ಬೆಂಗಳೂರು: ಡಿಜಿಟಲ್ ಪಾವತಿಯಲ್ಲಿ ಕರ್ನಾಟಕ ಮಂಚೂಣಿಯಲ್ಲಿದೆ. ಅಲ್ಲದೆ ವ್ಯಾಪಾರ ವಹಿವಾಟುಗಳು ಏರಳವಾಗಿ ನಡೆಯುತ್ತಿದೆ ಎಂದು ಸಮೀಕ್ಷೆಗಳು ತಿಳಿಸಿವೆ.
ಡಿಜಿಟಲ್ ಪಾವತಿಯಲ್ಲಿ ಪೋನ್‌ಪೇ ವಲಯು ಸಾಕಷ್ಟು ಪ್ರಗತಿ ಸಾಧಿಸಿದೆ. ಬೆಂಗಳೂರಿನ ನಾಗರಭಾವಿಯ ಗದ್ದಲದ ಬೀದಿಗಳಿಂದ ಹಿಡಿದು ಮೈಸೂರಿನ ರೇಷ್ಮೆ ಮಳಿಗೆಗಳವರೆಗೆ, ಮತ್ತು ಪ್ರತಿದಿನ ನೂರಾರು ಗ್ರಾಹಕರಿಗೆ ಸೇವೆ ಸಲ್ಲಿಸುವ ಐಸ್‌ಕ್ರೀಮ್ ಪಾರ್ಲರ್ ಗಳವರೆಗೂ, ವ್ಯಾಪಾರಿಗಳು ತಮ್ಮ ದೈನಂದಿನ ಕಾರ್ಯಾಚರಣೆಗಳನ್ನು ನಿರ್ವಹಿಸಲು ಮತ್ತು ವ್ಯಾಪಾರವನ್ನು ಬೆಳೆಸಲು ಫೋನ್‌ಪೇನಂತಹ ವೇದಿಕೆಗಳಿಂದ ಸಕ್ರಿಯ ಗೊಂಡಿರುವ ಡಿಜಿಟಲ್ ಪೇಮೆಂಟ್ಸ್ ಪ್ಲಾಟ್‌ಫಾರ್ಮ್‌ಗಳ ಮೇಲೆ ಹೆಚ್ಚು ಅವಲಂಬಿತ ರಾಗಿದ್ದಾರೆ.
ಇದನ್ನೂ ಓದಿ: DHRUVA Digital Address System: ವಿಳಾಸ ಪತ್ತೆ ಇನ್ಮುಂದೆ ಮತ್ತಷ್ಟು ಸುಲಭ; ಅಂಚೆ ಇಲಾಖೆಯಿಂದʼ ಧ್ರುವ' ಡಿಜಿಟಲ್ ಬಿಡುಗಡೆ
ಈ ಕ್ರಾಂತಿಯು ಪಾರಂಪರಿಕ ಉದ್ದಿಮೆಗಳು, ವೇಗವಾಗಿ ವಿಸ್ತರಿಸುತ್ತಿರುವ ಫ್ರಾಂಚೈಸಿಗಳು ಮತ್ತು ಸಣ್ಣ ವ್ಯಾಪಾರಿಗಳು ಸೇರಿದಂತೆ ಎಲ್ಲಾ ರೀತಿಯ ವ್ಯಾಪಾರಗಳನ್ನು ಪ್ರಗತಿಯೆಂಬ ಒಂದೇ ಛಾವಣಿಯಡಿ ಒಗ್ಗೂಡಿಸುತ್ತಿದೆ. ಈ ಡಿಜಿಟಲ್ ಪೇಮೆಂಟ್ಸ್ ಕ್ರಾಂತಿಯಿಂದ ತಮ್ಮ ಜೀವನ ಮತ್ತು ವ್ಯಾಪಾರವನ್ನು ಬದಲಾಯಿಸಿಕೊಂಡಿದ್ದಾರೆ.
ಬೆಂಗಳೂರಿನ ನಾಗರಭಾವಿ ಯ ಹೂವಿನ ವ್ಯಾಪಾರಿ ದೇವಿ ರಾಣಿ: ನಾಗರಭಾವಿಯ ದೇವಾಲಯವೊಂದರ ಪಕ್ಕದಲ್ಲಿ, ದೇವಿ ರಾಣಿ ಕಳೆದ 23 ವರ್ಷಗಳಿಂದ ಹೂವು ಮಾರು ತ್ತಿದ್ದಾರೆ. ಬೆಳಕು ಹರಿಯುವ ಮುನ್ನ ಜಾವಕ್ಕೆ ಅವರು ತಮ್ಮ ಪತಿಯೊಡನೆ ಕೆ.ಆರ್. ಮಾರುಕಟ್ಟೆಗೆ ತಲುಪಿ, ಸೇವಂತಿಗೆ, ಚೆಂಡು, ಗುಲಾಬಿ, ಕಮಲದಂತಹ ನಾನಾ ಬಗೆಯ ಹೂವುಗಳನ್ನು ಆರಿಸಿ, ಕೊಂಡು ತರುತ್ತಾರೆ. ದೇವಸ್ಥಾನದ ಘಂಟೆಗಳು ಬಾರಿಸುವ ಹೊತ್ತಿಗೆ, ಅವರ ಅಂಗಡಿಯು ಬಣ್ಣದಿಂದ ಕಂಗೊಳಿಸುತ್ತ ಸುವಾಸನೆಯಿಂದ ಜನರ ಕೈ ಬಿಸಿ ಸೆಳೆಯುತ್ತದೆ ಎಂಬುದನ್ನು ವಿಶ್ಲೇಷಣೆ ಮಾಡಲಾಗಿದೆ.