ಬೆಂಗಳೂರು: "ಇಂದು ನಾನು ಮಾಡುವ ಯಾವ ಕೆಲಸದಿಂದ ನನ್ನ 60ನೇ ವರ್ಷದಲ್ಲಿ ನನ್ನ ದೇಹ ನನಗೆ ಧನ್ಯವಾದ ಅರ್ಪಿಸಬಹುದು?" ಎಂಬ ಸರಳ ಆದರೆ ಶಕ್ತಿಯುತವಾದ ಪ್ರಶ್ನೆ ಕೇಳಿಕೊಳ್ಳುವಂತೆ ಭಾರತದ ಅಗ್ರಗಣ್ಯ ಎರ್ಗೋನಾಮಿಕ್ಸ್ ತಜ್ಞೆ ಭಾರತಿ ಜಾಜೂ( Ergonomics expert Bharathi Jaju) ಅವರು ಮಹಿಳೆಯರಿಗೆ ಕರೆ ನೀಡಿದ್ದಾರೆ. ತಮ್ಮ ಮುಖ್ಯ ಭಾಷಣದಲ್ಲಿ ಮಾತನಾಡಿದ ಅವರು, ಮಹಿಳೆಯರು ತಮ್ಮ ಜೀವನದ ಅನೇಕ ವರ್ಷಗಳನ್ನು ಮನೆ, ಕೆಲಸ ಮತ್ತು ಕುಟುಂಬದ ಜವಾಬ್ದಾರಿಗಳಿಗಾಗಿ ಮೀಸಲಿಡುತ್ತಾರೆ. ಆದರೆ ತಮ್ಮ ಸ್ವಂತ ಆರೋಗ್ಯವನ್ನು ಪಟ್ಟಿಯ ಕೊನೆಯಲ್ಲಿ ಇಡುತ್ತಾರೆ ಎಂದಿದ್ದಾರೆ.
“ನಾವು ಸಮಯವನ್ನು ನಮಗಾಗಿ ಮೀಸಲಿಟ್ಟಾಗ ಮಾತ್ರ ನಿಜವಾದ ಸ್ವಾಸ್ಥ್ಯ ಪ್ರಾರಂಭ ವಾಗುತ್ತದೆ. ನಿದ್ರೆ, ದೈಹಿಕ ಚಲನೆ, ಪೌಷ್ಟಿಕಾಂಶ ಮತ್ತು ವಿಶ್ರಾಂತಿ ಎಂಬ ನಾಲ್ಕು ಪ್ರಮುಖ ಅಂಶಗಳ ಬಗ್ಗೆ ಗಮನ ಹರಿಸುವ ಮೂಲಕ, ಜೀವನದ ಪ್ರತಿ ಹಂತದಲ್ಲೂ ನಮಗೆ ಬೆಂಬಲ ನೀಡುವ ಸಾಮರ್ಥ್ಯವನ್ನು ನಾವು ಬೆಳೆಸಿಕೊಳ್ಳಬಹುದು. ಇಂದು ಮಹಿಳೆಯರು ಮಾಡುವ ಸಣ್ಣ ಮತ್ತು ಸ್ಥಿರವಾದ ಆಯ್ಕೆಗಳು ಅವರ ಜೀವನದ ಮುಂದಿನ ಹಂತದಲ್ಲಿ ಬಲವಾದ ಹಾಗೂ ಆರೋಗ್ಯಕರ ಭವಿಷ್ಯವನ್ನು ರೂಪಿಸಬಲ್ಲವು” ಎಂದು ಜಾಜೂ ಹೇಳಿದ್ದಾರೆ.
"ಒಟ್ಟಾರೆ ಆರೋಗ್ಯಕ್ಕೆ ನಾವು ಆದ್ಯತೆ ನೀಡಬೇಕು ಎಂದಾದರೆ, ವ್ಯಾಯಾಮ, ಪೌಷ್ಟಿಕ ಆಹಾರ, ನಿದ್ರೆ ಮತ್ತು ಮಾನಸಿಕ ಸ್ವಾಸ್ಥ್ಯ ಮುಖ್ಯ. "ಹ್ಯಾಪಿಯೆಸ್ಟ್ ಹರ್"ನಲ್ಲಿ ಭಾಗವಹಿ ಸಿದವರಿಗೆ ಅವರ ಬಿಡುವಿಲ್ಲದ ಜೀವನದ ನಡುವೆಯೂ ಆರೋಗ್ಯ ಮತ್ತು ಸ್ವಾಸ್ಥ್ಯವನ್ನು ನಿರ್ವಹಿಸುವುದು ಹೇಗೆ ಎನ್ನುವುದರ ಬಗ್ಗೆ ಪ್ರಮುಖ ತಜ್ಞರು ಅರ್ಥಪೂರ್ಣವಾಗಿ ಮಾಹಿತಿ ನೀಡಿದರು" ಎಂದು ಹ್ಯಾಪಿಯೆಸ್ಟ್ ಹೆಲ್ತ್‌ನ ಜ್ಞಾನ ವಿಭಾಗದ ಕೋ- ಸಿಇಒ, ಮುದ್ರಣ ವಿಭಾಗದ ಮುಖ್ಯ ಸಂಪಾದಕರು ಮತ್ತು ಪ್ರಕಾಶಕರಾದ ರಘು ಕೃಷ್ಣನ್ ತಿಳಿಸಿದ್ದಾರೆ.
