ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅಕ್ರಮ ಬಾಂಗ್ಲಾ ವಲಸಿಗರನ್ನು ರಾಜ್ಯದಿಂದ ಹೊರ ಕಳುಹಿಸುತ್ತೇವೆ: ಸಿಎಂ ಸಿದ್ದರಾಮಯ್ಯ

illegal Bangladeshis: ರಾಜ್ಯ ವಿಧಾನ ಮಂಡಲದ ಉಭಯ ಸದನಗಳಲ್ಲಿ ಮಾಡಲಾದ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯ ಪ್ರಸ್ತಾವವನ್ನು ವಿಧಾನಸಭೆಯಲ್ಲಿ ಸೋಮವಾರ ಅಂಗೀಕರಿಸಲಾಯಿತು. ಈ ವೇಳೆ ಸಿಎಂ ಸಿದ್ದರಾಮಯ್ಯ ಮಾತನಾಡಿದು, ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ದೇಶೀಯರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಅಕ್ರಮ ಬಾಂಗ್ಲಾ ವಲಸಿಗರನ್ನು ರಾಜ್ಯದಿಂದ ಹೊರ ಕಳುಹಿಸುತ್ತೇವೆ: ಸಿಎಂ

ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಭಾಷಣ. -

Prabhakara R
Prabhakara R Feb 2, 2026 6:22 PM

ಬೆಂಗಳೂರು: ನಮ್ಮ ಸರ್ಕಾರ ಹಾದಿಯನ್ನು ತಪ್ಪಿಲ್ಲ ಹಾಗೂ ನಾನು ಅಸಹಾಯಕ ಮುಖ್ಯಮಂತ್ರಿಯೂ ಅಲ್ಲ. 2.5 ವರ್ಷದಲ್ಲಿ ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಿದ್ದೇವೆ. ಇನ್ನು ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ದೇಶೀಯವರಿಗೆ (Illegal Bangladeshi immigrants) ಮನೆಗಳನ್ನು ನೀಡುವುದಿಲ್ಲ ಹಾಗೂ ಅವರನ್ನು ರಾಜ್ಯದಿಂದ ಹೊರಗೆ ಕಳಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದರು.

22 ಜನವರಿ 2026 ರಂದು ವಿಧಾನ ಮಂಡಲದ ಉಭಯ ಸದನಗಳಲ್ಲಿ ಮಾಡಲಾದ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯ ಪ್ರಸ್ತಾವವನ್ನು ಇಂದು ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು. ಈ ವೇಳೆ ಸಿಎಂ ಮಾತನಾಡಿದರು.

ಪದ್ಮಶ್ರೀ ವಿಜೇತ ಮಾಜಿ ರಾಜ್ಯಸಭಾ ಸದಸ್ಯೆ ಜಯಶ್ರೀಯವರ ಭೂಮಿಯ ಸರ್ವೇ ಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಯು ಕರ್ತವ್ಯ ಚ್ಯುತಿ ಮಾಡಿದ್ದರೆ, ಅವರ ಮೇಲೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ತಪ್ಪು ಎಸಗಿದ ಅಧಿಕಾರಿಯ ಮೇಲೆ ನಿಸ್ಸಂದೇಹವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ವೇಳೆ ಸಿಎಂ ಭರವಸೆ ನೀಡಿದರು.

Budget 2026: ಪ್ರವಾಸ ತಾಣಗಳ ಅಭಿವೃದ್ಧಿ, ವಿದೇಶ ಪ್ರಯಾಣ ಅಗ್ಗ; ಬಜೆಟ್‌ನಲ್ಲಿ ಪ್ರವಾಸೋದ್ಯಮ ವಲಯಕ್ಕೆ ಸಿಕ್ಕಿದ್ದೇನು?

ಜನಪರ, ಸಮಾಜಮುಖಿಯಾದ ಆಡಳಿತ ನೀಡುತ್ತಿದ್ದೇವೆ:

ಹಿಂದುಳಿದ ವರ್ಗದವರ ಬಗ್ಗೆ ಕಾಳಜಿಯಿರುವ ನಮ್ಮ ಕಾಂಗ್ರೆಸ್ ಸರ್ಕಾರದ ಅವಧಿ 2013-14 ರಿಂದ 2018 ರವರೆಗೆ 543 ಹಾಸ್ಟೆಲ್‌ಗಳನ್ನು ನಿರ್ಮಿಸಲಾಗಿದೆ. ಆದರೆ ನಂತರದ ಬಿಜೆಪಿ ಸರ್ಕಾರದ ಅವಧಿಯಲ್ಲಿ(2019 ರಿಂದ 2023) ಕೇವಲ 5 ಹಾಸ್ಟೆಲ್‌ಗಳು ಆಗಿವೆ . ಕಾಂಗ್ರೆಸ್ ಸರ್ಕಾರ 2023-24 ರಿಂದ ಇಲ್ಲಿಯವರೆಗೆ 220 ಹಾಸ್ಟೆಲ್ ನಿರ್ಮಿಸಿದ್ದೇವೆ.

