ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಾಸ್ಟರ್ಸ್ ಯೂನಿಯನ್ ಯೂನಿವರ್ಸಿಟಿಯ ವಾರ್ಷಿಕ ಉತ್ಸವ ‘ರೋಡ್ ಟು ಮಿಲ್ಕಿ ವೇ’ ಬೆಂಗಳೂರಿನಲ್ಲಿ: ತಂತ್ರಜ್ಞಾನ, ವ್ಯವಹಾರ ಮತ್ತು ಸಂಗೀತದ ಸಂಗಮ

‘ರೋಡ್ ಟು ಮಿಲ್ಕಿ ವೇ’ ಎಂಬುದು ವಿಶ್ವವಿದ್ಯಾಲಯದ ವಾರ್ಷಿಕ ಸಾಂಸ್ಕೃತಿಕ ಉತ್ಸವ ‘ಮಿಲ್ಕಿ ವೇ 2027’ಕ್ಕೆ ಮುನ್ನುಡಿಯಾಗಿ ನಡೆಯುವ ರೋಡ್‌ಶೋ ಆಗಿದೆ. ವಿವಿಧ ಕಾಲೇಜುಗಳು, ನಗರಗಳು ಮತ್ತು ಕ್ಷೇತ್ರಗಳ ವಿದ್ಯಾರ್ಥಿಗಳನ್ನು ತಂತ್ರಜ್ಞಾನ, ಉದ್ಯಮಶೀಲತೆ, ಸೃಜನಶೀಲತೆ, ಸಂಗೀತ ಮತ್ತು ಸಂಸ್ಕೃತಿ ಯನ್ನು ಒಳಗೊಂಡ ಹಂಚಿಕೆಯ ಅನುಭವಗಳ ಮೂಲಕ ಒಟ್ಟುಗೂಡಿಸುವುದು ಈ ಉಪಕ್ರಮದ ಉದ್ದೇಶ.

ಬೆಂಗಳೂರು: ಮಾಸ್ಟರ್ಸ್ ಯೂನಿಯನ್ ಯೂನಿವರ್ಸಿಟಿಯು ತನ್ನ ಪ್ರಮುಖ ಸಾಂಸ್ಕೃತಿಕ ಉತ್ಸವ ‘ಮಿಲ್ಕಿ ವೇ’ಯ ಬೆಂಗಳೂರು ಅಧ್ಯಾಯವನ್ನು ಬೇಗೂರಿನ ಧಾರೆ (DHARE) ಯಲ್ಲಿ ಆಯೋಜಿಸಿತ್ತು. ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಒಂದು ದಿನದ ಸ್ಪರ್ಧೆಗಳು ಮತ್ತು ಸಾಂಸ್ಕೃತಿಕ ಅನುಭವಗಳಿಗಾಗಿ ಒಂದೆಡೆ ಸೇರಿದರು.

‘ಮಿಲ್ಕಿ ವೇ 2027’ಕ್ಕೆ ಪೂರ್ವಭಾವಿಯಾಗಿ ನಡೆಯುತ್ತಿರುವ ಆರು ನಗರಗಳ ಸರಣಿಯ ಭಾಗವಾದ ಬೆಂಗಳೂರು ಆವೃತ್ತಿಯಲ್ಲಿ ತಂತ್ರಜ್ಞಾನ, ವ್ಯವಹಾರ, ವಿನ್ಯಾಸ, ಚಲನಚಿತ್ರ, ಫ್ಯಾಷನ್ ಮತ್ತು ಸ್ಟ್ರೀಟ್ ಡ್ಯಾನ್ಸ್ ವಿಭಾಗಗಳಲ್ಲಿ ಎಂಟು ಸ್ಪರ್ಧೆಗಳು ನಡೆದವು. ಜೊತೆಗೆ ಎಲೆಕ್ಟ್ರಾನಿಕ್ ಕಲಾವಿದ ದರ್ಜಿ ಅವರ ನೇತೃತ್ವದಲ್ಲಿ ಟೆಕ್ನೋ ವೇರ್‌ಹೌಸ್ ಅನುಭವವೂ ಇತ್ತು. ಬೆಂಗಳೂರಿನ ವಿವಿಧ ಕಾಲೇಜುಗಳನ್ನು ಪ್ರತಿನಿಧಿಸುವ 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: snake entered Janaushadhi Center: ಜನೌಷಧಿ ಕೇಂದ್ರಕ್ಕೆ ನುಗ್ಗಿದ ಕಾಳಿಂಗಸರ್ಪ: ಹಾವು ನೋಡಲು ಜನವೋಜನ

