ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬೆಂಗಳೂರಿನಲ್ಲಿ ಇತ್ತೀಚೆಗೆ ಉದ್ಘಾಟನೆಯಾದ ರೆಸ್ಟೋರೆಂಟ್ ಬಂದ್; ಮಾಲಕನ ಭಾವನಾತ್ಮಕ ಪೋಸ್ಟ್

Viral Post: ಬೆಂಗಳೂರಿನ ರೆಸ್ಟೋರೆಂಟ್ ಮಾಲಕರೊಬ್ಬರ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಹೊಸದಾಗಿ ರೆಸ್ಟೋರೆಂಟ್ ಅನ್ನು ಇತ್ತೀಚೆಗೆ ತೆರೆಯಲಾಗಿತ್ತು. ಆದರೆ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಸಮಸ್ಯೆಯಿಂದಾಗಿ ಕೆಲವೇ ದಿನಗಳಲ್ಲಿ ಹೋಟೆಲ್‌ನ ಬಾಗಿಲು ಮುಚ್ಚುವಂತಾಗಿದೆ.

ಎಲ್‌ಪಿಜಿ ಕೊರತೆ: ಬೆಂಗಳೂರಿನಲ್ಲಿ‌ ಇತ್ತೀಚೆಗೆ ತೆರೆದ ರೆಸ್ಟೋರೆಂಟ್ ಬಂದ್

ಖಡಕ್‌ ಸಿಂಗ ದಾ ಢಾಬಾ ಮಾಲಕ ಕವಲ್‌ಜೀತ್‌ ಸಿಂಗ್‌ -

Profile
Pushpa Kumari Mar 12, 2026 9:29 PM

ಬೆಂಗಳೂರು, ಮಾ.12: ಇರಾನ್-ಇಸ್ರೇಲ್ ಯುದ್ಧದ ಬಿಸಿ ಇದೀಗ ಕರ್ನಾಟಕಕ್ಕೂ ತಟ್ಟಿದೆ. ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಹೋಟೆಲ್ ಉದ್ಯಮಕ್ಕೆ ಭಾರೀ ನಷ್ಟ ಉಂಟಾಗಿದೆ. ಈ ನಡುವೆ ಬೆಂಗಳೂರಿನ ರೆಸ್ಟೋರೆಂಟ್ ಮಾಲಕರೊಬ್ಬರ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral Video) ಆಗುತ್ತಿದೆ. ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಖಡಕ್‌ ಸಿಂಗ ದಾ ಢಾಬಾ ಅನ್ನು ಇತ್ತೀಚೆಗೆ ತೆರೆಯಲಾಗಿತ್ತು. ಆದರೆ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದಾಗಿ ಕೆಲವೇ ದಿನಗಳಲ್ಲಿ ರೆಸ್ಟೋರೆಂಟ್ ಬಾಗಿಲು ಮುಚ್ಚುವಂತಾಗಿದೆ.

ಈ ಬಗ್ಗೆ ಹೋಟೆಲ್‌ ಮಾಲಕ ಕವಲ್‌ಜೀತ್‌ ಸಿಂಗ್‌ ಭಾವನಾತ್ಮಕ ಪೋಸ್ಟ್ ಶೇರ್ ಮಾಡಿದ್ದಾರೆ. ದೆಹಲಿಯಲ್ಲಿ ತಮ್ಮ ಮುಖ್ಯ ವ್ಯವಹಾರವನ್ನು ನಡೆಸುತ್ತಿರುವ ಅವರು ಇತ್ತೀಚೆಗೆ ಬೆಂಗಳೂರಿಗೂ ಉದ್ಯ, ವಿಸ್ತರಿಸಿದ್ದರು. ಈ ಔಟ್‌ಲೆಟ್ ಮಾರ್ಚ್ 6ರಂದು ಅಧಿಕೃತವಾಗಿ ಉದ್ಘಾಟನೆಗೊಂಡಿತ್ತು.

ವೈರಲ್‌ ಪೋಸ್ಟ್‌ ಇಲ್ಲಿದೆ:



ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದರಿಂದ ಇದೀಗ ಹೋಟೆಲ್ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಅಡುಗೆಗೆ ಅಗತ್ಯವಾದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದಾಗಿ ಹೋಟೆಲ್ ಮುಚ್ಚುವಂತಾಗಿದೆ. ಹೊಸದಾಗಿ ಪ್ರಾರಂಭಿಸಲಾದ ಔಟ್‌ಲೆಟ್ ಅನ್ನು ತಾತ್ಕಾಲಿಕವಾಗಿ ಏಕೆ ಮುಚ್ಚಬೇಕಾಯಿತು ಎಂಬುದನ್ನು ಕವಲ್‌ಜೀತ್‌ ಸಿಂಗ್‌ ಭಾವನಾತ್ಮಕವಾಗಿ ಹಂಚಿಕೊಂಡಿದ್ದಾರೆ. ಅವರು ತಮ್ಮ ಸಂದೇಶದಲ್ಲಿ ಈ ಪರಿಸ್ಥಿತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ವಿಡಿಯೊ ಮಾಡುತ್ತ ಮೈಮರೆತು ಚರಂಡಿಗೆ ಬಿದ್ದ ಯುವತಿ

ʼʼಬೆಂಗಳೂರಿನಲ್ಲಿ ಅಡುಗೆ ಅನಿಲ ಕೊರತೆಯಿಂದಾಗಿ ನಾವು ತಾತ್ಕಾಲಿಕವಾಗಿ ಹೋಟೆಲ್ ಮುಚ್ಚ ಬೇಕಾಯಿತು. ನನ್ನ ಹೃದಯ ಮುರಿದಿದೆ. ಆದರೆ ಉತ್ಸಾಹವು ಜೀವಂತವಾಗಿದೆ. ಗ್ಯಾಸ್‌ ಸಿಲಿಂಡರ್‌ ಪೂರೈಕೆ ಯಥಾಸ್ಥಿತಿಗೆ ಬಂದಾಗ ಖಂಡಿತವಾಗಿ ಮರಳಿ ಬರುತ್ತೇವೆʼʼ ಎಂದು ಬರೆದುಕೊಂಡಿದ್ದಾರೆ. ಸದ್ಯ ಅವರ ಪೋಸ್ಟ್ ತ್ವರಿತವಾಗಿ ಆನ್‌ಲೈನ್‌ನಲ್ಲಿ ಗಮನ ಸೆಳೆದಿದ್ದು ಸಾವಿರಾರು ವೀಕ್ಷಣೆಗಳನ್ನು ಪಡೆದಿದೆ.

ಭಾರತದಾದ್ಯಂತ ರೆಸ್ಟೋರೆಂಟ್‌ಗಳು, ಕ್ಲೌಡ್ ಕಿಚನ್‌ಗಳು ಮತ್ತು ಬೀದಿ ಆಹಾರ ಮಾರಾಟಗಾರರಿಗೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳು ಅತ್ಯಗತ್ಯವಾಗಿದೆ. ಸದ್ಯ ಯುದ್ಧದ ಭೀತಿಯಿಂದಾಗಿ ಸರಿಯಾದ ಪ್ರಮಾಣದಲ್ಲಿ ಪೂರೈಕೆಯಾಗುತ್ತಿಲ್ಲ.