ಹ್ಯಾಪಿಯೆಸ್ಟ್ ಹೆಲ್ತ್ ಸಂಸ್ಥೆಯು ವಿಮೆನ್ ವೆಲ್‌ನೆಸ್ ಸಮಿಟ್‌ನ ಮೂರನೇ ಆವೃತ್ತಿಯಾದ – 'ಹ್ಯಾಪಿಯೆಸ್ಟ್ ಹರ್ 2026' (Happiest Her 2026) ಅನ್ನು ಬೆಂಗಳೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್ (ನಿಮ್ಹಾನ್ಸ್) ಸಭಾಂಗಣದಲ್ಲಿ ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಈ ಅರ್ಧ ದಿನದ ಸಮಿಟ್‌ನಲ್ಲಿ ಆರೋಗ್ಯ ತಜ್ಞರು, ವೆಲ್‌ನೆಸ್ ತಜ್ಞರು ಮತ್ತು ವೃತ್ತಿಪರ ಮಹಿಳೆಯರನ್ನು ಒಟ್ಟು ಗೂಡಿಸಲಾಗಿತ್ತು. ಮನಸ್ಸು, ದೈಹಿಕ ಚಲನೆ ಮತ್ತು ಆರೋಗ್ಯ ಸಮಸ್ಯೆಗಳು ಬರದಂತೆ ತಡೆಗಟ್ಟುವ ಆರೈಕೆಯ ಮೇಲೆ ಕೇಂದ್ರೀಕರಿಸಿ ಸಮಗ್ರ ಸ್ವಾಸ್ಥ್ಯದ ಬಗ್ಗೆ ಅರ್ಥಪೂರ್ಣ ಸಂವಾದಗಳನ್ನು ಇಲ್ಲಿ ನಡೆಸ ಲಾಯಿತು.
ವೃತ್ತಿಪರ ಮತ್ತು ವೈಯಕ್ತಿಕ ಜವಾಬ್ದಾರಿಗಳ ನಡುವೆ ಮಹಿಳೆಯರು ತಮ್ಮ ದೈಹಿಕ ಮತ್ತು ಭಾವನಾತ್ಮಕ ಆರೋಗ್ಯಕ್ಕೆ ಆದ್ಯತೆ ನೀಡಲು ಈ ಸಮಿಟ್ ಒಂದು ವೇದಿಕೆಯನ್ನು ಕಲ್ಪಿಸಿ ಕೊಟ್ಟಿತ್ತು. ಆರೋಗ್ಯದ ಬಗ್ಗೆ ಕಾಳಜಿ ಮತ್ತು ಮುಂಬರುವ ಸಮಸ್ಯೆಗಳನ್ನು ತಡೆಗಟ್ಟಲು ಸಹಾಯ ಮಾಡುವ ಆರೋಗ್ಯ ಪದ್ಧತಿಗಳ ಪ್ರಾಮುಖ್ಯತೆಯನ್ನು ತಿಳಿಸಿಕೊಡುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು.
