ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮೂರ್ಛೆರೋಗ ಚಿಕಿತ್ಸೆಯಲ್ಲಿ ಮಹತ್ತರ ಆವಿಷ್ಕಾರಗಳು

ಭಾರತದಲ್ಲಿ ಅಂದಾಜು ಒಂದು ಕೋಟಿಗೂ ಹೆಚ್ಚು ಮೀರಿರುವ ಮೂರ್ಛೆ ರೋಗದ ಪ್ರಕರಣ ಗಳಿದ್ದು ಇವುಗಳು ಜಾಗತಿಕ ಶೇ.20ರಷ್ಟು ಪಾಲು ಹೊಂದಿರುವುದು ಬಹಳ ಆತಂಕಕಾರಿ. ಈ ಕಾರಣದಿಂದ ವರ್ಷ ಕಳೆದಂತೆ ಈ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ, ಆದರೆ ಮೂರ್ಛೆ ರೋಗದ ಕುರಿತಾದ ತಪ್ಪು ತಿಳವಳಿಕೆಗಳು ಇದರ ನಿರ್ವಹಣೆಗೆ ಇರುವ ಪ್ರಮುಖ ಅಡ್ಡಿಯಾಗಿವೆ.

ಡಾ.ಗೀತಾ ಎಸ್. ಥೆನ್ರಾಲ್, ಪ್ರಿನ್ಸಿಪಲ್ ಸೈಂಟಿಸ್ಟ್, ಮೆಡ್ ಜಿನೋಮ್

ಭಾರತದಲ್ಲಿ ಅಂದಾಜು ಒಂದು ಕೋಟಿಗೂ ಹೆಚ್ಚು ಮೀರಿರುವ ಮೂರ್ಛೆ ರೋಗದ ಪ್ರಕರಣ ಗಳಿದ್ದು ಇವುಗಳು ಜಾಗತಿಕ ಶೇ.20ರಷ್ಟು ಪಾಲು ಹೊಂದಿರುವುದು ಬಹಳ ಆತಂಕಕಾರಿ. ಈ ಕಾರಣದಿಂದ ವರ್ಷ ಕಳೆದಂತೆ ಈ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ, ಆದರೆ ಮೂರ್ಛೆ ರೋಗದ ಕುರಿತಾದ ತಪ್ಪು ತಿಳವಳಿಕೆಗಳು ಇದರ ನಿರ್ವಹಣೆಗೆ ಇರುವ ಪ್ರಮುಖ ಅಡ್ಡಿಯಾಗಿವೆ. ಮೂರ್ಛೆ ರೋಗ ಗುಣವಾಗದು, ಅದು ಯಾವುದೋ ಪಾಪ ಪುಣ್ಯಾದಿಗಳಿಂದ ಬರುತ್ತದೆ ಎಂಬ ಜನರ ಮೂಢನಂಬಿಕೆಗಳೇ ಇದರ ಚಿಕಿತ್ಸೆಗೆ ಅಡ್ಡಿಯಾಗಿದ್ದು ಮೂರ್ಛೆರೋಗ ಹೊಂದಿರು ವವರನ್ನು ನಿರ್ಲಕ್ಷಿಸುವಂತೆ ಮಾಡುತ್ತಿವೆ. ಮೂರ್ಛೆರೋಗದ ಕುರಿತು ಸರಿಯಾದ ತಿಳಿವಳಿಕೆ ಹೊಂದಿದ್ದರೆ ಅದನ್ನು ಪ್ರಾರಂಭದಲ್ಲೇ ಪತ್ತೆ ಮಾಡುವ ಮೂಲಕ ಈ ಸಮಸ್ಯೆಯನ್ನು ಉತ್ತಮ ವಾಗಿ ನಿರ್ವಹಿಸಬಹುದು.

