ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

snake entered Janaushadhi Center: ಜನೌಷಧಿ ಕೇಂದ್ರಕ್ಕೆ ನುಗ್ಗಿದ ಕಾಳಿಂಗಸರ್ಪ: ಹಾವು ನೋಡಲು ಜನವೋಜನ

ನಗರದ ಅಂಬೇಡ್ಕರ್ ವೃತ್ತದ ಬಳಯಿರುವ ಪ್ರಧಾನಮಂತ್ರಿ ಭಾರತೀಯ ಜನ ಔಷಧಿ ಕೇಂದ್ರದ ಮಾಲಿಕ ನಾಗೇಂದ್ರ ಎಂಬುವರು ಶುಕ್ರವಾರ ಎಂದಿನಂತೆ ಅಂಗಡಿಯ ಬಾಗಿಲು ತೆರೆದು ವ್ಯಾಪಾರಕ್ಕೆ ಅಣಿಯಾಗುತ್ತಿದ್ದರು. ಈ ವೇಳೆ ಹಾವಿನ ಬುಸ್‌ಗುಡುವ ಶಬ್ಧಕೇಳಿದ ಅವರು ಹುಡುಕಾಟ ನಡೆಸಿದ್ದಾರೆ.

ಜನೌಷಧಿ ಕೇಂದ್ರಕ್ಕೆ ನುಗ್ಗಿದ ಕಾಳಿಂಗಸರ್ಪ

ಹಾವನ್ನು ನೋಡಲು ಸೇರಿರುವ ಜನಸಮೂಹದ ಚಿತ್ರ, ಜನೌಷಧಿ ಕೇಂದ್ರದ ಚಿತ್ರ. -

Ashok Nayak Ashok Nayak Oct 17, 2025 11:11 PM

ಚಿಕ್ಕಬಳ್ಳಾಪುರ : ನಗರದ ಎಲೇ ಪೇಟೆಯಲ್ಲಿರುವ ಜನೌಷಧಿ ಕೇಂದ್ರಕ್ಕೆ ಶುಕ್ರವಾರ ಅಗಂತುಕನ ಹಾಗೆ ನುಗ್ಗಿದ ದೊಡ್ಡದಾದ ನಾಗರಹಾವೊಂದು ಕೆಲಕಾಲ ಆತಂಕದ ವಾತಾವರಣಕ್ಕೆ ಕಾರಣವಾದ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ.

ನಗರದ ಅಂಬೇಡ್ಕರ್ ವೃತ್ತದ ಬಳಯಿರುವ ಪ್ರಧಾನಮಂತ್ರಿ ಭಾರತೀಯ ಜನ ಔಷಧಿ ಕೇಂದ್ರದ ಮಾಲಿಕ ನಾಗೇಂದ್ರ ಎಂಬುವರು ಶುಕ್ರವಾರ ಎಂದಿನಂತೆ ಅಂಗಡಿಯ ಬಾಗಿಲು ತೆರೆದು ವ್ಯಾಪಾ ರಕ್ಕೆ ಅಣಿಯಾಗುತ್ತಿದ್ದರು. ಈ ವೇಳೆ ಹಾವಿನ ಬುಸ್‌ಗುಡುವ ಶಬ್ಧಕೇಳಿದ ಅವರು ಹುಡುಕಾಟ ನಡೆಸಿದ್ದಾರೆ. ಔಷಧಿಗಳ ನಡುವೆ ಅವಿತುಕೊಂಡು ಬುಸ್‌ಗುಡುತ್ತಿದ್ದ ಹಾವನ್ನು ಕಂಡು ಗಾಬರಿ ಯಿಂದ ಅಂಗಡಿಯಿಂದ ಹೊರ ಬಂದಿದ್ದಾರೆ.

ಇದನ್ನೂ ಓದಿ: chitradurga News: ಒಂದೇ ದಿನ ಇಬ್ಬರು ಯುವತಿಯರನ್ನು ಮದುವೆಯಾದ ವರ ಮಹಾಶಯ

ಕೂಡಲೇ ಉರಗ ತಜ್ಞ ಜುನೈದ್ ಅವರನ್ನು ಕರೆಸಿಕೊಂಡು ಅಂಗಡಿಯಿಂದ ಬೃಹತ್ ಗಾತ್ರದ ನಾಗರ ಹಾವನ್ನು ಹಿಡಿಸಿ ಹೊರ ತಂದಿದ್ದಾರೆ. ಜನೌಷಧಿ ಕೇಂದ್ರಕ್ಕೆ ಹಾವು ನುಗ್ಗಿರುವ ವಿಷಯ ತಿಳಿದ ಸಾರ್ವಜನಿಕರು ಬೃಹತ್ ಸಂಖ್ಯೆಯಲ್ಲಿ ಸೇರಿದ್ದರಿಂದ ಅಂಗಡಿ ಮುಂದೆ ಕೆಲಕಾಲ ಜನಜಂಗುಳಿ ನಿರ್ಮಾಣವಾಗಿತ್ತು.

ಸಕಾಲಕ್ಕೆ ಅಂಗಡಿಗೆ ಬಂದು ಹಾವನ್ನು ಹಿಡಿದ ಉರಗ ತಜ್ಞ ಜುನೈದ್ ಸಾರ್ವಜನಿಕರ ಎದುರೇ ಅದನ್ನು ಪ್ಲಾಸ್ಟಿಕ್ ಡಬ್ಬಕ್ಕೆ ತುಂಬಿಕೊಂಡು ಅರಣ್ಯಕ್ಕೆ ಬಿಡುವ ಮೂಲಕ ರಕ್ಷಣೆ ಮಾಡಿದ್ದಾರೆ. ಇವರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚಿಗೆ ವ್ಯಕ್ತವಾಗಿದೆ.