ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಪ್ಲಾಸ್ಟಿಕ್ ತ್ಯಾಜ್ಯ ಮರುಬಳಕೆ ಕುರಿತು ಆಯೋಜಿಸಿದ್ದ ಮೆಗಾ ಜಾಗೃತಿ ಮೇಳ ಯಶಸ್ವಿ

ಮಕ್ಕಳಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯಗಳ ಮರುಬಳಕೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಮೆಗಾ ಜಾಗೃತಿ ಮೇಳವನ್ನು ಆಯೋಜಿಸಲಾಗಿತ್ತು. ಇಂದು ಸಾಕಷ್ಟು ಪ್ಲಾಸ್ಟಿಕ್‌ ಉತ್ಪಾದನೆಯಾಗುತ್ತಿದ್ದು, ಅದರ ಸಂಸ್ಕರಣೆ ಸವಾಲಿನ ಕೆಲಸವಾಗಿದೆ. ಇಂದಿನ ಮಕ್ಕಳಿಗೆ ಪ್ಲಾಸ್ಟಿಕ್‌ ಕಡಿಮೆ ಬಳಕೆ, ಮರುಬಳಕೆ ಬಗ್ಗೆ ಜಾಗೃತಿ ಮೂಡಿಸಿದರೆ ಮಾತ್ರ ನಮ್ಮ ಮುಂದಿನ ಪೀಳಿಗೆ ಈ ಭೂಮಿಯನ್ನು ಆರೋಗ್ಯವಾಗಿಡಲು ಸಾಧ್ಯ

ಬೆಂಗಳೂರು: ಪ್ಲಾಸ್ಟಿಕ್‌ ತ್ಯಾಜ್ಯಗಳ ಕುರಿತು ಆಯೋಜಿಸಿದ್ದ ಜಾಗೃತಿ ಮೇಳದ ಭಾಗವಾಗಿ ಪ್ಲಾಸ್ಟಿಕ್‌ ನಿಂದ ಮರು ತಯಾರಿಸಿದ ಪ್ಲಾಸ್ಟಿಕ್ ಸ್ಮಾರ್ಟ್ ವರ್ಕ್‌ಬುಕ್‌ಗಳನ್ನು ಹೆಗ್ಗನಹಳ್ಳಿಯ ಕೆಪಿಎಸ್ ಪ್ರಾಥಮಿಕ ಶಾಲಾ ಮಕ್ಕಳಿಗೆ ವಿತರಿಸಲಾಯಿತು.

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (DIET), ಯಿಪ್ಪೀ! ಬೆಟರ್ ವರ್ಲ್ಡ್ ಇವರ ಸಹಯೋಗದಲ್ಲಿ “ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಮೆಗಾ ಜಾಗೃತಿ ಮೇಳ”ವನ್ನು ಆಯೋಜಿಸಲಾಗಿತ್ತು. ಹೆಗ್ಗನಹಳ್ಳಿಯ ಕೆಪಿಎಸ್ ಪ್ರಾಥಮಿಕ ಶಾಲೆಯಲ್ಲಿ ITC ಬೆಂಬಲದೊಂದಿಗೆ ಅಗಸ್ತ್ಯ ಇಂಟರ್ನ್ಯಾಷನಲ್ ಫೌಂಡೇ ಶನ್ ಸಹಯೋಗದಲ್ಲಿ ನಡೆಸಲಾಯಿತು.

ಈ ವೇಳೆ ಮಾತನಾಡಿದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಪ್ರಾಂಶುಪಾಲೆ ಪ್ರಣಿತಾ, ಮಕ್ಕಳಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯಗಳ ಮರುಬಳಕೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಮೆಗಾ ಜಾಗೃತಿ ಮೇಳವನ್ನು ಆಯೋಜಿಸಲಾಗಿತ್ತು. ಇಂದು ಸಾಕಷ್ಟು ಪ್ಲಾಸ್ಟಿಕ್‌ ಉತ್ಪಾದನೆಯಾಗುತ್ತಿದ್ದು, ಅದರ ಸಂಸ್ಕರಣೆ ಸವಾಲಿನ ಕೆಲಸವಾಗಿದೆ. ಇಂದಿನ ಮಕ್ಕಳಿಗೆ ಪ್ಲಾಸ್ಟಿಕ್‌ ಕಡಿಮೆ ಬಳಕೆ, ಮರುಬಳಕೆ ಬಗ್ಗೆ ಜಾಗೃತಿ ಮೂಡಿಸಿದರೆ ಮಾತ್ರ ನಮ್ಮ ಮುಂದಿನ ಪೀಳಿಗೆ ಈ ಭೂಮಿಯನ್ನು ಆರೋಗ್ಯವಾಗಿಡಲು ಸಾಧ್ಯ ಎಂದು ಹೇಳಿದರು.