ಮೂರ್ಛೆರೋಗಕ್ಕೆ ಚಿಕಿತ್ಸೆಯಲ್ಲಿ ಸುಧಾರಣೆ

ಮೂರ್ಛೆರೋಗದ ನಿರ್ವಹಣೆಯ ಪ್ರಮುಖ ಭಾಗ ಎಂದರೆ ಅನುವಂಶಿಕತೆಯ ಪರೀಕ್ಷೆ. ಮೂರ್ಛೆ ರೋಗವಿರುವ ಕುಟುಂಬದವರು ಪ್ರಾರಂಭದಲ್ಲಿಯೇ ಈ ಪರೀಕ್ಷೆ ಮಾಡಿಸಿದರೆ ಇದು ರೋಗದ ಅನುವಂಶಿಕತೆಯ ಸ್ವರೂಪದ ಬಗ್ಗೆ ಮಾಹಿತಿ ನೀಡುತ್ತದೆ ಮತ್ತು ಪ್ರಾರಂಭದಲ್ಲೇ ಪತ್ತೆ ಮಾಡಲು ಅವಕಾಶ ನೀಡುತ್ತದೆ. ವ್ಹೋಲ್ ಜಿನೋಮ್ ಸೀಕ್ವೆನ್ಸಿಂಗ್ (ಡಬ್ಲ್ಯೂ.ಜಿ.ಎಸ್.) ಮತ್ತು ಕ್ರೋಮೊ ಸೋಮ್ ಮೈಕ್ರೊಅರೇ ಅನಾಲಿಸಿಸ್ (ಸಿ.ಎಂ.ಎ) ಎಂಬ ಡಿ.ಎನ್.ಎ. ಪರೀಕ್ಷೆ ನಡೆಸಿ ರೋಗಿಯ ಪರಿಸ್ಥಿತಿ ಕಂಡುಕೊಳ್ಳಲಾಗುತ್ತದೆ. ಇದರಿಂದ ರೋಗಿಯ ಚಿಕಿತ್ಸೆ ಸುಲಭ ಮತ್ತು ಪರಿಣಾಮಕಾರಿ ಯಾಗುತ್ತದೆ. ಮೂರ್ಛೆರೋಗದಲ್ಲಿ ಈ ವಂಶವಾಹಿಗಳ ವ್ಯತ್ಯಾಸಗಳು ರೋಗಿಯ ಅಗತ್ಯಗಳನ್ನು ಆಧರಿಸಿ ವೈಯಕ್ತಿಕಗೊಳಿಸಿದ ಚಿಕಿತ್ಸೆ ನೀಡಲು ಅವಕಾಶ ಕಲ್ಪಿಸುತ್ತವೆ.

ಇದನ್ನೂ ಓದಿ:Bangalore News: ಜ.29ರಿಂದ ಫೆಬ್ರವರಿ 1ವರೆಗೆ ವೀರಶೈವ ಲಿಂಗಾಯಿತ ಗ್ಲೋಬಲ್ ಬಿಸಿನಸ್ ಬೃಹತ್ ಸಮಾವೇಶ

ಮೂರ್ಛೆರೋಗದ ಇತಿಹಾಸ ಹೊಂದಿರುವ ಕುಟುಂಬಗಳಿಗೆ ಪ್ರಸವಪೂರ್ವ ಅನುವಂಶಿಕ ಪರೀಕ್ಷೆ ಮತ್ತು ಕೌನ್ಸೆಲ್ಲಿಂಗ್ ಗಳು/ವೈದ್ಯಕೀಯ ವೃತ್ತಿಪರರೊಂದಿಗೆ ಸಮಾಲೋಚನೆ ನಡೆಸುವುದು ಅಗತ್ಯ. ಇದರಿಂದ ಮಗುವಿಗೆ ಅನುವಂಶಿಕವಾಗಿ ಮೂರ್ಛೆರೋಗ ಬರುವ ಸಾಧ್ಯತೆಯನ್ನು ಕಂಡುಕೊಳ್ಳಲು ಸಾಧ್ಯ.

