Kannappa Movie: ಕರ್ನಾಟಕದಿಂದ ಪ್ರಾರಂಭವಾಯಿತು ಬಹು ನಿರೀಕ್ಷಿತ 'ಕಣ್ಣಪ್ಪ' ಚಿತ್ರದ ಪ್ರಚಾರ

Kannappa Movie: ʼಕಣ್ಣಪ್ಪʼ ಚಿತ್ರದ ಮೊದಲ ಪತ್ರಿಕಾಗೋಷ್ಠಿ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿದೆ. ನಾಯಕ ವಿಷ್ಣು ಮಂಚು, ನಟ - ನೃತ್ಯ ನಿರ್ದೇಶಕ ಪ್ರಭುದೇವ, ನಟ ಶರತ್ ಕುಮಾರ್ ಸೇರಿ ಹಲವರು ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು.

Kannappa Movie
Profile Prabhakara R January 19, 2025

ಬೆಂಗಳೂರು: ದಕ್ಷಿಣ ಭಾರತದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರುವ, ಮೋಹನ್ ಬಾಬು ನಿರ್ಮಾಣದ, ಮುಕೇಶ್ ಕುಮಾರ್ ಸಿಂಗ್ ನಿರ್ದೇಶನದ ಹಾಗೂ ವಿಷ್ಣು ಮಂಚು ನಾಯಕರಾಗಿ ನಟಿಸಿರುವ ʼಕಣ್ಣಪ್ಪʼ ಚಿತ್ರದ ಮೊದಲ ಪತ್ರಿಕಾಗೋಷ್ಠಿ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಿತು. ನಾಯಕ ವಿಷ್ಣು ಮಂಚು, ನಟ - ನೃತ್ಯ ನಿರ್ದೇಶಕ ಪ್ರಭುದೇವ, ನಟ ಶರತ್ ಕುಮಾರ್, ಕರ್ನಾಟಕದಲ್ಲಿ ಚಿತ್ರವನ್ನು ವಿತರಣೆ ಮಾಡುತ್ತಿರುವ ರಾಕ್ ಲೈನ್ ವೆಂಕಟೇಶ್ ಹಾಗೂ ನಿರ್ದೇಶಕ ಮುಖೇಶ್ ಕುಮಾರ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಕುರಿತು ಮಾತನಾಡಿದರು.

ಈ ವೇಳೆ ನಾಯಕ ವಿಷ್ಣು ಮಂಚು ಮಾತನಾಡಿ , ಇಂತಹ ಹಿರಿಯರ ಜತೆಗೆ ವೇದಿಕೆ ಹಂಚಿಕೊಳ್ಳುತ್ತಿರುವ ವಿಷಯ ಖುಷಿ ತಂದಿದೆ. ‘ಕಣ್ಣಪ್ಪ’ ಚಿತ್ರದ ಪ್ರಚಾರ ಯಾಕೆ ನಾವು ಕರ್ನಾಟಕದಿಂದ ಪ್ರಾರಂಭಿಸಿದೆವು ಎಂಬುದಕ್ಕೆ ಕಾರಣವಿದೆ. ಕಣ್ಣಪ್ಪನ ಕಥೆ ಶತಶತಮಾನಗಳು ಹಿಂದಿನದ್ದಾದರೂ ಅದು ಜನಪ್ರಿಯವಾಗಿದ್ದು, ಡಾ. ರಾಜಕುಮಾರ್ ಅವರಿಂದ. ‘ಬೇಡರ ಕಣ್ಣಪ್ಪ’ ಚಿತ್ರದಲ್ಲಿ ಅವರು ಮೊದಲು ಕಣ್ಣಪ್ಪನ ಪಾತ್ರದಲ್ಲಿ ಕಾಣಿಸಿಕೊಂಡರು.

ನಂತರ ಶಿವರಾಜಕುಮಾರ್ ಅವರು ಸಹ ಕಣ್ಣಪ್ಪನ ಪಾತ್ರವನ್ನು ‘ಶಿವ ಮೆಚ್ಚಿದ ಕಣ್ಣಪ್ಪ’ ಚಿತ್ರದಲ್ಲಿ ಮಾಡಿದರು. ತೆಲುಗಿನಲ್ಲಿ ಕೃಷ್ಣಂರಾಜು ಅಭಿನಯದಲ್ಲಿ ಕಣ್ಣಪ್ಪನ ಕುರಿತು ಒಂದು ಚಿತ್ರ ಬಂದಿತ್ತು. 50 ವರ್ಷಗಳ ನಂತರ ಪುನಃ ತೆಲುಗಿನಲ್ಲಿ ನಾವು ಕಣ್ಣಪ್ಪನ ಕಥೆಯನ್ನು ಮರುಸೃಷ್ಟಿ ಮಾಡಿದ್ದೇವೆ. ಕಣ್ಣಪ್ಪ ಶಿವಭಕ್ತನಾದ ಕಥೆ ಎಲ್ಲರಿಗೂ ಗೊತ್ತಿದೆ. ಆದರೆ, ಅದಕ್ಕೂ ಮೊದಲು ಆತ ಯಾಕೆ ನಾಸ್ತಿಕನಾಗಿದ್ದ, ತಂದೆಯ ಜೊತೆಗೆ ಅವನ ಸಂಬಂಧ ಹೇಗಿತ್ತು ಮುಂತಾದ ಹಲವು ವಿಷಯಗಳನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇವೆ ಎಂದು ತಿಳಿಸಿದರು.

