿಟಿಗೆ ಪ್ರೈಮಾ ಇ.55ಎಸ್ ಎಲೆಕ್ಟ್ರಿಕ್ ಪ್ರೈಮ್ ಮೂವರ್ ಗಳ ಮೊದಲ ಬ್ಯಾಚ್ ಅನ್ನು ವಿತರಿಸಿರುವುದು ಸಂತೋಷ ತಂದಿದೆ. ಟ್ರಕ್ ವಿಭಾಗದಲ್ಲಿ ಮಾರುಕಟ್ಟೆಯಲ್ಲಿ ಮುಂಚೂಣಿ ಯಲ್ಲಿರುವ ಟಾಟಾ ಮೋಟಾರ್ಸ್ ಕಮರ್ಷಿಯಲ್ ವೆಹಿಕಲ್ಸ್, ಸುಧಾರಿತ ಉತ್ಪನ್ನಗಳೊಂದಿಗೆ ಭಾರತದ ಸುಸ್ಥಿರ ಸರಕು ಸಾಗಣೆಗೆ ಕೊಡುಗೆ ನೀಡುತ್ತಿರುವುದಕ್ಕೆ ಹೆಮ್ಮೆ ಪಡುತ್ತದೆ.
ಗಟ್ಟಿಮುಟ್ಟಾಗಿ ವಿನ್ಯಾಸಗೊಳಿಸಲಾದ ಈ ವಾಹನಗಳು ಎನ್ವಿರೋ ವೀಲ್ಸ್ ನ ಸುಸ್ಥಿರತೆಯ ಗುರಿಗಳೊಂದಿಗೆ ಸೂಕ್ತವಾಗಿ ಹೊಂದಿಕೊಂಡಿದ್ದು, ಹಸಿರು ಕಾರ್ಯಾಚರಣೆಗಳನ್ನು ಸಾಧ್ಯ ವಾಗಿಸುವುದರ ಜೊತೆಗೆ ದೀರ್ಘಕಾಲೀನ ಮೌಲ್ಯವನ್ನು ಒದಗಿಸುತ್ತವೆ” ಎಂದು ಹೇಳಿದರು.
ಟಾಟಾ ಪ್ರೈಮಾ ಇ.55ಎಸ್ ಸುಧಾರಿತ ಇವಿ ಆರ್ಕಿಟೆಕ್ಚರ್‌ನಲ್ಲಿ ನಿರ್ಮಿತವಾಗಿದ್ದು, ಸಂಪೂರ್ಣ ಎಲೆಕ್ಟ್ರಿಕ್ ಡ್ರೈವ್ ಟ್ರೇನ್, ಇಂಟಿಗ್ರೇಟೆಡ್ ಇ-ಆಕ್ಸಲ್ ಮತ್ತು ಅತ್ಯಾಧುನಿಕ ರಿಜನರೇಟಿವ್ ಬ್ರೇಕಿಂಗ್ ವ್ಯವಸ್ಥೆಯನ್ನು ಹೊಂದಿದೆ ಮತ್ತು ಹೆಚ್ಚಿನ ರೇಂಜ್ ಒದಗಿಸುತ್ತದೆ. ಒಂದು ಬಾರಿ ಚಾರ್ಜ್ ಮಾಡಿದರೆ 350 ಕಿಮೀ ವರೆಗೆ ರೇಂಜ್ ನೀಡುವ ಇದು, ಅತ್ಯುತ್ತಮ ದಕ್ಷತೆ ಮತ್ತು ಕಾರ್ಯಕ್ಷಮತೆ ಗಾಗಿ 3-ಸ್ಪೀಡ್ ಆಟೋ ಶಿಫ್ಟ್ ಟ್ರಾನ್ಸ್ ಮಿಷನ್ ಮತ್ತು ಇ-ಆಕ್ಸಲ್ ಹೊಂದಿದೆ ಹಾಗೂ ಹೆಚ್ಚಿನ ಉಪಯುಕ್ತತೆಗಾಗಿ ಡ್ಯುಯಲ್ ಗನ್ ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದೆ.
