DHRUVA Digital Address System: ವಿಳಾಸ ಪತ್ತೆ ಇನ್ಮುಂದೆ ಮತ್ತಷ್ಟು ಸುಲಭ; ಅಂಚೆ ಇಲಾಖೆಯಿಂದʼ ಧ್ರುವ' ಡಿಜಿಟಲ್ ಬಿಡುಗಡೆ
ಸ್ಮಾರ್ಟ್ ಡಿಜಿಟಲ್ ಸೇವೆಗಳತ್ತ ಹೆಜ್ಜೆ ಇಡುತ್ತಿರುವ ಭಾರತೀಯ ಅಂಚೆ ಇಲಾಖೆಯು ಈ ನಿಟ್ಟಿನಲ್ಲಿ ಈಗ ಒಂದು ಮೈಲುಗಲ್ಲು ಸ್ಥಾಪಿಸಿದೆ. 'ಧ್ರುವ' ಡಿಜಿಟಲ್ ವಿಳಾಸ ವ್ಯವಸ್ಥೆಯನ್ನು ಪರಿಚಯಿಸಲಾಗಿದ್ದು, ಇದರ ಅಡಿಯಲ್ಲಿ ಪ್ರತಿಯೊಂದು ಮನೆಗೂ ಒಂದು ವಿಶಿಷ್ಟ ಡಿಜಿಟಲ್ ಗುರುತನ್ನು ನೀಡುವ ಗುರಿಯನ್ನು ಹೊಂದಲಾಗಿದೆ.
'ಧ್ರುವ' ಡಿಜಿಟಲ್ ಸೇವೆ -
ನವದೆಹಲಿ: ಭಾರತೀಯ ಅಂಚೆ ಇಲಾಖೆಯು (Indian Department of Post) ಈಗ ಸ್ಮಾರ್ಟ್ ಡಿಜಿಟಲ್ ಸೇವೆಗಳತ್ತ (smart digital service) ಹೆಜ್ಜೆ ಇಡುತ್ತಿದೆ. ಈ ನಿಟ್ಟಿನಲ್ಲಿ ಈಗ ಧ್ರುವ (Dhruva) ವಿಶಿಷ್ಟ ವರ್ಚುವಲ್ ವಿಳಾಸವನ್ನು (Unique virtual address) ಪರಿಚಯಿಸುವ ಕಾರ್ಯಾರಂಭವಾಗಿದೆ. ಭಾರತೀಯ ಅಂಚೆ ಇಲಾಖೆ ಅಭಿವೃದ್ಧಿಪಡಿಸಿದ ಹೊಸದಾದ ಈ ವ್ಯವಸ್ಥೆಯು ಎಲ್ಲಾ ಭೌತಿಕ ವಿಳಾಸಗಳನ್ನು ಸುರಕ್ಷಿತವಾಗಿ ಡಿಜಿಟಲೀಕರಣಗೊಳಿಸುವ ಗುರಿಯನ್ನು ಹೊಂದಿದೆ. ಇದು ದೇಶಾದ್ಯಂತ ಸರ್ಕಾರ, ವ್ಯವಹಾರ ಮತ್ತು ದೈನಂದಿನ ಜೀವನದಲ್ಲಿ ಮಹತ್ವದ ಬದಲಾವಣೆಯನ್ನು ತರಲಿದೆ. ಇದರ ಅಡಿಯಲ್ಲಿ ಪ್ರತಿಯೊಂದು ಭೌತಿಕ ವಿಳಾಸಕ್ಕೂ ಒಂದು ವಿಶಿಷ್ಟ ಡಿಜಿಟಲ್ ಗುರುತನ್ನು ನೀಡಲಾಗುತ್ತದೆ.
ಧ್ರುವ ಎಂದರೇನು?
ಇದು ಡಿಜಿಟಲ್ ವಿಳಾಸ ವ್ಯವಸ್ಥೆಯಾಗಿದೆ. ಇದರ ಅಡಿಯಲ್ಲಿ ಮನೆ ಅಥವಾ ಕಚೇರಿಯ ವಿಳಾಸಗಳನ್ನು ಸಂಪೂರ್ಣವಾಗಿ ಡಿಜಿಟಲ್ ವಿಳಾಸದ ಮೂಲಕ ಗುರುತಿಸಲಾಗುತ್ತದೆ. ಇದು ವಿಳಾಸಗಳನ್ನು ಬಳಸುವುದು, ಪರಿಶೀಲಿಸುವುದನ್ನು ಸುಲಭಗೊಳಿಸುತ್ತದೆ.