Kannappa Movie 1

ಇಲ್ಲಿಂದ ಪ್ರಚಾರ ಆರಂಭ ಮಾಡಲು ಮತ್ತೊಂದು ಕಾರಣ, ನಮ್ಮ ಕುಟುಂಬದ ಆತ್ಮೀಯರಾಗಿದ್ದ ಅಂಬರೀಶ್ ಅಂಕಲ್ ಅವರ ಊರು ಸಹ ಇದಾಗಿದೆ. ಇವತ್ತು ಅವರಿದಿದ್ದರೆ ತುಂಬಾ ಖುಷಿ ಪಡುತ್ತಿದ್ದರು. ಇನ್ನು ನಮ್ಮ ಚಿತ್ರದಲ್ಲಿ ನಮ್ಮ ತಂದೆ ಮೋಹನ್ ಬಾಬು, ಖ್ಯಾತ ನಟರಾದ ಮೋಹನ್ ಲಾಲ್, ಪ್ರಭಾಸ್, ಅಕ್ಷಯ್ ಕುಮಾರ್, ಶರತ್ ಕುಮಾರ್, ದೇವರಾಜ್, ಸಾಧುಕೋಕಿಲ ಮುಂತಾದವರು ಅಭಿನಯಿಸಿದ್ದಾರೆ. ಇವರೆಲ್ಲಾ ಅಭಿನಯಿಸಿರುವುದು ನಮ್ಮ ತಂದೆಯವರ ಮೇಲಿನ ವಿಶ್ವಾಸದಿಂದ. ರಾಕ್ ಲೈನ್ ವೆಂಕಟೇಶ್ ಅವರು ಸಹ ನನ್ನ ಜೊತೆಗಿರುತ್ತಾರೆ ಎಂದರು.

ನಿರ್ದೇಶಕ ಮುಕೇಶ್ ಕುಮಾರ್ ಸಿಂಗ್ ಮಾತನಾಡಿ, ಆಂಜನೇಯ, ಶ್ರೀ ಕೃಷ್ಣದೇವರಾಯ, ಕರ್ನಾಟಕ ಶಾಸ್ತ್ರೀಯ ಸಂಗೀತ, ಡಾ. ರಾಜಕುಮಾರ್ ಹುಟ್ಟಿದ ನಾಡಿಗೆ ಪ್ರಣಾಮಗಳು. ಡಾ. ರಾಜಕುಮಾರ್ ಅವರು ‘ಬೇಡರ ಕಣ್ಣಪ್ಪ’ ಚಿತ್ರದಲ್ಲಿ ನಟಿಸಿದ್ದರು. ನಮಗೆ ‘ಕಣ್ಣಪ್ಪ’ ಚಿತ್ರ ಮಾಡಲು ಅದು ದೊಡ್ಡ ಸ್ಫೂರ್ತಿ. ನಾನು ಆ ಚಿತ್ರವನ್ನು ನೋಡಿದ್ದೇನೆ. ಆ ಚಿತ್ರದಲ್ಲಿ ಡಾ. ರಾಜಕುಮಾರ್ ಅವರ ಅಭಿನಯ ಎಂತಹ ಕಲಾವಿದರಿಗೂ ದೊಡ್ಡ ಸವಾಲು. ಅದನ್ನು ಮರುಸೃಷ್ಟಿಸುವುದು ಸಹ ಸವಾಲು. ದೊಡ್ಡ ಕಲಾವಿದರ ಮತ್ತು ತಂತ್ರಜ್ಞರ ಬಳಗದ ಸಹಾಯದಿಂದ ಇಂಥದ್ದೊಂದು ಚಿತ್ರ ಮಾಡುವುದಕ್ಕೆ ಸಾಧ್ಯವಾಗಿದೆ. ಶಿವನ ಭಕ್ತನ ಕುರಿತಾದ ಒಂದು ಚಿತ್ರ ಮಾಡುವುದರ ಜೊತೆಗೆ ಪೌರಾಣಿಕ ಚಿತ್ರ ಮಾಡುವುದು ಸುಲಭದ ಮಾತಲ್ಲ. ಅದನ್ನು ಸಾಧ್ಯವಾಗಿಸಿದವರು ವಿಷ್ಣು ಮಂಚು ಮತ್ತು ಡಾ. ಮೋಹನ್‍ ಬಾಬು. ನಾವು ನಮ್ಮ ಕೆಲಸವನ್ನು ಶ್ರದ್ಧಾಪೂರ್ವಕವಾಗಿ ಮಾಡಿದ್ದೇವೆ. ಪ್ರೇಕ್ಷಕರರು ಈ ಚಿತ್ರಕ್ಕೆ ತಮ್ಮ ಪ್ರೀತಿ ಮತ್ತು ಪ್ರೋತ್ಸಾಹವನ್ನು ತೋರಿಸುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಹೇಳಿದರು.