‘ರೋಡ್ ಟು ಮಿಲ್ಕಿ ವೇ’ ಎಂಬುದು ವಿಶ್ವವಿದ್ಯಾಲಯದ ವಾರ್ಷಿಕ ಸಾಂಸ್ಕೃತಿಕ ಉತ್ಸವ ‘ಮಿಲ್ಕಿ ವೇ 2027’ಕ್ಕೆ ಮುನ್ನುಡಿಯಾಗಿ ನಡೆಯುವ ರೋಡ್‌ಶೋ ಆಗಿದೆ. ವಿವಿಧ ಕಾಲೇಜುಗಳು, ನಗರಗಳು ಮತ್ತು ಕ್ಷೇತ್ರಗಳ ವಿದ್ಯಾರ್ಥಿಗಳನ್ನು ತಂತ್ರಜ್ಞಾನ, ಉದ್ಯಮಶೀಲತೆ, ಸೃಜನಶೀಲತೆ, ಸಂಗೀತ ಮತ್ತು ಸಂಸ್ಕೃತಿಯನ್ನು ಒಳಗೊಂಡ ಹಂಚಿಕೆಯ ಅನುಭವಗಳ ಮೂಲಕ ಒಟ್ಟುಗೂಡಿಸುವುದು ಈ ಉಪಕ್ರಮದ ಉದ್ದೇಶ. ಬೆಂಗಳೂರಿನ ಬಳಿಕ ಉತ್ಸವವು ದೆಹಲಿ, ಜೈಪುರ, ಮುಂಬೈ, ವಾರಾಣಸಿ ಮತ್ತು ಚಂಡೀಗಢಕ್ಕೆ ತೆರಳಲಿದ್ದು, ಪ್ರತಿ ಆವೃತ್ತಿಯೂ ಆಯಾ ಆತಿಥೇಯ ನಗರದ ಸ್ಥಳೀಯ ಸಂಸ್ಕೃತಿ ಮತ್ತು ಸೃಜನಶೀಲ ಚೈತನ್ಯವನ್ನು ಆಧರಿಸಿರುತ್ತದೆ.

‘ಕಾಸ್ಮಿಕ್ ಲೂಪ್ಸ್’ ಎಂಬ ಥೀಮ್‌ನಲ್ಲಿ ನಡೆದ ಬೆಂಗಳೂರು ಆವೃತ್ತಿಯು ನಗರದ ತಂತ್ರಜ್ಞಾನ ಮತ್ತು ಸ್ಟಾರ್ಟ್‌ಅಪ್ ಸಮುದಾಯಗಳನ್ನು ಸ್ವತಂತ್ರ ಸಂಗೀತ ಹಾಗೂ ಸೃಜನಶೀಲ ವಲಯ ದೊಂದಿಗೆ ಬೆಸೆಯಿತು. ಎಂಟು ಸ್ಪರ್ಧೆಗಳ ಮೂಲಕ ವಿದ್ಯಾರ್ಥಿಗಳು ತಮ್ಮ ಆಲೋಚನೆಗಳನ್ನು ಪರೀಕ್ಷೆಗೆ ಒಡ್ಡಲು, ಸಹಪಾಠಿಗಳೊಂದಿಗೆ ಸಹಯೋಗ ನಡೆಸಲು ಹಾಗೂ ತರಗತಿಯ ಹೊರಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಅವಕಾಶ ಪಡೆದರು.