Pulse Polio Campaign 2025: ಡಿಸೆಂಬರ್ 21ರಿಂದ 24ರವರೆಗೆ ರಾಜ್ಯದಲ್ಲಿ ಪಲ್ಸ್ ಪೋಲಿಯೋ ಅಭಿಯಾನ
ಧ್ರುವ ಡಿಜಿಟಲ್ ವಿಳಾಸದಿಂದಾಗಿ ಕೆಲವು ಸೇವೆಗಳು ಹೆಚ್ಚು ಸುಲಭವಾಗಲಿದೆ. ಮುಖ್ಯವಾಗಿ ಕೊರಿಯರ್ ವಿತರಣೆ, ಇ-ಕಾಮರ್ಸ್ ಪ್ಲಾಟ್‌ಫಾರ್ಮ್, ಬ್ಯಾಂಕ್, ಹಣಕಾಸು, ಸರ್ಕಾರಿ ಕಲ್ಯಾಣ ಮತ್ತು ಸಾರ್ವಜನಿಕ ಸೇವೆಗಳನ್ನು ಜನರಿಗೆ ಸಕಾಲದಲ್ಲಿ ನೀಡಬಹುದಾಗಿದೆ. ಇದು ವಿಶೇಷವಾಗಿ ಗ್ರಾಮೀಣ, ಅರೆ ನಗರ ಪ್ರದೇಶಗಳಲ್ಲಿ ವಿಳಾಸ ಗೊಂದಲದಿಂದ ಉಂಟಾಗುವ ಅನಗತ್ಯ ವಿಳಂಬಗಳನ್ನು ತಪ್ಪಿಸುತ್ತದೆ.
ಹೇಗಿದೆ ಈ ವ್ಯವಸ್ಥೆ?
ಧ್ರುವ ಡಿಜಿಟಲ್ ವಿಳಾಸ ವ್ಯವಸ್ಥೆಯಲ್ಲಿ ಪ್ರತಿಯೊಂದು ಭೌತಿಕ ವಿಳಾಸವನ್ನು ಅಂಚೆ ಮತ್ತು ಭೌಗೋಳಿಕ ಮಾಹಿತಿಗೆ ಲಿಂಕ್ ಮಾಡಿ ವಿಶೇಷ ಡಿಜಿಟಲ್ ಐಡಿಯನ್ನು ಮಾಡಲಾಗುತ್ತದೆ. ಇದರ ರಚನೆ ಮತ್ತು ಪರಿಶೀಲನೆಗೆ ಸರ್ಕಾರಿ ಮತ್ತು ಖಾಸಗಿ ಕಂಪೆನಿಗಳು ಸಹಾಯ ಮಾಡುತ್ತದೆ. ವಿಶೇಷ ಏಜೆನ್ಸಿಗಳು ವಿಳಾಸ ಸರಿಯಾಗಿದೆಯೇ ಮತ್ತು ಅಧಿಕೃತವಾಗಿ ಮಾನ್ಯವಾಗಿದೆಯೇ ಎಂಬುದನ್ನು ಪರಿಶೀಲಿಸುತ್ತವೆ. ಬ್ಯಾಂಕ್, ವಿತರಣಾ ಕಂಪೆನಿ, ಸರ್ಕಾರಿ ಕಚೇರಿಗಳು ಸೇರಿದಂತೆ ಎಲ್ಲಾ ಸಂಸ್ಥೆಗಳು ಒಂದೇ ಡಿಜಿಟಲ್ ವಿಳಾಸವನ್ನು ಬಳಸಲು ಸಾಧ್ಯವಾಗುತ್ತದೆ. ಡಿಜಿಟಲ್ ವಿಳಾಸವನ್ನು ಗ್ರಾಹಕರು ಅನುಮೋದನೆ ನೀಡಿದರೆ ಮಾತ್ರ ಬಳಸಲಾಗುತ್ತದೆ ಮತ್ತು ಹಂಚಿಕೊಳ್ಳಲಾಗುತ್ತದೆ.
