ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Little Millennium ಅವರ ಪ್ರಸ್ತುತಿ “ಬ್ಲೂಮ್” – ಆರಂಭಿಕ ಬಾಲ್ಯದ ಶಿಕ್ಷಣಕ್ಕಾಗಿ ನೂತನ ಮಾದರಿಯ ಪಠ್ಯಕ್ರಮ

ಕಳೆದ ಹದಿನಾರು ವರ್ಷಗಳಿಂದ ನಮ್ಮ ಸಂಸ್ಥೆಯ ಮಾನ್ಯತೆ ಪಡೆದ “Seven Petal ಪಠ್ಯಕ್ರಮವು ಬಾಲ್ಯಾವಸ್ಥೆಯ ಮಕ್ಕಳ ಕಲಿಕೆಗೆ ಉತ್ತಮ ತಳಹದಿಯನ್ನು ಹಾಕಿಕೊಟ್ಟಿದೆ. ಇದೇ ಪರಂಪರೆಯನ್ನು ಮುಂದುವರಿಸುವ ಉದ್ದೇಶದಿಂದ ಜ್ಞಾನ, ಕೌಶಲ್ಯ ಮತ್ತು ಮೌಲ್ಯಗಳನ್ನು ಪ್ರತಿಯೊಂದು ಮಗುವಿ ನಲ್ಲೂ ವೃದ್ಧಿಸುವ ಸಲುವಾಗಿ BLOOM ನಲ್ಲಿ ಸಮಗ್ರ ಬೋಧನಾ ವಿಧಾನಗಳನ್ನು ಅಳವಡಿಸಲಾಗಿದೆ.

ಆರಂಭಿಕ ಬಾಲ್ಯದ ಶಿಕ್ಷಣಕ್ಕಾಗಿ ನೂತನ ಮಾದರಿಯ ಪಠ್ಯಕ್ರಮ

-

Ashok Nayak Ashok Nayak Sep 27, 2025 9:48 PM

● ಭಾರತದ ಸಾಂಸ್ಕೃತಿಕ ಮೌಲ್ಯಗಳು ಮತ್ತು ಜಾಗತಿಕ ಮಟ್ಟದ ಉತ್ತಮ ವಿಧಾನಗಳೊಂದಿಗೆ “BLOOM” ಹೊಸದೊಂದು ಶಾಲಾಪೂರ್ವ ಕಲಿಕಾ ವಿಧಾನವನ್ನು ಪರಿಚಯಿಸುತ್ತಿದೆ

● ಇದರಲ್ಲಿನ ಪಠ್ಯಕ್ರಮವು ರಾಷ್ಟ್ರೀಯ ಶಿಕ್ಷಣ ನೀತಿ (NEP 2020) ಮತ್ತು ರಾಷ್ಟ್ರೀಯ ಪಠ್ಯಕ್ರಮ ಸಮಿತಿ – ಆರಂಭಿಕ ಹಂತ (NCF-FS) ಇವರ ನಿಯಮಗಳಿಗೆ ಅನುಗುಣವಾಗಿದೆ.

● BLOOM ನಲ್ಲಿ ಜ್ಞಾನ, ಕೌಶಲ್ಯ ಮತ್ತು ಮೌಲ್ಯಗಳ ಜೊತೆಗೆ ಜೀವನ ಕೌಶಲ್ಯಗಳು ಹಾಗೂ ವೈಶ್ವಿಕ ದೃಷ್ಠಿಕೋನದ ಬೋಧನೆಯ ಸಂಯೋಜನೆಯನ್ನು ಒಳಗೊಂಡಿದೆ.

● ಉತ್ತಮ ಬೋಧನೆಗಾಗಿ ಶಿಕ್ಷಕರಿಗೆ ತರಬೇತಿ ಮತ್ತು ಹಿಮ್ಮಾಹಿತಿ ಸೌಲಭ್ಯದ ಸಮಗ್ರ ತರಬೇತಿಯನ್ನು ಇದು ಒಳಗೊಂಡಿದೆ.

ಬೆಂಗಳೂರು: ಲಿಟಲ್ ಮಿಲೇನಿಯಂ, ಬಾಲ್ಯದ ರಕ್ಷೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ (ECCE) ಭಾರತದ ಮುಂಚೂಣಿ ಸಂಸ್ಥೆಯಾಗಿದ್ದು, BLOOM ಎಂಬ ನೂತನ ಮಾದರಿಯ ಕಲಿಕಾ ಪಠ್ಯಕ್ರಮದೊಂದಿಗೆ ದೇಶದಲ್ಲಿ ಶಾಲಾಪೂರ್ವ ಶಿಕ್ಷಣಕ್ಕೆ ಹೊಸ ಭಾಷ್ಯ ಬರೆಯಲಿದೆ.