ಪ್ರಮುಖ ಸ್ಪರ್ಧೆಗಳಲ್ಲಿ ‘ರಿವೈರ್ಡ್’ ಎಂಬ ಟೆಕ್ ಹ್ಯಾಕಥಾನ್ ಒಂದು. ಇದರಲ್ಲಿ ವಿದ್ಯಾರ್ಥಿ ಡೆವಲಪರ್‌ಗಳು, ವಿನ್ಯಾಸಕರು ಮತ್ತು ನಿರ್ಮಾತೃಗಳ ತಂಡಗಳು ಕೃತಕ ಬುದ್ಧಿಮತ್ತೆ (AI) ಸಾಧನಗಳ ಬಳಕೆಯಿಲ್ಲದೆ ಮುಕ್ತ ಸವಾಲುಗಳನ್ನು ಎದುರಿಸಿದವು. ವ್ಯವಹಾರ ವಿಭಾಗದಲ್ಲಿ ‘ಬೋರ್ಡ್‌ರೂಮ್ ಬ್ಲಿಟ್ಜ್’ ಎಂಬ 24 ಗಂಟೆಗಳ ಸಿಮ್ಯುಲೇಶನ್ ಇತ್ತು; ಇದರಲ್ಲಿ ಭಾಗವಹಿಸಿ ದವರಿಗೆ ಅಸ್ತಿತ್ವದಲ್ಲಿರುವ ಕಂಪನಿಯ ಹೊಣೆ ವಹಿಸಿ, ನೈಜ ಸಮಯದ ಸರಣಿ ವ್ಯವಹಾರ ಸನ್ನಿವೇಶಗಳನ್ನು ನಿಭಾಯಿಸುವ ಸವಾಲು ನೀಡಲಾಯಿತು. ‘ಸೆಲ್ ದ ಅನ್‌ಸೆಲ್ಲಬಲ್’ ಎಂಬ ಇನ್ನೊಂದು ಸ್ಪರ್ಧೆಯಲ್ಲಿ, ಸಾಮಾನ್ಯ ಅಥವಾ ಅಸಾಂಪ್ರದಾಯಿಕ ವಸ್ತುಗಳನ್ನು ಕೊಂಡು ಕೊಳ್ಳಲು ಯೋಗ್ಯ ಉತ್ಪನ್ನಗಳೆಂದು ಪ್ರಸ್ತುತಪಡಿಸುವ ಮೂಲಕ ಸ್ಪರ್ಧಿಗಳ ಮಾರಾಟ ಮತ್ತು ಮನವೊಲಿಕೆ ಕೌಶಲವನ್ನು ಪರೀಕ್ಷಿಸಲಾಯಿತು.

ಸೃಜನಾತ್ಮಕ ಸ್ಪರ್ಧೆಗಳಲ್ಲಿ ಬ್ರ್ಯಾಂಡ್ ಐಡೆಂಟಿಟಿ ಸವಾಲಾದ ‘ರಿಫ್ರೇಮ್’, ಕಿರು ರೀಲ್ಸ್ ತಯಾರಿಕೆ ಸ್ಪರ್ಧೆ ‘ಬಿಯಾಂಡ್ ಫ್ರೇಮ್ಸ್’ ಹಾಗೂ ಆಫ್ಟರ್-ಫಿಲ್ಮ್ ಎಡಿಟಿಂಗ್ ಸವಾಲು ‘ಡೇಜಾ ವು’ ಸೇರಿದ್ದವು. ಸ್ಟ್ರೀಟ್ ಡ್ಯಾನ್ಸ್ ಮತ್ತು ಯುವ ಸಂಸ್ಕೃತಿಯನ್ನು ಉತ್ಸವದ ಅನುಭವಕ್ಕೆ ತಂದ ಫ್ರೀಸ್ಟೈಲ್ ಸ್ಟ್ರೀಟ್ ಡ್ಯಾನ್ಸ್ ಸ್ಪರ್ಧೆ ‘ಆಫ್‌ಬೀಟ್’ ಕೂಡ ಕಾರ್ಯಕ್ರಮದ ಭಾಗವಾಗಿತ್ತು.