ಧ್ರುವ ವಿಳಾಸವು ಡಿಜಿಪಿನ್ ಅನ್ನು ಒಳಗೊಂಡಿರುತ್ತದೆ. ಇದರಲ್ಲಿ ಹತ್ತು ಅಂಕೆಯ ಆಲ್ಫಾ-ನ್ಯೂಮರಿಕ್ ಕೋಡ್ ಆಗಿದ್ದು ಇದು ಅಕ್ಷಾಂಶ ಮತ್ತು ರೇಖಾಂಶವನ್ನು ಬಳಸಿಕೊಂಡು ಭಾರತೀಯ ಪ್ರದೇಶದ ಪ್ರತಿಯೊಂದು ಚದರವನ್ನು (ಸುಮಾರು 4×4 ಮೀಟರ್) ನಕ್ಷೆ ಮಾಡಿ ಸಾಂಪ್ರದಾಯಿಕ ಪಿನ್ ಕೋಡ್‌ನ ಡಿಜಿಟಲ್ ಆವೃತ್ತಿಯನ್ನು ರೂಪಿಸುತ್ತದೆ. ಇದರಿಂದ ಯಾವುದೇ ಕಠಿಣ ಪ್ರದೇಶದಲ್ಲಿರುವ ಮನೆಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು.
ಭಾರತದಲ್ಲಿ ಏಕೆ ಮುಖ್ಯ?
ಧ್ರುವ ಡಿಜಿಟಲ್ ವಿಳಾಸ ವ್ಯವಸ್ಥೆಯು ಭಾರತದಲ್ಲಿ ಬಹುಮುಖ್ಯವಾಗಿದೆ. ಯಾಕೆಂದರೆ ಇಲ್ಲಿ ವಿತರಣೆಗಳು, ದಾರಿ ತಪ್ಪುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ವ್ಯವಹಾರಗಳು ವಿಳಂಬ ಮತ್ತು ವೆಚ್ಚದಾಯಕವಾಗಿರುತ್ತದೆ. ಆದರೆ ಧ್ರುವ ಇದನ್ನು ಪರಿಹರಿಸುತ್ತದೆ. ಎಲ್ಲಾ ವಿಳಾಸಗಳನ್ನು ಏಕರೂಪ ಮತ್ತು ಪ್ರಮಾಣಿತವಾಗಿರುವುದರಿಂದ ವಿತರಣೆ ಮತ್ತು ಸೇವೆಗಳಿಗೆ ಸರಿಯಾದ ಸಮಯಕ್ಕೆ ಮತ್ತು ಹೆಚ್ಚು ವೇಗವಾಗಿ ನಡೆಸುವುದು ಸಾಧ್ಯವಾಗುತ್ತದೆ. ಸೇವೆಯಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ಕಾಪಾಡಿಕೊಳ್ಳಬಹುದು.
Janaushadhi Kendra: ಜನೌಷಧಿ ಕೇಂದ್ರ ಮುಚ್ಚುವ ರಾಜ್ಯ ಸರ್ಕಾರ ಆದೇಶ ರದ್ದುಗೊಳಿಸಿದ ಹೈಕೋರ್ಟ್
ಡಿಜಿಟಲ್ ವಿಳಾಸ ವ್ಯವಸ್ಥೆಯನ್ನು ಪ್ರಾರಂಭಿಸುವ ಮೊದಲು ಸಾರ್ವಜನಿಕ ಅಭಿಪ್ರಾಯಗಳನ್ನು ಆಹ್ವಾನಿಸಿರುವ ಸರ್ಕಾರ ಇದಕ್ಕಾಗಿ ಡಿಸೆಂಬರ್ 31ರ ಗಡುವನ್ನು ವಿಧಿಸಿದೆ. ಇದರೊಳಗೆ ನಾಗರಿಕರು, ಕಂಪೆನಿ, ಎನ್‌ಜಿಒಗಳು ಇಮೇಲ್ ಮೂಲಕ ಸಲಹೆಗಳನ್ನು ಕಳುಹಿಸಬಹುದಾಗಿದೆ.
ಭೌತಿಕ ವಿಳಾಸಗಳನ್ನು ಹೇಗೆ ಗುರುತಿಸುತ್ತದೆ, ಪರಿಶೀಲಿಸುತ್ತದೆ ಮತ್ತು ನಿರ್ವಹಿಸುತ್ತದೆ ಎಂಬುದರ ಆಧುನಿಕ ರೂಪವೇ ಧ್ರುವ ಡಿಜಿಟಲ್ ವಿಳಾಸ. ಇದು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಮೂಲಕ ಸೇವೆಗಳನ್ನು ಆಧುನೀಕರಿಸುವ ಮತ್ತು ಸರಳಗೊಳಿಸುವ ಸರ್ಕಾರದ ವಿಶಾಲ ಧ್ಯೇಯದ ಭಾಗವಾಗಿದೆ .