Bigg Boss Kannada 12: ಬಿಗ್ ಬಾಸ್‌ಗೆ ಸೆಲೆಕ್ಟ್ ಮಾಡದಿದ್ರೆ ಬಾಂಬ್ ಇಡುತ್ತೇನೆ: ಯುವಕನಿಂದ ಬೆದರಿಕೆ!
Bomb Threat: ಯುವಕ ಬೆದರಿಕೆ ಹಾಕಿರುವ ವಿಡಿಯೋ ಇನ್ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ. ಮಮ್ಮಿ ಅಶೋಕ್ ಎಂಬ ಹೆಸರಿನ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದು, ಬಿಗ್ ಬಾಸ್‌ಗೆ ನನ್ನನ್ನು ಕರೆದಿಲ್ಲ ಎಂದರೆ ನಾನು ಬಾಂಬ್ ಇಡುತ್ತೇನೆ ಎಂದು ಯುವಕ ಬೆದರಿಕೆ ಹಾಕಿದ್ದಾನೆ.

-

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಸೆಪ್ಟೆಂಬರ್ 28ರಿಂದ ಶುರುವಾಗಲಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಬಿಗ್ ಬಾಸ್ ಸ್ಪರ್ಧಿಗಳಾಗಿ ಯಾರು ಆಯ್ಕೆಯಾಗಲಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ಈ ನಡುವೆ ಯುವಕನೊಬ್ಬ, ಬಿಗ್ ಬಾಸ್‌ಗೆ ನನ್ನನ್ನು ಕರೆಯಲಿಲ್ಲ ಎಂದರೆ ಬಾಂಬ್ ಇಡುತ್ತೇನೆ ಎಂದು ಬೆದರಿಕೆ ಹಾಕಿರುವುದು ಕಂಡುಬಂದಿದ್ದು, ಈ ಸಂಬಂಧ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿದೆ.
ಯುವಕ ಬೆದರಿಕೆ ಹಾಕಿರುವ ವಿಡಿಯೋ ಇನ್ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ. ಮಮ್ಮಿ ಅಶೋಕ್ ಎಂಬ ಹೆಸರಿನ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದು, ಬಿಗ್ ಬಾಸ್‌ಗೆ ನನ್ನನ್ನು ಕರೆದಿಲ್ಲ ಎಂದರೆ ನಾನು ಬಾಂಬ್ ಇಡುತ್ತೇನೆ ಎಂದು ಯುವಕ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪೊಲೀಸರು ಸ್ವಯಂ ಪ್ರೇರಿತವಾಗಿ ಎನ್‌ಸಿಆರ್ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಅಶೋಕ್ ಎಂಬ ಯುವಕನನ್ನು ಕರೆದು ಪೊಲೀಸರು ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ. ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ಈ ರೀತಿ ಮಾಡಿರುವುದಾಗಿ ವಿಚಾರಣೆ ವೇಳೆ ಯುವಕ ಹೇಳಿದ್ದಾನೆ.
‘ಬಿಗ್ ಬಾಸ್ ಕನ್ನಡ-ಸೀಸನ್ 12’ ಸೆಪ್ಟೆಂಬರ್ 28ಕ್ಕೆ ಗ್ರ್ಯಾಂಡ್ ಓಪನಿಂಗ್!