ಈ ನೂತನ ಪಠ್ಯಕ್ರಮವು ಶಾಲಾಪೂರ್ವ ಮಕ್ಕಳ ಕಲಿಕೆಯಲ್ಲಿ ಆಟದೊಂದಿಗೆ ಪಾಠ, ಅನುಭವ ಆಧಾರಿತ ಮತ್ತು ಮಕ್ಕಳಲ್ಲಿ ಕುತೂಹಲ ಮೂಡಿಸುವ ಬೋಧನಾ ವಿಧಾನವನ್ನು ರಾಷ್ಟ್ರೀಯ ಶಿಕ್ಷಣ ನೀತಿ (NEP 2020) ಮತ್ತು ರಾಷ್ಟ್ರೀಯ ಪಠ್ಯಕ್ರಮ ಸಮಿತಿ – ಆರಂಭಿಕ ಹಂತ (NCF-FS) ಇವರ ನಿಯಮಗಳಿಗೆ ಅನುಗುಣವಾಗಿ ಅಳವಡಿಸಲಾಗಿದೆ.

ಇದನ್ನೂ ಓದಿ: Bangalore News: ಐಬಿಎಸ್‌ ಬ್ಯುಸಿನೆಸ್‌ ಸ್ಕೂಲ್ ನ 2ನೇ ಘಟಿಕೋತ್ಸವ: 451 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಕಳೆದ ಹದಿನಾರು ವರ್ಷಗಳಿಂದ ನಮ್ಮ ಸಂಸ್ಥೆಯ ಮಾನ್ಯತೆ ಪಡೆದ “Seven Petal ಪಠ್ಯಕ್ರಮವು ಬಾಲ್ಯಾವಸ್ಥೆಯ ಮಕ್ಕಳ ಕಲಿಕೆಗೆ ಉತ್ತಮ ತಳಹದಿಯನ್ನು ಹಾಕಿಕೊಟ್ಟಿದೆ. ಇದೇ ಪರಂಪರೆಯನ್ನು ಮುಂದುವರಿಸುವ ಉದ್ದೇಶದಿಂದ ಜ್ಞಾನ, ಕೌಶಲ್ಯ ಮತ್ತು ಮೌಲ್ಯಗಳನ್ನು ಪ್ರತಿಯೊಂದು ಮಗುವಿನಲ್ಲೂ ವೃದ್ಧಿಸುವ ಸಲುವಾಗಿ BLOOM ನಲ್ಲಿ ಸಮಗ್ರ ಬೋಧನಾ ವಿಧಾನಗಳನ್ನು ಅಳವಡಿಸಲಾಗಿದೆ. ಮಕ್ಕಳ ಕೇಂದ್ರಿತವಾಗಿರುವ ಈ ನೂತನ ಪಠ್ಯಕ್ರಮವು ಹರ್ಷದಾಯಕ ಮತ್ತು ಒತ್ತಡ ರಹಿತವಾಗಿದ್ದು, ಮಕ್ಕಳಲ್ಲಿ ಆಸಕ್ತಿ, ಆತ್ಮವಿಶ್ವಾಸ ಮೂಡಿಸುವ ಮತ್ತು ಅವರನ್ನು ಮುಂದಿನ ಶಾಲಾ ಶಿಕ್ಷಣಕ್ಕೆ ಸಿದ್ಧಪಡಿಸುವುದಲ್ಲದೇ ಮುಂದಿನ ಜೀವನಕ್ಕೂ ಸಿದ್ಧಗೊಳಿಸುವ ಪ್ರೋತ್ಸಾಹ ದಾಯಕ ಅಂಶಗಳನ್ನು ಒಳಗೊಂಡಿದೆ.

ಜೀವನ ಕೌಶಲ್ಯಗಳು, ಜಾಗತಿಕ ಮೌಲ್ಯಗಳು ಮತ್ತು ಉತ್ತಮ ಹವ್ಯಾಸಗಳು ಹಾಗೂ ದೈನಂದಿನ ಅನುಭವಗಳನ್ನು ಯಾವುದೇ ಪ್ರಯಾಸವಿಲ್ಲದೇ ಕಲಿಸುವ ಬಹುಮುಖ ಬೋಧನಾ ವಿಧಾನವನ್ನು ಇದು ಒಳಗೊಂಡಿದೆ. ಪ್ರಸ್ತುತ ಪಠ್ಯಕ್ರಮವು ಬಾಲ್ಯದಿಂದಲೇ ಪ್ರಯೋಗಶೀಲತೆ, ಪ್ರಶ್ನಿಸುವುದು , ಸೃಜಿಸುವುದು, ಬೌದ್ಧಿಕ ಬೆಳವಣಿಗೆ, ಸಾಮಾಜಿಕ ಮತ್ತು ಭಾವನಾತ್ಮಕ ಮತ್ತು ನೈತಿಕ ಮೌಲ್ಯ ಗಳನ್ನು ಬಾಲ್ಯದಿಂದಲೇ ಬೆಳಸಲು ಪೂರಕವಾಗಿದೆ. ಈ ಪಠ್ಯಕ್ರಮದಲ್ಲಿ ವೈಯುಕ್ತಿಕ ಕಲಿಕೆಗನು ಗುಣವಾಗಿ BLOOM Edge ಸಲಕರಣೆಗಳ ಮೂಲಕ ಕಲಿಕೆಯ ಕೊರತೆಗಳನ್ನು ನೀಗಿಸುವ ಮತ್ತು ಪ್ರತೀ ಮಗುವಿನ ಅಗತ್ಯಕ್ಕನುಗುಣವಾಗಿ ಬೋಧನಾ ತಂತ್ರಗಳನ್ನು ಅಳವಡಿಸಲಾಗಿದೆ.