ಇನ್ ವಿಟ್ರೊ ಫರ್ಟಿಲೈಸೇಷನ್(ಐವಿಎಫ್-ಪ್ರನಾಳ ಶಿಶು) ಚಿಕಿತ್ಸೆಗೆ ಒಳಪಡುತ್ತಿರುವ ದಂಪತಿಗಳಿಗೆ ಪ್ರಿಇಂಪ್ಲಾಂಟೇಷನ್ ಜೆನೆಟಿಕ್ ಡಯಾಗ್ನೊಸಿಸ್ (ಪಿಜಿಡಿ) ನಡೆಸಿದರೆ ಅದು ಮೂರ್ಛೆರೋಗದ ಲಕ್ಷಣಗಳನ್ನು ಭ್ರೂಣದ ಹಂತದಲ್ಲೇ ಪತ್ತೆ ಮಾಡುತ್ತದೆ. ಇದರಿಂದ ದಂಪತಿಗಳು ಮಗುವಿನ ಸುರಕ್ಷತೆ ಬಗ್ಗೆ ಕಾಳಜಿ ವಹಿಸಬಹುದು.

ಈ ಕ್ಷೇತ್ರದಲ್ಲಿ ಫಾರ್ಮಾಕೊಜೀನೋಮಿಕ್ಸ್ ಎಂಬ ಮತ್ತೊಂದು ವೈದ್ಯಕೀಯ ಬೆಳವಣಿಗೆ ನಾವು ಮೂರ್ಛೆರೋಗಕ್ಕೆ ಚಿಕಿತ್ಸೆ ಮಾಡುವ ವಿಧಾನವನ್ನೇ ಬದಲಾಯಿಸಿದೆ. ಇದು ಹೇಗೆ ನಮ್ಮ ವಂಶ ವಾಹಿಗಳು ಔಷಧಿಗಳಿಗೆ ಹೇಗೆ ಪ್ರತಿಕ್ರಿಯೆ ನೀಡಬಲ್ಲವು ಎನ್ನುವುದನ್ನು ಕಂಡುಕೊಳ್ಳಲು ನೆರವಾಗುತ್ತವೆ. ಇದು ಆರೋಗ್ಯಸೇವಾ ಪೂರೈಕೆದಾರರಿಗೆ ಅತ್ಯಂತ ಪರಿಣಾಮಕಾರಿ ಮೂರ್ಛೆರೋಗ ನಿರೋಧಕ ಔಷಧಗಳನ್ನು ನೀಡಲು ನೆರವಾಗುತ್ತದೆ ಅಲ್ಲದೆ ಅಡ್ಡ ಪರಿಣಾಮಗಳ ತೊಂದರೆ ಕಡಿಮೆ ಮಾಡುತ್ತದೆ. ವೈಯಕ್ತಿಕಗೊಳಿಸಿದ ಚಿಕಿತ್ಸೆಯು ರೋಗಿಗಳಲ್ಲಿ ಗುಣವಾಗುವ ಸಾಧ್ಯತೆ ಹೆಚ್ಚಿಸುತ್ತದೆ ಮತ್ತು ಒಟ್ಟಾರೆ ಜೀವನದ ಗುಣಮಟ್ಟ ಸುಧಾರಿಸುತ್ತದೆ.