ಸಾರ್ವಂ ಎಐ (Sarvam AI) ಸಹಭಾಗಿತ್ವದಲ್ಲಿ ಆಯೋಜಿಸಿದ ಎಐ ಹ್ಯಾಕಥಾನ್ ಮೂಲಕ ತಂತ್ರಜ್ಞಾನಕ್ಕೆ ಈ ಬಾರಿಯೂ ಪ್ರಮುಖ ಒತ್ತು ನೀಡಲಾಯಿತು. ಭಾಗವಹಿಸಿದವರು ಎಐ ಆಧಾರಿತ ಆಲೋಚನೆಗಳ ಮೇಲೆ ಕೆಲಸ ಮಾಡಿ, ಮಾದರಿಗಳನ್ನು (ಪ್ರೋಟೋಟೈಪ್) ಅಭಿವೃದ್ಧಿಪಡಿಸಿ, ನಿರ್ದಿಷ್ಟ ಸಮಸ್ಯೆ ಹೇಳಿಕೆಗಳಿಗೆ ಪರಿಹಾರಗಳನ್ನು ಹುಡುಕಿದರು. ಬೆಂಗಳೂರು ಸುತ್ತು ಪ್ರಾಥಮಿಕ ಹಂತವಾಗಿದ್ದು, ಆಯ್ದ ತಂಡಗಳು 2027ರ ಫೆಬ್ರವರಿಯಲ್ಲಿ ನಡೆಯಲಿರುವ ಮುಖ್ಯ ಮಿಲ್ಕಿ ವೇ ಉತ್ಸವದಲ್ಲಿ ಫೈನಲ್‌ಗೆ ಮುನ್ನಡೆಯಲಿವೆ.

ವಿಜೇತ ಎರಡು ಯೋಜನೆಗಳಲ್ಲಿ ‘ನಬ್ಜ್’ (Nabz) ಒಂದು. ಇದು ವೈದ್ಯಕೀಯ ಪ್ರಯೋಗಾಲಯ ವರದಿಗಳ ಸ್ಕ್ರೀನ್‌ಶಾಟ್‌ಗಳನ್ನು ರಚನಾತ್ಮಕ ರೋಗಿ ಮಾಹಿತಿಯಾಗಿ ಪರಿವರ್ತಿಸುವ, ಗಂಭೀರ ಪರೀಕ್ಷಾ ಫಲಿತಾಂಶಗಳನ್ನು ಗುರುತಿಸುವ ಹಾಗೂ ಕಾಲಕ್ರಮೇಣ ಆರೋಗ್ಯ ಸೂಚಕಗಳನ್ನು ಟ್ರ್ಯಾಕ್ ಮಾಡುವ ಎಐ ಆಧಾರಿತ ಪರಿಹಾರ. ಇನ್ನೊಂದು ‘ರಕ್ತಸೇತು’ (Raktsetu); ಇದು ಅಪ್‌ಲೋಡ್ ಮಾಡಿದ ಸ್ಕ್ರೀನ್‌ಶಾಟ್‌ಗಳಿಂದ ರೋಗಿಯ ವಿವರಗಳನ್ನು ಹೊರತೆಗೆದು, ರಕ್ತದಾನ ಕೋರಿಕೆಗಳನ್ನು ರಚಿಸಿ, ಆಸ್ಪತ್ರೆಯ ಸಮೀಪದಲ್ಲಿರುವ ಅರ್ಹ ದಾನಿಗಳಿಗೆ ಎಚ್ಚರಿಕೆ ಕಳುಹಿಸುವ ಎಐ ಆಧಾರಿತ ರಕ್ತದಾನಿ ಹೊಂದಾಣಿಕೆ ವೇದಿಕೆ. ನೈಜ ಜಗತ್ತಿನ ಆರೋಗ್ಯ ಸವಾಲುಗಳನ್ನು ಪರಿಹರಿಸಲು ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನಗಳನ್ನು ಹೇಗೆ ಬಳಸುತ್ತಿದ್ದಾರೆ ಎಂಬುದನ್ನು ಈ ಎರಡೂ ಯೋಜನೆಗಳು ತೋರಿಸುತ್ತವೆ. ಬೆಂಗಳೂರು ಸುತ್ತಿನ ಆಯ್ದ ತಂಡಗಳು 2027ರ ಫೆಬ್ರವರಿಯಲ್ಲಿ ನಡೆಯಲಿರುವ ಮುಖ್ಯ ಮಿಲ್ಕಿ ವೇ ಉತ್ಸವದ ಫೈನಲ್‌ಗೆ ಮುನ್ನಡೆಯಲಿವೆ.