ಹ್ಯಾಪಿಯೆಸ್ಟ್ ಹೆಲ್ತ್‌ನ ಮುಖ್ಯ ಆದಾಯ ಅಧಿಕಾರಿ ಟೀನಾ ಮಿತ್ರಾ, ಎರ್ಗೋನಾಮಿಕ್ಸ್ ತಜ್ಞೆ ಭಾರತಿ ಜಾಜೂ, ಹ್ಯಾಪಿನೆಸ್ ಇವಾಂಜೆಲಿಸ್ಟ್ ಮತ್ತು ಟ್ಯಾಲೆಂಟ್ ಡೆವಲಪ್‌ಮೆಂಟ್ (ವೈದ್ಯಕೀಯ) ಹಿರಿಯ ಉಪಾಧ್ಯಕ್ಷೆ ಮತ್ತು ವೆಲ್‌ನೆಸ್ ಪ್ರಾಕ್ಟೀಸಸ್‌ನ ಚೀಫ್ ಸಕ್ಸಸ್ ಮ್ಯಾನೇಜರ್ ಡಾ. ಶರೋನ್ ರಾಜ್‌ಕುಮಾರ್, ಬೆಂಗಳೂರಿನ ರಾಧಾಕೃಷ್ಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಐವಿಎಫ್ ಕೇಂದ್ರದ ಪ್ರಸೂತಿ ತಜ್ಞೆ ಮತ್ತು ವ್ಯವಸ್ಥಾಪಕ ನಿರ್ದೇಶಕಿಯಾದ ಡಾ. ವಿದ್ಯಾ ವಿ. ಭಟ್, ಡಾ. ಪ್ರತಿಮಾ ಎ, ಪ್ರಸೂತಿ ತಜ್ಞರು ಮತ್ತು ಸ್ತ್ರೀರೋಗತಜ್ಞರು, ಮದರ್‌ಹುಡ್ ಆಸ್ಪತ್ರೆ, ಮತ್ತು ಡಾ. ಶ್ರದ್ಧಾ ಬಹಿರ್ವಾನಿ, ಇಂದಿರಾ ನಗರದ ಹ್ಯಾಪಿಯೆಸ್ಟ್ ಪರ್ಲ್ಸ್‌ನ ಹಿರಿಯ ಸಲಹೆಗಾರರು ಮತ್ತು ಕೇಂದ್ರ ಮುಖ್ಯಸ್ಥರು ಮತ್ತು ಇತರ ಗಣ್ಯರು ಸಮಿಟ್ ಅನ್ನು ಉದ್ಘಾಟಿಸಿದರು.
ಈ ಸಮಿಟ್, ಉತ್ತಮ ಚರ್ಚೆಗಳು ಮತ್ತು ಸಂವಾದಾತ್ಮಕ ಅವಧಿಗಳನ್ನು ಒಳಗೊಂಡಿತ್ತು. ಭಾರತಿ ಜಾಜೂ ಅವರ ಮುಖ್ಯ ಭಾಷಣವು ಮಹಿಳೆಯರ ದೀರ್ಘಕಾಲದ ಆರೋಗ್ಯದ ಕುರಿತಾಗಿದ್ದು, ಕುಳಿತು ಕೆಲಸ ಮಾಡುವ ಜೀವನಶೈಲಿ, ಕಳಪೆ ಭಂಗಿ ಮತ್ತು ಕೆಲಸದ ಒತ್ತಡದಿಂದ ಉಂಟಾಗುವ ಪರಿಣಾಮಗಳ ಬಗ್ಗೆ ವಿಸೃತ ಮಾಹಿತಿಗಳನ್ನು ಒಳಗೊಂಡಿತ್ತು. ಎರ್ಗೋನಾಮಿಕ್ಸ್ ಅರಿವು, ಪ್ರಜ್ಞಾಪೂರ್ವಕ ಚಲನೆ ಮತ್ತು ಸಮಸ್ಯೆಗಳನ್ನು ತಡೆಗಟ್ಟುವ ಕ್ರಮಗಳ ಪ್ರಾಮುಖ್ಯತೆಯನ್ನು ಭಾರತಿಯವರು ವಿವರಿಸಿದರು. ಇದಾದ ನಂತರ "ಮಹಿಳೆಯರು ಮತ್ತು ಅವರ ಸಮಯ" (Women & Me-Time) ಎಂಬ ವಿಷಯದ ಬಗ್ಗೆ ಸಂವಾದ ನಡೆಯಿತು.
