ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bangla immigrants: ಬೆಂಗಳೂರಿನಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ನೂರಾರು ಶೆಡ್‌ ಬೆಂಕಿಗಾಹುತಿ

ಅಕ್ರಮ ಬಾಂಗ್ಲಾ ವಲಸಿಗರ ಶೆಡ್‌ಗಳು ಹಾಗು ಸ್ಕ್ರಾಪ್ ವಸ್ತುಗಳು ಬೆಂಕಿಗಾಹುತಿಯಾಗಿದೆ. ಹೈ ಟೆನ್ಷನ್‌ ವಯರ್‌ ತುಂಡಾಗಿ ಬಿದ್ದು ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆ ಕುರಿತು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಕಿ ಆಕಸ್ಮಿಕ

ಬೆಂಗಳೂರು, ಫೆ.06 : ಬೆಂಗಳೂರಲ್ಲಿ (Bengaluru) ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ (Bangla immigrants) ಶೆಡ್‌ಗಳಿಗೆ ಬೆಂಕಿ (fire accident) ಬಿದ್ದು 100ಕ್ಕೂ ಅಧಿಕ ಶೆಡ್‌ಗಳು ಹೊತ್ತಿ ಉರಿದ ಘಟನೆ ಕೂಡ್ಲು ಕೆರೆ ಸಮೀಪ ನಡೆದಿದೆ. ಇಂದು ಬೆಳಗ್ಗೆ 5:30 ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಎಲೆಕ್ಟ್ರಾನಿಕ್ ಸಿಟಿ, ಹುಳಿಮಾವು, ಸರ್ಜಾಪುರ ಹಾಗು ಡೈರಿ ಸರ್ಕಲ್‌ನಿಂದ ಬಂದ ಅಗ್ನಿಶಾಮಕದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.

ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಶೆಡ್‌ಗಳು ಹಾಗು ಸ್ಕ್ರಾಪ್ ವಸ್ತುಗಳು ಬೆಂಕಿಗಾಹುತಿಯಾಗಿದೆ. ಹೈ ಟೆನ್ಷನ್‌ ವಯರ್‌ ತುಂಡಾಗಿ ಬಿದ್ದು ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಕುರಿತು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಂಕೆಗಳಿಗೆ ಸಾಂಕ್ರಾಮಿಕ ರೋಗ, ಆರೋಗ್ಯ ಇಲಾಖೆ ಅಲರ್ಟ್‌

ದಾವಣಗೆರೆ : ದಾವಣಗೆರೆಯಲ್ಲಿ ಜಿಂಕೆಗಳಿಗೆ ಸಾಂಕ್ರಾಮಿಕ ರೋಗ ಹರಡಿದ್ದು, ಮಾಸಾಂತ್ಯದ ವರೆಗೆ ಮೃಗಾಲಯಕ್ಕೆ ಪ್ರವೇಶವನ್ನು ನಿಷೇಧ ಮಾಡಲಾಗಿದೆ. ದಾವಣಗೆರೆ ಜಿಲ್ಲೆಯ ಅನಗೋಡದಲ್ಲಿರುವ ಇಂದಿರಾ ಪ್ರಿಯದರ್ಶಿನಿ ಮೃಗಾಲಯದಲ್ಲಿ ಈ ಒಂದು ಘಟನೆ ನಡೆದಿದೆ.

ಅಕ್ರಮ ಬಾಂಗ್ಲಾ ವಲಸಿಗರನ್ನು ರಾಜ್ಯದಿಂದ ಹೊರ ಕಳುಹಿಸುತ್ತೇವೆ: ಸಿಎಂ ಸಿದ್ದರಾಮಯ್ಯ

ಮೃಗಾಲಯದಲ್ಲಿ ಜಿಂಕೆಗಳಿಗೆ ಸಾಂಕ್ರಾಮಿಕ ರೋಗ ಹರಡಿರುವ ಹಿನ್ನೆಲೆಯಲ್ಲಿ ಇಡೀ ಮೃಗಾಲಯಕ್ಕೆ ಸದ್ಯ ಅರಣ್ಯ ಇಲಾಖೆ ಪರದೆ ಅಳವಡಿಸಿದೆ. ಜನವರಿ 16 ಕೆ ಮೊದಲ ಜಿಂಕೆ ಸಾವನ್ನಪ್ಪಿದ್ದು ಇಲ್ಲಿಯವರೆಗೆ ಆರು ಜಿಂಕೆಗಳು ಸಾವನ್ನಪ್ಪಿವೆ. ಹಾಗಾಗಿ ಇಡೀ ಮೃಗಾಲಯವನ್ನು ಬಂದ್ ಮಾಡಲಾಗಿದ್ದು, ಪಶು ವೈದ್ಯರು ಆಗಮಿಸಿ ಜಿಂಕೆಗಳನ್ನು ಪರೀಕ್ಷಿಸಿ ಚಿಕಿತ್ಸೆ ನೀಡುತ್ತಿದ್ದಾರೆ.

ಹರೀಶ್‌ ಕೇರ

View all posts by this author