ನಮ್ಮ ಸರ್ಕಾರ 1452000 ಮನೆಗಳನ್ನು ನಿರ್ಮಿಸಿದ್ದೇವೆ, ಬಿಜೆಪಿ ಅವಧಿಯಲ್ಲಿ ಕೇವಲ 5 ಲಕ್ಷ ಮನೆಗಳಾಗಿವೆ. ಈ ಎಲ್ಲ ಸತ್ಯಾಂಶಗಳನ್ನು ರಾಜ್ಯಪಾಲರ ಭಾಷಣದಲ್ಲಿ ಸೇರಿಸಲಾಗಿತ್ತು. ನಾವು ಜನಪರವಾದ, ಸಮಾಜಮುಖಿಯಾದ ಆಡಳಿತವನ್ನು ನೀಡುತ್ತಿದ್ದು, ಕರ್ನಾಟಕದ ಅಭಿವೃದ್ಧಿ ಮಾದರಿ ಸರ್ಕಾರವಾಗಿದೆ. ಈ ಅಭಿವೃದ್ಧಿ ಮಾದರಿಯನ್ನು 21 ಕ್ಕಿಂತ ಹೆಚ್ಚು ಕೇಂದ್ರ ಸಚಿವರು ಮತ್ತು ವಿವಿಧ ರಾಜ್ಯದ ಮುಖ್ಯಮಂತ್ರಿಗಳು ಶ್ಲಾಘಿಸಿದ್ದಾರೆ. ಆದ್ದರಿಂದ ರಾಜ್ಯಪಾಲರು, ಸರ್ಕಾರದ ಭಾಷಣವನ್ನು ಓದಿದ್ದರೆ, ನಮ್ಮ ಜನಪರ ಆಡಳಿತದ ಬಗ್ಗೆ ಜನರಿಗೆ ಅರಿವು ನೀಡಿದಂತಾಗುತ್ತಿತ್ತು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ನಮ್ಮ ಸರ್ಕಾರ ಸಂವೇದನಾಶೀಲವಾಗಿದೆ

ಮುಖ್ಯಮಂತ್ರಿಗಳಿಗೆ ಸಂವೇದನೆಯಿಲ್ಲ ಎಂದು ಟೀಕಿಸಿದ್ದೀರಿ. ಆದರೆ ಹಿಂದೆ ಯಡಿಯೂರಪ್ಪನವರು ಅನ್ನಭಾಗ್ಯ ಯೋಜನೆಯಡಿ ನೀಡಲಾಗುತ್ತಿದ್ದ ಅಕ್ಕಿಯನ್ನು ಕಡಿತಗೊಳಿಸಿದಿರಿ, ಯಡಿಯೂರಪ್ಪನವರು ರೈತರು ಗೊಬ್ಬರ ಕೇಳಿದ್ದಕ್ಕೆ ಗೋಲಿಬಾರ್ ನಡೆಸಿದರು. ಹಿಂದಿನ ಬಿಜೆಪಿ ಸರ್ಕಾರ ಸಂವೇದನಾರಹಿತವಾಗಿತ್ತು. ಅಂತೆಯೇ ಹಿಂದೆ ಇದ್ದ ‘ಅನುಗ್ರಹ ಮತ್ತು ಕೃಷಿ ಭಾಗ್ಯ’ ಯೋಜನೆಗಳನ್ನು ಬಿಜೆಪಿ ಸರ್ಕಾರ ನಿಲ್ಲಿಸಿತು. ಆದರೆ ನಮ್ಮ ಸರ್ಕಾರ ಸಂವೇದನಾಶೀಲವಾಗಿದೆ.

ಕಬ್ಬು ಬೆಳೆಗಾರರಿಗೆ ಕೇಂದ್ರ ಎಫ್ ಆರ್ ಪಿ ನಿಗದಿಗೊಳಿಸಿ, ಹೋರಾಟ ನಡೆಸಿದ ರೈತರೊಂದಿಗೆ ಸರ್ಕಾರ ಸಂಧಾನ ನಡೆಸಿ, ಟನ್ ಒಂದಕ್ಕೆ 3300 ರೂ. ನಿಗದಿಪಡಿಸಿತು. ಇದಕ್ಕಾಗಿ ರಾಜ್ಯದ ಮೇಲೆ 300 ಕೋಟಿ ಹೆಚ್ಚಿನ ಹೊರೆ ಬಿದ್ದಿರೂ, ರೈತರಿಗೆ ಸರ್ಕಾರ ಸ್ಪಂದಿಸಿದೆ. ಕೇಂದ್ರದ ಮೆಕ್ಕೆಜೋಳ ದ ಎಂಎಸ್ ಪಿ 2400 ನಿಗದಿಪಡಿಸಿತು. ಪುನ: ರೈತರ ಮತ್ತು ಕಾರ್ಖಾನೆಯವರ ಜತೆ ಸಂಧಾನ ನಡೆಸಿ, 40 ಲಕ್ಷ ಮೆ.ಟನ್ ಮೆಕ್ಕೆಜೋಳ ಖರೀದಿಗೆ ವ್ಯವಸ್ಥೆ ಮಾಡಿದೆ. ಕ್ವಿಂಟಾಲ್ ಗೆ 250 ರೂ.ದರವನ್ನು ನಿಗದಿಪಡಿಸಿ ರೈತರ ಸಮಸ್ಯೆಗೆ ರಾಜ್ಯ ಸರ್ಕಾರ ಸ್ಪಂದಿಸಿದೆ.