Kannappa Movie 2

ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮಾತನಾಡಿ, ನಾನು ಮೋಹನ್ ಬಾಬು ಹಾಗೂ ಅಂಬರೀಶ್ ಅವರ ಗೆಳೆತನವನ್ನು ಹತ್ತಿರದಿಂದ ನೋಡಿರುವವನು‌‌. ಅವರಿಬ್ಬರು ಅಷ್ಟು ಆತ್ಮೀಯರು. ನನ್ನ ಮೇಲೂ ಅವರಿಗೆ ತುಂಬಾ ಆತ್ಮೀಯತೆ‌. ಇತ್ತೀಚೆಗೆ ಫೋನ್ ಮಾಡಿ ನನ್ನನ್ನು ಕರೆದು ಈ ಚಿತ್ರವನ್ನು ತೋರಿಸಿದರು. ಇನ್ನೂ ಆರ್ ಆರ್ ಆಗಿಲ್ಲ. ಹಾಗೆ ಚಿತ್ರ ನೋಡಿದ್ದೇನೆ. ಈ ಚಿತ್ರ ನೋಡಿ ನಾನು ಸ್ವಲ್ಪ ಹೊತ್ತು ಮಾತನಾಡಕ್ಕೆ ಆಗಲಿಲ್ಲ. ಅಷ್ಟು ಅದ್ಭುತವಾಗಿ ಈ ಸಿನಿಮಾ ಮೂಡಿಬಂದಿದೆ. ಭಾರತದ ಹೆಸರಾಂತ ನಟರು ಈ ಚಿತ್ರದಲ್ಲಿ ನಟಿಸಿದ್ದು, ನಾವು ನಿರೀಕ್ಷೆ ಮಾಡಿರದ ಪಾತ್ರಗಳಲ್ಲಿ ಅವರನ್ನು ನೋಡಬಹುದು. ಈ ಚಿತ್ರ ಏಪ್ರಿಲ್ 25 ರಂದು ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗುತ್ತಿದ್ದು, ಕರ್ನಾಟಕದಲ್ಲಿ ನಾನು ವಿತರಣೆ ಮಾಡುತ್ತಿದ್ದೇನೆ ಎಂದರು.

ನಟ ಪ್ರಭುದೇವ ಮಾತನಾಡಿ, ಈ ಸಿನಿಮಾದಲ್ಲಿ ನಾನು ನಟಿಸಿಲ್ಲ. ಮೂರು ಹಾಡುಗಳಿಗೆ ನೃತ್ಯ ‌ನಿರ್ದೇಶನ ಮಾಡಿದ್ದೇನೆ. ನಾನು ಈ ಜಾನರ್ ನ ಚಿತ್ರಗಳಿಗೆ ನೃತ್ಯ ನಿರ್ದೇಶನ ಮಾಡಿರುವುದು ಅಪರೂಪ. ಮೋಹನ್ ಬಾಬು ಹಾಗೂ ವಿಷ್ಣು ಮಂಚು ಅವರು ನನ್ನ‌ ಹತ್ತಿರ ಮಂಡಿಸಿದ್ದಾರೆ. ನನಗೂ ಭಕ್ತಿಪ್ರಧಾನ ಈ ಚಿತ್ರಕ್ಕೆ ನೃತ್ಯ ನಿರ್ದೇಶನ ಮಾಡಿರುವುದು ತುಂಬಾ ಖುಷಿಯಾಗಿದೆ ಎಂದರು.

ನಾನು ಈ ಚಿತ್ರದ ವಿಶೇಷ ಪಾತ್ರದಲ್ಲಿ ನಟಿಸಿದ್ದೇನೆ ಎಂದು ಮಾತನಾಡಿದ ನಟ ಶರತ್ ಕುಮಾರ್, ನನ್ನ ಅಭಿನಯದ ಹೆಚ್ಚಿನ ಭಾಗದ ಚಿತ್ರೀಕರಣ ನ್ಯೂಜಿಲೆಂಡ್‌ನಲ್ಲಿ ನಡೆದಿದೆ. ಚಿತ್ರೀಕರಣದ ಅನುಭವ ನಿಜಕ್ಕೂ ಅವಿಸ್ಮರಣೀಯ. "ಕಣ್ಣಪ್ಪ" ಇಡೀ ಭಾರತೀಯರು ಹೆಮ್ಮೆ ಪಡುವ ಚಿತ್ರವಾಗಲಿದೆ ಎಂದರು.

ಈ ಸುದ್ದಿಯನ್ನೂ ಓದಿ | Maha Kumbh Mela: ರಾಯಚೂರಿನ ಜಿಲ್ಲಾಧಿಕಾರಿಯಾಗಿದ್ದ ಐ.ಆರ್.ಪೆರಮಾಳ್ ಈಗ ಸನ್ಯಾಸಿ

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