Murche

ಸುಧಾರಿತ ಮೂರ್ಛೆರೋಗ ಪರೀಕ್ಷೆಯ ಸಾಧನಗಳು ನಿಖರ ಪರೀಕ್ಷೆ ಮತ್ತು ಊಹೆಗೆ ಕೃತಕ ಬುದ್ಧಿ ಮತ್ತೆ (ಎಐ) ಬಳಸುತ್ತಿದ್ದು ಅವುಗಳನ್ನು ಇತ್ತೀಚೆಗೆ ಲಭ್ಯವಾಗುವಂತೆ ಮಾಡಲಾಗಿದೆ. ಜಾಲತಾಣ ಗಳು ಮತ್ತು ಮೊಬೈಲ್ ಆಪ್ ಗಳು ರೋಗಿಗಳು ಮತ್ತು ಆರೋಗ್ಯಸೇವಾ ಪೂರೈಕೆದಾರರ ನಡುವೆ ಸುಲಭ ಸಂಪರ್ಕ ಕಲ್ಪಿಸಿದ್ದು ಆಸ್ಪತ್ರೆ ಭೇಟಿ ಕಡಿಮೆ ಮಾಡುತ್ತವೆ ಮತ್ತು ಚಿಕಿತ್ಸೆಯ ಯೋಜನೆಗೆ ಬದ್ಧವಾಗಿರುವಂತೆ ಮಾಡುತ್ತವೆ. ಅಂತಹ ಪರಿಹಾರಗಳನ್ನು ಅಳವಡಿಸಿಕೊಳ್ಳುವುದು ರೋಗಿಗಳಿಗೆ ಸುಲಭ ಅಲ್ಲದೆ ಆರೋಗ್ಯಸೇವಾ ಸಂಸ್ಥೆಗಳಿಗೆ ವೆಚ್ಚವನ್ನೂ ಉಳಿಸುತ್ತವೆ.

ಉತ್ತಮ ಆರೋಗ್ಯಸೇವೆಯ ಫಲಿತಾಂಶದ ದಾರಿಗಳು

ರೋಗ ನಿರ್ವಹಣೆಯಲ್ಲಿ ಸಾಕಷ್ಟು ವೈದ್ಯಕೀಯ ಮತ್ತು ತಾಂತ್ರಿಕ ಸುಧಾರಣೆಗಳು ಆಗಿದ್ದರೂ ಮೂರ್ಛೆರೋಗಕ್ಕೆ ಸೂಕ್ತ ಚಿಕಿತ್ಸೆ ದೊರೆಯುವುದು ಕಷ್ಟಕರವಾಗಿದೆ. ಆದಾಗ್ಯೂ, ಆರೋಗ್ಯಸೇವಾ ಮೂಲಸೌಕರ್ಯವು ಕ್ರಮೇಣ ಸುಧಾರಿಸುತ್ತಿದ್ದು ದೂರದ ಪ್ರದೇಶಗಳಿಗೂ ತಲುಪುವುದು ಮತ್ತು ರೋಗಿ-ಕೇಂದ್ರಿತ ಸೇವೆಗಳನ್ನು ನೀಡುವುದು ಸಾಧ್ಯವಾಗಿದೆ. ಚಿಕಿತ್ಸೆಗೆ ಟೆಲಿಮೆಡಿಸಿನ್ ಅನ್ನು ಹೆಚ್ಚಾಗಿ ಅಳವಡಿಸಿಕೊಳ್ಳಲಾಗುತ್ತಿದ್ದು ಇದರಿಂದ ಕುಗ್ರಾಮಗಳ ಸಮುದಾಯಗಳು ಕೂಡಾ ಭೌಗೋಳಿಕ ಅಡೆತಡೆಯಿಲ್ಲದೆ ಪರಿಣಿತರ ಸಲಹೆಗಳನ್ನು ಪಡೆಯಲು ಸಾಧ್ಯವಾಗಿದೆ.