ಸ್ಪರ್ಧೆಗಳಿಂದ ಸಂಗೀತದತ್ತ ಸಾಗಿದ ಕಾರ್ಯಕ್ರಮವು, ಬೆಂಗಳೂರಿನ ಎಲೆಕ್ಟ್ರಾನಿಕ್ ಸಂಗೀತ ಲೋಕದಿಂದ ಸ್ಫೂರ್ತಿ ಪಡೆದ ಟೆಕ್ನೋ ವೇರ್‌ಹೌಸ್ ಅನುಭವದೊಂದಿಗೆ ಸಮಾಪನಗೊಂಡಿತು. ದೆಹಲಿ ಮೂಲದ ಕಲಾವಿದ ಯಶ್ ಸಕ್ಸೇನಾ ಅವರ ಎಲೆಕ್ಟ್ರಾನಿಕ್ ಸಂಗೀತ ಯೋಜನೆಯಾದ ‘ದರ್ಜಿ’ ಆ ರಾತ್ರಿಯ ಪ್ರಮುಖ ಆಕರ್ಷಣೆಯಾಗಿತ್ತು. ಹಿಂದಿ ಸಾಹಿತ್ಯ ಮತ್ತು ಕಥನವನ್ನು ಎಲೆಕ್ಟ್ರಾನಿಕ್ ಹಾಗೂ ಡ್ಯಾನ್ಸ್ ನಿರ್ಮಾಣದೊಂದಿಗೆ ಬೆರೆಸುವುದರಲ್ಲಿ ಅವರು ಹೆಸರುವಾಸಿ.

ಉತ್ಸವದ ಕುರಿತು ಮಾತನಾಡಿದ ಉತ್ಸವ ಅಧ್ಯಕ್ಷ ಸಂಕಲ್ಪ್ ಭರಾಣಿ, “ಇಂದಿನ ವಿದ್ಯಾರ್ಥಿ ಸಂಸ್ಕೃತಿ ಯನ್ನು ರೂಪಿಸುತ್ತಿರುವ ತಂತ್ರಜ್ಞಾನ, ಉದ್ಯಮಶೀಲತೆ, ವಿನ್ಯಾಸ, ಫ್ಯಾಷನ್ ಮತ್ತು ಎಲೆಕ್ಟ್ರಾನಿಕ್ ಸಂಗೀತದಂತಹ ವೈವಿಧ್ಯಮಯ ಆಸಕ್ತಿಗಳು ಹಾಗೂ ಸಮುದಾಯಗಳನ್ನು ಬೆಂಗಳೂರು ಅಧ್ಯಾಯವು ಒಂದುಗೂಡಿಸಿತು.

ಈ ಎಲ್ಲಾ ಕ್ಷೇತ್ರಗಳು ಒಂದೇ ಉತ್ಸವದಲ್ಲಿ ಸಂಗಮಿಸಿದ್ದು, ವ್ಯವಹಾರ ಸಿಮ್ಯುಲೇಶನ್‌ಗಳು ಮತ್ತು ತಂತ್ರಜ್ಞಾನ ಸವಾಲುಗಳಿಂದ ಹಿಡಿದು ಸೃಜನಾತ್ಮಕ ಸ್ಪರ್ಧೆಗಳು ಮತ್ತು ಸಂಗೀತ ಅನುಭವಗಳ ವರೆಗೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು ವಿಶೇಷವಾಗಿ ಎದ್ದುಕಂಡಿತು. ಉತ್ಸವವನ್ನು ಒಂದೇ ಕ್ಯಾಂಪಸ್‌ನ ಆಚೆಗೆ ಕೊಂಡೊಯ್ದು, ವಿವಿಧ ವಿದ್ಯಾರ್ಥಿ ಸಮುದಾಯಗಳನ್ನು ಹಂಚಿಕೆಯ ಸಾಂಸ್ಕೃತಿಕ ಅನುಭವಕ್ಕೆ ತರುವುದೇ ‘ರೋಡ್ ಟು ಮಿಲ್ಕಿ ವೇ’ಯ ಪರಿಕಲ್ಪನೆ. ‘ಮಿಲ್ಕಿ ವೇ 2027’ರತ್ತ ಸಾಗುವ ಈ ಪಯಣದಲ್ಲಿ ಬೆಂಗಳೂರು ಒಂದು ಮಹತ್ವದ ಅಧ್ಯಾಯ,” ಎಂದರು.