ಡ್ಯಾನ್ಸ್ ಮೂವ್‌ಮೆಂಟ್ ಥೆರಪಿ ತಜ್ಞೆ ಪ್ರೀತಿ ರಾಜಗೋಪಾಲನ್ ಅವರು ನಡೆಸಿಕೊಟ್ಟ ಪ್ರಾಯೋಗಿಕ ಅವಧಿಯು ಈ ಸಮಿಟ್‌ನ ಪ್ರಮುಖ ಆಕರ್ಷಣೆಯಾಗಿತ್ತು. ಭಾಗವಹಿಸಿ ದವರು ಅಭಿವ್ಯಕ್ತ ಚಲನೆಗಳ ಮೂಲಕ ತಮ್ಮ ದೇಹದೊಂದಿಗೆ ಮರುಸಂಪರ್ಕ ಸಾಧಿಸುವಂತೆ ಈ ಅವಧಿಯು ಪ್ರೇರೇಪಿಸುವುದರ ಜೊತೆಗೆ ಭಾವನಾತ್ಮಕ ಅಭಿವ್ಯಕ್ತಿ ಮತ್ತು ದೈಹಿಕ ಸ್ವಾಸ್ಥ್ಯದ ನಡುವಿನ ಬಲವಾದ ಸಂಬಂಧವನ್ನು ತಿಳಿಸಲು ಸಹಾಯ ಮಾಡಿತು. ಕಾರ್ಯಕ್ರಮದಲ್ಲಿ ಸಂವಾದಾತ್ಮಕ ಆಟಗಳು ಮತ್ತು ಸಹ ಭೋಜನವಿತ್ತು. ಈ ಸಮಿಟ್‌ನ ಘೋಷವಾಕ್ಯವಾದ — ವಿರಾಮ. ಸಂಪರ್ಕ. ಪುನಶ್ಚೇತನ. (Pause. Connect. Recharge) — ಎಂಬುದಕ್ಕೆ ತಕ್ಕಂತೆ ಮಹಿಳೆಯರು ತಮ್ಮ ಆರೋಗ್ಯ ಮತ್ತು ಸ್ವಾಸ್ಥ್ಯಕ್ಕಾಗಿ ಸಮಯವನ್ನು ಮೀಸಲಿಡಲು ಬೇಕಾದ ಒಂದು ಶಕ್ತಿಯುತ ವಾತಾವರಣವನ್ನು ಸೃಷ್ಟಿಸಲಾಯಿತು.
ಹ್ಯಾಪಿಯೆಸ್ಟ್ ಬಾಡಿ ಡೈನಾಮಿಕ್ಸ್ ಮತ್ತು ಹ್ಯಾಪಿಯೆಸ್ಟ್ ಫಿಸಿಯೋ ಕ್ಲಿನಿಕ್ ವತಿಯಿಂದ ದೈಹಿಕ ಆರೋಗ್ಯ ತಪಾಸಣಾ ಬೂತ್ ಅನ್ನು ಸಹ ಏರ್ಪಡಿಸಲಾಗಿತ್ತು. ಸುಮಾರು 70% ರಷ್ಟು ಮಹಿಳೆಯರು ಈ ತಪಾಸಣೆಯಲ್ಲಿ ಪಾಲ್ಗೊಂಡಿದ್ದರು. ಇದರಲ್ಲಿ ದೈಹಿಕ ಭಂಗಿ, ಸಮತೋಲನ, ಪೆಲ್ವಿಕ್ ಸ್ಟ್ರೆಂಥ್, ಫ್ಲೆಕ್ಸಿಬಿಲಿಟಿ ಮತ್ತು ಮೂಳೆ ಆರೋಗ್ಯದಂತಹ ಅಂಶಗಳನ್ನು ಮೌಲ್ಯಮಾಪನ ಮಾಡಲಾಯಿತು. ಭಾಗವಹಿಸಿದ ಪ್ರತಿಯೊಬ್ಬರಿಗೂ ಅವರ ವೈಯಕ್ತಿಕ ಸ್ಕೋರ್‌ಗಳ ಆಧಾರದಲ್ಲಿ ಅರ್ಹ ಫಿಸಿಯೋಥೆರಪಿಸ್ಟ್‌ಗಳಿಂದ ವೈಯಕ್ತಿಕ ವೈದ್ಯಕೀಯ ಶಿಫಾರಸುಗಳನ್ನು ನೀಡಲಾಯಿತು.
ತನ್ನ ಮೂರನೇ ಆವೃತ್ತಿಯಲ್ಲಿ, 'ಹ್ಯಾಪಿಯೆಸ್ಟ್ ಹರ್' ವಿಶ್ವಾಸಾರ್ಹ ಮತ್ತು ಜ್ಞಾನಾಧಾರಿತ ಸ್ಥಾನವನ್ನು ಬಲಪಡಿಸಿದೆ. ತಜ್ಞರ ಬೆಂಬಲದೊಂದಿಗೆ ಆರೋಗ್ಯ ಮಾಹಿತಿಯನ್ನು ಒದಗಿಸುವ ಮತ್ತು ಮಹಿಳೆಯರು ಸರಿಯಾದ ನಿರ್ಧಾರ ತೆಗೆದುಕೊಳ್ಳುವಂತೆ ಮಾಡುವ ಹ್ಯಾಪಿಯೆಸ್ಟ್ ಹೆಲ್ತ್, ತನ್ನ ಬದ್ಧತೆಯನ್ನು ಪುನರುಚ್ಚರಿಸುತ್ತದೆ.