ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ “ವುಮೆನ್‌-ಆಥಾನ್‌ನಲ್ಲಿ 1,500ಕ್ಕೂ ಹೆಚ್ಚು ಮಹಿಳೆಯರು ಭಾಗಿ

ಕಲ್ಯಾಣ ನಗರದಿಂದ ಪ್ರಾರಂಭಗೊಂಡ ಆಥಾನ್‌, ಸುಮಾರು ಮೂರು ಕಿ.ಮೀ.ವರೆಗೂ ಮಹಿಳಾ ಆರೈಕೆ ಬಗ್ಗೆ ಸಂದೇಶ ಹೊಂದಿರುವ ಫಲಕಗಳನ್ನು ಹಿಡಿದು ಸಾಗಿದರು. ಒಂದೂವರೆ ಸಾವಿರ ಕ್ಕೂ ಅಧಿಕ ಮಹಿಳೆಯರು ನೇರಳೆ ಬಣ್ಣದ ಬಟ್ಟೆ ಧರಿಸಿ, ಎಲ್ಲರೂ ಒಂದೇ ಎಂಬ ಸಂದೇಶ ದೊಂದಿಗೆ ಸಾಗಿದರು. ಈ ವೇಳೆ ಹಲವು ಆಸ್ಪತ್ರೆ ಸಿಬ್ಬಂದಿಗಳು, ಮಕ್ಕಳು ಸಹ ಇದರಲ್ಲಿ ಪಾಲ್ಗೊಂಡರು.

ವುಮೆನ್‌-ಆಥಾನ್‌ನಲ್ಲಿ 1,500ಕ್ಕೂ ಹೆಚ್ಚು ಮಹಿಳೆಯರು ಭಾಗಿ

-

Ashok Nayak
Ashok Nayak Mar 12, 2026 10:30 PM

ಬೆಂಗಳೂರು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತವಾಗಿ “ನಾರಿ ಪವರ್‌ ಟೀಂ” ಆಯೋ ಜಿಸಿದ್ದ “ವುಮೆನ್‌-ಆಥಾನ್‌ 4 ನೇ ಆವೃತ್ತಿ”ಯಲ್ಲಿ 1,500 ಮಹಿಳೆಯರು ಪಾಲ್ಗೊಂಡು, ಮಹಿಳೆಯರು ತಮ್ಮ ಆರೈಕೆ ಬಗ್ಗೆ ಕಾಳಜಿ ವಹಿಸಿ ಎಂಬ ಸಂದೇಶದೊಂದಿಗೆ ವಾಕಥಾನ್‌ ನಡೆಸಿದರು.

ಇದನ್ನೂ ಓದಿ: Women's Day: ಮಹಿಳಾ ದಿನದ ಹಿನ್ನೆಲೆ: ಲಯನ್ಸ್ ಡಿಸ್ಟ್ರಿಕ್ಟ್ 317ಎಫ್ ನಿಂದ ಮಹಿಳೆಯರಿಗೆ 15 ಇ-ಆಟೋ ವಿತರಣೆ

ಕಲ್ಯಾಣ ನಗರದಿಂದ ಪ್ರಾರಂಭಗೊಂಡ ಆಥಾನ್‌, ಸುಮಾರು ಮೂರು ಕಿ.ಮೀ.ವರೆಗೂ ಮಹಿಳಾ ಆರೈಕೆ ಬಗ್ಗೆ ಸಂದೇಶ ಹೊಂದಿರುವ ಫಲಕಗಳನ್ನು ಹಿಡಿದು ಸಾಗಿದರು. ಒಂದೂ ವರೆ ಸಾವಿರಕ್ಕೂ ಅಧಿಕ ಮಹಿಳೆಯರು ನೇರಳೆ ಬಣ್ಣದ ಬಟ್ಟೆ ಧರಿಸಿ, ಎಲ್ಲರೂ ಒಂದೇ ಎಂಬ ಸಂದೇಶದೊಂದಿಗೆ ಸಾಗಿದರು. ಈ ವೇಳೆ ಹಲವು ಆಸ್ಪತ್ರೆ ಸಿಬ್ಬಂದಿಗಳು, ಮಕ್ಕಳು ಸಹ ಇದರಲ್ಲಿ ಪಾಲ್ಗೊಂಡರು.

ಈ ವೇಳೆ ಮಾತನಾಡಿದ ಡೆಂಟಲ್ ಡೆನ್‌ನ ವ್ಯವಸ್ಥಾಪಕ ನಿರ್ದೇಶಕಿ ಡಾ.ಲಕ್ಷ್ಮಿ ರೂಪೇಶ್, ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡು, ಹೊರಗೆ-ಒಳಗೆ ಎಲ್ಲೆಡೆ ಶ್ರಮವಹಿಸಿ ದುಡಿಯುತ್ತಾರೆ. ಈ ವೇಳೆ, ತಮ್ಮ ಆರೈಕೆ ಬಗ್ಗೆಯೇ ಕಾಳಜಿ ವಹಿಸುವುದಿಲ್ಲ. ಪ್ರತಿಯೊಬ್ಬ ಮಹಿಳೆಯೂ ಸ್ವ ಆರೈಕೆಗೆ ಗಮನ ನೀಡಿ. ಈ ಆಥಾನ್‌ನ ಮೂಲಕ ಮಹಿಳೆ ಯರು ಇನ್ನಾದರೂ ಜಾಗೃತಿ ವಹಿಸಲು ಎಂಬ ಸಂದೇಶ ಸಾರಲಾಗುತ್ತಿದೆ ಎಂದು ಹೇಳಿದರು.