‘ರೋಡ್ ಟು ಮಿಲ್ಕಿ ವೇ’ಯ ವಿದ್ಯಾರ್ಥಿ ಸಂಘಟಕಿ ಕೀರ್ತನಾ ಭೂಪತಿರಾಜು ಮಾತನಾಡಿ, “ವಿದ್ಯಾರ್ಥಿಗಳಾಗಿ ನಾವು ಸಾಮಾನ್ಯವಾಗಿ ಕಾಲೇಜು ಉತ್ಸವಗಳನ್ನು ಅದನ್ನು ಆಯೋಜಿಸುವ ಕ್ಯಾಂಪಸ್‌ನ ದೃಷ್ಟಿಕೋನದಿಂದ ಅನುಭವಿಸುತ್ತೇವೆ. ‘ರೋಡ್ ಟು ಮಿಲ್ಕಿ ವೇ’ ಮೂಲಕ, ಹಲವು ಕಾಲೇಜುಗಳ ವಿದ್ಯಾರ್ಥಿಗಳನ್ನು ಒಂದುಗೂಡಿಸುವ ಅನುಭವವನ್ನು ರೂಪಿಸುವಲ್ಲಿ ನಾವು ಭಾಗಿಯಾಗುವ ಅವಕಾಶ ಸಿಕ್ಕಿತು. ಬೆಂಗಳೂರು ಅಧ್ಯಾಯ ರೂಪುಗೊಂಡಿದ್ದನ್ನು ಮತ್ತು ವಿದ್ಯಾರ್ಥಿಗಳು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದನ್ನು ನೋಡಿದ್ದು ನಮ್ಮ ಪ್ರಯತ್ನ ವನ್ನು ಇನ್ನಷ್ಟು ಅರ್ಥಪೂರ್ಣವಾಗಿಸಿತು. ವಿವಿಧ ನಗರಗಳ ವಿದ್ಯಾರ್ಥಿ ಸಮುದಾಯಗಳನ್ನು ಈ ಉತ್ಸವ ಹೇಗೆ ಸಂಪರ್ಕಿಸಬಲ್ಲದು ಎಂಬುದರ ಒಂದು ಝಲಕ್ ಕೂಡ ನಮಗೆ ಸಿಕ್ಕಿತು,” ಎಂದರು.

ಮಿಲ್ಕಿ ವೇ ಉತ್ಸವವನ್ನು ಮಾಸ್ಟರ್ಸ್ ಯೂನಿಯನ್ ಯೂನಿವರ್ಸಿಟಿಯ ವಿದ್ಯಾರ್ಥಿ ನೇತೃತ್ವದ ತಂಡವು ಆಯೋಜಿಸುತ್ತದೆ. ಪ್ರೋಗ್ರಾಮಿಂಗ್ ಮತ್ತು ಪಾಲುದಾರಿಕೆಗಳಿಂದ ಹಿಡಿದು ಮಾರ್ಕೆಟಿಂಗ್, ಕಾರ್ಯಾಚರಣೆ ಮತ್ತು ಸೃಜನಾತ್ಮಕ ನಿರ್ಮಾಣದವರೆಗೆ ಎಲ್ಲದರಲ್ಲೂ ವಿದ್ಯಾರ್ಥಿಗಳು ತೊಡಗಿಸಿ ಕೊಂಡಿದ್ದಾರೆ. ವಿವಿಧ ಹಿನ್ನೆಲೆಯ ವಿದ್ಯಾರ್ಥಿಗಳು ಮತ್ತು ಸಮುದಾಯಗಳನ್ನು ಒಂದುಗೂಡಿಸುವ ದೊಡ್ಡ ಪ್ರಮಾಣದ ಕಾರ್ಯಕ್ರಮದ ಜವಾಬ್ದಾರಿ ವಹಿಸಿಕೊಳ್ಳಲು, ಹಲವು ವಿಭಾಗಗಳಲ್ಲಿ ಕೆಲಸ ಮಾಡಲು ಹಾಗೂ ಅದರ ಅನುಷ್ಠಾನವನ್ನು ನಿರ್ವಹಿಸಲು ಈ ಉತ್ಸವ ಅವರಿಗೆ ಅವಕಾಶ ನೀಡುತ್ತದೆ.