SCP TSP ಯೋಜನೆ ಜಾರಿಗೆ ತಂದಿದ್ದು ನಮ್ಮ ಸರ್ಕಾರ

ಯುಪಿಎ ಅಧಿಕಾರಾವಧಿಯಲ್ಲಿ ಹತ್ತು ವರ್ಷಗಳಲ್ಲಿ 2003-04ರಿಂದ 2013-14ರವರೆಗೆ ಕೇಂದ್ರ ಬಜೆಟ್ ಗಾತ್ರ 95,21,493 ಕೋಟಿ ಆಗಿತ್ತು. ಎನ್ ಡಿ ಎ ಅಧಿಕಾರಾವಧಿಯಲ್ಲಿ 2014-15 ರಿಂದ ಇಲ್ಲಿಯವರೆಗೆ ಈ ಮೊತ್ತ 380,95,527 ಕೋಟಿಯಾಗಿದೆ. ರಾಜ್ಯದ ಜನರ ಮೇಲೆ ಬೆಲೆ ಏರಿಕೆ ಮಾಡಲಾಗಿದೆ ಎಂದು ಟೀಕಿಸಿದ್ದೀರಿ. ನಾವು ಮೂರು ವರ್ಷದಿಂದ ಬಜೆಟ್‌ನಲ್ಲಿ ಬೆಲೆ ಏರಿಸಿದ್ದರೂ , ವಿವಿಧ ರಾಜ್ಯಗಳಿಗೆ ಹೋಲಿಸಿದರೆ ಗಣನೀಯವಾಗಿ ಕಡಿಮೆಯಿದೆ. ತೆರಿಗೆ ಹೇರಿಕೆ ಎಂಬುದು ಸತ್ಯಕ್ಕೆ ದೂರವಾದ ಮಾತು ಎಂದು ಹೇಳಿದರು.

SCP TSP ಯೋಜನೆಯನ್ನು ನಮ್ಮ ಸರ್ಕಾರ ಜಾರಿಗೆ ತಂದಿತು. ಈ ಯೋಜನೆಯನ್ನು ಕೇಂದ್ರವೂ ಜಾರಿಗೆ ತರಲು ನಾನು ಒತ್ತಾಯಿಸುತ್ತೇನೆ. 2022-23ರ ಬಿಜೆಪಿ ಅವಧಿಯಲ್ಲಿ ಕೇವ 1,10,627 ಕೋಟಿ ಒದಗಿಸಿತ್ತು. ಆದರೆ ನಮ್ಮ 2023-24 ರಿಂದ ಇಲ್ಲಿಯವರೆಗೆ ನಾವು 1,17,197 ಕೋಟಿ ರೂ.ಗಳನ್ನು ಈ ಯೋಜನೆಯಡಿ ನೀಡಿದ್ದೇವೆ.

ಮಲತಾಯಿ ಧೋರಣೆಯ ಬಜೆಟ್‌ ತಕ್ಷಣ ಸರಿಪಡಿಸಿ: ಕೇಂದ್ರಕ್ಕೆ ಆರ್.ವಿ. ದೇಶಪಾಂಡೆ ಆಗ್ರಹ

ವಿವಿಧ ಸಮುದಾಯಗಳ ನಿಗಮ ಮಂಡಳಿಗಳಿಗೆ ನಮ್ಮ ಸರ್ಕಾರದ ಅವಧಿಯಲ್ಲಿ 1538.60 ಕೋಟಿಗಳನ್ನು ನೀಡಲಾಗಿದೆ. ಆದರೆ ಹಿಂದಿನ ಬಿಜೆಪಿ ಯಡಿಯೂರಪ್ಪನವರ ಸರ್ಕಾರ 472.80 ಕೋಟಿಗಳನ್ನು ನೀಡಿದ್ದರೆ, ಬಸವರಾಜ ಬೊಮ್ಮಾಯಿಯವರ ಸರ್ಕಾರ 883 ಕೋಟಿಗಳನ್ನು ನೀಡಿದೆ ಎಂದು ವಿಪಕ್ಷಗಳ ವಿರುದ್ಧ ಟೀಕಿಸಿದರು.