ಬೆಂಗಳೂರು: ಕನ್ನಡಿಗರಿಗೆ ಮನರಂಜನೆಯನ್ನು ನೀಡುವಲ್ಲಿ ಸದಾ ಮುಂಚೂಣಿಯಲ್ಲಿರುವ ಕಲರ್ಸ್ ಕನ್ನಡ, ಇದೀಗ ‘ಬಿಗ್ ಬಾಸ್’ನ ಹನ್ನೆರಡನೇ ಸೀಸನ್ ಅನ್ನು ಹೊತ್ತು ತಂದಿದೆ. ಕಳೆದ ಹನ್ನೊಂದು ವರ್ಷಗಳಿಂದ ಕನ್ನಡಿಗರನ್ನು ಯಶಸ್ವಿಯಾಗಿ ರಂಜಿಸುತ್ತ ಬಂದಿರುವ ‘ಬಿಗ್‌ಬಾಸ್’ (Bigg Boss Kannada) ರಿಯಾಲಿಟಿ ಷೋ, ಈ ಬಾರಿ "ಎಕ್ಸ್ ಪೆಕ್ಟ್ ದ ಅನ್ ಎಕ್ಸ್ ಪೆಕ್ಟೆಟ್" ಎಂಬ ಥೀಮ್‌ನಲ್ಲಿ ಹಲವು ಅನಿರೀಕ್ಷಿತ ಗಳನ್ನು ಇಟ್ಟುಕೊಂಡು ಪ್ರೇಕ್ಷಕರ ಮನರಂಜನೆಯ ಹೊಸ ಭಾಷ್ಯವನ್ನು ಬರೆಯಲು ಸಜ್ಜಾಗಿದೆ.
ಸೆಪ್ಟೆಂಬರ್ 28ರಂದು ಭಾನುವಾರ ಸಂಜೆ 6 ಗಂಟೆಗೆ ಬಿಗ್‌ಬಾಸ್ ಸೀಸನ್ 12ರ ಗ್ರಾಂಡ್ ಓಪನಿಂಗ್ ಪ್ರಸಾರವಾಗಲಿದ್ದು, ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಕಲರ್ಸ್ ಕನ್ನಡ ಮತ್ತು ಜಿಯೋ ಹಾಟ್‌ಸ್ಟಾರ್‍ನಲ್ಲಿ ವೀಕ್ಷಿಸಬಹುದಾಗಿದೆ. ವಾರಾಂತ್ಯದಲ್ಲಿ (ಶನಿವಾರ ಮತ್ತು ಭಾನುವಾರ) ರಾತ್ರಿ 9 ಗಂಟೆಯಿಂದ ಪ್ರಸಾರವಾಗಲಿದೆ. ಈಗಾಗಲೇ ಬಿಗ್ ಬಾಸ್‌ನ 11 ಸೀಸನ್‌ಗಳನ್ನು ನೋಡಿ ಯಶಸ್ವಿಯಾಗಿಸಿರೋ ವೀಕ್ಷಕರ ಮನಸಲ್ಲಿ ಈ ಸೀಸನ್ ಹೇಗಿರಬಹುದು ಎನ್ನುವ ಕೂತೂಹಲ ಇದೆ. ಈ ಸೀಸನ್‌ನಲ್ಲಿ ವಿಭಿನ್ನ ವ್ಯಕ್ತಿತ್ವದ ಕಂಟೆಸ್ಟೆಂಟ್ಸ್, ಹಾಗೂ ಅನಿರೀಕ್ಷಿತ ಟಾಸ್ಕ್‌ಗಳನ್ನು ಹೊತ್ತು ನವರಾತ್ರಿ ಹಬ್ಬದ ಹೊಸ್ತಿಲಲ್ಲಿರೋ ಕರ್ನಾಟಕಕ್ಕೆ ನವ ಸಂಭ್ರಮ ತರಲಿದೆ.
ಈ ಸುದ್ದಿಯನ್ನೂ ಓದಿ |Bigg Boss Home: ಬಿಗ್ ಬಾಸ್ ಮನೆ ನಿರ್ಮಿಸಲು ಎಷ್ಟು ಕೋಟಿ ಖರ್ಚಾಗುತ್ತದೆ? ವೆಚ್ಚ ಕೇಳಿದರೆ ಶಾಕ್ ಆಗ್ತೀರಿ
‘ಬಿಗ್ ಬಾಸ್ ಬಗ್ಗೆ ನಮಗೆ ಎಲ್ಲಾ ಗೊತ್ತಿದೆ, ಅಲ್ಲಿ ಯಾವಾಗ ಏನ್ ಆಗುತ್ತೆ ಅನ್ನೋ ಅರಿವೂ ನಮಗೆ ಚೆನ್ನಾಗಿ ಇದೆ ಅಂತ ಹೇಳೊರಿಗೆ, ಪ್ರೋಮೊ ಮೂಲಕ "ಓಹ್.. ಭ್ರಮೆ!" ಅಂತ ಕಿಚ್ಚ ಸುದೀಪ್, ಸ್ವೀಟ್ ಆಗಿ ಉತ್ತರ ಕೊಟ್ಟಿದಾರೆ. ಈ ಸೀಸನ್‌ನ ಪ್ರೋಮೊಗಳು ಸುದ್ದಿ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ‘ಹತ್ತು ಮಿಲಿಯನ್’ಗೂ ಹೆಚ್ಚು ವ್ಯೂಸ್ ಮಾಡುವ ಮೂಲಕ ಸದ್ದು ಮಾಡಿವೆ. ಎಐ ತಂತ್ರಜ್ಞಾನವನ್ನು ಬಳಸಿ ಹೇಳಿರುವ ಕತೆ ಮತ್ತು ಸುದೀಪ್‌ರ ಹೊಸ ಲುಕ್ ಹಾಗೂ ಸ್ಟೈಲ್ ಎಲ್ಲೆಡೆ ಹೊಸ ಅಲೆಯನ್ನೇ ಎಬ್ಬಿಸಿದೆ.