‘ಮಿಲ್ಕಿ ವೇ 2027’ಕ್ಕೆ ಪೂರ್ವಭಾವಿಯಾದ ಆರು ನಗರ ನಿಲ್ದಾಣಗಳಲ್ಲಿ ಬೆಂಗಳೂರು ಅಧ್ಯಾಯವೂ ಒಂದು. ಈ ಉತ್ಸವವು 2027ರ ಫೆಬ್ರವರಿ 18ರಿಂದ 21ರವರೆಗೆ ದೆಹಲಿ ಎನ್‌ಸಿಆರ್‌ನಲ್ಲಿರುವ ಮಾಸ್ಟರ್ಸ್ ಯೂನಿಯನ್ ಕ್ಯಾಂಪಸ್ ಮತ್ತು ಯಶೋಭೂಮಿಯಲ್ಲಿ ನಡೆಯಲಿದೆ. ನಾಲ್ಕು ದಿನಗಳ ಈ ಉತ್ಸವದಲ್ಲಿ ವ್ಯವಹಾರ, ಪ್ರದರ್ಶನ ಕಲೆ, ತಂತ್ರಜ್ಞಾನ ಮತ್ತು ಸಾಂಸ್ಕೃತಿಕ ಅನುಭವ ಗಳನ್ನು ಒಳಗೊಂಡ 70ಕ್ಕೂ ಹೆಚ್ಚು ಕಾರ್ಯಕ್ರಮಗಳಿರಲಿದ್ದು, ಯಶೋಭೂಮಿಯಲ್ಲಿ ನಡೆಯುವ ಎರಡು ಪ್ರಮುಖ ದಿನಗಳಲ್ಲಿ 45,000ಕ್ಕೂ ಹೆಚ್ಚು ಪ್ರೇಕ್ಷಕರ ನಿರೀಕ್ಷೆಯಿದೆ.

ಮಾಸ್ಟರ್ಸ್ ಯೂನಿಯನ್ ಯೂನಿವರ್ಸಿಟಿ ಕುರಿತು

ಮಾಸ್ಟರ್ಸ್ ಯೂನಿಯನ್ ಗುರುಗ್ರಾಮದಲ್ಲಿರುವ, ಅನುಭವಾಧಾರಿತ ಕಲಿಕೆಗೆ ಹೆಸರಾದ ಪ್ರಾಕ್ಟೀಷನರ್-ನೇತೃತ್ವದ ವಿಶ್ವವಿದ್ಯಾಲಯ. ‘ಮಾಡುವ ಮೂಲಕ ಕಲಿಯುವ’ ಪ್ರಾಯೋಗಿಕ ಕಲಿಕೆಯ ತತ್ವದೊಂದಿಗೆ 2020ರಲ್ಲಿ ಇದನ್ನು ಸ್ಥಾಪಿಸಲಾಯಿತು. ಮಾಸ್ಟರ್ಸ್ ಯೂನಿಯನ್ ಯೂನಿವರ್ಸಿಟಿಯ ನಾಯಕತ್ವವು ಸ್ಟ್ಯಾನ್‌ಫೋರ್ಡ್, ವಾರ್ಟನ್, ಐಐಟಿ ಮತ್ತು ಐಐಎಂಗಳ ಪದವೀಧರರನ್ನು ಒಳಗೊಂಡಿದೆ. ಸಾಂಪ್ರದಾಯಿಕ ಕಾಲೇಜುಗಳಿಗಿಂತ ಭಿನ್ನವಾಗಿ, ಇಲ್ಲಿನ ಬೋಧಕರು ಅಮೆಜಾನ್, ಆ್ಯಪಲ್, ಐಬಿಎಂ, ಮೆಕಿನ್ಸಿ, ಪಿಡಬ್ಲ್ಯೂಸಿ ಮತ್ತು ಕೆಪಿಎಂಜಿಯಂತಹ ಕಂಪನಿಗಳ ಎಂಡಿಗಳು, ಸಿಎಕ್ಸ್‌ಒಗಳು ಮತ್ತು ಎಐ ತಜ್ಞರು. ಆಕ್ಸ್‌ಫರ್ಡ್ ಮತ್ತು ಹಾರ್ವರ್ಡ್‌ ನಂತಹ ವಿಶ್ವದ ಅಗ್ರ ಶ್ರೇಣಿಯ ವಿಶ್ವವಿದ್ಯಾಲಯಗಳ ಬೋಧಕರನ್ನೂ ಸಂಸ್ಥೆ ಕರೆತರುತ್ತದೆ.