ಇದನ್ನೂ ಓದಿ: Bangalore News: ಜ.29ರಿಂದ ಫೆಬ್ರವರಿ 1ವರೆಗೆ ವೀರಶೈವ ಲಿಂಗಾಯಿತ ಗ್ಲೋಬಲ್ ಬಿಸಿನಸ್ ಬೃಹತ್ ಸಮಾವೇಶ

ಈ ಕಾರ್ಯಕ್ರಮದಲ್ಲಿ ಹೆಗ್ಗನಹಳ್ಳಿಯಲ್ಲಿರುವ ಕೆಪಿಎಸ್ ಪ್ರಾಥಮಿಕ ಶಾಲೆಯ 1,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ಜೊತೆಗೆ, 1,000 ಕ್ಕೂ ಹೆಚ್ಚು ಪ್ಲಾಸ್ಟಿಕ್ ಸ್ಮಾರ್ಟ್ ವರ್ಕ್‌ಬುಕ್‌ಗಳನ್ನು ಈ ಮಕ್ಕಳಿಗೆ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪೋಸ್ಟರ್‌, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯ ಕುರಿತು ವಿಜ್ಞಾನ ಮಾದರಿ ಮತ್ತು ಮರುಬಳಕೆಯ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳ ಪ್ರದರ್ಶನದಂತಹ ವಿವಿಧ ಚಟುವಟಿಕೆಗಳು ಸಹ ಸೇರಿದ್ದವು.

"ITC ಲಿಮಿಟೆಡ್‌ನ ತಿಂಡಿಗಳು, ನೂಡಲ್ಸ್ ಮತ್ತು ಪಾಸ್ತಾ, ಆಹಾರ ವ್ಯವಹಾರದ ಉಪಾಧ್ಯಕ್ಷ ಮತ್ತು ಮಾರ್ಕೆಟಿಂಗ್ ಮುಖ್ಯಸ್ಥ ಶ್ರೀ ಸುರೇಶ್ ಚಂದ್," ಮಾತನಾಡಿ, ITCಯಲ್ಲಿ, ಸುಸ್ಥಿರತೆ ಮತ್ತು ಶಿಕ್ಷಣವು ಪರಸ್ಪರ ಪೂರಕವಾಗಿದೆ ಎಂದು ನಾವು ನಂಬುತ್ತೇವೆ. ಯಿಪ್ಪೀ! ಬೆಟರ್ ವರ್ಲ್ಡ್ ಕಾರ್ಯ ಕ್ರಮವು ಮಕ್ಕಳನ್ನು ಜವಾಬ್ದಾರಿಯುತ ನಾಗರಿಕರಾಗಲು ಜ್ಞಾನ ಮತ್ತು ಪ್ರೇರಣೆಯೊಂದಿಗೆ ಸಜ್ಜುಗೊಳಿಸಲು ಬದ್ಧವಾಗಿದೆ. ಆಕ್ಟಿಲರ್ನ್ ಶೈಕ್ಷಣಿಕ ಪುಸ್ತಕಗಳಂತಹ ಉಪಕ್ರಮಗಳ ಮೂಲಕ, ನಾವು ಸುಸ್ಥಿರ ನಾಳೆಗಾಗಿ ಸಸಿಗಳನ್ನು ನೆಡುತ್ತಿದ್ದೇವೆ ಎಂದರು."

ಕಾರ್ಯಕ್ರಮದಲ್ಲಿ ದಕ್ಷಿಣ ನೋಡಲ್‌ ಅಧಿಕಾರಿ ಸ್ವಾಮಿ, ಕೆಪಿಎನ್‌ ಪ್ರಾಂಶುಪಾಲೆ ಪ್ರಮೀಳಾ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ (ಸಿಆರ್‌ಪಿ) ರಮೇಶ್ ಉಪಸ್ಥಿತರಿದ್ದರು.