ಅಲ್ಲದೇ ಶಿಕ್ಷಕರಿಗೆ ಬೋಧನೆಗೆ ಸಕಾಲಿಕ ಮಾರ್ಗದರ್ಶನ ನೀಡಲು ಉನ್ನತೀಕರಿಸಿದ ಕಿರು ತಂತ್ರಾಂಶದ ಮೂಲಕ ಪಾಠಬೋಧನೆ, ಕಲಿಕಾ ಸಂಪನ್ಮೂಲಗಳು ಮತ್ತು ಬೋಧನಾ ವಿಧಾನದ ಹಿಮ್ಮಾಹಿತಿ ಸೌಲಭ್ಯದೊಂದಿಗೆ ಕಲಿಕೆಯಲ್ಲಿ ನಿರಂತರ ಗುಣಮಟ್ಟ ಮತ್ತು ತರಗತಿಗಳ ಅರ್ಥ ಪೂರ್ಣ ನಿರ್ವಹಣೆಗೂ ವ್ಯವಸ್ಥೆ ಮಾಡಲಾಗಿದೆ.

Little Millennium ತಂಡದವರು ತಿಳಿಸಿದಂತೆ, “BLOOM ಅನ್ನು ಸಾದರಪಡಿಸುವ ಮೂಲಕ ಭಾರತ ದಲ್ಲಿ ಶಾಲಾಪೂರ್ವ ಕಲಿಕೆಯ ಕ್ಷೇತ್ರವಷ್ಟೇ ಅಲ್ಲ ಶೈಶವಾವಸ್ಥೆಯ ಮಕ್ಕಳ ಕಲಿಕೆ ಮತ್ತು ಪೋಷಣೆ ಯಲ್ಲೂ ನೂತನ ಬದಲಾವಣೆ ಉಂಟುಮಾಡುತ್ತಿದ್ದೇವೆ.

ರಕ್ಷೆ, ಕ್ರಿಯಾಶೀಲತೆ ಮತ್ತು ಪ್ರಸ್ತುತತೆಯೊಂದಿಗೆ ಪ್ರತಿಯೊಂದು ಮಗುವಿನ ಸಾಮರ್ಥ್ಯ ವೃದ್ಧಿ ಯೊಂದಿಗೆ ಅದನ್ನು ಭವಿಷ್ಯದ ಜೀವನಕ್ಕೆ ಸಿದ್ಧಪಡಿಸಲಾಗುತ್ತದೆ.

ಭಾರತದ ಶಿಕ್ಷಣತಜ್ಞರೆನಿಸಿದ ಟ್ಯಾಗೋರ್ ಮತ್ತು ಗಾಂಧೀಜಿಯವರಲ್ಲದೇ ಪೈಗೆಟ್, ವೈಗಾಡ್ಸ್ಕಿ ಮತ್ತು ಗಾರ್ಡ್ನರ್ರಂತಹ ಶೈಕ್ಷಣಿಕ ಮನೋವಿಜ್ಞಾನಿಗಳ ಸಂಶೋಧನೆ ಮತ್ತು ನಿರಂತರ ಪ್ರಯೋಗ ಗಳ ಫಲವಾಗಿ BLOOM ಪಠ್ಯಕ್ರಮವನ್ನು ರೂಪಿಸಲಾಗಿದೆ.

ಸಮನ್ವಯ ಮತ್ತು ಭವಿತವ್ಯದೊಂದಿಗೆ ಮಕ್ಕಳು, ಕುಟುಂಬಗಳು ಮತ್ತು ಶಿಕ್ಷಕರಿಗೆ ನೂತನ ಕಲಿಕಾ ಅನುಭವ ನೀಡುವ ಗುರಿಯನ್ನು BLOOM ಒಳಗೊಂಡಿದೆ.