ಈ ವಾಹನವು ಡ್ರೈವರ್ ಮಾನಿಟರಿಂಗ್ ಸಿಸ್ಟಂ, ಲೇನ್ ಡಿಪಾರ್ಚರ್ ವಾರ್ನಿಂಗ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ, ಮತ್ತು ಕ್ರೂಸ್ ಕಂಟ್ರೋಲ್‌ನಂತಹ ಅತ್ಯಾಧುನಿಕ ಫೀಚರ್‌ಗಳನ್ನು ಹೊಂದಿದ್ದು, ಎಲೆಕ್ಟ್ರಾನಿಕ್ ಬ್ರೇಕಿಂಗ್ ಸಿಸ್ಟಂ ಮತ್ತು ಐಚ್ಛಿಕ ಎಡಿಎಎಸ್ ಫೀಚರ್ ಗಳೊಂದಿಗೆ ಹೆಚ್ಚಿನ ಸುರಕ್ಷತೆ ಒದಗಿಸುತ್ತದೆ. ಪ್ರೀಮಿಯಂ ಪ್ರೈಮಾ ಕ್ಯಾಬಿನ್, ನ್ಯೂಮ್ಯಾಟಿಕ್ ಸಸ್ಪೆಂಡೆಡ್ ಸೀಟ್ ಮತ್ತು ಟಿಲ್ಟ್-ಆಂಡ್-ಟೆಲಿಸ್ಕೋಪಿಕ್ ಸ್ಟೀರಿಂಗ್ ವೀಲ್ ನೊಂದಿಗೆ, ಚಾಲಕರಿಗೆ ಹೆಚ್ಚಿನ ಸೌಕರ್ಯ ಒದಗಿಸುತ್ತದೆ ಮತ್ತು ಸುಲಭ ಕಾರ್ಯ ನಿರ್ವಹಣೆ ಸಾಧ್ಯವಾಗಿಸುತ್ತದೆ. ಈ ಮೂಲಕ ಆಯಾಸವನ್ನು ಕಡಿಮೆ ಮಾಡಿ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ.
ಟಾಟಾ ಮೋಟಾರ್ಸ್ ಕಮರ್ಷಿಯಲ್ ವೆಹಿಕಲ್ಸ್ ಸಂಸ್ಥೆಯು ಬ್ಯಾಟರಿ ಎಲೆಕ್ಟ್ರಿಕ್, ಸಿಎನ್‌ಜಿ, ಎಲ್‌ಎನ್‌ಜಿ, ಹೈಡ್ರೋಜನ್ ಇಂಟರ್ನಲ್ ಕಂಬಶನ್ ಮತ್ತು ಹೈಡ್ರೋಜನ್ ಫ್ಯೂಯಲ್ ಸೆಲ್‌ನಂತಹ ಪರ್ಯಾಯ ಇಂಧನ ತಂತ್ರಜ್ಞಾನಗಳಿಂದ ಚಾಲಿತವಾದ ನವೀನ ಸಾರಿಗೆ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವಲ್ಲಿ ಮುಂಚೂಣಿಯಲ್ಲಿದೆ.
ಕಂಪನಿಯು ಸಣ್ಣ ವಾಣಿಜ್ಯ ವಾಹನಗಳು, ಟ್ರಕ್ ಗಳು, ಬಸ್ ಗಳು ಮತ್ತು ವ್ಯಾನ್ ಗಳು ಸೇರಿದಂತೆ ವಿವಿಧ ವಿಭಾಗಗಳಲ್ಲಿ ಪರ್ಯಾಯ-ಇಂಧನ ಚಾಲಿತ ವಾಣಿಜ್ಯ ವಾಹನಗಳ ಪೋರ್ಟ್ ಫೋಲಿಯೋವನ್ನು ಹೊಂದಿದೆ.
ಈ ಪೋರ್ಟ್‌ಫೋಲಿಯೋಗೆ Sampoorna Seva 2.0 ಯೋಜನೆ ಲಭ್ಯವಿದ್ದು, ಈ ಮೂಲಕ ಸಮಗ್ರ ವಾಹನ ಜೀವನಚಕ್ರ ನಿರ್ವಹಣೆಗಾಗಿ ಮೌಲ್ಯವರ್ಧಿತ ಸೇವೆಗಳ ಶ್ರೇಣಿ ಒದಗಿಸಲಾಗುತ್ತದೆ. ಭಾರತ ದಾದ್ಯಂತ 3200ಕ್ಕೂ ಹೆಚ್ಚು ಟಚ್ ಪಾಯಿಂಟ್ ಗಳನ್ನು ಹೊಂದಿರುವ ಅತಿದೊಡ್ಡ ಸೇವಾ ಜಾಲದ 24x7 ಬೆಂಬಲ ಹೊಂದಿರುವ ಕಂಪನಿಯು ತನ್ನ ವಾಹನಗಳಿಗೆ ಭಾರಿ ಪ್ರಯೋಜನಗಳನ್ನು ನೀಡುತ್ತದೆ.