ವೈದ್ಯಕೀಯ ಸುಧಾರಣೆಗಳು ಮತ್ತು ಮೂಲಸೌಕರ್ಯದೊಂದಿಗೆ ಘನತೆಯ ಆರೋಗ್ಯಸೇವೆಯ ಲಭ್ಯತೆ ಬಹಳ ಮುಖ್ಯವಾಗಿದೆ. ಭಾರತದಲ್ಲಿ ಮೂರ್ಛೆರೋಗದ ಚಿಕಿತ್ಸೆಯ ನಿಯಂತ್ರಣದ ಚೌಕಟ್ಟು ಹೆಚ್ಚು ನೈತಿಕವಾಗುವ ಹಾದಿಯಲ್ಲಿದೆ. ಇದು ರೋಗಿಗಳ ಗೌಪ್ಯತೆಯ ಹಕ್ಕನ್ನು ಎತ್ತಿ ಹಿಡಿಯುತ್ತದೆ ಮತ್ತು ಗುಣಮಟ್ಟದ ನಿಯಂತ್ರಣವನ್ನು ಖಚಿತಪಡಿಸುತ್ತದೆ ಹಾಗೂ ಅದೇ ಸಮಯದಲ್ಲಿ ಶಿಕ್ಷಣ, ಉದ್ಯೋಗ ಮತ್ತು ಸಾಮಾಜಿಕ ಸ್ಥಳಗಳಲ್ಲಿ ರೋಗಿಗಳಿಗೆ ತಾರತಮ್ಯ ಮಾಡ ದಂತೆ ಖಾತರಿಪಡಿಸಿಕೊಳ್ಳಲು ಬಲವಾದ ನೀತಿಗಳು ಕೂಡಾ ಅಗತ್ಯವಿದೆ. ಮುಖ್ಯವಾಗಿ ಜೆನೆಟಿಕ್ ಕೌನ್ಸೆಲ್ಲಿಂಗ್/ಅನುವಂಶಿಕ ಸಮಾಲೋಚನೆ ಮೂರ್ಛೆರೋಗದ ರೋಗಿಗಳು ಮತ್ತು ಅವರ ಕುಟುಂಬಗಳಿಗೆ ಪ್ರಮುಖ ಬೆಂಬಲವಾಗಿ ರೂಪುಗೊಂಡಿದೆ. ಇದು ಜೆನೆಟಿಕ್ ಪರೀಕ್ಷೆಯ ವರದಿಗಳ ಕುರಿತು ಒಳನೋಟಗಳನ್ನು ನೀಡುತ್ತದೆ ಮತ್ತು ರೋಗಪರೀಕ್ಷೆಯ ನಂತರದ ಆತಂಕವನ್ನು ನಿರ್ವಹಿಸಲು ನೆರವಾಗುತ್ತದೆ.

ದೃಢವಾದ ಅಡಿಪಾಯವನ್ನು ನಿರ್ಮಿಸುವುದು

ಮೂರ್ಛೆರೋಗದ ಆರೈಕೆಯಲ್ಲಿ ಜಾಗೃತಿ ಕೊರತೆ, ಸಾಮಾಜಿಕ ಕಳಂಕ, ಆರಂಭಿಕ ರೋಗ ನಿರ್ಣಯ, ಸಮಯೋಚಿತ ಚಿಕಿತ್ಸೆ ಮತ್ತು ರೋಗಿಗಳಿಗೆ ಹಕ್ಕುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ತಂತ್ರಾತ್ಮಕ ಪಾಲುದಾರಿಕೆ, ಆರೋಗ್ಯ ಮೂಲಸೌಕರ್ಯ ಮತ್ತು ತಂತ್ರಜ್ಞಾನದಲ್ಲಿ ಹೂಡಿಕೆಗಳು ಮತ್ತು ಮಾನದಂಡಿತ ನಿಯಮಾವಳಿಗಳು ಅಗತ್ಯವಿವೆ. ಈ ಕ್ರಮಗಳು ಪಾಲುದಾರರಿಗೆ ಬಲಿಷ್ಠ ವ್ಯವಸ್ಥೆಯನ್ನು ನಿರ್ಮಿಸಲು ಸಹಾಯ ಮಾಡುತ್ತವೆ ಮತ್ತು ಎಪಿಲೆಪ್ಸಿ ಹೊಂದಿರುವ ವ್ಯಕ್ತಿಗಳು ಹೆಚ್ಚು ಆರೋಗ್ಯಕರ ಜೀವನವನ್ನು ನಡೆಸಲು ಸಶಕ್ತರಾಗುವಂತೆ ಮಾಡುತ್ತವೆ. ಇದು ಪ್ರತಿಯೊಬ್ಬರೂ ಘನತೆ, ವಿಶ್ವಾಸ ಮತ್ತು ಅವಕಾಶದೊಂದಿಗೆ ಜೀವಿಸುವ ಭವಿಷ್ಯದತ್ತ ಕೊಂಡೊಯ್ಯುತ್ತದೆ.